Moving text

Mandya District Police

DCR DATED 11-05-213


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 11-05-2013 ರಂದು ಒಟ್ಟು 15 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 4 ಕಳವು ಪ್ರಕರಣಗಳು,  1 ಯು.ಡಿ.ಆರ್. ಪ್ರಕರಣ,  2 ಮನುಷ್ಯ ಕಾಣೆಯಾದ ಪ್ರಕರಣಗಳು ಹಾಗು ಇತರೆ ಐ.ಪಿ.ಸಿ./ಸಿ.ಆರ್.ಪಿ.ಸಿ. ಪ್ರಕರಣಗಳು ವರದಿಯಾಗಿರುತ್ತವೆ.

ಕಳವು ಪ್ರಕರಣಗಳು :

1. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 311/13 ಕಲಂ. 380 ಐ.ಪಿ.ಸಿ.

    ದಿನಾಂಕ: 11-05-2013 ರಂದು ಪಿರ್ಯಾದಿ ಸುಧಾ ಜಿ..ಆರ್. ಲಿಂಗಾಯಿತರು, ವಿದ್ಯಾನಗರ, 4ನೇ ಕ್ರಾಸ್, ದಾವಣಗೆರೆ ಟೌನ್. ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 10-05-2013 0200 ಗಂಟೆಯಿಂದ ದಿನಾಂಕ: 11-05-2013 ಅಂಬ್ಲಿರೆಸಾಟರ್್ನ ರೂಂ. ನಂ. 112, ಶ್ರೀರಂಗಪಟ್ಟಣ ಟೌನ್ ನಲ್ಲಿ  ನಾನು ಮಲಗುವಾಗ ಅವರ ಕತ್ತಿನಲ್ಲಿದ್ದ 42 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ,  ಕೈಯಲ್ಲಿದ್ದ 15 ಗ್ರಾಂ ತೂಕದ ಒಂದು ಚಿನ್ನದ ಬಳೆ, 7500/- ನಗದು ಹಣ. ಒಲಂಪಸ್ ಕ್ಯಾಮರಾವನ್ನು ಹಾಗೂ ನನ್ನ ಮಗನ ಪಸರ್್ನ್ನು ನನ್ನ ವ್ಯಾನಿಟಿ ಬ್ಯಾಗಿನಲ್ಲಿ ಇಟ್ಟು ಮಲಗಿಕೊಂಡೆನು. ಈ ದಿವಸ ವ್ಯಾನಿಟಿ ಬ್ಯಾಗ್ನ್ನು ನೋಡಲಾಗಿ ನಾನು ಇಟ್ಟಿದ್ದ ಜಾಗದಲ್ಲಿ ಇರಲಿಲ್ಲ ಇವುಗಳ ಅಂದಾಜು ಬೆಲೆ ಸುಮಾರು 1,75,000/- ರೂಗಳಾಗಿರುತ್ತದೆ .ಯಾರೋ ಕಳ್ಳರು ಕಳವು ಮಾಡಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 312/13 ಕಲಂ. 380 ಐ.ಪಿ.ಸಿ.


    ದಿನಾಂಕ: 11-05-2013 ರಂದು ಪಿರ್ಯಾದಿ ವಿಪಿನ್ ವೇಣುಗೋಪಾಲ್ ಬೆಂಗಳೂರು ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 10-05-2013 ಹಾಗು ದಿನಾಂಕ: 11-05-2013 ರಂದು ಬೆಳಗ್ಗಿನ ಜಾವ 06-00 ಗಂಟೆಗಳ ನಡುವೆ ಅಂಬ್ಲಿ ರೆಸಾಟರ್್ ನಲ್ಲಿ, ಶ್ರೀರಂಗಪಟ್ಟಣ ಟೌನ್ನ ಪಿರ್ಯಾದಿಯವರು ರೂಂ.ನ ಬಾಲ್ಕನಿ ಬಾಗಿಲು ತೆರೆದಿದ್ದು ಪಿರ್ಯಾದಿಯವರ ರೂಮಿನಲ್ಲಿದ್ದ 1 ಪಿಂಕ್ ವ್ಯಾನಿಟಿ ಬ್ಯಾಗ್, ಬ್ಲಾಕ್ ಲೇಡಿ ಪಸರ್್, 10 ಗ್ರಾಂ. ಚಿನ್ನದ ಚೈನ್, ಹೆಚ್.ಡಿ.ಎಫ್.ಡಿ. ಪುಡ್ ಕಾಡರ್್, ಪಾನ್ ಕಾಡರ್್, ವೋಟರ್ ಐ.ಡಿ. ಕಾಡರ್್, ಐ.ಒ.ಬಿ. ಬ್ಯಾಂಕ್ ಲಾಕರ್ ಕೀ, ಬ್ಲೂ ಕಲರ್ ಕ್ಯಾಶು ನೆಟ್ ಬಾಕ್ಸ್, ಒಡವೆ ಗಿರವಿ ಇಟ್ಟಿರುವ ಚೀಟಿಗಳು, 2 ಸೆಂಟ್ ಬಾಟಲ್ ಗಳು, ಎಂಪ್ಲಾಯ್ ಮೆಂಟ್ ಐ.ಡಿ. ಕಾಡರ್್ ಹಾಗು ಆಕ್ಸೆಸ್ ಕಾಡರ್್ ಇವುಗಳ ಒಟ್ಟು ಮಾಲ್ಯ ಸುಮಾರು 30,000/- ಅನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ದೂರು ನೀಡಿದ್ದು ಪ್ರಕರಣ ದಾಖಲಿಸಲಾಗಿದೆ.



3. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 236/13 ಕಲಂ. 379 ಐ.ಪಿ.ಸಿ.


    ದಿನಾಂಕ: 11-05-2013 ರಂದು ಪಿರ್ಯಾದಿ ಹರೀಶ್ ಬಿನ್. ಎಂ.ಎಸ್. ವೆಂಕಟೇಶ್, 26 ವರ್ಷ, ಟಿ. ಮಲ್ಲಿಗೆರೆ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ     1] ಕೆ.ಎಸ್ ಪುಟ್ಟೇಗೌಡ, 2] ಸುರೇಶ, ಕಡಿಲುವಾಗಿಲು ಗ್ರಾಮ ರವರುಗಳು ಜಮಿನಿನಲ್ಲಿ  ಆಳವಡಿಸಿದ್ದ ಕೊಂಡಿದ್ದ ಸುಮಾರು 2 ಹೆಚ್, ಪಿ ಯ ಮೋಟಾರ್ ಪಂಪ್ನ್ನು ಕಳ್ಳತನ ಮಾಡಿಕೊಂಡು  ಹೋಗುತ್ತಿದ್ದವರನ್ನು ಕೆ.ಎಂ.ದೊಡ್ಡಿ ಠಾಣಾ ಪಿ.ಎಸ್.ಐರವರು ಹಿಡಿದು ಪ್ರಕರಣ ದಾಖಲಿಸಿ ಕೃತ್ಯ ನಡೆದ ಸರಹದ್ದಿನ ಆಧಾರದ ಮೇಲೆ ಪ್ರಕರಣ ವಗರ್ಾವಣೆ ನೀಡಿರುತ್ತಾರೆ ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

4. ಬಸರಾಳು ಪೊಲೀಸ್ ಠಾಣೆ ಮೊ.ನಂ. 75/13 ಕಲಂ. 379 ಐ.ಪಿ.ಸಿ.


    ದಿನಾಂಕ: 11-05-2013 ರಂದು ಪಿರ್ಯಾದಿ ಆನಂದ ಕುಮಾರ್ .ಹೆಚ್.ಕೋಡಿಹಳ್ಳಿ, ಮಂಡ್ಯ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ನಂದಹಳ್ಳಿ, ಹೇಮಣ್ಣನ ಅಳಿಯ ಬಸವರಾಜು ಹಾಗು ಪಿರ್ಯಾದಿಯು ತನ್ನ ಬಾಬ್ತು  ಕೆಎ-11-ಕ್ಯೂ-9692 ಹೀರೋ ಹೊಂಡಾ ದಲ್ಲಿ ಬಸರಾಳು ಟೌನ್ ಗೆ ಬಂದಿದ್ದು ಟೀ ಕುಡಿದು ಹೊರಗೆ ಬರುವಷ್ಠರಲ್ಲಿ ಸದರಿ ವಾಹನವನ್ನು ಮೇಲ್ಕಂಡ ಆರೋಪಿಗಳು ಕಳವು ಮಾಡಿರುತ್ತಾರೆ ಅವರುಗಳ ಮೇಲೆ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

ಯು.ಡಿ.ಆರ್. ಪ್ರಕರಣ :

ಹಲಗೂರು ಪೊಲೀಸ್ ಠಾಣೆ ಮೊ.ನಂ. 11/13 ಕಲಂ. 174 ಸಿ.ಆರ್.ಪಿ.ಸಿ.

    ದಿನಾಂಕ: 11-05-2013 ರಂದು ಪಿರ್ಯಾದಿ ಸಿದ್ದಯ್ಯ ಕುಂಟನದೊಡ್ಡಿ ಗ್ರಾಮ, ಹಲಗೂರು ಹೋಬಳಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಸುಮಾರು 50 ರಿಂದ 52ವರ್ಷ ಆಗಿರಬಹುದು ಇವನು ರಸ್ತೆ ಬದಿಯಲ್ಲಿ ಬುದ್ದಿ ಭ್ರಮಣೆಯಿಂದ ತಿರುಗುತ್ತಿದ್ದನು ಈತನು ನಮ್ಮ ಜಮೀನಿನ ಹತ್ತಿರ ಬಂದು ಮಲಗಿದ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ ಆದ್ದರಿಂದ ಶವದ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 187/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

    ದಿನಾಂಕ: 11-05-2013 ರಂದು ಪಿರ್ಯಾದಿ ಮಂಗಳ. ಕೆ.ವಿ. ಕೋಂ. ಬಸವರಾಜು, ವಿ.ವಿ. ನಗರ, ಪಾಂಡವಪುರ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಗಂಡ ಬಸವರಾಜು ಹಾಗು ಮಗ ಪ್ರೇಮ್ ಕುಮಾರ, ವಿ.ವಿ. ನಗರ ರವರುಗಳು ದಿನಾಂಕ: 01-04-13 ರಂದು 10-00 ಎಎಂ ರಿಂದ ಹಾರೋಹಳ್ಳಿ ಬಸ್ ನಿಲ್ದಾಣದಿಂದ ಪಿರ್ಯಾದಿಯ ಗಂಡ ಹಾಗೂ ಮಗ ಕಾಣೆಯಾಗಿದ್ದು ಅವರುಗಳನ್ನು ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


2. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 155/13 ಕಲಂ. ಹುಡುಗ ಕಾಣೆಯಾಗಿದ್ದಾನೆ.
     ದಿನಾಂಕ: 11-05-2013 ರಂದು ಪಿರ್ಯಾದಿ ಜಯಂತಿ ಕೊಂ. ನಟರಾಜು, ಜಾಗಿನಕೆರೆ ಗ್ರಾಮ, ಕೆ.ಆರ್. ಪೇಟೆ ತಾ|| ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ತಮ್ಮ ಚಂದ್ರಶೇಖರ @ ವಿಕ್ಕಿರವರು ದಿನಾಂಕ: 09-05-2013ರಂದು ರಾತ್ರಿ 12.00 ಗಂಟೆಯ ವೇಳೆಯಲ್ಲಿ ಮನೆಯಿಂದ ಹೋದವನು ವಾಪಸ್ಸು ಮನೆಗೆ ಬಂದಿರುವುದಿಲ್ಲ ಪಿರ್ಯಾದಿ ಎಲ್ಲಾ ಕಡೆ ಹುಡುಕಾಡಲಾಗಿ ಎಲ್ಲೂ ಪತ್ತೆಯಾಗದ ಕಾರಣ ಈ ದಿವಸ ತಡವಾಗಿ ಬಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

No comments:

Post a Comment