Moving text

Mandya District Police

DAILY CRIME REPORT DATED : 21-04-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 21-04-2013 ರಂದು ಒಟ್ಟು 30 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ರಸ್ತೆ ಅಪಘಾತ ಪ್ರಕರಣಗಳು,  1 ಕಳವು ಪ್ರಕರಣ ಹಾಗು 27 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  


ಅಪಘಾತ ಪ್ರಕರಣಗಳು :

1. ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 139/13 ಕಲಂ. 304(ಎ) ಐ.ಪಿ.ಸಿ.

ದಿನಾಂಕ: 21-04-2013 ರಂದು ಪಿರ್ಯಾದಿ ನಾಗೇಶ, ಉಯ್ಗೋನಹಳ್ಳಿ ಗ್ರಾಮರವರು ನೀಡಿದ ದೂರಿನ ಸಾರಂಶವೇನೆಂದರೆ ಪಿರ್ಯಾದಿಯವರ ಜಮೀನಿನಲ್ಲಿ ನಂ. ಕೆಎ-51, ಎಂ.ಡಿ-7333,  ಬೋರ್ ವೆಲ್ ನ ಚಾಲಕ ಹಾಗು ಮಾಲೀಕ 1] ಸಿಂದಿಕ್ ಮತ್ತು 2] ಮೊಗಣ್ಣಗೌಡ ರವರುಗಳು ಜಮೀನಿನಲ್ಲಿ ಬೋರ್ವೆಲ್ ಕೊರೆಯುತ್ತಿರುವಾಗ ಕೇಸಿಂಗ್ ಪೈಪನ್ನು ಕತ್ತರಿಸಿ ಉಳಿಕೆ ಪೈಪನ್ನು ಲಾರಿಯಿಂದ ಬೇರ್ಪಡಿಸುತ್ತಿದ್ದಾಗ ಬೋರ್ವೆಲ್  ಆಪರೇಟರ್ ಸರಿಯಾಗಿ ಆಪರೇಟ್ ಮಾಡದ ಕಾರಣ ಬೋರ್ವೆಲ್ನ, ಮಿಷನ್ನಲ್ಲಿದ್ದ ಕೇಸಿಂಗ್ ಪೈಪ್ ಅಲ್ಲಿ ಕೆಲಸ ಮಾಡುತ್ತಿದ್ದ ಸತ್ತಿ ಎಂಬುವವರ ಬಲ ಪಕ್ಕೆಗೆ ಹೊಡೆದು ಅಲ್ಲೇ ಕೆಳಕ್ಕೆ ಬಿದ್ದು ನಂತರ ಉಪಚರಿಸಿ 108 ಆಂಬುಲೆನ್ಸ್ ನಲ್ಲಿ, ಕೆ.ಆರ್.ಪೇಟೆ ಸರ್ಕಾರಿ  ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಸುವಷ್ಟರಲ್ಲಿ ಮಾರ್ಗಮಧ್ಯೆ ಮೃತಪಟ್ಟಿರುತ್ತಾರೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 89/13 ಕಲಂ. 279,337-304[ಎ]  ಐ.ಪಿ.ಸಿ. ರೆ/ವಿ 187 ಐ.ಎಂ.ವಿ. ಕಾಯ್ದೆ.

ದಿನಾಂಕ: 21-04-2013 ರಂದು ಪಿರ್ಯಾದಿ ಎಂ. ಹೇಮಂತ್ ಕುಮಾರ್, ಮಲ್ಲೇನಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಕೆ.ಎ-44-4479 ರ ಟ್ರಾಕ್ಟರ್, ಹೆಸರು  ವಿಳಾಸ ಗೊತ್ತಿಲ್ಲಾ ಇವರು ದಿನಾಂಕ: 20-04-2013 ರಂದು ರಾತ್ರಿ 12 ಗಂಟೆಯಲ್ಲಿ ತಮ್ಮ ಟ್ರಾಕ್ಟರ್ ನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ರಸ್ತೆಯ ಎಡಭಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂತೋಷನಿಗೆ ಡಿಕ್ಕಿ ಮಾಡಿಸಿದ ಪರಿಣಾಮ ಸಂತೋಷ ಮೃತಪಟ್ಟಿರುತ್ತಾನೆ ಅವನ ಶವವು ಅಲ್ಲೆ ಇರುತ್ತದೆ ಈ ಅಪಘಾತಕ್ಕೆ ಕಾರಣನಾದ ಟ್ರಾಕ್ಟರ್ ಚಾಲಕನ ಮೇಲೆ  ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಕಳವು ಪ್ರಕರಣ :

ಕೆ.ಆರ್. ಸಾಗರ ಪೊಲೀಸ್ ಠಾಣೆ ಮೊ.ನಂ. 95/13 ಕಲಂ. 379 ಐ.ಪಿ.ಸಿ.

ದಿನಾಂಕ: 21-04-2013 ರಂದು ಪಿರ್ಯಾದಿ ಕುರ್ರಮ್ ಅಮೀದ್, ಬೆಂಗಳೂರು ರವರು ನೀಡಿದ ದೂರಿನ ವಿವರವೇನೆಂದರೆ ಅವರ ಬ್ಯಾಗಿನಲ್ಲಿದ್ದ 6 ಮೊಬೈಲ್ ಗಳು ಹಾಗೂ 7400/- ರೂ ಹಣ ಕಳುವಾಗಿರುತ್ತದೆಂದು ಪತ್ತೆ ಮಾಡಿಕೊಡಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

No comments:

Post a Comment