ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 22-05-2013 ರಂದು ಒಟ್ಟು 15 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ವಂಚನೆ ಪ್ರಕರಣಗಳು, 1 ಮನುಷ್ಯ ಕಾಣೆಯಾದ ಪ್ರಕರಣ, 3 ಯು.ಡಿ.ಆರ್. ಪ್ರಕರಣಗಳು ಹಾಗು 9 ಇತರೆ ಐ.ಪಿ.ಸಿ. ಪ್ರಕರಣಗಳು ವರದಿಯಾಗಿರುತ್ತವೆ.
ವಂಚನೆ ಪ್ರಕರಣಗಳು :
1. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 226/13 ಕಲಂ. 420 ಕೂಡ 34 ಐ.ಪಿ.ಸಿ.
ದಿನಾಂಕ: 22-05-2013 ರಂದು ಪಿರ್ಯಾದಿ ಎಲ್.ಪದ್ಮ ಕೋಂ. ಕೆಂಪೇಗೌಡ, ನಂ.436, 10ನೇ ಕ್ರಾಸ್, ಸ್ವರ್ಣಸಂದ್ರ, ಮಂಡ್ಯ ಸಿಟಿರವರು ನೀಡಿದ ದೂರಿನ ಸಾರಾಂಶವೇನೆಂದರೆ ಫಿರ್ಯಾದಿಯು ಸಾಮಾನು ತೆಗೆದುಕೊಂಡು ಬರಲು ಪೇಟೆಬೀದಿಯ ಹತ್ತಿರ ಹೋಗುತ್ತಿದ್ದಾಗ ಅಲ್ಲಿ ಒಬ್ಬ ಹೆಂಗಸು ನೆಲದ ಮೇಲೆ ಬಿದ್ದಿದ್ದ ಹಣವನ್ನು ಎತ್ತಿಕೊಂಡು ಫಿರ್ಯಾದಿಗೆ ತೋರಿಸಿ ಇಬ್ಬರು ಹಂಚಿಕೊಳ್ಳೋಣವೆಂದು ತಿಳಿಸಿ ಸ್ಟೇಡಿಯಂ ಒಳಗಡೆ ಹೋಗುತ್ತಿದ್ದಾಗ ನಿನ್ನ ಕತ್ತಿನಲ್ಲಿರುವ ಸರವನ್ನು ಬಿಚ್ಚಿ ಇಟ್ಟಿಕೋ ಅಂತ ಹೇಳಿ ಆ ಹೆಂಗಸು ಈ ಸರವನ್ನು ಕಿತ್ತುಕೊಳ್ಳಬಹುದು, ಅದನ್ನು ನಿನ್ನ ಸೆರಗಿಗೆ ಗಂಟು ಹಾಕುತ್ತೇನೆಂದು ಹೇಳಿ ತಾನೇ ಗಂಟು ಹಾಕಿ, ಹೋದವಳು ವಾಪಸ್ ಬರಲಿಲ್ಲ. ಆಗ ಫಿರ್ಯಾದಿಯು ತನ್ನ ಸೆರಗಿನಲ್ಲಿದ್ದ ಚಿನ್ನದ ಸರವನ್ನು ಕತ್ತಿಗೆ ಹಾಕಿಕೊಳ್ಳೋಣವೆಂದು ಸೆರಗಿನ ಗಂಟನ್ನು ಬಿಚ್ಚಿದಾಗ ಮರಳು ಇತ್ತು ಆ ಹೆಂಗಸರನ್ನು ಹುಡುಕಿದರೂ ಸಿಗಲಿಲ್ಲ. ಇಬ್ಬರು ಹೆಂಗಸರು ತನಗೆ ಮೋಸ ಮಾಡುವ ಉದ್ದೇಶದಿಂದ ತನ್ನ ಕತ್ತಿನಲ್ಲಿದ್ದ 1 ಲಕ್ಷ ರೂ. ಬೆಲೆ ಬಾಳುವ 58 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಬಿಚ್ಚಿಸಿಕೊಂಡು ಸೆರಗಿಗೆ ಗಂಟುಹಾಕುತ್ತೇನೆಂದು ಹೇಳಿ ಮರಳನ್ನು ಸೆರಗಿಗೆ ಕಟ್ಟಿ ಮೋಸ ಮಾಡಿರುತ್ತಾರೆ. ಇವರುಗಳ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಿ ಎಂದು ನೀಡಿದ ದೂರು.
2. ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 162/13 ಕಲಂ. 468-471-420 ಐ.ಪಿ.ಸಿ.
ದಿನಾಂಕ: 22-05-2013 ರಂದು ಪಿರ್ಯಾದಿ ಶ್ರೀ.ರಘು ಎಂ.ಪಿ. ಭದ್ರತಾ ಮತ್ತು ಜಾಗ್ರತಾಧಿಕಾರಿಗಳು, ಕನರ್ಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಮಂಡ್ಯ ವಿಭಾಗ, ಮಂಡ್ಯ ರವರು ನೀಡಿದ ದೂರು ಏನೆಂದರೆ ಆರೋಪಿ ಜಿ.ಟಿ.ರಮೇಶ್ ಬಿನ್. ತಮ್ಮೇಗೌಡ, ಕೆಟಿ-366, ಚಾಮುಂಡೇಶ್ವರಿ ನಗರ, ಮಂಡ್ಯ ರವರು ದಿನಾಂಕ:.22-05-2013 ರಂದು ರಾತ್ರಿ 08-00 ಗಂಟೆ ಹನುಮಂತ ನಗರದ ಬಳಿ ಸಿಬ್ಬಂದಿಯವರಿಗೆ ಉಚಿತವಾಗಿ ಪ್ರಯಾಣಿಸಲು ನೀಡುವ ಉಚಿತ ಪಾಸ್ ಸಂಖ್ಯೆ 005285 ಅನ್ನು ಸದರಿಯವರು ಮದ್ದೂರು ಘಟಕದಲ್ಲಿ ಶಿಶುಕ್ಷಕರಾಗಿ ಕರ್ತವ್ಯ ನಿರ್ವಹಿಸುವಾಗ ಸದರಿ ಉಚಿತ ಪಾಸನ್ನು ಕದ್ದು ಸದರಿ ಪಾಸ್ನಲ್ಲಿ ತನ್ನ ಬಾವಚಿತ್ರವನ್ನು ಅಂಟಿಸಿಕೊಂಡು ಹಾಗು ಮದ್ದೂರು ಘಟಕ ವ್ಯವಸ್ಥಾಪಕರ ಮೊಹರನ್ನು ನಕಲಿಯಾಗಿ ಸೃಷ್ಠಿ ಮಾಡಿಕೊಂಡು 2003 ನೇ ಸಾಲಿನಿಂದ 2013 ರ ವರೆಗೆ 11 ವರ್ಷ ಸಂಸ್ಥೆಯ ಉಚಿತ ಪಾಸನ್ನು ದುರ್ಬಳಕೆ ಮಾಡಿಕೊಂಡಿದ್ದು ತದನಂತರ 2004 ರಲ್ಲಿ ಸದರಿ ವ್ಯಕ್ತಿಯು ಆರೋಗ್ಯ ಇಲಾಖೆಯ ಕೆಲಸಕ್ಕೆ ಸೇರಿದ ನಂತರ ದಿನ ಪ್ರತಿ ಮಂಡ್ಯದಿಂದ ಹಲಗೂರಿಗೆ ಸದರಿ ಉಚಿತ ಪಾಸನ್ನು ಉಪಯೋಗಿಸಿಕೊಂಡು ದಿನಂಪ್ರತಿ ರೂ 45 ರಂತೆ * 25 ದಿನಗಳು * 12 ತಿಂಗಳು * 11 ವರ್ಷಕ್ಕೆ ರೂ 1,48,500 ಗಳಷ್ಟು ಸಂಸ್ಥೆಗೆ ಆಥರ್ಿಕ ನಷ್ಟ ಉಂಟುಮಾಡಿರುತ್ತಾರೆ ಅವರ ಮೇಲೆ ಸೂಕ್ತ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ :
ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 162/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.
ದಿನಾಂಕ: 22-05-2013 ರಂದು ಪಿರ್ಯಾದಿ ನಂಜೇಗೌಡ ಬಿನ್. ಕಿಕ್ಕೇರಿಗೌಡ, ಹಿರಳಹಳ್ಳಿ ಗ್ರಾಮ, ಕೆ.ಆರ್.ಪೇಟೆ ತಾ|| ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಎಚ್.ಎನ್.ಹರೀಶ್ ಬಿನ್. ನಂಜೇಗೌಡ, 33 ವರ್ಷ, ಹಿರಳಹಳ್ಳಿ ಗ್ರಾಮ, ಕೆ.ಆರ್. ಪೇಟೆ ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಂಶವೇನೆಂದರೆ ಪಿರ್ಯಾದಿಯವರ ಮಗ ಎಚ್.ಎನ್. ಹರೀಶ್ ಈಗ್ಗೆ ಎರಡು ವರ್ಷಗಳಿಂದ ಮನೆಯಿಂದ ಕಾಣೆಯಾಗಿರುತ್ತಾನ್ತೆ ಆದರೆ ಸುಮಾರು ಎರಡು ವರ್ಷಗಳಿಂದಲೂ ಸಹ ವಾಪಾಸ್ಸು ಮನೆಗೆ ಬಾರದೆ ಕಾಣೆಯಾಗಿರುತ್ತಾನೆ ಆದ್ದರಿಂದ ಕಾಣೆಯಾಗಿರುವ ಅವರ ಮಗನನ್ನು ಪತ್ತೆಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಯು.ಡಿ.ಆರ್. ಪ್ರಕರಣಗಳು :
1. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 14/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 22-05-2013 ರಂದು ಪಿರ್ಯಾದಿ ಜಾವಿದ್ ಬಿನ್ ಲೇ|| ಮಕ್ಬುಲ್ ಖಾನ್, 28ವರ್ಷ, ಮುಸ್ಲಿಂ ಜನಾಂಗ, ಕುಲುಮೆ ಕೆಲಸ, ಮನೆ. ನಂ. 81, ನಾಲಬಂದವಾಡಿ. ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಹಸೀನಾ ಬಿನ್. ಲೇ|| ಶಫಿಉಲ್ಲಾ, 36 ವರ್ಷ, ಮುಸ್ಲಿಂ ಜನಾಂಗ, ಬೀಡಿ ಕಟ್ಟುವ ಕೆಲಸ, ಮನೆ. ನಂ. 81, ನಾಲಬಂದವಾಡಿ, ಮಂಡ್ಯ ಸಿಟಿ ರವರು ಸೀಮೆಣ್ಣೆ ದೀಪ ಹಚ್ಚಲು ಹೋದಾಗ ಪಕ್ಕದಲ್ಲಿದ್ದ ಸೀಮೆಎಣ್ಣೆ ಇದ್ದ ಕ್ಯಾನು ಆಕಸ್ಮಿಕವಾಗಿ ಬಿದ್ದು ಹೋಗಿ ಅದರಲ್ಲಿದ್ದ ಸೀಮೆಎಣ್ಣೆ ಎಲ್ಲಾ ನೆಲಕ್ಕೆ ಚೆಲ್ಲಿ ಹೋಗಿದ್ದು, ಆ ಸಮಯದಲ್ಲಿ ಮೃತೆ ಬೆಂಕಿ ಕಡ್ಡಿ ಗೀರಿದಾಗ ಮೃತೆಗೆ ಬೆಂಕಿ ತಗುಲಿ ಮೈಮೇಲಿದ್ದ ಬಟ್ಟೆಯಲ್ಲಾ ಹತ್ತಿಕೊಂಡ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಕೊಡಿಸಿ ನಂತರ ಅದೇ ದಿನ ಹೆಚ್ಚಿನ ಚಿಕಿತ್ಸೆ ಬಗ್ಗೆ ಮೈಸೂರು ಕೆ.ಆರ್. ಆಸ್ಪತ್ರೆಯ ಬನರ್್ ವಾಡರ್್ಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿ ಚಿಕಿತ್ಸೆ ಫಲಕಾರಿಯಾಗಿದೆ ಮೃತಪಟ್ಟಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2.ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 17/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 22-05-2013 ರಂದು ಪಿರ್ಯಾದಿ ಕೆ.ಎಂ.ಜಗದೀಶ ಬಿನ್. ಲೇಟ್. ಮರೀಗೌಡ, ಕಟ್ಟೇರಿ ಗ್ರಾಮ, ಪಾಂಡವಪುರ ತಾ. ರವರು ನೀಡಿದ ದೂರಿನ ವಿವರವೇನೆಂದರೆ ಕೃಷ್ಣೇಗೌಡ ಬಿನ್ ಲೇ,ನಂಜೇಗೌಡ, ಕಟ್ಟೇರಿ ಗ್ರಾಮ, ಪಾಂಡವಪುರ ತಾ. ರವರು ದಿನಾಂಕ: 19-05-2013 ರಂದು ಹೊಟ್ಟೆ ನೋವು ತಾಳಲಾರದೆ ಮನೆಯಲ್ಲಿ ಯಾವುದೋ ವಿಷ ಸೇವನೆ ಮಾಡಿದ್ದವನನ್ನು ಚಿಕಿತ್ಸೆಗಾಗಿ ಪಾಂಡವಪುರ ಸರ್ಕಾರಿ ವೈದ್ಯರಲ್ಲಿ ತೋರಿಸಿ ನಂತರ ಹೆಚ್ಚಿನ ಚಿಕಿತ್ಸೆೆ ಸಂಬಂಧ ಮೈಸೂರಿನ ಕೆ,ಆರ್,ಆಸ್ಪತ್ರೆಯಲ್ಲಿ ತೋರಿಸಿ ಚಿಕಿತ್ಸೆ ಕೊಡಿಸಿದ್ದರೂ ಸಹ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
3. ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಯು.ಡಿ.ಆರ್. ನಂ. 174 ಸಿ.ಆರ್.ಪಿ.ಸಿ.
ದಿನಾಂಕ: 22-05-2013 ರಂದು ಪಿರ್ಯಾದಿ ವಿಶ್ವಚಾರ್ ಬಿನ್. ಲೇಟ್. ಪುಟ್ಟಚಾರ್, 70 ವರ್ಷ, ವಿಶ್ವಕರ್ಮ ಜನಾಂಗ, ಯಲಿಯೂರು ಗ್ರಾಮ, ಚನ್ನಪಟ್ಟಣ ತಾಲ್ಲೋಕ್, ರಾಮನಗರ ಜಿಲ್ಲೆ ರವರು ನೀಡಿದ ದೂರಿನ ವಿವರವೇನೆಂದರೆ ಲತಾಶ್ರೀ ಕೊಂ. ಲೋಕೇಶ, ವಿಶ್ವಕರ್ಮ ಜನಾಂಗ, ಗೃಹಿಣಿ, ಕೆ.ಎಂ.ದೊಡ್ಡಿ ಟೌನ್, ಸಿ.ಎ.ಕೆರೆ ಹೋ. ಮದ್ದೂರು ತಾ. ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 22-05-2013 ರಂದು ಸಂಜೆ 04-30 ಗಂಟೆಯಲ್ಲಿ, ಮಂಡ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಲತಾಶ್ರೀ. ಯವರು ಖಾಯಿಲೆಯಿಂದ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ:19-05-2013 ರಂದು ಮನೆಯಲ್ಲಿ ಮದ್ಯಾಹ್ನ 03-00 ಗಂಟೆ ಸಮಯದಲ್ಲಿ ಆಕೆಗೆ ಚಿಕಿತ್ಸೆಗಾಗಿ ನೀಡುತ್ತಿದ್ದ ಮಾತ್ರೆಗಳನ್ನು ಹೆಚ್ಚಾಗಿ ತೆಗೆದುಕೊಂಡ ಕಾರಣ ತುಂಬಾ ಅಸ್ವಸ್ಥರಾಗಿದ್ದು, ಕೆ.ಎಂ.ದೊಡ್ಡಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾಳೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment