ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 30-04-2013 ರಂದು ಒಟ್ಟು 15 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ವಾಹನ ಕಳವು ಪ್ರಕರಣ, 2 ರಸ್ತೆ ಅಪಘಾತ ಪ್ರಕರಣಗಳು, 1 ಮನುಷ್ಯ ಕಾಣೆಯಾದ ಪ್ರಕರಣ, 2 ಯು.ಡಿ.ಆರ್. ಪ್ರಕರಣಗಳು ಹಾಗು ಚುನಾವಣಾ ಅಕ್ರಮ/ಮುಂಜಾಗ್ರತಾ ಪ್ರಕರಣಗಳು, ಅಬಕಾರಿ ಕಾಯಿದೆ ಪ್ರಕರಣಗಳು ಮತ್ತು ಇತರೆ ಐ.ಪಿ.ಸಿ. ಪ್ರಕರಣಗಳು ವರದಿಯಾಗಿರುತ್ತವೆ.
ವಾಹನ ಕಳವು ಪ್ರಕರಣ :
ಮಂಡ್ಯ ಪಶ್ಛಿಮ ಪೊಲೀಸ್ ಠಾಣೆ ಮೊ.ನಂ. 202/13 ಕಲಂ. 379 ಐ.ಪಿ.ಸಿ.
ದಿನಾಂಕ: 30-04-2013 ರಂದು ಪಿರ್ಯಾದಿ ಸುಚೇತನ, ಮಂಡ್ಯ ಟೌನ್ ರವರು ನೀಡಿದ ದೂರು ಏನೆಂದರೆ ದಿನಾಂಕ: 27-4-2013 ರಂದು ಮಂಡ್ಯದ ಪಿ.ಎಸ್.ಕಾಲೇಜ್ ನಲ್ಲಿ ಯಾರೋ ಕಳ್ಳರು ಪಿರ್ಯಾದಿಯವರ ಬಾಬ್ತು ಕ03-ಹೆಚ್-4096 ಯಮಹ ಆರ್-ಎಕ್ಸ್ ಮೋಟಾರ್ ಸೈಕಲ್ ಅನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅದನ್ನು ಪತ್ತೆ ಹುಡುಕಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ರಸ್ತೆ ಅಪಘಾತ ಪ್ರಕರಣಗಳು :
1. ಕೆ.ಆರ್. ಸಾಗರ ಪೊಲೀಸ್ ಠಾಣೆ ಮೊ.ನಂ. 12/13 ಕಲಂ. 279-304(ಎ) ಐ.ಪಿ.ಸಿ.
ದಿನಾಂಕ: 30-04-2013 ರಂದು ಪಿರ್ಯಾದಿ ಮಹೇಶ, ಬಲ್ಲೇನಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಅವರ ಮಾವ ನಾಗರಾಜಚಾರಿ ರವರು ಕನ್ನಂಬಾಡಿ ಬಳಿ ಕೆ,ಎ,-09-ಇಜಿ 6826 ಮೋಟಾರ್ ಬೈಕ್ ರಲ್ಲಿ ಬರುತ್ತದ್ದವರಿಗೆ ಎದುರಿನಿಂದ ಬಂದ ಆರೋಪಿ ಕೆ,ಎ,-09-ಇ ಎಂ- 9737 ರ ಮೋಟಾರ್ ಬೈಕ್ ಸವಾರ, ಪ್ರವೀಣ, ಹೊಸಕನ್ನಂಬಾಡಿ ರವರು ಅತಿವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಪಡಿಸಿದ ಪರಿಣಾಮ ಆರೋಪಿ ಸ್ಥಳದಲ್ಲಿ ಮೃತಪಟ್ಟಿದ್ದು ಗಾಯಾಳು ನಾಗರಾಜಚಾರಿ, ಮೈಸೂರು ರವರು ವಿಕ್ರಂ ಆಸ್ಪತ್ರೆಯಲ್ಲಿ ಮೃತವಾಗಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಬಿಂಡಿಗನವಿಲೆ ಪೊಲೀಸ್ ಠಾಣೆ ಮೊ.ನಂ. 71/13 ಕಲಂ. 279-304(ಎ) ಐ.ಪಿ.ಸಿ. ಕೂಡ 187 ಐ.ಎಂ.ವಿ. ಆಕ್ಟ್.
ದಿನಾಂಕ: 30-04-2013 ರಂದು ಪಿರ್ಯಾದಿ ಹೇಮಕುಮಾರ.ಕೆ.ಆರ್. ಕದಬಹಳ್ಳಿ ಗ್ರಾಮ ರವರು ನೀಡಿದ ದೂರು ಏನೆಂದರೆ ಆರೋಪಿ ಕೆ.ಎ.-04-ಎಂ.ಹೆಚ್.-2427 ರ ಸ್ವಿಫ್ಟ್ ಕಾರಿನ ಚಾಲಕ ಕದಬಹಳ್ಳಿ ಗ್ರಾಮದ ಎನ್.ಹೆಚ್.-48 ರಸ್ತೆಯಲ್ಲಿ ಅವರ ಕಾರನ್ನು ಅತಿವೇಗ ಮತ್ತು ಅಜಾರೂಕತೆಯಿಂದ ಓಡಿಸಿಕೊಂಡು ಬಂದು ಶಿವರಾಜುರವರ ಬೈಕಿಗೆ ಹಿಂಭಾಗದಿಂದ ಡಿಕ್ಕಿ ಮಾಡಿದ ಪರಿಣಾಮ ಶಿವರಾಜುರವರಿಗೆ ತಲೆಗೆ ಪೆಟ್ಟಾಗಿ ತೀವ್ರ ಸ್ವರೂಪದ ಗಾಯಗಳಾಗಿದ್ದು ಪಿಯರ್ಾದಿ ಮತ್ತು ಪಿಯರ್ಾದಿಯವರ ಗ್ರಾಮಸ್ಥರು ಶಿವರಾಜುರವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದು, ಈ ಅಪಘಾತ ಮಾಡಿದ ಕಾರಿನ ಚಾಲಕ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ :
ಕೆಸ್ತೂರು ಪೊಲೀಸ್ ಠಾಣೆ ಮೊ.ನಂ. 112/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.
ದಿನಾಂಕ: 30-04-2013 ರಂದು ಪಿರ್ಯಾದಿ ರಾಜು, ಹನುಮಂತಪುರ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 29-4-2013 ರಂದು ಹನುಮಂತಪುರ ಗ್ರಾಮದಿಂದ ಪಿರ್ಯಾದಿಯವರ ಹೆಂಡತಿ ಯಶೋಧ, 23 ವರ್ಷ, ರವರು ಮನೆಯಿಂದ ಹೊರಗೆ ಹೋದವರು ವಾಪಾಸ್ ಮನೆಗೆ ಬಂದಿರುವುದಿಲ್ಲ ಕಾಣೆಯಾಗಿರುತ್ತಾರೆ ಅವರನ್ನು ಹುಡುಕಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಯು.ಡಿ.ಆರ್. ಪ್ರಕರಣಗಳು :
1. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 13/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 30-04-2013 ರಂದು ಪಿರ್ಯಾದಿ ಸುಜಾತ ಕೊಂ. ರಾಜೇಗೌಡ, ಸಾಧುಗೋನಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಮಗಳು ಹುಶಾರಿಲ್ಲದ ಕಾರಣಕ್ಕಾಗಿ ಆಸ್ಪತ್ರೆಗೆ ಹೋಗಿರುತ್ತೇನೆಂದು ಹೇಳಿದ್ದು, ಅನಂತರ ಎಸ್.ಜೆ.ಪ್ರತಾಪ @ ಗುಂಡ ಎಂಬುವವನು ನಿಮ್ಮ ಮಗಳನ್ನು ಕರೆದುಕೊಂಡು ಹೋಗಿರುತ್ತಾನೆಂದು ಅಣ್ಣೇಗೌಡ ರವರಿಗೆ ಗ್ರಾಮದವರು ತಿಳಿಸಿದಾಗ ಪಿರ್ಯಾದಿರ ಮಾವ ಅಣ್ಣೇಗೌಡರು ಅವಮಾನವನ್ನು ತಾಳಲಾರದೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಮುಂದಿನ ಕ್ರಮ ಜರುಗಿಸಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 13/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 30-04-2013 ರಂದು ಪಿರ್ಯಾದಿ ಜಯಂತಿ, ಮೆಳ್ಳಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಎಂ.ಎಸ್.ಮಹದೇವ, 32 ವರ್ಷ ರವರು ಮೆಳ್ಳಹಳ್ಳಿ ಗ್ರಾಮದಲ್ಲಿ ಅವರ ಪಂಪ್ಸೆಟ್ ಬೋರ್ವೆಲ್ ಬಾವಿಯಿಂದ ನೀರು ಹೊಡೆಯಲು ಬೋರ್ ಸ್ಟಾಟ್ಮಾಡಲು ಹೋದಾಗ ಆಕಸ್ಮಿಕವಾಗಿ ವಿದ್ಯುತ್ ಶಾಕ್ ಹೊಡೆದು ಪೆಟ್ಟಾಗಿ ಮೃತಪಟ್ಟಿರುತ್ತಾರೆಂದು ದೂರು ನೀಡಿದ್ದು ಪ್ರಕರಣ ದಾಖಲಿಸಲಾಗಿದೆ.
No comments:
Post a Comment