ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 23-05-2013 ರಂದು ಒಟ್ಟು 24 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಅಪಹರಣ ಪ್ರಕರಣ, 1 ಕಳವು ಪ್ರಕರಣ, 3 ಮನುಷ್ಯ ಕಾಣೆಯಾದ ಪ್ರಕರಣಗಳು, 1 ವಂಚನೆ ಪ್ರಕರಣ, 1 ಯು.ಡಿ.ಆರ್. ಪ್ರಕರಣ, 1 ಎಸ್.ಸಿ./ಎಸ್.ಟಿ ದೌರ್ಜನ್ಯ ತಡೆ ಕಾಯಿದೆ ಪ್ರಕರಣ ಹಾಗು ಇತರೆ ಐ.ಪಿ.ಸಿ./ಸಿ.ಆರ್.ಪಿ.ಸಿ. ಪ್ರಕರಣಗಳು ವರದಿಯಾಗಿರುತ್ತವೆ.
ಅಪಹರಣ ಪ್ರಕರಣ :
ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ.ನಂ. 102/13 ಕಲಂ. 366(ಎ) ಐ.ಪಿ.ಸಿ.
ದಿನಾಂಕ: 23-05-2013 ರಂದು ಪಿರ್ಯಾದಿ ಕಮಲ್ಲಮ್ಮ ಕೋಂ. ಲೇಟ್. ಪುಟ್ಟಸ್ವಾಮಿ, ಚಾಪುರದೊಡ್ಡಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 15-05-2013 ರಂದು ಮದ್ಯಾಹ್ನ 01-00 ಗಂಟೆ ಸಮಯದಲ್ಲಿ ನನ್ನ 16 ವರ್ಷದ ಮಗಳು ಉಪ್ಪಾರದೊಡ್ಡಿ ಗ್ರಾಮಕ್ಕೆ ನೆಂಟರ ಮನೆಗೆ ಹೋಗಿ ಬರುತ್ತೇನೆಂದು ಹೋದವಳು, ಊರಿಗೂ ಹೋಗದೆ ಮನೆಗೂ ಬಾರದೆ ಕಾಣೆಯಾಗಿರುತ್ತಾಳೆ ಅವಳನ್ನು ಯಾರೊ ಬಲವಂತವಾಗಿ ಕರೆದುಕೊಂಡು ಹೋಗಿರಬಹುದೆಂದು ಅನುಮಾನವಿರುತ್ತದೆ ಅವರನ್ನು ಪತ್ತೆ ಮಾಡಿಕೊಡಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣ :
ಮೇಲುಕೋಟೆೆ ಪೊಲೀಸ್ ಠಾಣೆ ಮೊ.ನಂ. 84/13 ಕಲಂ. 379 ಐ.ಪಿ.ಸಿ.
ದಿನಾಂಕ: 23-05-2013 ರಂದು ಪಿರ್ಯಾದಿ ಕುಶ, ಕೆ ಬಿನ್ ಕೃಷ್ಣ, 28 ವರ್ಷ, ವಾಸ ನಂ.55, ಹೌಸಿಂಗ್ ಬೋಡರ್್ಕಾಲೋನಿ, ಶಾಂತಿನಗರ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕಃ-07-05-2013 ರ ಸಂಜೆ 17-00 ಗಂಟೆಯಲ್ಲಿ ಸುಂಕಾತೊಣ್ಣೂರು ಗ್ರಾಮದಲ್ಲಿ 12 ಬ್ಯಾಟರಿಗಳನ್ನು ದಿನಾಂಕ: 07-05-2013 ರಂದು ಯಾರೋ ಕಳ್ಳರು ಸಂಜೆ ಏಳು ಗಂಟೆ ಸಮಯದಲ್ಲಿ ಕಳವು ಮಾಡಿಕೊಂಡು ಹೋಗಿರುತ್ತಾರೆ ಇವುಗಳ ಅಂದಾಜು ಬೆಲೆ 12,000/- ಸಾವಿರ ರೂಗಳಾಗುತ್ತವೆ. ಈ ಟವರ್ ಹತ್ತಿರಕ್ಕೆ ಏರ್ ಟೆಲ್ ಎರಿಸನ್ ಕಂಪನಿಯ ಎಫ್.ಎಂ. ಇಂಜಿನಿಯರ್ ಶ್ರೀಧರ್ರವರು ಬಂದು ಹೋದರೆಂದು ವಿಚಾರ ಗೊತ್ತಾಗಿರುತ್ತೆ ಆದ್ದರಿಂದ ಇವರ ಮೇಲೆ ನಮಗೆ ಅನುಮಾನವಿರುತ್ತದೆ ಎಂದು ಇತ್ಯಾದಿಯಾಗಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣಗಳು :
1. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 257/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.
ದಿನಾಂಕ: 23-05-2013 ರಂದು ಪಿರ್ಯಾದಿ ಹೆಚ್.ಎನ್. ಪುಟ್ಟಸ್ವಾಮಿ ಬಿನ್. ಲೇಟ್. ನಿಂಗೇಗೌಡ, 46 ವರ್ಷ, ಹೆಮ್ಮಿಗೆ ಗ್ರಾಮ, ಮಂಡ್ಯ ತಾ.. ರವರು ನೀಡಿದ ದೂರು ಏನೆಂದರೆ ಅವರ ಮಗಳು ಹೆಚ್.ಪಿ. ಶಾಲಿನಿ ಕೋಂ. ಹೆಚ್.ಎನ್. ಪುಟ್ಟಸ್ವಾಮಿ, 21 ವರ್ಷ, ಹೆಮ್ಮಿಗೆ ಗ್ರಾಮ, ಮಂಡ್ಯ ತಾ.. ದಿನಾಂಕ:22-05-2013 ರಂದು ಬೆಳಿಗ್ಗೆ 06-30 ಗಂಟೆಯಲ್ಲಿ.ಹೆಮ್ಮಿಗೆ ಗ್ರಾಮದಿಂದ ಸಿ.ಪಿ.ಸಿ. ಪಾಲಿಟೆಕ್ನಿಕ್ ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿ ಹೋದವಳು ಇಲ್ಲಿಯವರೆಗೂ ಮನೆಗೆ ಬಂದಿರುವುದಿಲ್ಲ ಕಾಣೆಯಾಗಿರುವ ತಮ್ಮ ಮಗಳನ್ನು ಪತ್ತೆ ಮಾಡಿಕೊಡುವಂತೆ ದೂರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಮಂಡ್ಯ. ಪೂರ್ವ ಪೊಲೀಸ್ ಠಾಣೆ ಮೊ.ನಂ. 100/13 ಕಲಂ. ಹುಡುಗರು ಕಾಣೆಯಾಗಿದ್ದಾರೆ.
ದಿನಾಂಕ: 23-05-2013 ರಂದು ಪಿರ್ಯಾದಿ ಮಹೇಶ ಹೆಚ್,ಸಿ ಬಿನ್ ಲೇಟ್ ಚಿಕ್ಕಪುಟ್ಟಯ್ಯ ಮಾರುತಿನಗರ 7ನೇ ಕ್ರಾಸ್ ಮಂಡ್ಯ ಸಿಟಿ ನೀಡಿದ ದೂರಿನ ಸಾರಾಂಶವೇನೆಂದರೆ 1. ಹೆಚ್,ಎಂ. ಕೇಶವ ಬಿನ್ ಮಹೇಶ ಹೆಚ್,ಸಿ 12 ವರ್ಷ, 6ನೇ ತರಗತಿ, 2. ವಿಶ್ವನಾಥ ಆರ್, ಬಿನ್. ರಾಜು, 11 ವರ್ಷ, 5ನೇ ತರಗತಿ ದಿನಾಂಕ: 29-03-2013 ರಂದು ಶಾಲೆಗಳಿಗೆ ರಜೆ ಇದ್ದ ಕಾರಣ ಇಬ್ಬರು ಮನೆಯ ಮುಂದೆ ಸಾಯಂಕಾಲ 04-30 ಗಂಟೆಯಲ್ಲಿ ಆಟವಾಡಿಕೊಂಡಿದ್ದವರು ರಾತ್ರಿಯಾದರೂ ವಾಪಸ್ ಮನೆಗೆ ಬಂದಿರುವುದಿಲ್ಲ. ಸಂಬಂಧಿಕರ ಮನೆಗಳ ಕಡೆ ಹೋಗಿ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ ಅವರುಗಳನ್ನು ಪತ್ತೆ ಮಾಡಿಕೊಡಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
3. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 228/13 ಕಲಂ. ಹುಡುಗ ಕಾಣೆಯಾಗಿದ್ದಾನೆ.
ದಿನಾಂಕ: 23-05-2013 ರಂದು ಪಿರ್ಯಾದಿ ಶಿವರುದ್ರಯ್ಯ ಬಿನ್. ಹುಚ್ಚಯ್ಯ, ಅಧೀಕ್ಷಕರು, ಬಾಲಕರ ಬಾಲಮಂದಿರ, 6ನೇ ಕ್ರಾಸ್, ಮರೀಗೌಡ ಬಡಾವಣೆ, ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 21-05-2013 ರಂದು ಸಂಜೆ 5-00 ಗಂಟೆಯ ಸಮಯದಲ್ಲಿ 6ನೇ ಕ್ರಾಸ್, ಮರೀಗೌಡ ಬಡಾವಣೆ, ಮಂಡ್ಯ ಸಿಟಿ ಬಾಲಮಂದಿರದಲ್ಲಿದ್ದ ಪ್ರಶಾಂತ್ ಎಂಬುವನು ತಪ್ಪಿಸಿಕೊಂಡು ಓಡಿಹೋಗಿರುತ್ತಾನೆ. ಕೂಡಲೇ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಹಾಗೂ ಇತರೆ ಸ್ಥಳಗಳಲ್ಲಿ ಹುಡುಕಿದರೂ ಪತ್ತೆ ಆಗಿರುವುದಿಲ್ಲ. ಆದ್ದರಿಂದ ಕಾಣೆಯಾಗಿರುವ ಪ್ರಶಾಂತ್ ಎಂಬ ಹುಡುಗನನ್ನು ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ವಂಚನೆ ಪ್ರಕರಣ :
ಮಳವಳ್ಳಿ ಗ್ರಾಮಾಂತರ ಠಾಣೆ ಮೊ.ನಂ. 118/13 ಕಲಂ. 420 ಐ.ಪಿ.ಸಿ.
ದಿನಾಂಕ: 23-05-2013 ರಂದು ಪಿರ್ಯಾದಿ ಸಿದ್ದೇಗೌಡ, 36ವರ್ಷ., ಒಕ್ಕಲಿಗರು, ವ್ಯವಸಾಯ ವಾಸ: ನೆಲಮಾಕನಹಳ್ಳಿ ಗ್ರಾಮ, ಕಸಬಾಹೋಬಳಿ, ಮಳವಳ್ಳಿ ತಾ|| ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 14-05-2013 ನಂತರದ ದಿನಗಳಲ್ಲಿ ನೆಲಮಾಕನಹಳ್ಳಿ ಗ್ರಾಮದಲ್ಲಿ ಕಾಲಂ. ನಂ.8 ರಲ್ಲಿ ಕಂಡ ಆರೋಪಿ ಪಿರ್ಯಾದಿಯವರಿಂದ ಮೋಸದಿಂದ ಎಟಿಎಂ ಪಡೆದುಕೊಂಡು ಎಸ್.ಬಿ. ಖಾತೆ ನಂ. 1521101006406 ರಲ್ಲಿ 62000/- ರೂ ಗಳ ಹಣ ಡ್ರಾ ಮಾಡಿರುವುದಾಗಿ ಪಿರ್ಯಾದು ನೀಡಿರುತ್ತಾರೆ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.
ಯು.ಡಿ.ಆರ್. ಪ್ರಕರಣ :
ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 11/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 23-05-2013 ರಂದು ಪಿರ್ಯಾದಿ ಸಿದ್ದೇಗೌಡ ಕೆ.ಲೋಕೇಶ, ಸಿಪಿಸಿ 684, ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 21-05-2013 ರಂದು ಮಂಡ್ಯದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಶೌಚಾಲಯದ ಬಳಿ ಚಂದ್ರಣ್ಣ ಬಿನ್. ರಾಮಶೆಟ್ಟಿ, 65ವರ್ಷ, ನಾಗಮಂಗಲದ ವಾಸಿ ಎಂದು ತಿಳಿದುಬಂದಿದ್ದು ಈತನಿಗೆ ಬಲಗಾಲಿನಲ್ಲಿ ಗ್ಯಾಂಗ್ರಿನ್ ಗಾಯವಾಗಿರುವುದರಿಂದಲೋ ಅಥವಾ ಹೃದಯಘಾತದಿಂದಲೋ ಮೃತಪಟ್ಟಿರುವಂತೆ ಕಂಡುಬಂದಿರುತ್ತದೆ. ಈ ಬಗ್ಗೆ ಮುಂದಿನ ಕ್ರಮ ಜರುಗಿಸಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಎಸ್.ಸಿ./ಎಸ್.ಟಿ ದೌರ್ಜನ್ಯ ತಡೆ ಕಾಯಿದೆ ಪ್ರಕರಣ :
ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 163/13 ಕಲಂ. 506 ಐಪಿಸಿ ಮತ್ತು 3 ಕ್ಲಾಸ್ [1][10] [11]ಆಫ್ ಎಸ್.ಸಿ./ಎಸ್.ಟಿ ಪಿ.ಎ.ಆಕ್ಟ್ 1989.
ದಿನಾಂಕ: 23-05-2013 ರಂದು ಪಿರ್ಯಾದಿ ನಿಂಗರಾಜಮ್ಮ ಕೋಂ. ಆನಂದ, ಯಲಾದಹಳ್ಳಿ ಗ್ರಾಮ, ಸಿ.ಎ.ಕೆರೆ ಹೋಬಳಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ವೈ.ಡಿ. ಚಂದ್ರಶೇಖರ @ ಶೇಖರ ಬಿನ್. ಲೇಟ್. ಸೆಡ್ಡಿನ ದೇವೇಗೌಡ, ಯಲಾದಹಳ್ಳಿ ಗ್ರಾಮ ರವರು ಪಿರ್ಯಾದಿಯವರ ಮನೆಗೆ ನುಗ್ಗಲು ಯತ್ನಿಸಿ ಈ ರಾತ್ರಿ 2,000/-ರೂ. ಕೊಡುತ್ತೇನೆ ನಿನ್ನ ಜೊತೆ ಮಲಗುತ್ತೇನೆ ಎಂದಾಗ ಪಿಯರ್ಾದಿ ಕಿರಿಚಿಕೊಂಡಾಗ ಪಿಯರ್ಾದಿ ಗಂಡ ಮತ್ತು ಅಕ್ಕಪಕ್ಕದ ಮನೆಯವರು ಬರುವಷ್ಟರಲ್ಲಿ ನೀನೇನಾದರೂ ನಿನ್ನ ಗಂಡ ಹಾಗೂ ನಿನ್ನ ಜಾತಿಯವರಿಗೆ ಈ ವಿಷಯ ಹೇಳಿದರೆ ನಿನ್ನ ಮನೆಗೆ ಬೆಂಕಿ ಹಾಕುತ್ತೇನೆ ನಿನ್ನನ್ನು ಕೊಲೆ ಮಾಡುತ್ತೇನೆ ಸೂಳೆಮುಂಡೆ, ಬಡ್ಡೀ, ನಿನ್ನ ತಾಯಿನಾಕೆಯ್ಯಾ, ಹೊಲೆಯ ಬಡ್ಡೀಮಗಳೇ ಎಂದು ಜಾತಿ ಹೆಸರು ಹಿಡಿದು ಬೈಯ್ದು ಎಳೆದಾಡಿದ. ಹಿಡಿಯಲು ಯತ್ನಿಸಿದಾಗ ಕತ್ತಲಲ್ಲಿ ಪರಾರಿಯಾಗಿರುತ್ತಾನೆ ಆತನ ಮೇಲೆ ಸೂಕ್ತ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment