ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 23-04-2013 ರಂದು ಒಟ್ಟು 43 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಮನುಷ್ಯ ಕಾಣೆಯಾದ ಪ್ರಕರಣಗಳು, 1 ವಂಚನೆ ಪ್ರಕರಣ, 1 ಯು.ಡಿ.ಆರ್. ಪ್ರಕರಣ, 1 ಅಪಹರಣ ಪ್ರಕರಣ, 3 ಕಳ್ಳತನ ಪ್ರಕರಣಗಳು ಹಾಗು 35 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.
ಮನುಷ್ಯ ಕಾಣೆಯಾದ ಪ್ರಕರಣಗಳು :
1. ಮೇಲುಕೋಟೆ ಪೊಲೀಸ್ ಠಾಣೆ ಮೊ.ನಂ. 63/13 ಕಲಂ. ಹುಡುಗ ಕಾಣೆಯಾಗಿದ್ದಾನೆ.
ದಿನಾಂಕ: 23-04-2013 ರಂದು ಪಿರ್ಯಾದಿ ಎಂ.ರಾಜು ಬಿನ್. ಮೂಡಲಪ್ಪ, 43 ವರ್ಷ, ವ್ಯವಸಾಯ, ಬೆಳ್ಳಾಳೆ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರ್.ಬಿ.ರಕ್ಷಿತ್ ಬೆಳ್ಳಾಳೆ ಗ್ರಾಮರವರು ದಿನಾಂಕ: 20-04-2013 ರಂದು ಫಿರ್ಯಾದಿಯವರ ರೈಸ್ಮಿಲ್ ಬಳಿ ಇದ್ದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾನೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 205/13 ಕಲಂ. ಹುಡುಗ ಕಾಣೆಯಾಗಿದ್ದಾನೆ.
ದಿನಾಂಕ:23-04-2013 ರಂದು ಪಿರ್ಯಾದಿ ಲೋಕೇಶ.ಎಂ ಬಿನ್ ಲೇಟ್ ಮಾದೇಗೌಡ, ಕುಂಬಾರಕೊಪ್ಪಲು ಗ್ರಾಮ ರವರು ನೀಡಿದ ದೂರು ಏನೆಂದರೆ ಸಿ.ಅಕ್ಷಯ್ ಬಿನ್. ಲೋಕೇಶ್.ಎಂ, 18 ವರ್ಷ ಕುಂಬಾರಕೊಪ್ಪಲು, ಮೈಸೂರು ಸಿಟಿ ರವರು ದಿನಾಂಕ: 19-04-2013 ರಂದು ಬೆಳಿಗ್ಗೆ 10-30 ಗಂಟೆಯಲ್ಲಿ, ಕೊಮ್ಮೇರಹಳ್ಳಿ ವಿಶ್ವ ಮಾನವ ಹಾಸ್ಟಲ್ನಿಂದ ಮನೆಗೆ ಹೋಗುತ್ತೇನೆಂದು ಹೇಳಿ ಹೋದವರು ತನ್ನ ವಾಸದ ಮನೆ ಮೈಸೂರಿಗೆ ಹೋಗದೆ ಕಾಣೆಯಾಗಿರುತ್ತಾನೆ ಈ ಬಗ್ಗೆ ಅವರ ಸ್ನೇಹಿತರುಗಳ ಮನೆಗಳಲ್ಲಿ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ವಂಚನೆ ಪ್ರಕರಣ :
ಅರಕೆರೆ ಪೊಲೀಸ್ ಠಾಣೆ ಮೊ.ನಂ. 144/13 ಕಲಂ. 420 ಕೂಡ 34 ಐ.ಪಿ.ಸಿ.
ದಿನಾಂಕ: 23-04-2013 ರಂದು ಪಿರ್ಯಾದಿ ವಿ.ಎಂ ಭಾಸ್ಕರ ಬಿನ್. ಅರಕೆರೆ ಟೌನ್, ಶ್ರೀರಂಗಪಟ್ಟಣ ತಾ. ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿಗಳಾದ ] ಮಣಿರಾಜನ್ 2] ರಾಜು ಇಬ್ಬರೂ ಸೇಲಂ ಟೌನ್, ತಮಿಳುನಾಡು ರಾಜ್ಯ ರವರುಗಳು ಫಿರ್ಯಾದಿಗೆ ಫೋನ್ ಮಾಡಿ 2 ಲಕ್ಷ ರೂ.ಗಳನ್ನು ನೀಡಿದರೆ, 10 ಲಕ್ಷ ಸಾಲ ಕೊಡುತ್ತೇವೆ ಎಂದು ತಿಳಿಸಿದ್ದು, ಫಿರ್ಯಾದಿಯವರು ಅದರಂತೆ ದಿನಾಂಕ: 19-04-2013 ರಂದು ಸೇಲಂ ಟೌನ್ ಗೆ, ಹೋಗಿ ಬೆಳಿಗ್ಗೆ 07-30 ಗಂಟೆಗೆ ಆರೋಪಿಗಳಿಗೆ ನೀಡಿದ್ದು, ಆರೋಪಿಗಳು ಬ್ಲಾಕ್ ಪೇಪರ್ ಕೊಟ್ಟು ಎಂದು ಹೇಳಿ, ಭಾನುವಾರ ನಿಮ್ಮ ಮನೆಗೆ ಬಂದು ವರ್ಜಿನಲ್ ಹಣ ಮಾಡಿಕೊಡುವುದಾಗಿ ಹೇಳಿ ನಂಬಿಸಿ, 2 ಲಕ್ಷ ರೂಪಾಯಿಗಳನ್ನು ಪಡೆದುಕೊಂಡು ಮೋಸ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಯು.ಡಿ.ಆರ್. ಪ್ರಕರಣ :
ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. ಯು.ಡಿ.ಆರ್. ನಂ. 11/13 ಕಲಂ. 174 ಸಿಆರ್.ಪಿ.ಸಿ.
ದಿನಾಂಕ: 23-04-2013 ರಂದು ಪಿರ್ಯಾದಿ ವೆಂಕಟೇಗೌಡ, ಹಳುವಾಡಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಶ್ರೀನಿವಾಸ, ಒಕ್ಕಲಿಗರು, ವ್ಯವಸಾಯ, ಹಳುವಾಡಿ ಗ್ರಾಮ ರವರು ದಿನಾಂಕ: 22-04-2013 ರಂದು ಹೊಟ್ಟೆನೋವು ತಾಳಲಾರದೆ ಗದ್ದೆಗೆ ಸಿಂಪಡಿಸಲು ಮನೆಯಲ್ಲಿ ಇಟ್ಟಿದ್ದ ಕ್ರಿಮಿನಾಶಕ ಔಷದಿಯನ್ನು ಕುಡಿದಿದ್ದು ಚಿಕಿತ್ಸೆಗೆ ಮಂಡ್ಯ ಜನರಲ್ ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ: 22-4-2013 ರಂದು ರಾತ್ರಿ 08-00 ಗಂಟೆಯಲ್ಲಿ ಮೃತಪಟ್ಟಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಅಪಹರಣ ಪ್ರಕರಣ :
ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 194/13 ಕಲಂ. 363 ಐ.ಪಿ.ಸಿ.
ದಿನಾಂಕ: 23-04-2013 ರಂದು ಪಿರ್ಯಾದಿ ಪ್ರಶಾಂತ್. ಆರ್.ಆರ್. ಸ್ವರ್ಣಸಂದ್ರ,, ಮಂಡ್ಯ ಸಿಟಿ ರವರು ನೀಡಿದ ದೂರು ಏನೆಂದರೆ ಆರೋಪಿ ನಿರಂಜನ ಬಿನ್. ಆಟೋ ಮಾದು, 22 ವರ್ಷ ಚಿಕ್ಕ ಮಂಡ್ಯ .ಫೂರ್ಣ ಹೆಸರು ಮತ್ತು ವಿಳಾಸ ತಿಳಿಯಬೇಕಾಗಿದೆ ಇವರು ಸ್ವರ್ಣಸಂದ್ರದ ಶನಿಮಹಾತ್ಮ ದೇವಸ್ಥಾನದ ಹತ್ತಿರಕ್ಕೆ ನಮ್ಮ ಮಗಳುನ್ನು ಬರಹೇಳಿ ಅಲ್ಲಿಂದ ಅವಳನ್ನು ಅಪಹರಿಸಿಕೊಂಡು ಹೋಗಿದ್ದು ನಾನು ಮತ್ತು ನನ್ನ ಹೆಂಡತಿ ಅಂದಿನಿಂದ ಇಂದಿನವರೆವಿಗೂ ನಮ್ಮ ಸಂಬಂಧಿಕರ ಮನೆಗಳಲ್ಲಿ ಹುಡುಕಾಡಿದರೂ ಸಹ ನಮ್ಮ ಮಗಳು ಸಿಕ್ಕಿರುವುದಿಲ್ಲಾ. ನಮ್ಮ ಮಗಳು ಇನ್ನು ಅಪ್ರಾಪ್ತ ವಯಸ್ಕಳಾಗಿದ್ದು 16ವರ್ಷ ತುಂಬಿರುತ್ತೆ ಆದ್ದರಿಂದ ತಾವುಗಳು ನಮ್ಮ ಮಗಳನ್ನು ಅಪಹರಿಸಿಕೊಂಡು ಹೋಗಿರುವ ನಿರಂಜನನ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಕಳ್ಳತನ ಪ್ರಕರಣಗಳು :
1. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 195/13 ಕಲಂ. 457-380 ಐ.ಪಿ.ಸಿ.
ದಿನಾಂಕ: 23-04-2013 ರಂದು ಪಿರ್ಯಾದಿ ಎ.ಅನಂತರಾಮು, ಹುಡ್ಕೋ, ಮಂಡ್ಯ ರವರು ನೀಡಿದ ದೂರು ಏನೆಂದರೆ ದಿನಾಂಕ: 22-04-2013 ರಂದು ರಾತ್ರಿ ವೇಳೆಯಲ್ಲಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ 2ನೇ ಹಾಸ್ಟೆಲ್ನಲ್ಲಿ ನೆಹರು ನಗರ ಮಂಡ್ಯದಲ್ಲಿ ಯಾರೋ ಕಳ್ಳರು ಹಾಸ್ಟೆಲ್ಗಳ ರೂಮುಗಳ ಬೀಗಗಳನ್ನು ಮೀಟಿ ಅಳವಡಿಸಿದ್ದ 14 ಬಜಾಜ್ ಕಂಪನಿಯ ಸೀಲಿಂಗ್ ಫ್ಯಾನ್ಗಳನ್ನು ಶೌಚಾಲಯದ ಬಾಗಿಲ ಬೀಗವನ್ನು ಮೀಟಿ 4 ಹಳೆಯ ಸ್ಟೀಲ್ ನಲ್ಲಿಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅವುಗಳನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಮದ್ದೂರು ಪೊಲೀಸ್ ಠಾಣೆ ಮೊ.ನಂ. 181/13 ಕಲಂ. 457-380 ಐ.ಪಿ.ಸಿ.
ದಿನಾಂಕ: 23-04-2013 ರಂದು ಪಿರ್ಯಾದಿ ಟಿ. ಶ್ರೀಪತಿ ಬಿನ್. ಲೇಟ್|| ತಿಮ್ಮಯ್ಯ, 2ನೇ ಕ್ರಾಸ್, ಸಕರ್ಾರಿ ಹೈಸ್ಕೂಲ್ ಹಿಂಭಾಗ, ಕಾವೇರಿನಗರ ರವರು ನೀಡಿದ ದೂರು ಏನೆಂದರೆ ದಿನಾಂಕ: 22-4-2013 ರ ರಾತ್ರಿವೇಳೆಯಲ್ಲಿ ಮದ್ದೂರು ಟೌನ್ ಕಾವೇರಿ ನಗರದ ಪಿರ್ಯಾದಿಯವರ ಮನೆಯಲ್ಲಿ ಯಾರೋ ಕಳ್ಳರು ಹೊಡೆದು ಒಳನುಗ್ಗಿ ಮನೆಯಲ್ಲಿ ಬಿರುವಿನಲ್ಲಿದ್ದ 24,800/- ರೂ ಬೆಲೆ ಬಾಳುವ ಚಿನ್ನದ 1 ಜೊತೆ ಗುಂಡು, 5 ಗ್ರಾಂನ ಚಿನ್ನದ ಎರಡು ತಾಳಿ, ಹಾಗೂ 3,1/2 ಗ್ರಾಂ ಚಿನ್ನದ ಉಂಗುರ [ಹರಳು ಇರಲಿಲ್ಲ] ಹಾಗೂ 1 ಬೆಳ್ಳಿಯ ಚೊಂಬು, ಬೆಳ್ಳಿಯ ದೀಪಾಳೆಕಂಬ, ಮತ್ತು 1 ಜೊತೆ ಬೆಳ್ಳಿಯ ಕಾಲು ಚೈನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
3. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 113/13 ಕಲಂ. 457-380 ಐ.ಪಿ.ಸಿ.
ದಿನಾಂಕ: 23-04-2013 ರಂದು ಪಿರ್ಯಾದಿ ಶ್ರೀ ಕೃಷ್ಣ, ಸರ್ಕಾರಿ ಪ್ರೌಡಶಾಲೆ, ಹೊಸಕ್ಕಿಪಾಳ್ಯ ಗೇಟ್, ಹಟ್ನ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಕಳ್ಳರು ನಮ್ಮ ಶಾಲೆಯ ಗಣಕಯಂತ್ರದ ಕೊಠಡಿಯ ಕಬ್ಬಿಣದ ಬೀಗವನ್ನು ಯಾರೋ ಕಳ್ಳರು ಹೊಡೆದಿರುವುದು ಕಂಡು ಬಂತು, ನಾನು ಗಾಬರಿಗೊಂಡು ಗಣಕಯಂತ್ರದ ಕೊಠಡಿಯ ಒಳಗೆ ಹೋಗಿ ನೋಡಿದಾಗ 11 ಬ್ಯಾಟರಿ, 2 ಸಿ.ಪಿ.ಯು ಹಾಗೂ 2 ಪ್ಲಗ್ಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment