ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 04-05-2013 ರಂದು ಒಟ್ಟು 25 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 5 ಯು.ಡಿ.ಆರ್. ಪ್ರಕರಣಗಳು, 1 ಕಳವು ಪ್ರಕರಣ 2 ಮನುಷ್ಯ ಕಾಣೆಯಾದ ಪ್ರಕರಣಗಳು, 7 ಚುನಾವಣಾ ಅಕ್ರಮ ಹಣ ಹಂಚಿಕೆ ಪ್ರಕರಣಗಳು ಹಾಗು 10 ಇತರೆ ಚುನಾವಣಾ ಅಕ್ರಮ/ಮುನ್ನೆಚ್ಚರಿ ಪ್ರಕರಣಗಳು, ಅಬಕಾರಿ ಪ್ರಕರಣಗಳು ಮತ್ತು ಐ.ಪಿ.ಸಿ. ಪ್ರಕರಣಗಳು ವರದಿಯಾಗಿರುತ್ತವೆ.
ಯು.ಡಿ.ಆರ್. ಪ್ರಕರಣ ಪ್ರಕರಣಗಳು :
1. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಯು.ಡಿ.ಆರ್.ನಂ. 12/13 ಕಲಂ. 174 ಸಿಆರ್.ಪಿಸಿ.
ದಿನಾಂಕ: 04-05-2013 ರಂದು ಪಿರ್ಯಾದಿ ಎಲ್.ಪುಟ್ಟೇಗೌಡ ಬಿನ್ ಲೇ:ಲಿಂಗೇಗೌಡ, 52 ವರ್ಷ, ವ್ಯವಸಾಯ ಕೊತ್ತತ್ತಿ ಗ್ರಾಮ, ಮಂಡ್ಯ ತಾ: ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 04-05-2013ರಂದು ಪಿರ್ಯಾದಿಯವರು ಬೆಳಿಗ್ಗೆ 07-00 ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರಿನ ಸಾರಾಂಶವೇನೆಂದರೆ ನನ್ನ ಅಕ್ಕನವರಾದ ಶ್ರೀಮತಿ ಜಯಮ್ಮ ಎಂಬುವರು ದಿನಾಂಕ:03-05-2013 ರಂದು ಜಮೀನಿನ ಬಳಿ ಹೋಗಿ ಕಬ್ಬಿನ ಗದ್ದೆಯಲ್ಲಿ ಕಳೆಕಿಳುವಾಗ ಬೆಳಿಗ್ಗೆ 09-30 ಗಂಟೆಯ ಸಮಯದಲ್ಲಿ ಅಕಸ್ಮಿಕವಾಗಿ ನಾಗರಹಾವು ಬಲಭಾಗದ ತೊಡೆಗೆ ಕಚ್ಚಿದಾಗ ನಮ್ಮ ಅಕ್ಕನವರು ಕಿರುಚಾಡಿಕೊಂಡು ಗದ್ದೆಯಿಂದ ಹೊರಗಡೆ ಬಂದಾಗ ಅಲ್ಲೆ ಗದ್ದೆಯ ಪಕ್ಕದಲ್ಲಿದ್ದ ನಮ್ಮ ಗ್ರಾಮದ ಜಯಲಕ್ಷ್ಮಿ ಎಂಬುವವರು ನಮ್ಮ ಅಕ್ಕನನ್ನು ಸಮಾದಾನಪಡಿಸಿ ನಂತರ ಊರಿಗೆ ಕರೆದುಕೊಂಡು ಬಂದರು ನಂತರ ನಮ್ಮ ಗ್ರಾಮದ ಶಿವನಂಜು ಎಂವಬುವರು ಚಿಕಿತ್ಸೆಗೆ ಮಂಡ್ಯ ಜನರಲ್ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ಸೇರಿಸಿ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ: 04-05-2013 ರಂದು ಬೆಳಿಗಿನ ಜಾವ 01-00 ಗಂಟೆಯಲ್ಲಿ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾಳೆ ಆದ್ದರಿಂದ ತಾವು ಮುಂದಿನ ಕ್ರಮ ಜರುಗಿಸಬೇಕೆಂದು ಕೊಟ್ಟ ಇತ್ಯಾದಿ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
2.ಮದ್ದೂರು ಪೊಲೀಸ್ ಠಾಣೆ ಯು.ಡಿ.ಆರ್. ನಂ. 18/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 04-05-2013 ರಂದು ಪಿರ್ಯಾದಿ ಮಹೇಶ ಬಿನ್. ಬೋರೇಗೌಡ, ಕುದರಗುಂಡಿ ಗ್ರಾಮ, ಮದ್ದೂರು ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಚಿಕ್ಕಪ್ಪ, ಶಿವಣ್ಣ, 45ವರ್ಷ, ವಕ್ಕಲಿಗರು, ವ್ಯವಸಾಯ, ವಾಸ: ಕುದರಗುಂಡಿ ಗ್ರಾಮ, ಮದ್ದೂರು ತಾಲ್ಲೂಕು ರವರು ದಿನಾಂಕ: 03-05-2013ರಂದು ಮದ್ಯಾಹ್ನ 12-00 ಗಂಟೆ ಸಮಯದಲ್ಲಿ ಪಿರ್ಯಾದಿಯವರ ಚಿಕ್ಕಪ್ಪ ಶಿವಣ್ಣನು ಜೀವನದಲ್ಲಿ ಜಿಗುಪ್ಸೆಗೊಂಡು ತಮ್ಮ ಮನೆಯಲ್ಲಿದ್ದ ಯಾವುದೋ ಕ್ರಿಮಿನಾಶಕ ಔಷಧಿಯನ್ನು ಸೇವಿಸಿದ್ದು, ಶಿವಣ್ಣನನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
3. ಮಂಡ್ಯ ಪೂರ್ವ ಪೊಲೀಸ್ ಠಾಣೆ ಯು.ಡಿ.ಆರ್. ನಂ. 10/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 04-05-2013 ರಂದು ಪಿರ್ಯಾದಿ ವೆಂಕಟಮ್ಮ ಕೋಂ ಲೇಟ್, ಸಿದ್ದನಾಯಕ, ನಂ. 36/7, 5 ನೇ ಕ್ರಾಸ್, 7 ನೇ ಮುಖ್ಯ ರಸ್ತೆ, ದೇವನಾಥ್ಚಾರ್ ಬೀದಿ, ಕೆಂಪಾಂಬುದಿ ಕೆರೆ ಪಾಕರ್್, ಚಾಮರಾಜಪೇಟೆ, ಬೆಂಗಳೂರು ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ನಂ. 3617, 5 ನೇ ಕ್ರಾಸ್, 7 ನೇ ಮುಖ್ಯ ರಸ್ತೆ, ದೇವನಾಥ್ಚಾರ್ ಬೀದಿ, ಕೆಂಪಾಂಬುದಿ ಕೆರೆ ಪಾರ್ಕ್, ಚಾಮರಾಜಪೇಟೆ, ಬೆಂಗಳೂರು ಸಿಟಿಯಲ್ಲಿ ಸಿದ್ದನಾಯಕನು ಕೂಲಿ ಕೆಲಸ ಮಾಡಿಕೊಂಡಿದ್ದು ಈತನಿಗೆ ಬೀಡಿ ಸೇದು ಮತ್ತು ಕುಡಿಯುವ ಹವ್ಯಾಸವಿದ್ದು, ಈಗ್ಗೆ ಒಂದು ವರ್ಷದಿಂದ ಹೊಟ್ಟೆ ನೋವು ಬರುತ್ತಿದ್ದು ಈ ಬಗ್ಗೆ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದನು ದಿನಾಂಕ: 01-05-2013 ರಂದು ಪಿರ್ಯಾದಿ ಮತ್ತು ಅವರ ಮಕ್ಕಳು ಕೆಲಸಕ್ಕೆಂದು ಮನೆಯಿಂದ ಹೊರಗಡೆ ಹೋಗಿ ವಾಪಸ್ಸು ರಾತ್ರಿ 10-00 ಗಂಟೆ ಸಮಯದಲ್ಲಿ ಸಿದ್ದನಾಯಕನಿಗೆ ಹೊಟ್ಟೆನೋವು ಜಾಸ್ತಿಯಾಗಿ ಯಾವುದೋ ಕ್ರಿಮಿನಾಶಕ ಕುಡಿದು ಒದ್ದಾಡುತ್ತಿದ್ದನು. ಆಗ ಕೂಡಲೇ ಯಾವುದೋ ಆಟೋದಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿರುತ್ತೆ. ಆಸ್ಪತ್ರೆಯಲ್ಲಿ ಐ.ಸಿ.ಯು ಇಲ್ಲವೆಂದು ತಿಳಿಸಿದ್ದರಿಂದ ದಿನಾಂಕ 03-05-2013 ರಂದು ರಾತ್ರಿ ಸುಮಾರು 09-30 ಗಂಟೆಗೆ ಸಿದ್ದನಾಯಕರವರನ್ನು ಮಂಡ್ಯ ಸಕರ್ಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ದಾಖಲು ಮಾಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಿದ್ದನಾಯಕನು ಮೃತಹೊಂದಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
4. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 11/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 04-05-2013 ರಂದು ಪಿರ್ಯಾದಿ ಕಮಲ ಕೋಂ. ಲೇಟ್. ಶಿವಣ್ಣ, ಹುಚ್ಚನದೊಡ್ಡಿ, ಮೂಡಲಪಾಳ್ಯ, ಕುರಿಲಿಂಗಪ್ಪ ಗಾರ್ಡನ್, ಬೆಂಗಳೂರು-72 ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರ ಗಂಡ ಶಿವಣ್ಣ ಬಿನ್ ಕೆಂಚೇಗೌಡ ರವರು ದಿನಾಂಕ: 02-05-2013 ರಂದು ಹೊಟ್ಟೆ ನೋವನ್ನು ತಾಳಲಾರದೆಯೋ ಅಥವಾ ಜೀವನದಲ್ಕಿ ಜಿಗುಪ್ಸೆ ಹೊಂದಿಯೋ ಯಾವುದೋ ಮದ್ಯಪಾನದ ಜೊತೆ ವಿಷಸೇವನೆ ಮಾಡಿ ಹುಚ್ಚನದೊಡ್ಡಿ ಗೇಟ್ ಬಳಿ ಇರುವ ಮಲ್ಲೇಶನ ಹೋಟೆಲ್ ಬಳಿ ಕುಸಿದ್ದು ಬಿದ್ದಿದ್ದ ಆಸ್ಪತೆ ಚಿಕಿತ್ಸೆ ಫಲಕಾರಿಯಾಗದೇ ಈ ದಿವಸ ದಿನಾಂಕ: 04-05-2013 ರಂದು ಬೆಳಗಿನ ಜಾವ 03.30 ರ ಸಮಯದಲ್ಲಿ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
5. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 05/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 04-05-2013 ರಂದು ಪಿರ್ಯಾದಿ ಪಾರ್ವತಮ್ಮ ಕೊಂ. ಶ್ರೀನಿವಾಸ, ದೇವರಮಲ್ಲನಾಯಕನಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ಗಂಡ ಶ್ರೀನಿವಾಸರವರು ಆಡು ಕುರಿಗಳಿಗೆ ಸೊಪ್ಪನ್ನು ಕಡಿಯಲು ಮರಕ್ಕೆ ಹತ್ತಿದ್ದು ಸೊಪ್ಪು ಕಡಿಯುವಾಗ ಆಕಸ್ಮಿಕವಾಗಿ ಮರದಿಂದ ಕಾಲು ಜಾರಿ ಕೆಳಕ್ಕೆ ಬಿದ್ದು ಮರಣ ಹೊಂದಿರುತ್ತಾರೆಂದು ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣ :
ಮದ್ದೂರು ಪೊಲೀಸ್ ಠಾಣೆ ಮೊ.ನಂ. 198/13 ಕಲಂ. 379 ಐ.ಪಿ.ಸಿ.
ದಿನಾಂಕ: 04-05-2013 ರಂದು ಪಿರ್ಯಾದಿ ವಿ.ರಾಜೇಶ ಬಿನ್. ವೆಂಕಟೇಶ, ಮಲ್ಲಯ್ಯನಗರ, ಕುದರಗುಂಡಿ ಕಾಲೋನಿ, ಮದ್ದೂರು ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರು 25ಹಂದಿಗಳನ್ನು ಸಾಕಿದ್ದು, ಸದರಿಯವು ಗಳನ್ನು ದಿನಾಂಕ: 01-5-2013ರ ರಾತ್ರಿ 10-30 ಗಂಟೆಯಿಂದ ದಿನಾಂಕ: 02-05-2013ರ ಬೆಳಿಗ್ಗೆ 0600 ಗಂಟೆಯ ಅವಧಿಯಲ್ಲಿ ಮಲ್ಲಯ್ಯನಗರ ಕುದರಗುಂಡಿ ಕಾಲೋನಿಯಲ್ಲಿ ಕೂಡಿ ಹಾಕಿ ತಮ್ಮ ಮನೆಗೆ ಹೋಗಿದ್ದಾಗ ಆರೋಪಿಗಳು 25 ಹಂದಿಗಳ ಪೈಕಿ 17 ಹಂದಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅವುಗಳ ಅಂದಾಜು ಬೆಲೆ 30,000 ದಿಂದ 35,000ರೂ ಗಳಾಗಬಹುದು ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣಗಳು :
1. ಮದ್ದೂರು ಪೊಲೀಸ್ ಠಾಣೆ ಮೊ.ನಂ. 199/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.
ದಿನಾಂಕ: 04-05-2013 ರಂದು ಪಿರ್ಯಾದಿ ಬೋರೇಗೌಡ ಬಿನ್. ಲೇಟ್. ಮರಿಯಪ್ಪ, ಅಣ್ಣಹಳ್ಳಿ ಗ್ರಾಮ, ಮದ್ದೂರು ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 02-05-2013 ರಂದು ಪಿರ್ಯಾದಿಯವರ ಅಣ್ಣ ತಮ್ಮಯ್ಯ ಬಿನ್. ಲೇಟ್. ಮರಿಯಪ್ಪ, ವ್ಯವಸಾಯ, ಅಣ್ಣಹಳ್ಳಿ, ಮದ್ದೂರು ತಾ. ರವರು ಇಗ್ಗಲೂರು ಗ್ರಾಮಕ್ಕೆ ತಲೆ ಕೂದಲು ಕಟಿಂಗ್ ಮಾಡಿಸಿಕೊಂಡು ಬರುವುದಾಗಿ ಹೇಳಿ ಹೋದವನು ಮನೆಗೆ ವಾಪಸ್ ಬಾರದೇ ಕಾಣೆಯಾಗಿರುತ್ತಾನೆ ಅವರನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಕೆ,ಆರ್. ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 119/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.
ದಿನಾಂಕ: 04-05-2013 ರಂದು ಪಿರ್ಯಾದಿ ಗೌರಮ್ಮ ಕೊಂ. ಜಯರಾಮ್, ಕುರ್ನೇನಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿ 1ನೇ ಮಗಳು ಸ್ವಾತಿಗೆ ಮದುವೆ ಗೊತ್ತುಮಾಡಿದ್ದು ದಿನಾಂಕ:16-05-2013 ರಂದು ಮದುವೆ ನಿಗದಿಯಾಗಿರುತ್ತದೆ. ದಿನಾಂಕ:02-05-2013ರಂದು ಮದ್ಯಾಹ್ನ 03-00 ಗಂಟೆಯಲ್ಲಿ ಕೆ.ಆರ್.ಪೇಟೆಯಲ್ಲಿ ಬಟ್ಟೆಹೊಲೆಸಿಕೊಳ್ಳಲು ಹೋಗುವುದಾಗಿ ಹೇಳಿ ಮನೆಯಿಂದ ಹೋದವಳು ಇದುವರೆಗೂ ವಾಪಸ್ ಬಂದಿರುವುದಿಲ್ಲಾ ನಾವು ಇದುವರೆಗೂ ಎಲ್ಲಾ ಕಡೆ ಹುಡುಕಲಾಗಿ ಸಿಕ್ಕಿರುವುದಿಲ್ಲಾ ಕಾಣೆಯಾಗಿರುತ್ತಾಳೆ. ಪತ್ತೆಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಚುನಾವಣಾ ಅಕ್ರಮ ಹಣ ಹಂಚಿಕೆ ಪ್ರಕರಣಗಳು :
1. ಮದ್ದೂರು ಪೊಲೀಸ್ ಠಾಣೆ ಮೊ.ನಂ. 200/13 ಕಲಂ. 171(ಇ) 188 ಐ.ಪಿ.ಸಿ.
ದಿನಾಂಕ: 04-05-2013 ರಂದು ಪಿರ್ಯಾದಿ ಬಿ.ಎಸ್.ಶ್ರೀಧರ್, ಪಿ.ಎಸ್.ಐ. ಮದ್ದೂರು ಪೊಲೀಸ್ ಠಾಣೆ, ಮದ್ದೂರು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಟಿ.ಮುತ್ತುರಾಜು ಬಿನ್. ಲೇಟ್. ತಿಮ್ಮಯ್ಯ, ಪರಿಶಿಷ್ಟ ಜಾತಿ, ಫ್ಲವರ್ ಡೆಕೋರೇಟರ್ ಕೆಲಸ, ವಾಸ: ಸಕರ್ಾರಿ ಪದವಿ ಪೂರ್ವ ಕಾಲೇಜು ಹಿಂಭಾಗ, ಕಾವೇರಿನಗರ, ಮದ್ದೂರು ಟೌನ್ ರವರು ದಿ.5-5-13ರಂದು ನಡೆಯುವ ವಿಧಾನ ಸಭಾ ಚುನಾವಣೆ ಸಂಬಂಧ ಪಿರ್ಯಾದಿಯವರು ಗಸ್ತು ನಿರ್ವಹಿಸುತ್ತಿದ್ದಾಗ ರಾತ್ರಿ7-45 ಮದ್ದೂರುಟೌನ್ ಕಾವೇರಿನಗರ ಸಕರ್ಾರಿ ಜೂನಿಯರ್ ಕಾಲೇಜು ಹಿಂಭಾಗ ಆರೋಪಿಯು ಜೆ.ಡಿ.ಎಸ್. ಪಕ್ಷಕ್ಕೆ ಮತ ನೀಡಬೇಕೆ ಂದು ಮತದಾರರಿಗೆ ಮತಪಟ್ಟಿಯನ್ನು ತೋರಿಸಿ ಅವರಿಗೆ ಹಣದ ಆಮಿಷ ಒಡ್ಡಿ ತಮ್ಮ ಕಡೆಯವರಿಗೆ ಮತ ನೀಡಬೇಕೆಂದು ಹಣ ಹಂಚುತ್ತಿದ್ದಾಗ ಪಿರ್ಯಾದಿ ಮತ್ತು ಸಿಬ್ಬಂದಿಯವರು ಪಂಚರ ಸಮ ಕ್ಷಮ ಹಿಡಿದು ವಶಕ್ಕೆ ತೆಗೆದುಕೊಂಡು ಮತದಾರರಿಗೆ ಹಂಚಲು ತಂದಿದ್ದ ಹಣ24,500ರೂ &ಮತದಾರರ ಪಟ್ಟಿಯನ್ನು ಅಮಾನ ತ್ತುಪಡಿಸಿಕೊಂಡು ಸ್ವಯಂ ಪ್ರಕರಣ ದಾಖಲು ಮಾಡಿರುತ್ತೆ.
2. ಮದ್ದೂರು ಪೊಲೀಸ್ ಠಾಣೆ ಮೊ.ನಂ. 201/13 ಕಲಂ. 171(ಇ) 188 ಐ.ಪಿ.ಸಿ.
ದಿನಾಂಕ: 04-05-2013 ರಂದು ಪಿರ್ಯಾದಿ ಕೆ.ಓ ಪುಟ್ಟಓಬಲರೆಡ್ಡಿ, ಸಿ.ಪಿ.ಐ ಮದ್ದೂರು ವೃತ್ತ, ಮದ್ದೂರು ತಾ. ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಬಿ.ವಿ.ರವಿ ಬಿನ್ ವೆಂಕಟೇಗೌಡ, ವಕ್ಕಲಿಗರು, ವ್ಯವಸಾಯ, ವಾಸ: ಕೊಕ್ಕರೆ ಬೆಳ್ಳೂರು ಗ್ರಾಮ, ಮದ್ದೂರು ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 05-05-2013ರಂದು ನಡೆಯುವ ವಿಧಾನ ಸಭಾ ಚುನಾವಣೆ ಸಂಬಂಧ ಪಿರ್ಯಾದಿಯವರು ಗಸ್ತು ನಿರ್ವಹಿಸುತ್ತಿದ್ದಾಗ ರಾತ್ರಿ 08-30 ಗಂಟೆಯಲ್ಲಿ ಕೆ.ಬೆಳ್ಳೂರು ಗ್ರಾಮದಲ್ಲಿ ಕೆ.ಎಂ.ದೊಡ್ಡಿ ರಸ್ತೆಯಲ್ಲಿ ಆರೋಪಿಯು ಜೆ.ಡಿ.ಎಸ್. ಪಕ್ಷಕ್ಕೆ ಮತ ನೀಡಬೇಕೆಂದು ಮತದಾರರಿಗೆ ಮತಪಟ್ಟಿಯನ್ನು ತೋರಿಸಿ ಅವರಿಗೆ ಹಣದ ಆಮಿಷ ಒಡ್ಡಿ ತಮ್ಮ ಕಡೆಯವರಿಗೆ ಮತ ನೀಡಬೇಕೆಂದು ಹಣ ಹಂಚುತ್ತಿದ್ದಾಗ ಪಿರ್ಯಾದಿ ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ ಹಿಡಿದು ವಶಕ್ಕೆ ತೆಗೆದುಕೊಂಡು ಮತದಾರರಿಗೆ ಹಂಚಲು ತಂದಿದ್ದ ಹಣ 9780/-ರೂ ಮತ್ತು ಮತದಾರರ ಪಟ್ಟಿಯನ್ನು ಅಮಾನತ್ತುಪಡಿಸಿಕೊಂಡು ಸ್ವಯಂ ಪ್ರಕರಣ ದಾಖಲು ಮಾಡಿರುತ್ತಾರೆ.
3. ಮದ್ದೂರು ಪೊಲೀಸ್ ಠಾಣೆ ಮೊ.ನಂ. 202/13 ಕಲಂ. 171ಬಿ, 171(ಇ) 188 ಐ.ಪಿ.ಸಿ.
ದಿನಾಂಕ: 04-05-2013 ರಂದು ಪಿರ್ಯಾದಿ ಚಂದ್ರಶೇಖರ್. ಸಿ.ಹೆಚ್. ಬಿನ್. ಹುಚ್ಚಯ್ಯ, 41ವರ್ಷ, ವಕ್ಕಲಿಗರು, ಹಂದಿ ಮಿಲ್ಟ್ರಿ ಹೋಟೆಲ್ ವ್ಯಾಪಾರ, ವಾಸ: ಚನ್ನಸಂದ್ರ ಗ್ರಾಮ, ಮದ್ದೂರು ತಾಲ್ಲೂಕು ರವರು ನೀಡಿದ ದೂರು ಏನೆಂದರೆ ದಿನಾಂಕ: 05--2013ರಂದು ನಡೆಯುವ ವಿಧಾನಸಭಾ ಚುನಾವಣೆ ಸಂಬಂಧ ಪಿರ್ಯಾದಿಯವರು ಗಸ್ತು ನಿರ್ವಹಿಸುತ್ತಿದ್ದಾಗ ರಾತ್ರಿ 09-45 ಮದ್ದೂರುಟೌನ್ ರಾಮ್ ರಹೀಂ ನಗರದಲ್ಲಿ ಆರೋಪಿಯು ಕಾಂಗ್ರೇಸ್ ಪಕ್ಷಕ್ಕೆ ಮತ ನೀಡಬೇಕೆಂದು ಮತದಾರರಿಗೆ ಮತಪಟ್ಟಿಯನ್ನು ತೋರಿಸಿ ಅವರಿಗೆ ಹಣದ ಆಮಿಷ ಒಡ್ಡಿ ತಮ್ಮ ಕಡೆಯವರಿಗೆ ಮತ ನೀಡಬೇಕೆಂದು ಹಣ ಹಂಚುತ್ತಿದ್ದಾಗ ಪಿರ್ಯಾದಿ ಮತ್ತು ಸಿಬ್ಬಂದಿಯವರು ಪಂಚರ ಸಮ ಕ್ಷಮ ಹಿಡಿದು ವಶಕ್ಕೆ ತೆಗೆದುಕೊಂಡು ಮತದಾರರಿಗೆ ಹಂಚಲು ತಂದಿದ್ದ ಹಣ13,680/- ರೂ ಮತ್ತು ಮತದಾರರ ಪಟ್ಟಿಯನ್ನು ಅಮಾನತ್ತುಪಡಿಸಿಕೊಂಡು ಸ್ವಯಂ ಪ್ರಕರಣ ದಾಖಲು ಮಾಡಿರುತ್ತಾರೆ.
4. ಮದ್ದೂರು ಪೊಲೀಸ್ ಠಾಣೆ ಮೊ.ನಂ. 203/13 ಕಲಂ. 171ಬಿ, 171(ಇ) 188 ಐ.ಪಿ.ಸಿ.
ದಿನಾಂಕ: 04-05-2013 ರಂದು ಪಿರ್ಯಾದಿ ಬಿ.ಎಸ್.ಶ್ರೀಧರ್ ಪಿ.ಎಸ್.ಐ. ಮದ್ದೂರು ಪೊಲೀಸ್ ಠಾಣೆ, ಮದ್ದೂರು ರವರು ನೀಡಿದ ದೂರು ಏನೆಂದರೆ ಸೋಮಶೇಖರ ಬಿನ್. ಲೇಟ್. ಮರಿಸ್ವಾಮಿ, 40 ವರ್ಷ, ವಕ್ಕಲಿಗರ,ು ಎಸ್.ಸಿ.ಎಂ. ಷುಗರ್ಸ್ ಕಂಪನಿಯಲ್ಲಿ ಫೀಲ್ಡ್ ಮ್ಯಾನ್, ಕೊಪ್ಪ ವಾಸ: ಸೋಮೇಗೌಡ ಬೀದಿ, ಮದ್ದೂರು ಟೌನ್ ರವರು ನೀಡಿದ ದೂರು ಏನೆಂದರೆ ದಿ.5-5-13ರಂದು ನಡೆಯುವ ವಿಧಾನ ಸಭಾ ಚುನಾವಣೆ ಸಂಬಂಧ ಪಿರ್ಯಾದಿಯವರು ಗಸ್ತು ನಿರ್ವಹಿಸುತ್ತಿದ್ದಾಗ ರಾತ್ರಿ10-45 ಮದ್ದೂರು ಟೌನ್ ರಾಮ್ ರಹೀಂ ನಗರದಲ್ಲಿ ಆರೋಪಿಯು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕೆಂದು ಮತದಾರರಿಗೆ ಮತಪಟ್ಟಿಯನ್ನು ತೋರಿಸಿ ಅವರಿಗೆ ಹಣದ ಆಮಿಷ ಒಡ್ಡಿ ತಮ್ಮ ಕಡೆಯವರಿಗೆ ಮತ ನೀಡಬೇಕೆಂದು ಹಣ ಹಂಚುತ್ತಿದ್ದಾಗ ಪಿರ್ಯಾದಿ ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ ಹಿಡಿದು ವಶಕ್ಕೆ ತೆಗೆದುಕೊಂಡು ಮತದಾರರಿಗೆ ಹಂಚಲು ತಂದಿದ್ದ ಹಣ20,000/- ರೂ ಮತ್ತು ಮತದಾರರ ಪಟ್ಟಿಯನ್ನು ಅಮಾನತ್ತುಪಡಿಸಿಕೊಂಡು ಸ್ವಯಂ ಪ್ರಕರಣ ದಾಖಲು ಮಾಡಿರುತ್ತಾರೆ.
5. ಬೆಳಕವಾಡಿ ಪೊಲೀಸ್ ಠಾಣೆ ಮೊ.ನಂ. 56/13 ಕಲಂ. 171(ಇ) ಐ.ಪಿ.ಸಿ.
ದಿನಾಂಕ: 04-05-2013 ರಂದು ಪಿರ್ಯಾದಿ ಎಸ್. ಮಹದೇವಯ್ಯ, ಸೆಕ್ಟರ್ ಅಧಿಕಾರಿ, ನಂ.5, ಮಳವಳ್ಳಿ ವಿಧಾನಸಭಾ ಕ್ಷೇತ್ರ, ಮಳವಳ್ಳಿ. ರವರು ನೀಡಿದ ದೂರು ಏನೆಂದರೆ ದಿನಾಂಕ: 04-05-2013 ರಂದು ಬೆಳಗಿನ ಜಾವ ಬಿ.ಜಿ ಪುರ ಗ್ರಾಮದಲ್ಲಿ ಪರಿಶಿಷ್ಟ ಕಾಲೋನಿಯ ವಾಸಿ ಶ್ರೀ. ರಾಜು ಬಿನ್. ಬಸವಯ್ಯರವರ ಮನೆಯನ್ನು ಪೂರ್ಣ ಪ್ರಮಾಣದಲ್ಲಿ ಪರಿಶೀಲನೆ ಮಾಡಿ ವಿಚಾರಣೆ ಮಾಡಲಾಗಿದ್ದು, ಜೆಡಿಎಸ್ ನ ಕಡೆಯವರು ಎಂಬುದಾಗಿ ಹೇಳಿಕೊಂಡು ಯಾರೋ ನಮಗೆ ಈ ದಿನ 6-8 ಸೀರೆಗಳನ್ನು ಕೊಟ್ಟು ಹೋಗಿರುತ್ತಾರೆ ಎಂದು ಅವರ ಅಣ್ಣ ಹಾಗೂ ಇಬ್ಬರು ಹೆಂಗಸರು ವಿಚಾರಣೆಯಲ್ಲಿ ತಿಳಿಸಿರುತ್ತಾರೆ ಎಂದು ದೂರನ್ನು ನೀಡಿದ್ದು, ದೂರಿನ ಜೊತೆ 8 ಸಂಖ್ಯೆಯ ಸೀರೆಗಳನ್ನು ಹಾಜರ್ಪಡಿಸಿ, ಈ ಪ್ರಕರಣದ ಬಗ್ಗೆ ತಾವು ಕೂಲಂಕುಷವಾಗಿ ಪರಿಶೀಲಿಸಿ ನಿಜ ಸ್ಥಿತಿಯನ್ನು ಪತ್ತೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರನ್ನು ಸ್ವೀಕರಿಸಿಕೊಂಡು ಕ್ರಮ ಕೈಗೊಂಡಿದೆ.
6. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 176/13 ಕಲಂ. 143-147-341-171(ಇ) ಕೂಡ 149 ಐ.ಪಿ.ಸಿ.
ದಿನಾಂಕ: 04-05-2013 ರಂದು ಪಿರ್ಯಾದಿ ಲವಕುಮಾರ ಬಿನ್. ಲೇಟ್. ಚೌಡೇಗೌಡಬೀರಶೆಟ್ಟಹಳ್ಳಿ, ಪಾಂಡವಪುರ ಟೌನ್ ಪೊಲೀಸ್ ಠಾಣೆ ರವರು ನೀಡಿದ ದೂರು ಏನೆಂದರೆ ಆರೋಪಿಗಳಾದ ಕೆ.ವೈರಮುಡಿಗೌಡ, ಪಾಂಡವಪುರ ಟೌನ್ ಮತ್ತು ಇತರೆ 2 ಜನರು ಕಾರಿನಲ್ಲಿ ಬಂದು ಪಾಂಡವಪುರ ಟೌನ್ನ ಆಶ್ರಯ ಬಡಾವಣೆ ಹನುಮಂತನಗರದಲ್ಲಿ ಹಣ ಹಂಚುತ್ತಿದ್ದಾರೆಂದು ತಿಳಿದು ರೈತ ಸಂಘದ ಕಾಯಾಕರ್ತರು ಹಿರಿಮರಳ್ಳಿ ಗೇಟ್ ಬಳಿ ಕಾರನ್ನು ಅಡ್ಡಹಾಕಿ ಆರೋಪಿಗಳನ್ನು ಹಿಡಿದು ನಂತರ ಆರೋಪಿಗಳನ್ನು ಪೊಲೀಸರು ಠಾಣೆಗೆ ಕರೆ ತಂದು ಪರಿಶೀಲಿಸಿ ಅವರ ಬಳಿ ಇದ್ದ 97000/- ರೂ ಹಣವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.
7. ಕೆಸ್ತೂರು ಪೊಲೀಸ್ ಠಾಣೆ ಮೊ.ನಂ. 115/13 ಕಲಂ. 171(ಇ) 188 ಐ.ಪಿ.ಸಿ.
ದಿನಾಂಕ: 04-05-2013 ರಂದು ಪಿರ್ಯಾದಿ ಪಿ.ಎಸ್.ಐ ಕೆಸ್ತೂರು ಠಾಣೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಸಿದ್ದಲಿಂಗಯ್ಯ ಬಿನ್. ನಂಜೇಗೌಡ, 40ವರ್ಷ ರವರು ದುಂಡನಹಳ್ಳಿ ಗ್ರಾಮದಲ್ಲಿ ಮತದಾರರಿಗೆ ಹಣದ ಅಮಿಷ ಒಡ್ಡಿ ಜೆಡಿಎಸ್ ಪಕ್ಷದ ಪರವಾಗಿ ಜನರಿಗೆ ಮತಹಾಕುವಂತೆ ಪ್ರಚಾರ ಮಾಡುತ್ತ ಹಣ ಹಂಚುತ್ತಿದ್ದಾಗ ಸದರಿಯವರಿಂದ ಸುಮಾರು 10,020/- ರೂಗಳನ್ನು ವಶಪಡಿಸಿಕೊಂಡು ದೂರು ದಾಖಲಿಸಲಾಗಿದೆ
No comments:
Post a Comment