ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 29-05-2013 ರಂದು ಒಟ್ಟು 23 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಮನುಷ್ಯ ಕಾಣೆಯಾದ ಪ್ರಕರಣ, 2 ಯು.ಡಿ.ಅರ್./ಅನುಮಾನಾಸ್ಪದ ಸಾವಿನ ಪ್ರಕರಣಗಳು, 1 ಶಾಲೆ ಕಳ್ಳತನ ಪ್ರಕರಣ, 1 ಬೆಂಕಿ ಅಪಘಾತ ಪ್ರಕರಣ, 1 ವಾಹನ ಕಳವು ಪ್ರಕರಣ, 1 ಕೊಲೆ ಪ್ರಕರಣ, 1 ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ ಹಾಗು 15 ಇತರೆ ಐ.ಪಿ.ಸಿ./ಕೆ,ಪಿ.ಆಕ್ಟ್/ಐ.ಟಿ.ಪಿ. ಕಾಯಿದೆ ಪ್ರಕರಣಗಳು ವರದಿಯಾಗಿರುತ್ತವೆ.
ಮನುಷ್ಯ ಕಾಣೆಯಾದ ಪ್ರಕರಣ :
ಮೇಲುಕೋಟೆೆ ಪೊಲೀಸ್ ಠಾಣೆ ಮೊ.ನಂ. 90/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.
ದಿನಾಂಕ: 29-05-2013 ರಂದು ಪಿರ್ಯಾದಿ ಆರ್.ರಾಜು ಚಲ್ಲರಹಳ್ಳಿಕೊಪ್ಪಲು ಗ್ರಾಮ ರವರು ನೀಡಿದ ದೂರು ಏನೆಂದರೆ ಸಿ.ಆರ್.ಲಕ್ಷ್ಮೀದೇವಿ, 20 ವರ್ಷ, ಚಲ್ಲರಹಳ್ಳಿಕೊಪ್ಪಲು ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ನನ್ನ ಮಗಳನ್ನು ಇಲ್ಲಿಯವರೆವಿಗೂ ಹುಡುಕಿದರು ಸಿಕ್ಕಿರುವುದಿಲ್ಲ ದಿನಾಂಕ: 22-05-2013 ರಂದು ಮೇಲುಕೋಟೆಯ ಪ್ರವಾಸಿ ಮಂದಿರದ ಬಳಿ ಇರುವ ರೂಮಿನಿಂದ ನನ್ನ ಮಗಳು ನನ್ನ ಸೋದರ ಮಾವ ಮಂಜಾಭೋವಿ ಮಗ ಗೋವಿಂದರಾಜುವಿನೊಡನೆ ಹೋಗಿರಬಹುದೆಂದು ಅನುಮಾನವಿರುತ್ತದೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಯು.ಡಿ.ಅರ್./ಅನುಮಾನಾಸ್ಪದ ಸಾವಿನ ಪ್ರಕರಣಗಳು :
1. ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ಯು.ಡಿ.ಆರ್. ನಂ. 14/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 29-05-2013 ರಂದು ಪಿರ್ಯಾದಿ ಕೆ.ಸಿ.ನಿಂಗಣ್ಣ ಬಿನ್. ಚನ್ನೇಗೌಡ, 58 ವರ್ಷ, ವಕ್ಕಲಿಗರು, 2ನೇ ದಜರ್ೇ ಮೇಸ್ತ್ರಿ, ಕೆ.ಆರ್.ಪೇಟೆ ಕೆಇಬಿ ಘಟಕ, ರವರು ನೀಡಿದ ಪಿರ್ಯಾದಿನ ಸಾರಾಂಶವೇನೆಂದರೆ ದಿನಾಂಕ: 29.05.2013 ರಂದು ಎಂಜಿನಿಯರಿಂಗ್ ಕಾಲೇಜಿನ ಆವರಣದ ಟ್ರಾನ್ಸ್ಫಾರಂ ಬಳಿ ನಾನು ಮತ್ತು ಎ.ಹೆಚ್.ನಂಜುಂಡೇಗೌಡರವರು ಸ್ಥಳಕ್ಕೆ ರಿಪೇರಿ ಕೆಲಸಕ್ಕಾಗಿ ಹೋಗಿದ್ದು ನಂಜುಂಡೇಗೌಡರು ರಿಪೇರಿ ಮಾಡುತ್ತಿದ್ದಾಗ ಮದ್ಯಾಹ್ನ 12.00 ಗಂಟೆ ಸಮಯದಲ್ಲಿ ಆಕಸ್ಮಿಕವಾಗಿ ಟ್ರಾನ್ಸ್ಫಾರಂನಿಂದ ವಿದ್ಯುತ್ ತಗುಲಿದ್ದು ಚಿಕಿತ್ಸೆಗಾಗಿ ಕೆ.ಆರ್.ಪೇಟೆ ಸಕರ್ಾರಿ ಆಸ್ಪತ್ರೆಗೆ ಸೇರಿಸುವಾಗ ಮಾರ್ಗಮಧ್ಯೆ ಮೃತಪಟ್ಟಿರುತ್ತಾರೆ ಈ ಸಂಬಂಧ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2.ಶಿವಳ್ಳಿ ಪೊಲೀಸ್ ಠಾಣೆ ಯು.ಡಿ.ಆರ್. ನಂ. 07/13 ಕಲಂ. 174 (ಸಿ) ಸಿ.ಅರ್.ಪಿ.ಸಿ.
ದಿನಾಂಕ:29-05-2013 ರಂದು ಪಿರ್ಯಾದಿ ಎಂ.ಹೆಚ್. ಶಿವಕುಮಾರ್ ಬಿನ್. ಸಂತೋಷ್ಪೇಟೆ, ಚಿಕ್ಕಪೇಟೆ ಕ್ರಾಸ್, ಬೆಂಗಳೂರು ರವರು ನೀಡಿದ ದೂರು ಏನೆಂದರೆ ನನ್ನ ಹೆಂಡತಿ ಎಂ.ಹೆಚ್. ಪ್ರೇಮ ನಿಖರ ಗಾರ್ಡನ್ ಪಾಮ್ ಹೌಸ್, ಶಂಭೂನಹಳ್ಳಿ ಗ್ರಾಮ ರವರಿಗೆ ದಿನಾಂಕ:29-05-2013 ರಂದು ಹೃದಯ ವಿಕ್ ಆಗಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ಇವರಿಗೆ ಚಳಿ ಜಾಸ್ತಿಯಾಗಿ ಉಸಿರಾಟದ ತೊಂದರೆಯಾಗಿ ಸತ್ತು ಹೋಗಿದ್ದಾರೆ, ಆದರೂ ಇವರ ಸಾವಿನಲ್ಲಿ ನನಗೆ ಅನುಮಾನವಿರುತ್ತದೆ. ಆದುದ್ದರಿಂದ ಈ ಬಗ್ಗೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ಕೋರಿಕೆ ಎಂದು ನೀಡಿದ ದೂರಿನ ಮೆರೆಗೆ ಪ್ರಥಮ ವರ್ತಮಾನ ವರದಿ ದಾಖಲಿಸಲಾಗಿದೆ.
ಶಾಲೆ ಕಳ್ಳತನ ಪ್ರಕರಣ :
ಮದ್ದೂರು ಪೊಲೀಸ್ ಠಾಣೆ ಮೊ.ನಂ. 248/13 ಕಲಂ. 454-457-380 ಐ.ಪಿ.ಸಿ.
ದಿನಾಂಕ: 29-05-2013 ರಂದು ಪಿರ್ಯಾದಿ ದೇವೇಗೌಡ, ಮುಖ್ಯೋಪಾಧ್ಯಾಯರು, ಸಕರ್ಾರಿ ಪ್ರೌಢಶಾಲೆ, ಕೆ.ಬೆಳ್ಳೂರು ಗ್ರಾಮ ರವರು ನೀಡಿದ ಪಿರ್ಯಾದಿನ ವಿವರವೇನೆಂದರೆ ದಿನಾಂಕ: 24-05-2013 ರಿಂದ ದಿನಾಂಕ: 28-05-2013 ರ ದಿನಗಳಲ್ಲಿ, ಸರ್ಕಾರಿ ಪ್ರೌಢಶಾಲೆ, ಕೆ. ಬೆಳ್ಳೂರುನಲ್ಲಿ ಯಾರೋ ಕಳ್ಳರು ಶಾಲೆಯ ಕೋಣೆಯ ಕಿಟಕಿ ಬಾಗಿಲು ಮತ್ತು ಕಂಬಿಯನ್ನು ಮುರಿದು ಒಳನುಗ್ಗಿ ಅಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಅಲ್ಲಿದ್ದ 3 ಅಡುಗೆ ಅನಿಲದ ಸಿಲಿಂಡರುಗಳನ್ನು ಯಾರೋ ಕಳ್ಳರು ಕದ್ದುಕೊಂಡು ಹೋಗಿದ್ದು, ಪತ್ತೆ ಮಾಡಿಕೊಡಬೇಕೆಂದು ಇತ್ಯಾದಿಯಾಗಿ ನೀಡಿದ ದೂರು ಸಂಬಂಧ ಪ್ರಕರಣ ದಾಖಲಿಸಲಾಗಿದೆ.
ಬೆಂಕಿ ಅಪಘಾತ ಪ್ರಕರಣ :
ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 235/13 ಕಲಂ. 435 ಐ.ಪಿ.ಸಿ.
ದಿನಾಂಕ: 29-05-2013 ರಂದು ಪಿರ್ಯಾದಿ ಸೋಮಶೇಖರ ಲೇಟ್. ಕಾಳೇಗೌಡ, 47 ವರ್ಷ, ಒಕ್ಕಲಿಗರು, ಬಂದೀಗೌಡ ಬಡಾವಣೆ, ಮಂಡ್ಯ ಸಿಟಿ ರವರು ನೀಡಿದ ದೂರು ಏನೆಂದರೆ ದಿನಾಂಕ: 19-05-2013 ರಂದು ಎಂ.ಸಿ.ರಸ್ತೆ, ಕಲ್ಲಹಳ್ಳಿಯ ಡಾ|| ರಾಘವೇಂದ್ರರವರ ಮನೆಯ ಹತ್ತಿರ ಯಾರೋ ದುಷ್ಕರ್ಮಿಗಳು ಅವರ ಹೋಂಡ ಆಕ್ಟಿವ ಸ್ಕೂಟರ್ ಗೆ ಬೆಂಕಿ ಹಚ್ಚಿರುತ್ತಾರೆಂದು ವಿಚಾರ ಗೊತ್ತಾಗಿ ಕೂಡಲೇ ಫಿರ್ಯಾದಿಯವರು ಸದರಿ ಸ್ಥಳಕ್ಕೆ ಹೋಗಿ ನೋಡಲಾಗಿ ಮೇಲ್ಕಂಡ ಸ್ಕೂಟರ್ ಬೆಂಕಿ ಹತ್ತಿಕೊಂಡು ಉರಿಯುತ್ತಿದ್ದು ಮನೆಯ ಬಾಗಿಲಿಗೂ ಬೆಂಕಿ ಬಿದ್ದಿತ್ತು. ಆಗ ಫಿರ್ಯಾದಿ ಮತ್ತು ಇತರರು ಸೇರಿ ಬೆಂಕಿಯನ್ನು ಆರಿಸಿದ್ದು ಅಷ್ಟರಲ್ಲಿ ಹೋಂಡ ಆಕ್ಟಿವ ಸ್ಕೂಟರ್ ಸುಟ್ಟುಹೋಗಿರುತ್ತದೆ. ಇದರ ಬೆಲೆ ಸುಮಾರು 47,000/- ರೂ.ಗಳಾಗಿರುತ್ತದೆ. ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ವಾಹನ ಕಳವು ಪ್ರಕರಣ :
ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 234/13 ಕಲಂ. 379 ಐ.ಪಿ.ಸಿ.
ದಿನಾಂಕ: 29-05-2013 ರಂದು ಪಿರ್ಯಾದಿ ಆರ್.ಉದಯ ಕೇರಾಫ್. ಮಲ್ಲಣ್ಣ, 9ನೇ ಕ್ರಾಸ್, ಚಾಮುಂಡೇಶ್ವರಿನಗರ, ಮಂಡ್ಯ ಸಿಟಿ, ಸ್ವಂತ ಸ್ಥಳ ಮುತ್ತೇಗೆರೆ ಗ್ರಾಮ ರವರು ನೀಡಿದ ದೂರು ಏನೆಂದರೆ ದಿನಾಂಕ: 28-05-2013 ರಂದು ರಾತ್ರಿವೇಳೆ ಚಾಮುಂಡೇಶ್ವರಿನಗರ, ಮಂಡ್ಯ ಸಿಟಿ, ಫಿರ್ಯಾದಿಯವರ ಮನೆಯ ಮುಂಭಾಗದ ಬಳಿ ಯಾರೋ ಕಳ್ಳರು ಅವರ ಟಾಟಾ ಸುಮೋ ವಾಹನವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಇದರ ಬೆಲೆ ಸುಮಾರು 2,20,000/- ರೂ.ಗಳಾಗಿರುತ್ತದೆ. ಸದರಿ ಕಾರಿನ ಮುಂಭಾಗ ಗ್ಲಾಸಿನ ಮೇಲೆ 'ಲಕ್ಷ್ಮಿನರಸಿಂಹಸ್ವಾಮಿ ಪ್ರಸನ್ನ' ಎಂತಲೂ ಕೆಳಗಡೆ 'ಪಿ.ಆರ್.ಕೆ.' ಎಂತಲೂ ಹಿಂಭಾಗದ ಗ್ಲಾಸ್ನ ಮೇಲೆ 'ನಿವೇದಿತ' ಮತ್ತು 'ಬೇಟಿ ಆಕಸ್ಮಿಕ, ನೆನಪು ನಿರಂತರ' ಎಂಬುದಾಗಿ ಇರುತ್ತದೆ. ಸದರಿ ಟಾಟಾ ಸುಮೋ ವಾಹನವನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಕೊಲೆ ಪ್ರಕರಣ :
ಬಸರಾಳು ಪೊಲೀಸ್ ಠಾಣೆ ಮೊ.ನಂ. 81/13 ಕಲಂ. 302 ಐ.ಪಿ.ಸಿ.
ದಿನಾಂಕ: 29-05-2013 ರಂದು ಪಿರ್ಯಾದಿ ಶ್ರೀ ಚಂದ್ರ ಬಿನ್. ಲೇಟ್: ಸಿದ್ದಯ್ಯ, 35, ವ್ಯವಸಾಯ, ತಿರುಮಲಪುರ ಗ್ರಾಮ ರವರು ನೀಡಿದ ಪಿರ್ಯಾದಿನ ವಿವರವೇನೆಂದರೆ ದಿನಾಂಕ: 29-05-2013 ರಂದು ರಾತ್ರಿ 08-00 ಗಂಟೆಯಲ್ಲಿ ಯಾರೋ ದುಷ್ಕಮರ್ಿಗಳು ನನ್ನ ತಾಯಿ ನಾಗಮ್ಮ ಕೋಂ ಲೇಟ್. ಸಿದ್ದಯ್ಯ, 65 ವರ್ಷ, ರವರ ಕುತ್ತಿಗೆಗೆ ಯಾವುದೋ ಹಗ್ಗದಿಂದ ಬಿಗಿದಿರುವ ಗುರುತು ಇರುತ್ತದೆ ನನ್ನ ತಾಯಿಯ ಮೈಮೇಲೆ ಇದ್ದ ಸುಮಾರು 25 ಗ್ರಾಂ ಚಿನ್ನದ ಮಾಂಗಲ್ಯ ಚೈನ್,ತಾಳಿ ಹಾಗು ಬಿಳಿಕಲ್ಲಿ ವಾಲೆಯನ್ನು ಕಿತ್ತುಕೊಂಡು ಹೋಗಿರುತ್ತಾರೆ. ನನ್ನ ತಾಯಿಯನ್ನು ದುಷ್ಕರ್ಮಿಗಳು ಕೊಲೆ ಮಾಡಿ ಹೋಗಿರುತ್ತಾರೆ. ಅದ್ದರಿಂದ ನನ್ನ ತಾಯಿಯನ್ನು ಕೊಲೆ ಮಾಡಿರುವ ದುಷ್ಕಮರ್ಿಗಳನ್ನು ಪತ್ತೆ ಹಚ್ಚಿ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ನನ್ನ ಹೇಳಿಕೆಯ ದೂರನ್ನು ನೀಡುರುತ್ತೇನೆ ಎಂದು ನೀಡಿದ ದೂರನ್ನು ಸ್ವೀಕರಿಸಿಕೊಂಡು ಠಾಣಾ ಮೊ.ಸಂ.81/2013, ಕಲಂ. 302 ಐ.ಪಿ.ಸಿ. ಪ್ರಕರಣ ದಾಖಲಿಸಲಾಗಿದೆ.
ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ :
ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 49/13 ಕಲಂ. 143-147-341-504-324-114 ಕೂಡ 149 ಐಪಿಸಿ ಕೂಡ 3 ಕ್ಲಾಸ್ (1) & (10) ಎಸ್.ಸಿ./ಎಸ್.ಟಿ. ಕಾಯ್ದೆ 1989
ದಿನಾಂಕ: 29-05-2013 ರಂದು ಪಿರ್ಯಾದಿ ಮಂಜುನಾಥ. ಜೆ ಬಿನ್. ಜವರಯ್ಯ 28 ವರ್ಷ, ಪರಿಶಿಷ್ಟ ಜಾತಿ, ಕೂಲಿಕೆಲಸ, ವಾಸ:- ಗರುಡನಉಕ್ಕಡ ಗ್ರಾಮ, ಕೆ. ಶೆಟ್ಟಹಳ್ಳಿ ಹೋ| ಶ್ರೀರಂಗಪಟ್ಟಣ ತಾ|. ರವರ ಪಿರ್ಯಾದಿನ ಸಾರಾಂಶವೇನೆಂದರೆ ಆರೋಪಿ ಅಂಗಡಿಯ ಮಾಲೀಕ ಮಂಜ ಹಾಗು ಇತರ 5 ಜನರು ಹೆಸರು ವಿಳಾಸ ತಿಳಿಯಬೇಕಾಗಿರುತ್ತೆ ಇವರುಗಳು ನಾನು ಟೀ ಕೊಡಲು ಕೇಳಿದ್ದಕ್ಕೆ, ನೀನು ಯಾವ ಊರು ಎಂದು ಕೇಳಿದ ನಾನು ಗರುಡನ ಉಕ್ಕಡ ಎಂದು ಹೇಳಿದೆ. ಅದಕ್ಕೆ ಅವನು ಗರುಡನ ಉಕ್ಕಡದವರು ಪರಿಶಿಷ್ಠ ಜನಾಂಗದವರು ನಾನು ಟೀ ನಿನಗೆ ಕೊಡುವುದಿಲ್ಲಾ ಎಂದು ಹೇಳಿದ, ಅದಕ್ಕೆ ನಮಗೆ ಟೀ ಕೊಡಬಾರದೆಂದು ಹೇಳುತ್ತೀಯಾ ಇದು ಸರಿಯಲ್ಲಾ ಎಂದು ಹೇಳಿದೆ ಅದಕ್ಕೆ ಡಾಬಾದ ಮಂಜ ಎಂಬುವನು ಟೀ ಅಂಗಡಿಯ ಮಾಲೀಕನಿಗೆ ಸಪೋರ್ಟ ಮಾಡಿದ್ದು ಜಾತಿ ನಿಂದನೆ ಮಾಡಿರುತ್ತಾರೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment