ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 24-04-2013 ರಂದು ಒಟ್ಟು 44 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣಗಳು, 1 ರಸ್ತೆ ಅಪಘಾತ ಪ್ರಕರಣ, 2 ಕಳವು ಪ್ರಕರಣಗಳು, 1 ಯು.ಡಿ.ಆರ್. ಪ್ರಕರಣ ಹಾಗು 38 ಚುನಾವಣಾ ಮುಂಜಾಗ್ರತಾ ಹಾಗು ಅಕ್ರಮ ಪ್ರಕರಣಗಳು, ಅಬಕಾರಿ ಪ್ರಕರಣಗಳು ಇತರೆ ಐ.ಪಿ.ಸಿ. ಪ್ರಕರಣಗಳು ವರದಿಯಾಗಿರುತ್ತವೆ.
ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣಗಳು :
1. ಮದ್ದೂರು ಪೊಲೀಸ್ ಠಾಣೆ ಮೊ.ನಂ. 185/13 ಕಲಂ. 498(ಎ) 504, 506 ಐ.ಪಿ.ಸಿ.
ದಿನಾಂಕ: 24-4-2013 ರಂದು ಪಿರ್ಯಾದಿ ಜಯಮ್ಮ @ ಜಯಲಕ್ಷ್ಮಿ, ನೀಲಕಂಠನಹಳಿ,್ಳ, ನೀಲಕಂಠನಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರಿಗೆ ತನ್ನ ಗಂಡ ಆರೋಪಿಯು ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ಕಿರುಕುಳ ನೀಡಿ ಬಾಯಿಗೆ ಬಂದಂತೆ ಬೈಯ್ದು ಪಿರ್ಯಾದಿಯವರ ಬಟ್ಟೆಗಳನ್ನು ಸುಟ್ಟು ಹಾಕಿ ಕೊಲೆ ಬೆದರಿಕೆ ಹಾಕಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 109/13 ಕಲಂ. 498(ಎ)-324-506 ಕೂಡ 34 ಐ.ಪಿ.ಸಿ.
ದಿನಾಂಕ:24-4-2013 ರಂದು ಪಿರ್ಯಾದಿ ಚಂದ್ರೀಕಾ, ಜೈನಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯ ಗಂಡ .ಸುರೇಶ ರವರು 50000/- ರೂ ಹಣವನ್ನು ವರದಕ್ಷಿಣೆಯಾಗಿ ಕೊಡುವಂತೆ ಜಗಳ ತೆಗೆದು ಪಿರ್ಯಾದಿ ತಂದೆಯವರು ಕೊಡಲು ಸಾದ್ಯವಿಲ್ಲಾ ಎಂದಾಗ ಆರೊಫಿತರು ಪಿರ್ಯಾದಿ ಅವಾಚ್ಯವಾಗಿ ಬೈದು ಮೊಟಕಡ್ಡಿ ಬರಲಿನಿಂದ ಬಲಮುಂಗೈಗೆ ಎದೆಗೆ ರಕ್ತಬರುವ ಹಾಗೆ ಹೊಡೆದನು ಗಂಡನು ಕಾಲಿನಿಂದ ಹೊಟ್ಟೆಗೆ ಒದ್ದನು ನೋವುಂಟು ಮಾಡಿ 50000/- ರೂ ಹಣವನ್ನು ತರದಿದ್ದರೆ ಬೇರೊಂದು ಹುಡುಗಿಯನ್ನು ಮದುವೆಯಾಗಲು ಬಿಡದಿದ್ದರೆ ನಿನ್ನನ್ನು ನಿನ್ನ ಮಗುವನ್ನು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚುತ್ತೇವೆಂದು ಕೊಲೆ ಬೆದರಿಕೆ ಹಾಕಿರುತ್ತಾರೆ ಇದಕ್ಕೆ 2.ಕಮಲಮ್ಮ 3.ಗೀತಾ ಎಲ್ಲರೂ ಕಿರಿಸೊಡ್ಲು ಗ್ರಾಮ ಗೌಡಗೆರೆ ಹೋಬಳಿ ರವರುಗಳು ಸಹ ಭಾಗಿಯಾಗಿರುತ್ತಾರೆ ಅವರುಗಳ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ರಸ್ತೆ ಅಪಘಾತ ಪ್ರಕರಣ :
ಮದ್ದೂರು ಸಂಚಾರಿ ಪೊಲೀಸ್ ಠಾಣೆ ಮೊ.ನಂ. 48/13 ಕಲಂ. 279,304(ಎ) ಐ.ಪಿ.ಸಿ.
ದಿನಾಂಕ:24-4-2013 ರಂದು ಪಿರ್ಯಾದಿ ಕೆ. ಪ್ರಶಾಂತ್, ಪಿ.ಎಸ್.ಐ. ಮದ್ದೂರು ಸಂಚಾರಿ ಪೊಲೀಸ್ ಠಾಣೆ ರವರು ನೀಡಿದ ದೂರು ಏನೆಂದರೆ ಆರೋಪಿ ಮರಿಗೆಗೌಡ, ನಂ. ಕೆ.ಎ-01-3040 ರ ಲಾರಿ ಚಾಲಕ ಬೆಂಗಳೂರು, ವಿಳಾಸ ತಿಳಿಯಬೇಕಾಗಿರುತ್ತೆ ಇವರು ತನ್ನ ಲಾರಿಯನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆ ದಾಟುತ್ತಿದ್ದ ಅಪರಿಚಿತ ವ್ಯಕ್ತಿಗೆ ಡಿಕ್ಕಿ ಹೊಡೆಸಿ ಲಾರಿಯ ಚಕ್ರ ಅಪರಿಚಿತ ವ್ಯಕ್ತಿಯ ಹೊಟ್ಟೆಯ ಮೇಲೆ ಹರಿದ ಪರಿಣಾಮ ಆ ವ್ಯಕ್ತಿಯು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣಗಳು :
1. ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 111/13 ಕಲಂ. 379 ಐ.ಪಿ.ಸಿ.
ದಿನಾಂಕ:24-4-2013 ರಂದು ಪಿರ್ಯಾದಿ ರವಿಕುಮಾರ್ಆರ್ ಕೆ.ಟಿ. ಕಾರಿಗನಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಮೂತರ್ಿ, ಮಾಣಿಕನಹಳ್ಳಿ ಗ್ರಾಮ, ಕಿಕ್ಕೇರಿ ರವರು ನನ್ನ ಹಸುವನ್ನು ಕಳ್ಳತನ ಮಾಡಿರುತ್ತಾರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 281/13 ಕಲಂ. 380 ಐ.ಪಿ.ಸಿ.
ದಿನಾಂಕ:24-4-2013 ರಂದು ಪಿರ್ಯಾದಿ ಬಿ.ಜಿ.ಲಕ್ಷ್ಮಮ್ಮ, ಗುರುಶ್ರೀ, ಮನೆ ನಂ.17, 4ನೇ ಅಡ್ಡರಸ್ತೆ, ಶಕ್ತಿನಗರ, ಮೈಸೂರು ಸಿಟಿ-29 ರವರು ನೀಡಿದ ಪಿರ್ಯಾದಿನ ಸಾರಾಂಶವೇನೆಂದರೆ ರಾಘವೇಂದ್ರ ಜ್ಯೂಯಲರಿ ವಕ್ಸರ್್ನಲ್ಲಿ ಚಿನ್ನದ ಸರದ ಪೆಂಡೆಂಟನ್ನು ಬದಲಾಯಿಸಲು ಕೊಟ್ಟಿದ್ದು ಅವರು ಪೆಟೆಂಟನ್ನು ತೆಗೆದುಕೊಂಡು ಸರವನ್ನು ವಾಪಸ್ಸ್ ಪಿರ್ಯಾದಿಯವರ ಮುಂದೆ ಟೇಬಲ್ ಮೇಲೆ ಇಟಿದ್ದು, ಅಂಗಡಿಯಲ್ಲಿ ತುಂಬಾ ಜನರು ಇದ್ದು ಪಿರ್ಯಾದಿಯವರು ಪೋನಿನಲ್ಲಿ ಮಾತನಾಡಲು ಹೊರಗಡೆ ಹೋಗಿದ್ದು ಮಾತನಾಡಿ ವಾಪಸ್ಸ್ ಬಂದು ನೋಡಲಾಗಿ ಸರವು ಟೇಬಲ್ ಮೇಲೆ ಇರಲಿಲ್ಲ. ಸರವು 28 ಗ್ರಾಂ ಇದ್ದು. ಇದರ ಒಟ್ಟು ಬೆಲೆ ಸುಮಾರು 48,000/- ರೂ. ಆಗಿರುತ್ತದೆ. ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಯು.ಡಿ.ಆರ್. ಪ್ರಕರಣ :
ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಯು.ಡಿ.ಆರ್. ನಂ. 07/13 ಕಲಂ. 174 ಸಿಆರ್.ಪಿ.ಸಿ.
ದಿನಾಂಕ:24-4-2013 ರಂದು ಪಿರ್ಯಾದಿ ಕೆ.ಎಂ.ಉಮಾ, ಕಾಡುಕೊತ್ತನಹಳ್ಳಿ ಗ್ರಾಮ ಚಿಕ್ಕರಸಿನಕೆರೆ ಹೊಬಳಿ ರವರು ನೀಡಿದ ದೂರು ಏನೆಂದರೆ ಆರೋಪಿ ಮಹೇಶ, 28 ವರ್ಷ, ವ್ಯವಸಾಯ, ಕಾಡುಕೊತ್ತನಹಳ್ಳಿ ಗ್ರಾಮ ರವರು ಹೊಟ್ಟೆನೋವು ತಾಳಲಾರದೆ ಗದ್ದೆಗೆ ಸಿಂಪಡಿಸುವ ಔಷಧಿ(ಕೀಟನಾಶಕ) ವನ್ನು ಸೇವಿಸಿದ್ದು ಚಿಕಿತ್ಸೆಗಾಗಿ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲುಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ ಮುಂದಿನ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment