ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 22-04-2013 ರಂದು ಒಟ್ಟು 43 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ರಸ್ತೆ ಅಪಘಾತ ಪ್ರಕರಣ, 1 ರಾಬರಿ ಪ್ರಕರಣ, 1 ಮನುಷ್ಯ ಕಾಣೆಯಾದ ಪ್ರಕರಣ, 1 ಕೊಲೆ ಪ್ರಕರಣ, ಇತರೆ 39 ಅಬಕಾರಿ/ಚುನಾವಣಾ/ಐ.ಪಿ.ಸಿ. ಪ್ರಕರಣಗಳು ವರದಿಯಾಗಿರುತ್ತವೆ.
ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 91/13 ಕಲಂ. 304[ಎ] ಐ.ಪಿ.ಸಿ.
ದಿನಾಂಕ: 22-04-2013 ರಂದು ಪಿರ್ಯಾದಿ ಜವರಯ್ಯ ಬಿನ್. ಲಕ್ಕಯ್ಯ, ಹುಲಿಕೆರೆಕೊಪ್ಪಲು ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಎ.ಅ. ಮಿಷನ್ ನಂ.1821047, ಇಂಜಿನ್ ನಂ.ಊ25917 ರ ಚಾಲಕ ಹೆಸರು ಮತ್ತು ವಿಳಾಸ ಗೊತ್ತಿರುವುದಿಲ್ಲ, ಇವರು ಜೆ.ಸಿ.ಬಿ.ಯನ್ನು ನಿರ್ಲಕ್ಷತನದಿಂದ ಅಡ್ಡಾದಿಡ್ಡಿಯಾಗಿ ಹಿಂದಕ್ಕೆ ಮುಂದಕ್ಕೆ ತೆಗೆದು ಕೆಲಸ ಮಾಡುವಾಗ ರಸ್ತೆಯ ಮೊಗ್ಗಲಲ್ಲಿ ನಿಂತಿದ್ದ ಆಕಾಶನಿಗೆ ಡಿಕ್ಕಿ ಹೊಡೆದು ಆತನ ಪೆಕ್ಕೆಗೆ ಪೆಟ್ಟಾಗಿ ಚಿಕಿತ್ಸೆಗೆ ಮಂಡ್ಯ ಜನರಲ್ ಆಸ್ಪತ್ರೆಗೆ ಕರೆತಂದಿರಿತ್ತೇನೆ ನನ್ನ ತಮ್ಮ ರಮೇಶನ ಮಗ ಆಕಾಶನ ಸಾವಿಗೆ ಮೇಲ್ಕಂಡ ಜೆ.ಸಿ.ಬಿ. ಚಾಲಕನ ನಿರ್ಲಕ್ಷತನವೇ ಕಾರಣವಾಗಿದ್ದು ಆತನ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ರಾಬರಿ ಪ್ರಕರಣ :
ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ.ನಂ. 71/13 ಕಲಂ. 143-144-147-148-324-354-392-506 ಕೂಡ 149 ಐ.ಪಿ.ಸಿ.
ದಿನಾಂಕ: 22-04-2013 ರಂದು ಪಿರ್ಯಾದಿ ಹೆಚ್.ಎ. ಪುಟ್ಟಲಿಂಗಯ್ಯ ಬಿನ್. ಲೇಟ್. ಅಂಕಯ್ಯ, 50 ವರ್ಷ, ಒಕ್ಕಲಿಗ, ವ್ಯವಸಾಯ, ಹೊಸಕೆರೆ ಮದ್ದೂರು ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಜಯರಾಮ ಬಿನ್. ಆನೇಗೌಡ ಮತ್ತು ಇತರೆ 07 ಜನರು ಎಲ್ಲರೂ ಗೆಜ್ಜಲಗೆರೆ, ಮದ್ದೂರು ತಾ. ರವರು ಪಿರ್ಯಾದಿಯವರೊಂದಿಗೆ ಜಗಳ ತೆಗೆದು ಅಕ್ರಮ ಗುಂಪು ಕಟ್ಟಿಕೊಂಡು ಲಾಂಗಿನಿಂದ ಮತ್ತು ದೊಣ್ಣೆಯಿಂದ ಹೊಡೆದು ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಕೊಲೆ ಬೆದರಿಕೆ ಹಾಕಿರುತ್ತಾರೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ :
ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 112/13 ಕಲಂ. ಹುಡುಗ ಕಾಣಿಯಾಗಿದ್ದಾನೆ.
ದಿನಾಂಕ: 22-04-2013 ರಂದು ಪಿರ್ಯಾದಿ ಶಿವಮ್ಮ ಕೊಂ. ಅರುಣ್ಕುಮಾರ್, ನಂ. 221, 6ನೇ ಕ್ರಾಸ್, ಭವಾನಿನಗರ ರವರು ನೀಡಿದ ದೂರು ಏನೆಂದರೆ ಅವರ ಮಗ ಮನೋಜ್ 05ವರ್ಷ, :ದಿನಾಂಕ: 21-04-2013 ರಂದು 07-00 ಪಿ.ಎಂ ನಲ್ಲಿ, ಶ್ರೀ ಆದಿಚುಂಚನಗಿರಿ ಕ್ಷೇತ್ರದ ಸಭಾಮಂಟಪದ ಬಳಿ ಆಟವಾಡುತ್ತಿದ್ದವನ್ನು ಕಾಣೆಯಾಗಿರುತ್ತಾನೆ ಅವನನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಕೊಲೆ ಪ್ರಕರಣ :
ಕೆಸ್ತೂರು ಪೊಲೀಸ್ ಠಾಣೆ ಮೊ.ನಂ. 103/13 ಕಲಂ. 302, ಐ.ಪಿ.ಸಿ.
ದಿನಾಂಕ: 22-04-2013 ರಂದು ಪಿರ್ಯಾದಿ ಬಾಬು ಬಿನ್. ಲೇಟ್. ವಾಹಬ್ಖಾನ್, 48 ವರ್ಷ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರ ಕೊನೆಯ ಮಗಳು ಜುಲ್ಫಿಯಾ ಈಗ್ಗೆ ಎರಡು ವರ್ಷಗಳ ಹಿಂದೆ ಕೆಸ್ತೂರು ಗ್ರಾಮದಲ್ಲೇ ಕೂಲಿ ಕೆಲಸ ಮಾಡಿಕೊಂಡಿದ್ದು, ನವೀನ್ ಎಂಬುವವನನ್ನು ಪರಸ್ಪರ ಪ್ರೀತಿಸುತ್ತಿದ್ದು, ನಮ್ಮಗಳ ಸಮ್ಮತಿಯನ್ನು ಪಡೆಯದೆ ಇಬ್ಬರು ಮದುವೆಯಾಗಿರುತ್ತಾರೆ. ಅದೇ ಮನೆಯಲ್ಲಿ ನನ್ನ ಮಗಳು ಮೃತಪಟ್ಟಿದ್ದಾಳೆಂದು ನನಗೆ ನಮ್ಮ ಗ್ರಾಮದ ರಮೇಶ್ ಕರೆ ಮಾಡಿ ತಿಳಿಸಿರುತ್ತಾನೆ. ನನ್ನ ಮಗಳ ಕುತ್ತಿಗೆಯನ್ನು ಯಾವುದೋ ವಸ್ತುವಿನಿಂದ ಬಿಗಿದು ಕೊಲೆ ಮಾಡಿ ಹೊರಟು ಹೋಗಿರುತ್ತಾನೆ. ನನ್ನ ಮಗಳ ಶವದ ಹತ್ತಿರ ಸೀರೆಯ ಜೋಲಿಯಲ್ಲಿದ್ದ ಒಂದೂವರೆ ತಿಂಗಳ ಹೆಣ್ಣು ಮಗುವನ್ನು ನನ್ನ ವಶಕ್ಕೆ ಪಡೆದುಕೊಂಡಿರುತ್ತೇನೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment