Moving text

Mandya District Police

DAILY CRIME REPORT DATED : 12-05-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 12-05-2013 ರಂದು ಒಟ್ಟು 15 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಮನುಷ್ಯ ಕಾಣೆಯಾದ ಪ್ರಕರಣ,  2 ರಸ್ತೆ ಅಪಘಾತ ಪ್ರಕರಣಗಳು,  1 ಅಪಹರಣ ಪ್ರಕರಣ,  2 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣಗಳು ಹಾಗು ಇತರೆ ಐ.ಪಿ.ಸಿ./ಸಿ.ಆರ್.ಪಿ.ಸಿ. ಪ್ರಕರಣಗಳು ವರದಿಯಾಗಿರುತ್ತವೆ. 


ಮನುಷ್ಯ ಕಾಣೆಯಾದ ಪ್ರಕರಣ :

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 237/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 12-05-2013 ರಂದು ಪಿರ್ಯಾದಿ ಆರ್. ಪ್ರಸಾದ್ ಬಿನ್. ಲೇಟ್. ರಾಮಯ್ಯ ರವರು ನೀಡಿದ ದೂರಿನ ವಿವರವೇನೆಂದರೆ ಅವರ ಮಗಳು ನಂದಿತಾ ರವರು ದಿನಾಂಕ: 11-05-2013 ರಂದು ಕ್ಯಾತುಂಗೆರೆಯಿಂದ ಬೆಂಗಳೂರಿಗೆ ಹೋಗುವುದಾಗಿ ಹೇಳಿ ಹೂರಟವಳು ಬೆಂಗಳೂರಿಗೂ ಬಂದಿರುವುದಿಲ್ಲ ವಾಪಸ್  ಕ್ಯಾತುಂಗೆರೆಯ ಮನೆಗೂ ಸಹ ಬಂದಿರುವುದಿಲ್ಲ ಅವಳನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ರಸ್ತೆ ಅಪಘಾತ ಪ್ರಕರಣಗಳು :

1. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 238/13 ಕಲಂ. 279,337 304[ಎ] ಐ.ಪಿ.ಸಿ.

ದಿನಾಂಕ: 12-05-2013 ರಂದು ಪಿರ್ಯಾದಿ ಸುನೀಲ್ ಕುಮಾರ್ ಬಿನ್. ಪುಟ್ಟಸ್ವಾಮಿ, 31 ವರ್ಷ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಕೆಎ-03-ಇಡಿ-1152 ರ ಮೋಟಾರ್ ಸೈಕಲ್ ಸವಾರ ಮಂಡ್ಯ ಬನ್ನೂರು ರಸ್ತೆಯಲ್ಲಿ ಹೋಗುತ್ತಿದ್ದಾಗ ಮೋಟಾರ್ ಸೈಕಲ್ ಸವಾರ ಆಯತಪ್ಪಿ ರಸ್ತೆಯ ಎಡಬಡಿಯ ಮರಕ್ಕೆ ಡಿಕ್ಕಿ ಹೊಡೆದು ಮೋಟಾರ್ ಸೈಕಲ್ ಚಾಲನೆ ಮಾಡುತ್ತಿದ್ದ ಬಿ.ಸಿ. ಕೃಷ್ಣರವರ ತಲೆಗೆ ಪೆಟ್ಟಾಗಿ ಸ್ಥಳದಲ್ಲೆ ಮೃತಪಟ್ಟಿದ್ದು ಹಿಂಬದಿಯಲ್ಲಿ ಕುಳಿತ್ತಿದ್ದ ಟಿ. ವೆಂಕಟೇಶ್ರವರಿಗೆ ಪೆಟ್ಟಾಗಿರುತ್ತೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸ ಲಾಗಿದೆ. 


2. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 138/13 ಕಲಂ. 279-304[ಎ] ಐಪಿಸಿ ಕೂಡ 187 ಐ.ಎಂ.ವಿ. ಆಕ್ಟ್.

ದಿನಾಂಕ: 12-05-2013 ರಂದು ಪಿರ್ಯಾದಿ ನೇತ್ರಾವತಿ ಕೋಂ. ರಂಗಸ್ವಾಮಿ, 35ವರ್ಷ ರವರು ನೀಡಿದ ದೂರಿನ ವಿವರವೇನೆಂದರೆ ಕೆಎ-03-ಎಂಎಫ್-9459ರ ಕಾರಿನ ಚಾಲಕ, ಹೆಸರು ವಿಳಾಸ ತಿಳಿಯಬೇಕಾಗಿದೆ ರವರು ಬೆಂಗಳೂರು ಕಡೆಯಿಂದ ಹಾಸನದ ಕಡೆಗೆ ಬರುತ್ತಿದ್ದ ಒಂದು ಕಾರನ್ನು ಅದರ ಚಾಲಕ ವೇಗವಾಗಿ ಓಡಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ  ನಾರಾಯಣಗೌಡರಿಗೆ ಡಿಕ್ಕಿ ಹೊಡೆದನು. ತಲೆ ಎಡಭಾಗಕ್ಕೆ, ಎಡತೋಳಿಗೆ ಮತ್ತು ಎರಡು ಕಾಲಿಗೆ ಹಾಗೂ ಇತರೆ ಕಡೆ ಪೆಟ್ಟಾಗಿದ್ದು, ಎ.ಸಿ.ಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತನಾಗಿರುತ್ತಾನೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಅಪಹರಣ ಪ್ರಕರಣ :

ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 197/13 ಕಲಂ. 366, ಐ.ಪಿ.ಸಿ. ಕೇಸಿನ ಜೊತೆಗೆ 364 ಐ.ಪಿ.ಸಿ.

ದಿನಾಂಕ: 12-05-2013 ರಂದು ಪಿರ್ಯಾದಿ ನಾಗರಾಜು ಬಿನ್. ಲೇಟ್. ನಂಜುಂಡಯ್ಯ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 24-04-2013 ರಂದು ಬೆಳಿಗ್ಗೆ 09-00 ಗಂಟೆಯಲ್ಲಿ ಪಿರ್ಯಾದಿಯವರ ಮನೆ ನಂ 409, 9ನೇ ಕ್ರಾಸ್, ಸ್ವರ್ಣಸಂದ್ರದಿಂದ ಅವರ ಮಗಳು ಅನುಷಾಳನ್ನು ಯಾರೋ ಅಪಹರಿಸಿಕೊಂಡು ಹೋಗಿರಬಹುದೆಂದು ನಮ್ಮ ಸಂಬಂದಿಕರು ಹಾಗೂ ಇತರರು ಹೇಳುತ್ತಿರುವುದರಿಂದ ಯಾರೋ ಯಾವುದೋ ಕಾರಣಕ್ಕೆ  ನನ್ನ ಮಗುವನ್ನು ಅಪಹರಣ ಮಾಡಿಕೊಂಡು ಹೋಗಿರಬಹುದೆಂದು ಅನುಮಾನವಿರುತ್ತದೆ ಅವಳನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣಗಳು :

1. ಅರಕೆರೆ ಪೊಲೀಸ್ ಠಾಣೆ ಮೊ.ನಂ. 170/13 ಕಲಂ. 504-323-498(ಎ) ಕೂಡ 34 ಐ.ಪಿ.ಸಿ. ಹಾಗು 3 ಮತ್ತು 4 ಡಿ.ಪಿ. ಕಾಯ್ದೆ. 

ದಿನಾಂಕ: 12-05-2013 ರಂದು ಪಿರ್ಯಾದಿ ಎನ್.ಎಂ ವರಲಕ್ಷ್ಮಿ ಕೊಂ. ಉದಯ, 23 ವರ್ಷ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ ಉದಯ ಇತರೆ 3 ಜನರು ದಿನಾಂಕ:09-05-2013 ರಂದು ರಾತ್ರಿ 07-30 ಗಂಟೆಯಲ್ಲಿ ಹಾಗು ಹಿಂದಿನ 2 ವರ್ಷಗಳಿಂದಲೂ ಞವರ ಗಂಡ ಗಂಡ ಉದಯ ಎಂಬುವವರನ್ನು ಈಗ್ಗೆ 2 ವರ್ಷದಲ್ಲಿ ಮದುವೆ-ಯಾಗಿದ್ದು ಆರೋಪಿಗಳು ತನ್ನ ಗಂಡನ ಮನೆಯಲ್ಲಿ ಮಾನಸಿಕವಾಗಿ ಹಾಗಿ ದೈಹಿಕವಾಗಿ ಹೊಡೆದು ಬೈಯ್ದು ವರದಕ್ಷಿಣೆ ಹಣ ತರುವಂತೆ ಕಿರುಕುಳ ನೀಡುತ್ತಿದ್ದರೆಂದು ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಕೊಪ್ಪ ಪೊಲೀಸ್ ಠಾಣೆ ಮೊ.ನಂ. 105/13 ಕಲಂ. 304(ಬಿ) ಐ.ಪಿ.ಸಿ. ಕೂಡ 3 ಮತ್ತು 4 ಡಿಪಿ ಆಕ್ಟ್.

ದಿನಾಂಕ: 12-05-2013 ರಂದು ಪಿರ್ಯಾದಿ ಪ್ರೇಮಮ್ಮ ಕೋಂ. ಕರೀಗೌಡ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿಗಳಾದ ಜೀವನ್, ದುಂಡಮ್ಮ, ಶಂಕರೇಗೌಡ, ಸೌಮ್ಯ ಹಾಗು ರಫು ರವರುಗಳು ಪುಟ್ಟವಿನುತಳಿಗೆ ಆರೋಪಿಗಳೆಲ್ಲರು ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದು ಹಾಗೂ ಹೆಚ್ಚುವರಿಯಾಗಿ ವರದಕ್ಷಣೆಯಾಹಿ 2 ಲಕ್ಷ ರೂಗಳನ್ನು  ತರುವಂತೆ ಹಿಂಸೆ ನೀಡುತ್ತಿದ್ದರಿಂದ ಮನನೊಂದು ನೇಣು ಬಿಗಿದುಕೊಂಡು ಮೃತಪಟ್ಟಿರುತ್ತಾರೆ ಆರೋಪಿಗಳ ಮೇಲೆ ಸೂಕ್ತ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

No comments:

Post a Comment