ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 07-05-2013 ರಂದು ಒಟ್ಟು 25 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 4 ಮರಳು/ವಾಹನ/ಸಾಮಾನ್ಯ ಕಳವು ಪ್ರಕರಣಗಳು, 1 ರಸ್ತೆ ಅಪಘಾತ ಪ್ರಕರಣ, 3 ಕಳ್ಳತನ ಪ್ರಕರಣಗಳು ಹಾಗು 17 ಇತರೆ ಐ.ಪಿ.ಸಿ./ಸಿ.ಆರ್.ಪಿ.ಸಿ./ಅಬಕಾರಿ ಪ್ರಕರಣಗಳು ವರದಿಯಾಗಿರುತ್ತವೆ.
ಮರಳು/ವಾಹನ/ಸಾಮಾನ್ಯ ಕಳವು ಪ್ರಕರಣಗಳು :
1. ಹಲಗೂರು ಪೊಲೀಸ್ ಠಾಣೆ ಮೊ.ನಂ. 103/13 ಕಲಂ. 379. 511 ಐ.ಪಿ.ಸಿ.
ದಿನಾಂಕ: 07-05-2013 ರಂದು ಪಿರ್ಯಾದಿ ಲಕ್ಷ್ಮಮ್ಮ, ಭೂ ವಿಜ್ಞಾನಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಮಂಡ್ಯ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಇಬ್ಬರು ಅಪರಿಚಿತ ವ್ಯಕ್ತಿಗಳು ಸಾಗ್ಯ ಗ್ರಾಮದ ಬಳಿಯಲ್ಲಿರುವ ಶಿಂಷಾ ನದಿಯಲ್ಲಿ ಅಕ್ರಮವಾಗಿ ಮರಳು ತೆಗೆಯಲು ಪ್ರಯತ್ನಿಸುತ್ತಿದ್ದವರು ನಮ್ಮನ್ನು ಕಂಡು ಅಲ್ಲಿಂದ ಓಡಿ ಹೋಗಿರುತ್ತಾರೆ ಅಲ್ಲಿಂದ ಅಕ್ರಮ ಮರಳು ತೆಗೆಯಲು ಬಳಸುತ್ತಿದ್ದ 3 ಕಬ್ಬಿಣದ ಕೊಪ್ಪರಿಕೆಗಳು ಇರುತ್ತವೆ ಸದರಿ ಕೊಪ್ಪರಿಕೆಗಳನ್ನು ಒಂದು ವಾಹನದಲ್ಲಿ ನಮ್ಮ ಸಿಬ್ಬಂದಿಯವರ ಸಹಾಯದಿಂದ ತೆಗೆದುಕೊಂಡು ಬಂದು ಹಲಗೂರು ಠಾಣೆಯ ಹತ್ತಿರ ತಂದು ಹಾಕಲಾಗಿರುತ್ತದೆ ಇವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಕೆಸ್ತೂರು ಪೊಲೀಸ್ ಠಾಣೆ ಮೊ.ನಂ. 119/13 ಕಲಂ. 379 ಐ.ಪಿ.ಸಿ.
ದಿನಾಂಕ: 07-05-2013 ರಂದು ಪಿರ್ಯಾದಿ ಗೂಳಿಗೌಡ ಬಿನ್. ಲೇಟ್. ಶಿವಲಿಂಗಯ್ಯ, ಒಕ್ಕಲಿಗರು, ಯರಗನಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 06-05-2013 ಮಧ್ಯಾಹ್ನ 02-00 ಗಂಟೆಯಲ್ಲಿ ಕೆಸ್ತೂರು ಟೌನ್ ನಲ್ಲಿ ಪಿಯರ್ಾದಿಯವರ ಬಾಬ್ತು ಕೆ.ಎ.-04-ಇ.ಎನ್.-7102 ಬಜಾಜ್ ಡಿಸ್ಕವರ್ ಬೈಕನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ ಎಲ್ಲಾ ಕಡೆ ಹುಡುಕಿದರು ಸಹ ಪತ್ತೆಯಾಗಿರುವುದಿಲ್ಲ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
3. ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 130/13 ಕಲಂ. 379 ಐ.ಪಿ.ಸಿ.
ದಿನಾಂಕ: 07-05-2013 ರಂದು ಪಿರ್ಯಾದಿ ಪ್ರಮೀಳ ಕೋಂ. ಮಲ್ಲೇಶ, ಹಿರಿಕಳಲೇ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 06-05-2013 ರಂದು ರಾತ್ರಿ 01-30 ರಿಂದ 02-00 ಗಂಟೆಯ ನಡುವೆ, ಯಾರೋ ಕಳ್ಳರು ಬೋಡರ್್ ಕೇಬಲ್ ಮತ್ತು ಪೈಪುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
4. ಮೇಲುಕೋಟೆ ಪೊಲೀಸ್ ಠಾಣೆ ಮೊ.ನಂ. 70/13 ಕಲಂ. 379 ಐ.ಪಿ.ಸಿ.
ದಿನಾಂಕ: 07-05-2013 ರಂದು ಪಿರ್ಯಾದಿ ಆನಂದ ಎಂ. ಬಿನ್ ಮರೀಗೌಡ, 43 ವರ್ಷ, ಶಂಭೂನಹಳ್ಳಿ ಗ್ರಾಮ ರವರು ನೀಡಿದ ದೂರು ಏನೆಂದರೆ ಯಾರೋ ಕಳ್ಳರು ಪಿರ್ಯಾದಿಯವರು ಟೇಬಲ್ ಮೇಲೆ ಸ್ಯಾಮ್ಸಂಗ್ ಗ್ಯಾಲಾಕ್ಸಿ ಮೊಬೈಲ್ ಅನ್ನು, ಇಟ್ಟು ಕೆಲಸದ ಕಡೆ ನೋಡಲು ಹೋಗಿದ್ದ ಸಮಯದಲ್ಲಿ ಯಾರೋ ಕಳ್ಳರು ಮೊಬೈಲ್ ಅನ್ನು, ಕಳವು ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ರಸ್ತೆ ಅಪಘಾತ ಪ್ರಕರಣಗಳು :
ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 301/13 ಕಲಂ. 279-304(ಎ) ಐ.ಪಿ.ಸಿ.
ದಿನಾಂಕ: 07-05-2013 ರಂದು ಪಿರ್ಯಾದಿ ಮಂಜುನಾಥ ಬಿನ್. ರಾಮಕೃಷ್ಣ, ಪಗಡೆ ಕಲ್ಲಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಶ್ರೀನಿವಾಸ, ವಾಹನ ನಂ.04-ಎಂ.ಎಲ್.-6160 ರ ಫಾರ್ಚುನರ್, ಕಾರಿನ ಚಾಲಕ ದಿನಾಂಕ: 07-03-2013 ರಂದು ಸಂಜೆ 0400 ಗಂಟೆಯಲ್ಲಿ ಕಡತನಾಳು ಗೇಟ್ ನ ಬಳಿ ತನ್ನ ಕಾರನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಿಸಿಕೊಂಡು ಬಂದು ಮಂಜುನಾಥ ರವರ ಬೈಕ್ಗೆ ಡಿಕ್ಕಿ ಮಾಡಿದ್ದರಿಂದ ಮಂಜುನಾಥ ಕೆಳಗೆ ಬಿದ್ದು ಬೈಕ್ ಸ್ವಲ್ಪ ಮುಂದೆ ಹೋಗಿ ಬೆಂಕಿ ಹತ್ತಿಕೊಂಡಿದ್ದು, ಬೈಕ್ ಸವಾರನಿಗೆ ರಕ್ತಗಾಯವಾಗಿ ಅವನು ಮೃತಪಟ್ಟಿರುತ್ತಾನೆ ಆರೋಪಿಯ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಕಳ್ಳತನ ಪ್ರಕರಣಗಳು :
1. ಕೆ.ಆರ್. ಪೇಟೆ ಟೌನ್ ಠಾಣೆ ಮೊ.ನಂ. 152/13 ಕಲಂ. 457-380 ಐ.ಪಿ.ಸಿ.
ದಿನಾಂಕ: 07-05-2013 ರಂದು ಪಿರ್ಯಾದಿ ನೂರ್ ಅಹಮ್ಮದ್ ಬಿನ್. ಅಬ್ದುಲ್ ಅಜೀಜ್, ಕೆ.ಆರ್. ಪೇಟೆ ಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ಭಾರತ್ ಟ್ರೇಡರ್ಸ್ ಅಂಗಡಿಯಲ್ಲಿ ಅಳವಡಿಸಿದ್ದ ಯುಪಿಎಸ್ ಸಿಸ್ಟಮ್ ಮತ್ತು ಬ್ಯಾಟರಿ ಕಳ್ಳತನವಾಗಿದ್ದು ಇವುಗಳ ಬೆಲೆ 15000 ರೂಗಳಾಗಿರುತ್ತೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಮದ್ದೂರು ಪೊಲೀಸ್ ಠಾಣೆ ಮೊ.ನಂ. 215/13 ಕಲಂ. 380-457 ಐ.ಪಿ.ಸಿ.
ದಿನಾಂಕ: 07-05-2013 ರಂದು ಪಿರ್ಯಾದಿ ಶಂಕರೇಗೌಡ, ಪ್ರಾಂಶುಪಾಲರು, ಸರ್ಕಾರಿ ಪದವಿ ಪೂರ್ವ ಕಾಲೇಜು, ಮದ್ದೂರು ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 06-05-2013 ರಂದು ಸರ್ಕಾರಿ ಪದವಿ ಪೂರ್ವ ಕಾಲೇಜು, ಮದ್ದೂರುನಲ್ಲಿ ಯಾರೋ ಕಳ್ಳರು ಕಾಲೇಜಿನ 40 ಕಬ್ಬಿಣದ ಬೆಂಚಿನ ಕಾಲುಗಳು ಇದರ ಮೌಲ್ಯ ತಿಳಿಯ ಬೇಕಾಗಿದೆ, 1 ಸರ್ವರ್ ಕೀಬೋರ್ಡ್, 1 ಸರ್ವರ್ ಮೌಸ್, 2 ಸ್ವೀಕರ್, 10 ಹೆಡ್ ಪೋನ್ ಸಾಪ್ಟ್ ಸಿಡಿಗಳು (ಸುಮಾರು ಒಟ್ಟು 7 ಸಾವಿರ ರೂಗಳು ಮೌಲ್ಯ) ಇವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
3. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 220/13 ಕಲಂ. 457-380 ಐ.ಪಿ.ಸಿ.
ದಿನಾಂಕ:07-05-2013 ರಂದು ಪಿರ್ಯಾದಿ ರಿಜ್ವಾನ ಬೇಗಂ, ಅಂಗನವಾಡಿ ಕಾರ್ಯಕರ್ತೆ, ಚಲುವಯ್ಯ ಪಾರ್ಕ್, ಪೂರ್ವ ಬಡಾವಣೆ, ನೆಹರು ನಗರ, ಮಂಡ್ಯ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 06-05-2013 ರಂದು ರಾತ್ರಿ ಚಲುವಯ್ಯ ಪಾರ್ಕ್, ಪೂರ್ವ ಬಡಾವಣೆ, ನೆಹರು ನಗರ ಮಂಡ್ಯದ ಅಂಗನವಾಡಿ ಕೇಂದ್ರದ ಬಾಗಿಲಿನ ಬೀಗವನ್ನು ಯಾವುದೋ ಆಯುಧದಿಂದ ಮೀಟಿ ಒಳಗೆ ಹೋಗಿ ಉಪಯೋಗಿಸುತ್ತಿದ್ದ ಒಂದು ಹೆಚ್.ಪಿ. ಕಂಪನಿಯ ಗ್ಯಾಸ್ ನ್ನು, ಸಿಲಿಂಡರ್ ಕಳವು ಮಾಡಿಕೊಂಡು ಹೋಗಿರುತ್ತಾರೆ. ಇದರ ಬೆಲೆ 900/ ರೂ ಆಗುತ್ತದೆ ಎಂದು ಪತ್ತೆಗಾಗಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment