ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 06-05-2013 ರಂದು ಒಟ್ಟು 31 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 3 ಮನುಷ್ಯ ಕಾಣೆಯಾದ ಪ್ರಕರಣಗಳು, 3 ಚುನಾವಣಾ ಅಕ್ರಮ ಹಣ ಹಂಚಿಕೆ ಪ್ರಕರಣಗಳು, 2 ಕಳ್ಳತನ ಪ್ರಕರಣಗಳು, 1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ, 3 ರಸ್ತೆ ಅಪಘಾತ ಪ್ರಕರಣಗಳು, 1 ಯು.ಡಿ.ಆರ್. ಪ್ರಕರಣ ಹಾಗು 18 ಇತರೆ ಚುನಾವಣಾ ಅಕ್ರಮ/ಮುನ್ನೆಚ್ಚರಿಕೆ ಪ್ರಕರಣಗಳು ಹಾಗು ಇತರೆ ಐ.ಪಿ.ಸಿ./ಸಿ.ಆರ್.ಪಿ.ಸಿ. ಪ್ರಕರಣಗಳು ವರದಿಯಾಗಿರುತ್ತವೆ.
ಮನುಷ್ಯ ಕಾಣೆಯಾದ ಪ್ರಕರಣಗಳು :
1. ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 123/13 ಕಲಂ. ಹುಡುಗ ಕಾಣಿಯಾಗಿದ್ದಾನೆ.
ದಿನಾಂಕ: ದಿ: 06-05-2013 ರಂದು ಪಿರ್ಯಾದಿ ಸುರೇಶ್ ಬಿನ್. ನಾರಾಯಣ, ಮೂಲೆಕೇರಿ, ಮಳವಳ್ಳಿ ಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಸುನೀಲ್ಕುಮಾರ್ 16 ವರ್ಷ, ಐ.ಟಿ.ಐ. ಕಾಲೇಜು ವಿದ್ಯಾಥರ್ಿಯು ದಿನಾಂಕ: 03-05-2013 ರಂದು ಕಾಲೇಜಿಗೆ ಹೋಗುತ್ತೇನೆಂದು ಮನೆಯಿಂದ ಹೇಳಿ ಹೋದವನು ವಾಪಸ್ಸು ಮನೆಗೆ ಬಂದಿರುವುದಿಲ್ಲ, ನಾನು ಸ್ನೇಹಿತರ ಮನೆ, ನೆಂಟರುಗಳ ಮನೆಗಳಲ್ಲಿ ಹುಡುಕಾಡಿದೆ ಸಿಗದ ಕಾರಣ, ಈ ದಿವಸ ತಡವಾಗಿ ಬಂದು ದೂರು ನೀಡಿರುತ್ತೇನೆ ಎಂಬ ಪಿರ್ಯಾದಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 208/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.
ದಿನಾಂಕ: ದಿ: 06-05-2013 ರಂದು ಪಿರ್ಯಾದಿ ರಾಮಕೃಷ್ಣ ವಾಸ ಕೇರಾಫ್ ಲೀಲಾವತಿ, 6ನೇ ಕ್ರಾಸ್, ಗಾಂಧಿನಗರ, ಮಂಡ್ಯ ಸಿಟಿ, ಸ್ವಂತ ಸ್ಥಳ ಗೋಕುಲಂ, ಮೈಸೂರು ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ಆರ್.ಅನುಪಮ, 16 ವರ್ಷ, ಎಸ್ಎಸ್ಎಲ್.ಸಿ. ವಿದ್ಯಾರ್ಥಿನಿ, ಗಾಂಧಿನಗರ, ಮಂಡ್ಯ ಸಿಟಿ, ಗೋಕುಲಂ, ಮೈಸೂರು ಸಿಟಿ. ರವರು ದಿನಾಂಕ: 30-04-2013 ರಂದು ಅವರ ಮಗಳು ಆರ್.ಅನುಪಮ ರವರು ಕಾಣೆಯಾಗಿರುತ್ತಾರೆ ಅವರನ್ನು ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
3. ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 96/13 ಕಲಂ. ಹುಡುಗಿ ಕಾಣೆಯಾಗಿದ್ಧಾಳೆ.
ದಿನಾಂಕ: ದಿ: 06-05-2013 ರಂದು ಪಿರ್ಯಾದಿ ಅಶೋಕ, ಬಿಳುಗುಲಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಬಿ.ಪಿ. ಅಭಿಲಾಷ, 21 ವರ್ಷ, ದಿನಾಂಕ: 13-04-2013 ರಂದು ಕಾಲೇಜಿಗೆ ಹೋಗಿ ಬಿ.ಬಿ.ಎಂ. ನ ಮಾಸ್ಕಾರ್ಡ್ ನ್ನು, ತೆಗದುಕೊಂಡು ಕೆಲಸ ಮುಗಿಸಿ ಬರುತ್ತೇನೆಂದು ಹೇಳಿ ಹೊರಟವಳು ಮನೆಗೆ ಬಂದಿರುವುದಿಲ್ಲ ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗದ ಕಾರಣ ಹುಡುಕಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಚುನಾವಣಾ ಅಕ್ರಮ ಹಣ ಹಂಚಿಕೆ ಪ್ರಕರಣಗಳು :
1. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 216/13 ಕಲಂ. ಕಲಂ. 171(ಇ)-499 ಐ.ಪಿ.ಸಿ.
ದಿನಾಂಕ: ದಿ: 06-05-2013 ರಂದು ಪಿರ್ಯಾದಿ ಅನಿಲ್ ಕುಮಾರ್, ನಗರಸಭಾ ಸದಸ್ಯರು, ಜಯಲಕ್ಷ್ಮೀ ಟಾಕೀಸ್ ಮುಂಬಾಗ, ಗುತ್ತಲು, ಮಂಡ್ಯ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1] ನಿಂಗೇಗೌಡ, 2] ಜಿ,ವಿ, ಧನಂಜಯ, 3] ರಾಮಕೃಷ್ಣ ಎಲ್ಲರೂ ಹಳೇಗುತ್ತಲು ಗ್ರಾಮ, ಮಂಡ್ಯ ಸಿಟಿ ರವರುಗಳ ಮೇಲೆ ಪಿರ್ಯಾದಿಯವರು ದಿನಾಂಕ: 03-05-2013 ರಂದು ನೀಡಿದ ದೂರನ್ನು ಠಾಣಾ ಎನ್.ಸಿ.ಆರ್. ನಂ. 124/2013 ರಲ್ಲಿ ದಾಖಲಿಸಿಕೊಂಡು ಸದರಿ ದೂರು ಅಸಂಜ್ಞೇಯ ದೂರು ಆಗಿದ್ದರಿಂದ ದಿನಾಂಕ: 06-05-2013 ರಂದು ಘನ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಿರುತ್ತೆ.
2. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 217/13 ಕಲಂ. ಕಲಂ. 171(ಇ)-499 ಐ.ಪಿ.ಸಿ.
ದಿನಾಂಕ: ದಿ: 06-05-2013 ರಂದು ಪಿರ್ಯಾದಿ ಕೆ.ಲಕ್ಷ್ಮೀನಾರಾಯಣ, ಪೊಲೀಸ್ ಸಬ್-ಇನ್ಸ್ಪೆಕ್ಟರ್, ಪೂರ್ವ ಠಾಣೆ, ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಮುಕುಂದ 61 ವರ್ಷ, ಹಾಲಹಳ್ಳಿ, ಮಂಡ್ಯ ಸಿಟಿ ರವರ ಮೇಲೆ ದಿನಾಂಕ: 04-05-2013 ರಂದು ನೀಡಿದ ದೂರನ್ನು ಠಾಣಾ ಎನ್.ಸಿ.ಆರ್. ನಂ. 125/2013 ರಲ್ಲಿ ದಾಖಲಿಸಿಕೊಂಡು ಸದರಿ ದೂರು ಅಸಂಜ್ಞೇಯ ದೂರು ಆಗಿದ್ದರಿಂದ ದಿನಾಂಕ: 06-05-2013 ರಂದು ಘನ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಿರುತ್ತೆ ಒಟ್ಟು 70,300=00 ನಗದು ಹಣ ವಶಕ್ಕೆ ಪಡೆದುಕೊಂಡಿರುತ್ತೆ.
3. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 218/13 ಕಲಂ. ಕಲಂ. 171(ಇ)-499 ಐ.ಪಿ.ಸಿ.
ದಿನಾಂಕ: ದಿ: 06-05-2013 ರಂದು ಪಿರ್ಯಾದಿ ಕೆ.ಲಕ್ಷ್ಮೀನಾರಾಯಣ, ಪೊಲೀಸ್ ಸಬ್-ಇನ್ಸ್ಪೆಕ್ಟರ್, ಮಂಡ್ಯ ಪೂರ್ವ ಪೊಲೀಸ್ ಠಾಣೆ, ಮಂಡ್ಯ ಸಿಟಿ ರವರು ನೀಡಿದ ಪಿರ್ಯಾದಿನ ವಿವರವೇನೆಂದರೆ ಆರೋಪಿ ನೂರ್ ಅಹಮದ್, 53 ವರ್ಷ, ಮಸೀದಿ ರಸ್ತೆ, ಸಬ್ದರಿಯಾಬಾದ್ ಮೊಹಲ್ಲಾ, ಗುತ್ತಲು, ಮಂಡ್ಯ ಸಿಟಿ ರವರ ಮೇಲೆ ದಿನಾಂಕ: 04-05-2013 ರಂದು ನೀಡಿದ ದೂರನ್ನು ಠಾಣಾ ಎನ್.ಸಿ.ಆರ್. ನಂ. 126/2013 ರಲ್ಲಿ ದಾಖಲಿಸಿ ಕೊಂಡು ಸದರಿ ದೂರು ಅಸಂಜ್ಞೇಯ ದೂರು ಆಗಿದ್ದರಿಂದ ದಿನಾಂಕ 06-05-2013 ರಂದು ಘನ ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಿರುತ್ತೆ. ಒಟ್ಟು 51300=00 ನಗದು ಹಣ ವಶಕ್ಕೆ ಪಡೆದುಕೊಂಡಿರುತ್ತೆ.
ಕಳ್ಳತನ ಪ್ರಕರಣಗಳು :
1. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 219/13 ಕಲಂ. ಕಲಂ. 457-380 ಐ.ಪಿ.ಸಿ.
ದಿನಾಂಕ: ದಿ: 06-05-2013 ರಂದು ಪಿರ್ಯಾದಿ ಗೌರಮ್ಮ, 3ನೇ ಅಂಗನವಾಡಿ ಕೇಂದ್ರ, ತಾವರಗೆರೆ, ಮಂಡ್ಯ. ವಾಸ;- 4ನೇ ಕ್ರಾಸ್, ಸಿದ್ದಾರ್ಥ ನಗರ, ಮದ್ದೂರು ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಕಳ್ಳರು ಕೇಂದ್ರದ ಬಾಗಿಲಿನ ಚಿಲಕದ ಸ್ಕ್ರೂ ಗಳನ್ನು ಯಾವುದೋ ಆಯುಧದಿಂದ ಕಿತ್ತು ಒಳಗೆ ಹೋಗಿ ಕೇಂದ್ರದಲ್ಲಿ ಇಟ್ಟಿದ್ದ ಒಂದು ಹೆಚ್.ಪಿ. ಖಾಲಿ ಗ್ಯಾಸ್ ಸಿಲಿಂಡರ್, ಹಾಗೂ ಒಂದು ಪ್ರಿಸ್ಟೇಜ್ ಕಂಪನಿಯ ಹಳೆಯ 5 ಲೀಟರ್ನ ಒಂದು ಟೇಬಲ್ ಮೇಲೆ ಇಟ್ಟಿದ್ದ ಕುಕ್ಕರನ್ನು ಕಳವು ಮಾಡಿಕೊಂಡು ಹೋಗಿರುವುದು ಕಂಡುಬಂತು. ಸಿಲೆಂಡರ್ ಗೆ 1250/-ರೂ. ಕುಕ್ಕರ್ ಗೆ 450/- ರೂ. ಬೆಲೆ ಬಾಳುತ್ತೆ ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಮದ್ದೂರು ಪೊಲೀಸ್ ಠಾಣೆ ಮೊ.ನಂ. 209/13 ಕಲಂ. 457-380 ಐ.ಪಿ.ಸಿ.
ದಿನಾಂಕ: ದಿ: 06-05-2013 ರಂದು ಪಿರ್ಯಾದಿ ಎಂ. ಸೆಲ್ವಿ, ಮುಖ್ಯ ಶಿಕ್ಷಕರು, ಸಕರ್ಾರಿ ಪ್ರೌಡಶಾಲೆ, ಕೂಳಗೆರೆ ಗೇಟ್, ಮದ್ದೂರು ತಾ. ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 04-05-2013 ರಂದು ಸರ್ಕಾರಿ ಪ್ರೌಢಶಾಲೆ, ಕೂಳಗೆರೆ ಗೇಟ್, ಮದ್ದೂರು ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದುದಾರರು ಚುನಾವಣಾ ಕರ್ತವ್ಯದ ಮೇಲೆ ತೆರಳಿದ್ದಾಗ ಸದರಿ ದಿನಾಂಕದಂದು ರಾತ್ರಿ ಯಾರೋ ದುಷ್ಕರ್ಮಿಗಳು ಕಂಪ್ಯೂಟರ್ ಕೊಠಡಿಯ ಸರಳುಗಳನ್ನು ಮುರಿದು ಕೊಠಡಿಯಲ್ಲಿದ್ದ 5 ಸಿಲಿಂಡರ್ ಗಳನ್ನು, ಕಳ್ಳತನ ಮಾಡಿರುವುದಾಗಿ ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :
ಮದ್ದೂರು ಪೊಲೀಸ್ ಠಾಣೆ ಮೊ.ನಂ. 205/13 ಕಲಂ. 498(ಎ)-323-504-506 ಐ.ಪಿ.ಸಿ.
ದಿನಾಂಕ: ದಿ: 06-05-2013 ರಂದು ಪಿರ್ಯಾದಿ ಶೃತಿ, 19ವರ್ಷ, ಮನೆಕೆಲಸ, ವಾಸ: ಅಣ್ಣೂರು ಗ್ರಾಮ, ಮದ್ದೂರು ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಗಂಡ ಆರೋಪಿ ಶ್ರೀನಿವಾಸ ಅಣ್ಣೂರು ಗ್ರಾಮ, ಮದ್ದೂರು ತಾ. ರವರು ಅಜರ್ಿದಾರರು ಮನೆಯಲ್ಲಿದ್ದಾಗ ಖಚರ್ಿಗೆ ಹಣ ಬೇಕು ನಿಮ್ಮ ಅಣ್ಣನ ಹತ್ತಿರ 5 ಸಾವಿರ ದುಡ್ಡು ಈಸಿಕೊಡು ಅಂತಾ ಕೇಳಿ ಬಾಯಿಗೆ ಬಂದಂತೆ ರಾತ್ರಿ 8-30 ಗಂಟೆಯಲ್ಲಿ ಸೂಳೆ ಮುಂಡೆ, ಹಲ್ಕಾಮುಂಡೆ, ಆಂತಾ ಬೈದು ನನ್ನ ಗಂಡನು ಕೈಯಿಂದ ಕಪಾಲಕ್ಕೆ ಹಾಗೂ ಮೈಕೈ ಮೇಲೆ ಹೊಡೆದು ನೋವು ಮಾಡಿ, ತನ್ನ ತಾಯಿ ಬಿಡಿಸಿಕೊಳ್ಳಲು ಬಂದಾಗ ನನ್ನ ತಾಯಿಗೆ ಕೈಯಿಂದ ಕಪಾಲ, 2 ಕಿವಿಗೆ ಹೊಡೆದು ನೋವು ಮಾಡಿ ಕಾಲಿನಿಂದ ಹೊಟ್ಟೆಯ ಮೇಲೆ, ಸೊಂಟಕ್ಕೆ ಒದ್ದು ನೋವು ಮಾಡಿದ. ನಂತರ ಇವತ್ತು ಬದುಕಿಕೊಂಡೆ ಇವತ್ತೆಲ್ಲಾ ನಾಳೆ ನಿಮ್ಮೇಲ್ಲರನ್ನು ಸೀಮೆಎಣ್ಣೆ ಹಾಕಿ ಸುಟ್ಟು ಬಿಡುತ್ತೇನೆಂದು ಕೊಲೆ ಬೆದರಿಕೆ ಹಾಕಿರುತ್ತಾರೆ ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.
ರಸ್ತೆ ಅಪಘಾತ ಪ್ರಕರಣಗಳು :
1. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 297/13 ಕಲಂ. 279-337-304(ಎ) ಐ.ಪಿ.ಸಿ.
ದಿನಾಂಕ: ದಿ: 06-05-2013 ರಂದು ಪಿರ್ಯಾದಿ ನಾಗರಾಜು ಬಿನ್. ಲೇಟ್. ಮಹದೇವಶೆಟ್ಟಿ, ಗಂಜಾಂ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಕೆಎ-01-ಎಫ್-9176 ರ ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕ ಬಸ್ ನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಬಂದು ಪಿರ್ಯಾದಿಯವರ ವಾಹನಕ್ಕೆ ಡಿಕ್ಕಿ ಮಾಡಿದ್ದರಿಂದ ಹಿಂಬದಿ ಸವಾರನಿಗೆ ಪೆಟ್ಟಾಗಿದ್ದು ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿದರೂ ಫಲಕಾರಿಯಾಗದೆ ಮೃತಪಟ್ಟಿದ್ದು, ಮೋಟಾರ್ ಬೈಕ್ ಸವಾರನಿಗೆ ಪೆಟ್ಟಾಗಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಮದ್ದೂರು ಸಂಚಾರಿ ಪೊಲೀಸ್ ಠಾಣೆ ಮೊ.ನಂ. 55/13 ಕಲಂ. 279-304(ಎ) ಐ.ಪಿ.ಸಿ.
ದಿನಾಂಕ: ದಿ: 06-05-2013 ರಂದು ಪಿರ್ಯಾದಿ ಎಂ. ಸಂಪತ್ಕುಮಾರ್, 32 ವರ್ಷ, ಸಿದ್ದಾರ್ಥನಗರ, 2ನೇ ಕ್ರಾಸ್, ಮದ್ದೂರು ಟೌನ್ ರವರು ನೀಡಿದ ದೂರಿನ ವಿವರವೇನೆಂದರೆ ಹಿಂದಿನಿಂದ ಬಂದ ಮೋಟಾರ್ ಸೈಕಲ್ ಸವಾರ ಮೋಟಾರ್ ಸೈಕಲ್ ನ್ನು, ಅತೀವೇಗ ಹಾಘೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ನಮ್ಮ ಅಜ್ಜಿಗೆ ಡಿಕ್ಕಿ ಹೊಡೆಸಿದ ಆಗ ಅಪಘಾತವಾಗಿದ್ದು ಈ ಅಪಘಾತಕ್ಕೆ ಕೆಎ-09-ಇಬಿ-9359 ರ ಮೋಟಾರ್ ಸೈಕಲ್ ಸವಾರ ಕಾರಣನಾಗಿದ್ದು ಮೇಲ್ಕಂಡ ಮೋಟಾರ್ ಸೈಕಲ್ ಸವಾರನ ವಿರುದ್ದ ಕಾನೂನು ರೀತಿಯ ಕ್ರಮ ಕೈಗೊಳ್ಳಿ ಹಾಗೂ ನಮ್ಮ ಅಜ್ಜಿಯ ಶವವನ್ನು ಮದ್ದೂರು ಸಕರ್ಾರಿ ಆಸ್ಪತ್ರೆಯ ಶವಾಗಾರಕ್ಕೆ ತಂದು ಇರಿಸಲಾಗಿದ್ದು ಮುಂದಿನ ಕ್ರಮಕ್ಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
3. ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 146/13 ಕಲಂ. 279-304[ಎ] ಐ.ಪಿ.ಸಿ.
ದಿನಾಂಕ: ದಿ: 06-05-2013 ರಂದು ಪಿರ್ಯಾದಿ ಪಿ.ಜಗದೀಶ್ ಪಿ.ಎಸ್.ಐ. ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ, ಮದ್ದೂರು ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 05-05-2013 ರಂದು ರಾತ್ರಿ 11-15 ಹುಣ್ಣನದೊಡ್ಡಿ-ಛತ್ರದಹೊಸಳ್ಳಿ ಗೇಟ್ ಮದ್ಯೆ, ಮದ್ದೂರು-ಕೆ.ಎಂ.ದೊಡ್ಡಿ ಮುಖ್ಯ ರಸ್ತೆಯಲ್ಲಿ ಪಿರ್ಯಾದಿಯವರು ಚುನಾವಣಾ ಕರ್ತವ್ಯ ಮುಗಿಸಿ ಮದ್ದೂರು ಕಡೆಯಿಂದ ಕೆ.ಎಂ.ದೊಡ್ಡಿಗೆ ಬರಲು ಸರ್ಕಾರಿ ಜೀಪ್ ನಂಬರ್ ಕೆಎ-11-ಜಿ-314 ರಲ್ಲಿ ಮದ್ದೂರು-ಕೆ.ಎಂ.ದೊಡ್ಡಿ ಮುಖ್ಯರಸ್ತೆಯಲ್ಲಿ ಕೆ.ಎಂ.ದೊಡ್ಡಿ ಕಡೆಗಾದಂತೆ ಬರುತ್ತಿದ್ದಾಗ ಛತ್ರದಹೊಸಹಳ್ಳಿ ಗೇಟ್ ಮುಂದೆ ಮುಖ್ಯ ರಸ್ತೆಯಲ್ಲಿ 35 ರಿಂದ 40 ವರ್ಷದ ಆಸಾಮಿಯೊಬ್ಬ ಮಕಾಡೆಯಾಗಿ ಬಿದ್ದಿದ್ದು, ಆಸಾಮಿ ಬಿದ್ದದ್ದ ರಸ್ತೆಯ ಬಲಬಾಗದಲ್ಲಿ ಒಂದು ಹೀರೋಹೊಂಡಾ ಸ್ಲ್ಪೇಂಡರ್ ಮೋಟಾರ್ ಬೈಕ್ ನಂಬರ್ ಕೆಎ-51/ಎಲ್-3362ರ ಬೈಕ್ ಜಖಂಗೊಂಡು ಬಿದ್ದಿದ್ದು, ಆಸಾಮಿಯನ್ನು ನೋಡಲಾಗಿ ಹಣೆಯ ಬಲಭಾಗಕ್ಕೆ ಹಾಗೂ ಮುಖದ ಮೇಲೆ ಪೆಟ್ಟು ಬಿದ್ದು ರಕ್ತ ಹರಿದು ಸ್ಥಳದಲ್ಲೆ ಮೃತಪಟ್ಟಿರುವುದು ಕಂಡುಬಂದಿರುತ್ತೆ. ಮೃತನು ಸ್ವತಹ ಅಪಘಾತ ನಡೆಸಿಕೊಂಡು ಸ್ಥಳದಲ್ಲೆ ಮೃತಪಟ್ಟಿರುತ್ತಾನೆ ಎಂಬ ಪಿರ್ಯಾದಿಯವರ ಸ್ವಯಂ ವರದಿಯ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಯು.ಡಿ.ಆರ್. ಪ್ರಕರಣ :
ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಯು.ಡಿ.ಆರ್. ನಂ. 12/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 06-05-2013 ರಂದು ಪಿರ್ಯಾದಿ ಶಿವಣ್ಣ, ಅರುವನಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ಮಗಳಾದ ವಸಂತಳಿಗೆ ಈಗ್ಗೆ 2ವರ್ಷದಿಂದ ಹೊಟ್ಟೆ ನೋವು ಬರುತ್ತಿದ್ದು ಸಾಕಷ್ಠು ಕಡೆ ಆಸ್ಪತ್ರೆಗೆ ತೋರಿಸಿದ್ದರು ಸಹ ಗುಣಮುಖಳಾಗಿರಲಿಲ್ಲ, ಆದರಂತೆ ದಿನಾಂಕಃ 04.05.2013 ರಂದು ಮದ್ಯಾಹ್ನ 03-30 ಗಂಟೆ ಸಮಯದಲ್ಲಿ ಮನೆಯಲ್ಲಿದ್ದಾಗ ಎಂದಿನಂತೆ ಹೊಟ್ಟೆನೋವು ಬಂದಾಗ ಹೊಟ್ಟೆ ನೋವಿನ ಔಷದಿ ಬದಲಿಗೆ ಬೇರೆ ಯಾವುದೊ ಕ್ರಮಿನಾಶಕವನ್ನು ಸೇವಿಸಿ ಮನೆಯಲ್ಲಿ ಒದ್ದಾಡುತ್ತಿದ್ದ ವಿಷಯ ತಿಳಿದು ಚಿಕಿತ್ಸೆ ಬಗ್ಗೆ ಮೈಸೂರಿನ ಕೆ,ಆರ್,ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೋಗಿ ದಾಖಲಿಸುವ ವೇಳೆ ಮೃತಪಟ್ಟಿರುತ್ತಾಳೆ ಈಕೆಯ ಸಾವು ಆಕಸ್ಮಿಕವಾಗಿರುತ್ತೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment