ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 03-05-2013 ರಂದು ಒಟ್ಟು 10 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಮಹಿಳಾ ದೌರ್ಜನ್ಯ/ ವರದಕ್ಷಿಣೆ ಕಿರುಕುಳ ಪ್ರಕರಣ, 1 ಮನುಷ್ಯ ಕಾಣೆಯಾದಪ್ರಕರಣ, 1 ಕಳ್ಳತನ ಪ್ರಕರಣ, 1 ಅಕ್ರಮ ಬಹಿಷ್ಕಾರ ಪ್ರಕರಣ ಹಾಗು 6 ಇತರೆ ಚುನಾವಣಾ ಅಕ್ರಮ/ಮುನ್ನೆಚ್ಚರಿ ಪ್ರಕರಣಗಳು, ಅಬಕಾರಿ ಪ್ರಕರಣಗಳು ಮತ್ತು ಐ.ಪಿ.ಸಿ. ಪ್ರಕರಣಗಳು ವರದಿಯಾಗಿರುತ್ತವೆ.
ಮಹಿಳಾ ದೌರ್ಜನ್ಯ/ ವರದಕ್ಷಿಣೆ ಕಿರುಕುಳ ಪ್ರಕರಣ :
ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 151/13 ಕಲಂ. 143-498(ಎ)-506-114 ಕೂಡ 149 ಐ.ಪಿ.ಸಿ.
ದಿನಾಂಕ: 03-05-2013 ರಂದು ಪಿರ್ಯಾದಿ ರಾಣಿ ಕೊಂ. ಮಂಜುನಾಥ, ನಾಗರಘಟ್ಟ ಗ್ರಾಮ, ಕೆ.ಆರ್. ಪೇಟೆ ತಾ|| ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1] ಮಂಜುನಾಥ, 2] ಜಯಮ್ಮ [ಅತ್ತೆ] 3] ನಾರಾಯಣ [ಮಾವ] 4] ಪ್ರೇಮ ಮತ್ತು 5] ಶಾರದ, ನಾಗರಘಟ್ಟ ಗ್ರಾಮ ರವರುಗಳು ಪ್ರತಿ ಮಾನಸಿಕವಾಗಿ ಹಿಂಸೆ ಕಿರುಕುಳ ನೀಡುತಿದ್ದು ಮತ್ತು ವರದಕ್ಷಣೆ ತೆಗೆದುಕೊಂಡು ಬಾ ಎಂದು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ಕೋಡುತ್ತಿರುತ್ತಾರೆ. ನಿಮ್ಮ ಮನೆಯವರಿಗೆ ಹೇಳಿದರೆ ನಿನ್ನ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿರುತ್ತಾರೆ ಆದ್ದರಿಂದ ಇವರುಗಳ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ :
ಅರಕೆರೆ ಪೊಲೀಸ್ ಠಾಣೆ ಮೊ.ನಂ. 161/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.
ದಿನಾಂಕ: 03-05-2013 ರಂದು ಪಿರ್ಯಾದಿ ಎಂ.ಪಿ,.ಮಹೇಶ, 29 ವರ್ಷ, ಮಹದೇವಪುರ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 21-03-03 ರಂದು ಬೆಳಿಗ್ಗೆ 9-30 ಗಂಟೆಯಲ್ಲಿ ಮಹದೇವಪುರ ಗ್ರಾಮದಿಂದ ಅವರ ತಂದೆ ಪುಟ್ಟಮಾದೇಗೌಡ ರವರು ತಮ್ಮ ಸ್ನೇಹಿತರ ಊರಾದ ಮೈಸೂರಿನ ಯರಗನಹಳ್ಳಿಗೆ ಹೋಗಿ ಬರುತ್ತೇನೆಂದು ನಮಗೆ ತಿಳಿಸಿ ಹೋದವರು ಈವರೆಗೆ ಮನೆಗೆ ಬಾರದ ಕಾರಣ ನಾವು ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗದ ಕಾರಣ ಹುಡುಕಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಕಳ್ಳತನ ಪ್ರಕರಣ :
ಕೆ.ಆರ್. ಸಾಗರ ಪೊಲೀಸ್ ಠಾಣೆ ಮೊ.ನಂ. 115/13 ಕಲಂ. 457-380 ಐ.ಪಿ.ಸಿ.
ದಿನಾಂಕ: 03-05-2013 ರಂದು ಪಿರ್ಯಾದಿ ಯೋಗೇಂದ್ರ ಬಿನ್. ವೀರಯ್ಯ, ಹಾಗನಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 01-05-2013ರಂದು ಹಾಗನಹಳ್ಳಿ ಗ್ರಾಮದಲ್ಲಿ ಪಿರ್ಯಾದಿಯವರ ಜಮೀನಿನ ಬಳಿ ಅಳವಡಿಸಿದ ಪಂಪ್ ಹೌಸ್ನ ಬೀಗವನ್ನು ಯಾರೋ ಕಳ್ಳರು ಮುರಿದು ಮೋಟಾರ್ನಲ್ಲಿದ್ದ ತಾಮ್ರದ ವೈರ್ನ್ನು ಕಳವು ಮಾಡಿರುತ್ತಾರೆ ಮೋಟಾರನ್ನು ಜಕಂ ಗೊಳಿಸಿ ನಷ್ಟ ಉಂಟುಮಾಡಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಅಕ್ರಮ ಬಹಿಷ್ಕಾರ ಪ್ರಕರಣ :
ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 118/13 ಕಲಂ. 296 ಕೂಡ 34 ಐ.ಪಿ.ಸಿ.
ದಿನಾಂಕ: 03-05-2013 ರಂದು ಪಿರ್ಯಾದಿ ಬಾಲಚಂದ್ರ ಐಕನಹಳ್ಳಿ ಗ್ರಾಮ, ಕಿಕ್ಕೇರಿ ಹೋಬಳಿ ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರು ಅಂತಜರ್ಾತಿ ವಿವಾಹವಾಗಿದ್ದು ಪಿರ್ಯಾದಿಯವರಿಗೆ ಹಾಗೂ ಅವರ ಮನೆಯವರಿಗೆ ಆರೋಪಿಗಳಾದ ಉದಯಶಂಕರ ಹಾಗೂ ಇತರೆ 3 ಜನ, ಎಲ್ಲರೂ, ಐಕನಹಳ್ಳಿ ಗ್ರಾಮ ಇವರುಗಳು ತಮ್ಮ ಗ್ರಾಮದ ದೇವಸ್ಥಾನದಲ್ಲಿ ಅರ್ಚಕರು ಪೂಜೆ ಮಾಡುತ್ತಿಲ್ಲವೆಂದು ಅಂಗಡಿಯವರು ಸಾಮಾನು ಕೊಡುತ್ತಿಲ್ಲವೆಂದು, ಕ್ಷೌರಿಕರು ಕ್ಷೌರ ಮಾಡುತ್ತಿಲ್ಲವೆಂದು, ಗ್ರಾಮದಲ್ಲಿ ಬಹಿಷ್ಕಾರ ಹಾಕಿದ್ದು ಯಾರಾದರು ಸಹಾಯ ಮಾಡಿದರೆ ದಂಡ ವಿಧಿಸುವುದಾಗಿ ಹೇಳಿ ಬೆದರಿಕೆ ಹಾಕಿರುತ್ತಾರೆಂದು ಇತ್ಯಾಧಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment