Moving text

Mandya District Police

DAILY CRIME REPORT DATED : 29-04-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 29-04-2013 ರಂದು ಒಟ್ಟು 16 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಕಳ್ಳತನ ಪ್ರಕರಣ,  1 ರಸ್ತೆ ಅಪಘಾತ ಪ್ರಕರಣ,  1 ಕಳವು ಪ್ರಕರಣ ಹಾಗು ಇತರೆ 13 ಚುನಾವಣಾ ಅಕ್ರಮ/ಮುನ್ನೆಚ್ಚರಿಕೆ ಪ್ರಕರಣಗಳು, ಅಬಕಾರಿ ಕಾಯಿದೆ ಪ್ರಕರಣಗಳು ಮತ್ತು ಇತರೆ ಐ.ಪಿ.ಸಿ. ಪ್ರಕರಣಗಳು ವರದಿಯಾಗಿರುತ್ತವೆ. 


ಕಳ್ಳತನ ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 217/13 ಕಲಂ. 457-380 ಐ.ಪಿ.ಸಿ.

ದಿನಾಂಕ: 29-04-2013 ರಂದು ಪಿರ್ಯಾದಿ ನಂದೀಶ.ವೈ.ಹೆಚ್. ಬಿನ್. ಹನುಮೇಗೌಡ, ಯಲಿಯೂರು ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 28-04-2013 ರಂದು ಯಾರೋ ಕಳ್ಳರು ಮನೆಯ ಬಾಗಿಲ ಬೀಗವನ್ನು ಹೊಡೆದು ಒಳಗಡೆ ಇದ್ದ 3 ಟಗರು ಮತ್ತು 5 ಹೋತಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ, ಇವುಗಳ ಅಂದಾಜು ಬೆಲೆ 24000-00 ರೂ ಆಗುತ್ತದೆ ಪತ್ತೆ ಮಾಡಿಕೊಡುವಂತೆ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಸಲಾಗಿದೆ. 



ರಸ್ತೆ ಅಪಘಾತ ಪ್ರಕರಣ :

ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 127/13 ಕಲಂ. 279-304[ಎ]-176-201 ಐ.ಪಿ.ಸಿ.. ಕೂಡ 187 ಐ.ಎಂ.ವಿ. ಆಕ್ಟ್.

ದಿನಾಂಕ: 29-04-2013 ರಂದು ಪಿರ್ಯಾದಿ ಮೂಡಲಗಿರಿಗೌಡ ವ್ಯವಸಾಯ, ಕಾಡಂಕನಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಜೆ.ಸಿ.ಬಿ. ಚಾಲಕ ವೆಂಕಟೇಶ, ತೊರಹಳ್ಳಿ ಪಾಳ್ಯ, ತುರುವೇಕೆರೆ ತಾಲ್ಲೂಕು ರವರು (ಮಾಲೀಕರು ಶ್ರೀನಿವಾಸ, ಹೊಸಕ್ಕಿಪಾಳ್ಯ) ಪಿರ್ಯಾದಿಯವರ ಮಗನಾದ ಶ್ರಿನಿವಾಸ ಎಂಬುವವನಿಗೆ ಡಿಕ್ಕಿಯಾಗಿ ಸ್ಥಳದಲ್ಲೇ ಮೃತನಾಗಿದ್ದು, ಜಿ.ಸಿ.ಬಿ. ಮಾಲೀಕರು ಪಿರ್ಯಾಧಿಯ ಸಂಬಂಧಿಕರಾಗಿದ್ದು ಯಾವುದೇ ಕೇಸು ವಗೈರೆ ಬೇಡವೆಂದು ಮೃತನ ಶವವನ್ನು ಅವರ ಜಮಿನಿನಲ್ಲೇ ಸುಟ್ಟು ಹಾಕಿ, ಶವಸಂಸ್ಕಾರ ಮಾಡಿದ್ದು, ನಂತರ ಈ ಬಗ್ಗೆ ಪೊಲೀಸರಿಗ ಮಾಹಿತಿ ನೀಡುವುದು ಸೂಕ್ತವೆಂದು ಗ್ರಾಮಸ್ಥರು ತಿಳಿಸಿದ ಮೇರೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 



ಕಳವು ಪ್ರಕರಣ :

ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 106/13 ಕಲಂ. 41 ಕ್ಲಾಸ್[ಡಿ] ಕೂಡ 102 ಸಿ,ಆರ್,ಪಿ,ಸಿ ಕೂಡ 379 ಐ.ಪಿ.ಸಿ.

ದಿನಾಂಕ: 29-04-2013 ರಂದು ಪಿರ್ಯಾದಿ ಪುಟ್ಟಸ್ವಾಮಿ ಬಿ. ಪಿ.ಎಸ್.ಐ. ಕೆ.ಆರ್.ಸಾಗರ ಪೊಲೀಸ್ ಠಾಣೆ. ಶ್ರೀರಂಗಪಟ್ಟಣ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಪುನೀತ್ ಬಿನ್ ರಂಗಸ್ವಾಮಿ, 19 ವರ್ಷ, ಮನೆ ನಂ 256, 3ನೇ ಕ್ರಾಸ್, 1ನೇ ಮುಖ್ಯ ರಸ್ತೆ, ಲಕ್ಷ್ಮಿಕಾಂತರನಗರೆ, ಹೆಬ್ಬಾಳ್, ಮೈಸೂರು ರವರ ಮೇಲೆ ಅನುಮಾನವಿದ್ದು ಅವರ ಬಳಿ ಇದ್ದ ಪ್ಲಾಸ್ಟಿಕ್ ಕವರ್ ನ್ನು ತೆಗೆದು ನೋಡಿದಾಗ 10 ಮೊಬೈಲ್ಗಳು ಇದ್ದು 6 ಸ್ಯಾಮ್ಸಂಗ್ ಮೊಬೈಲ್, 3 ನೋಕಿಯಾ ಮೊಬೈಲ್ ಮತ್ತೊಂದು ಕೆನ್ಝಿಂಡಾ ಮೊಬೈಲ್ ಆಗಿದ್ದು ಇವುಗಳ ಒಟ್ಟು ಬೆಲೆ 72000/- ರೂ ಅಗಿರುತ್ತದೆ ಆದ್ದರಿಂದ ಇದನ್ನೆಲ್ಲಾ ಕಳ್ಳತನ ಮಾಡಿರಬಹುದೆಂದು ಅನುಮಾನ ಬಂದು ಆರೋಪಿಯ ಮೇಲೆ ಸ್ವಯಂ ವರದಿ ತಯಾರಿಸಿ ಕೇಸು ದಾಖಲಿಸುವಂತೆ ಹೆಚ್.ಸಿ-84 ರವರಿಗೆ ವರದಿ ನೀಡಿರುತ್ತಾರೆ ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.  

No comments:

Post a Comment