ಮಂಡ್ಯ ಜಿಲ್ಲೆಯಲ್ಲಿ ಒಟ್ಟು 25 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ವಂಚನೆ ಪ್ರಕರಣ, 2 ಮನುಷ್ಯ ಕಾಣೆಯಾದ ಪ್ರಕರಣಗಳು, 2 ಯು.ಡಿ.ಆರ್. ಪ್ರಕರಣಗಳು, 3 ವಾಹನ ಕಳವು/ಮರಳು ಕಳವು/ಸಾಮಾನ್ಯ ಕಳವು ಪ್ರಕರಣಗಳು ಹಾಗು ಇತರೆ 17 ಐ.ಪಿ.ಸಿ./ಸಿ.ಆರ್.ಪಿ.ಸಿ./ಕೆ.ಇ. ಆಕ್ಟ. ಪ್ರಕರಣಗಳು ದಾಖಲಾಗಿರುತ್ತವೆ.
ವಂಚನೆ ಪ್ರಕರಣ :
ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 264/13 ಕಲಂ. 420 ಐ.ಪಿ.ಸಿ.
ದಿನಾಂಕ: 28-05-2013 ರಂದು ಪಿರ್ಯಾದಿ ಸವಿತ ಕೋಂ. ರಾಮೇಗೌಡ, 30 ವರ್ಷ, ಗೃಹಿಣಿ, ಉರಮಾರಕಸಲಗೆರೆ ಗ್ರಾಮ, ಮಂಡ್ಯ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿ ಮತ್ತು ನಾದಿನಿ ಶಿಲ್ಪ ಹಾಗೂ ಅತ್ತೆ ಮೂರು ಜನರು ಮನೆಯ ಬಳಿ ಇರುವಾಗ ಇಬ್ಬರು ಸುಮಾರು 30 ರಿಂದ 35 ವರ್ಷ ವಯಸ್ಸಿನ ಗಂಡಸರು ಬಂದು ಚಿನ್ನ ಬೆಳ್ಳಿ ಪಾಲಿಸ್ ಮಾಡುವುದಾಗಿ ಹೇಳಿ ಮೊದಲು ಬೆಳ್ಳಿ ಕಾಲ್ ಚೈನನ್ನು ಪಾಲಿಶ್ ಮಾಡಿಕೊಟ್ಟು ನಂತರ ಮೂರು ಜನರ ಬಳಿ ಇದ್ದ ಒಂದು ಹಗ್ಗದ ಮಾದರಿಯ ಸುಮಾರು 25 ಗ್ರಾಂ ತೂಕದ ಚಿನ್ನದ ಸರ, ಒಂದು ಟೂಬ್ಲೈಟ್ ಮಾದರಿಯ ಚಿನ್ನದ ಸರ ಮತ್ತು ತಾಳಿ, ಎರಡು ಕಾಸು, ಎರಡು ಗುಂಡು ಸೇರಿ ಸುಮಾರು 35 ಗ್ರಾಂ ತೂಕದ ಮಾಂಗಲ್ಯ ಸರ, ಒಂದು ಹಗ್ಗದ ಮಾದರಿಯ ಚಿನ್ನದ ಸರ ಮತ್ತು ತಾಳಿ, ಎರಡು ಕಾಸು, ಎರಡು ಗುಂಡು ಸೇರಿ ಸುಮಾರು 48 ಗ್ರಾಂ. ತೂಕದ ಮಾಂಗಲ್ಯ ಸರಗಳನ್ನು ಪಡೆದುಕೊಂಡು ಕುಕ್ಕರ್ ಪ್ಲೇಟ್ ತರಿಸಿ ಅದರಲ್ಲಿ ಪೌಡರ್ ಹಾಕಿತೊಳೆದು ನಂತರ ಕುಕ್ಕರ್ ಪ್ಲೇಟ್ಗೆ ಕೆಂಪು ಪೌಡರ್ ಮತ್ತು ಅರಿಸಿನ ಪುಡಿಯನ್ನು ಬೆರಸಿ ನೀರು ಕೆಂಪಾಗಾಯಿತು ಅದರಲ್ಲಿ ಚಿನ್ನದ ಸರಗಳನ್ನು ಹಾಕಿದ ನಂತರ ಅವರ ಕೈನಲ್ಲಿದ್ದ ಕಚರ್ಿಪಿನಿಂದ ಚಿನ್ನದ ಸರಗಳನ್ನು ವರಿಸುವರಂತೆ ನಾಟಕವಾಡಿ ಇವರು ಅವರುಗಳನ್ನು ನಂಬಿದ ನಂತರ ಕುಕ್ಕರನ್ನು ಅವರ ಕೈಗೆ ಕೊಟ್ಟು 10 ನಿಮಿಷ ಕಾಯಿಸಿ ಚಿನ್ನ ಪಾಲಿಸ್ ಆಗಿರುತ್ತದೆ ಎಂದು ಹೇಳಿದ್ದು ತಾವುಗಳು ಮನೆಯೊಳಗೆ ಹೋಗುವಷ್ಟರಲ್ಲಿ ತಾವು ತಂದಿದ್ದ ಬೈಕಿನಲ್ಲಿ ಇಬ್ಬರು ಹೊರಟು ಹೋಗಿದ್ದು ಕುಕ್ಕರ್ ಒಳಗಡೆ ನೋಡಲಾಗಿ ಖಾಲಿ ಇದ್ದು, ತಮಗೆ ನಂಬಿಸಿ ಮೋಸ ಮಾಡಿ ಮೇಲ್ಕಂಡ ಚಿನ್ನದ ಆಭರಣಗಳನ್ನು ತೆಗೆದುಕೊಂಡು ಹೋಗಿರುತ್ತಾರೆ, ಮೇಲ್ಕಂಡ ಚಿನ್ನದ ಬೆಲೆ ಸುಮಾರು 2 ಲಕ್ಷ ರೂಗಳಾಗಿದ್ದು ಆರೋಪಿಗಳ ವಿರುದ್ದ ಕಾನೂನು ರೀತ್ಯ ಕ್ರಮ ಜರುಗಿಸುವಂತೆೆ ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣಗಳು :
1. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 233/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.
ದಿನಾಂಕ: 28-05-2013 ರಂದು ಪಿರ್ಯಾದಿ ಟಿ.ಹನುಮಂತ ಬಿನ್ ಲೇಟ್ ತಿಮ್ಮಯ್ಯ, 52 ವರ್ಷ, ಒಕ್ಕಲಿಗರು, ವಾಸ ಕೇರಾಫ್. ನಂದಿನಿಕುಮಾರ್ ನಿಲಯ, 2ನೇ ಕ್ರಾಸ್, ವಿ.ವಿ.ನಗರ, ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 19-05-2013 ರಂದು ಪಿರ್ಯಾದಿಯವರ ಮನೆ, 2ನೇ ಕ್ರಾಸ್, ವಿ.ವಿ.ನಗರ, ಮಂಡ್ಯ ಸಿಟಿಯಿಂದ ಅವರ ಮಗಳು ಕೆ.ಹೆಚ್.ವರಲಕ್ಷ್ಮಿ @ ಬೇಬಿ ಎಂಬುವವಳು ಮನೆ ಪಾಠಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಇದುವರೆವಿಗೂ ತಮ್ಮ ಸಂಬಂಧಿಕರ ಮತ್ತು ಸ್ನೇಹಿತರ ಮನೆಗಳಲ್ಲಿ ವಿಚಾರಿಸಲಾಗಿ ಪತ್ತೆ ಆಗಿರುವುದಿಲ್ಲ ಅವಳನ್ನು ಪತ್ತೆಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 235/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.
ದಿನಾಂಕ: 28-05-2013 ರಂದು ಪಿರ್ಯಾದಿ ಸರಸ್ವತಿ ಕೋಂ. ಹೆಚ್.ಎಂ.ರಾಜು, ಬಿಳಿಗೇಗೌಡ ರವರ ಮನೆ, 3ನೇ ಕ್ರಾಸ್, ಹಾಲಹಳ್ಳಿ , ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 27-05-2013 ರಂದು ರಾತ್ರಿ 09-00 ಗಂಟೆಯಲ್ಲಿ ಮಂಡ್ಯ ಸಿಟಿ, ಹಾಲಹಳ್ಳಿ, 3 ನೇ ಕ್ರಾಸ್ ನ, ಪಿರ್ಯಾದಿಯವರು ವಾಸವಿರುವ ಮನೆಯಿಂದ ದೀಪಿಕಾ ಬಿನ್. ಹೆಚ್.ಎಂ.ರಾಜು, 19 ವರ್ಷ, ವಕ್ಕಲಿಗರು, ಬಟ್ಟೆ ಅಂಗಡಿಯಲ್ಲಿ ಕೆಲಸ, ವಾಸ, 3 ನೇ ಕ್ರಾಸ್, ಹಾಲಹಳ್ಳಿ, ಮಂಡ್ಯ ಸಿಟಿ ರವರು ಅಂಗಡಿಯಿಂದ ಶಾಂಪೂ ತರಲು ಮನೆಯಿಂದ ಹೋದವಳು ನಂತರ ಮನೆಗೆ ವಾಪಸ್ಸು ಬರಲಿಲ್ಲಾ ನಾವು ಅಲ್ಲಿ ಇಲ್ಲಿ ಹುಡುಕಾಡಲಾಗಿ ಪತ್ತೆಯಾಗಿರುವುದಿಲ್ಲಾ ಕಾಣೆಯಾಗಿರುತ್ತಾಳೆ ಇವಳನ್ನು ಪತ್ತೆ ಮಾಡಿಕೊಡಬೇಕೆಂದು ದೂರು ನೀಡಿರುತ್ತಾರೆ ಹಾಗು ನನಗೆ ಚೇತನ ಎಂಬ ಹುಡುಗನ ಮೇಲೆ ಅನುಮಾನವಿರುತ್ತದೆ ಎಂಬ ಪಿರ್ಯಾದಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಯು.ಡಿ.ಆರ್. ಪ್ರಕರಣಗಳು :
1. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 16/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 28-05-2013 ರಂದು ಪಿರ್ಯಾದಿ ಪ್ರದೀಪ ರಾವ್ ಶಿಂಧೆ ಬಿನ್. ದೇವರಾವ್ ಸಿಂಧೆ, ಬೂಕನಕೆರೆ ಗ್ರಾಮ ರವರು ನೀಡಿದ ದೂರು ಏನೆಂದರೆ ಶಿಂಧೆ ಬಿನ್. ಧರ್ಮರಾವ್ ಶಿಂಧೆ, 18 ವರ್ಷ ರವರಿಗೆ ಸುಮಾರು 10-12 ವರ್ಷಗಳಿಂದ ಹೊಟ್ಟನೋವು ಬರುತ್ತಿದ್ದು ಅಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು ದಿನಾಂಕ: 28-05-2013 ರಂದು ಬೆಳಗ್ಗೆ 06-00 ಗಂಟೆಯಲ್ಲಿ ಹೊಟ್ಟೆನೋವು ಜಾಸ್ತಿಯಾಗಿ ನೋವಿನ ಬಾಧೆಯನ್ನು ತಾಳಲಾರದೇ ತೋಟದ ಗಿಡಕ್ಕೆ ಹೊಡೆಯಲು ತಂದು ಇಟ್ಟಿದ್ದ ಯಾವುದೋ ಕ್ರಿಮಿನಾಶಕ ಔಷದಿಯನ್ನು ಹೊಟ್ಟೆನೋವಿನ ಔಷಧಿ ಎಂದು ತಿಳಿದು ಆಕಸ್ಮಿಕವಾಗಿ ಕುಡಿದು ಒದ್ದಾಡುತ್ತಿದ್ದಾಗ ಆಂಬುಲೆನ್ಸ್ನಲ್ಲಿ ಕೆ.ಆರ್.ಪೇಟೆ ಆಸ್ಪತ್ರೆಗೆ ತರುವಾಗ ನಮ್ಮ ತಂದೆ ದೇವರಾವ್ಸಿಂಧೆ ರವರು ಮೃತಪಟ್ಟಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2.ಹಲಗೂರು ಪೊಲೀಸ್ ಠಾಣೆ ಯು.ಡಿ.ಆರ್. ನಂ. 15/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 28-05-2013 ರಂದು ಪಿರ್ಯಾದಿ ಗಿರೀಶ್ನಾಯಕ ಬಿನ್. ಲೇಟ್. ಮಾದುನಾಯಕ, 30ವರ್ಷ, ಕೂಲಿ ಕೆಲಸ, ಸೋಲಿಗರದೊಡ್ಡಿ, ಹಲಗೂರು ಹೋಬಳಿ, ಮಳವಳ್ಳಿ ತಾಲ್ಲೂಕು ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರ ಮಾವ ವೆಂಕಟನಾಯಕ ಬಿನ್. ಲೇಟ್. ಕೃಷ್ಣನಾಯಕ್, ಅರಣ್ಯ ಇಲಾಖೆಯಲ್ಲಿ ಗುತ್ತಿಗೆ ನೌಕರ, ಸೋಲಿಗರ ದೊಡ್ಡಿ ಗ್ರಾಮರವರಿಗೆ ಹಿಂದಿನಿಂದಲೂ ಆಗಾಗ್ಗೆ ಹೊಟ್ಟೆ ನೋವು ಬರುತಿದ್ದು ಈ ಬಗ್ಗೆ ಚಿಕಿತ್ಸೆ ಪಡೆಯುತ್ತಿದ್ದರೂ ಹೊಟೆನೋವು ವಾಸಿಯಾಗದೆ ಇದ್ದು ದಿನಾಂಕ: 22-05-2013 ರಂದು ಬೆಳಿಗ್ಗೆ 11-30 ಗಂಟೆ ಸಮಯದಲ್ಲಿ ಮನೆಯಲ್ಲಿದ್ದ ಕ್ರಿಮಿನಾಶಕವನ್ನು ಔಷದಿ ಎಂದು ತಿಳಿದು ಆಕಸ್ಮಿಕವಾಗಿ ಕುಡಿದಿದ್ದು, ಪಿರ್ಯಾದಿಯವರು ವೆಂಕಟನಾಯಕರವರನ್ನು ದಿನಾಂಕ 22-05-2013 ರಂದು ಹಲಗೂರು ಆಸ್ಪತ್ರೆಗೆ ತೋರಿಸಿ, ನಂತರ ಮಳವಳ್ಳಿ ಆಸ್ಪತ್ರೆಗೆ ತೋರಿಸಿ, ನಂತರ ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲುಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 27-05-2013 ರ ರಾತ್ರಿ 09-30 ಗಂಟೆ ಸಮಯದಲ್ಲಿ ಮೃತಪಟ್ಟಿದ್ದು ಮುಂದಿನ ಕ್ರಮ ಜರುಗಿಸಿ ಎಂದು ಕೊಟ್ಟ ಲಿಖಿತ ದೂರನ್ನು ಪಡೆದು ಕೇಸು ನೊಂದಾಯಿಸಿರುತ್ತೆ.
ವಾಹನ ಕಳವು/ಮರಳು ಕಳವು/ಸಾಮಾನ್ಯ ಕಳವು ಪ್ರಕರಣಗಳು :
1.ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 236/13 ಕಲಂ. 379 ಐ.ಪಿ.ಸಿ.
ದಿನಾಂಕ: 28-05-2013 ರಂದು ಪಿರ್ಯಾದಿ ಹೆಚ್.ಸಿ ಅಭಿಷೇಕ್ ಬಿನ್. ಚಿಕ್ಕೇಗೌಡ, 5ನೇ ಕ್ರಾಸ್, ಹಾಲಹಳ್ಳಿ ಸ್ಕೂಲ್ ರಸ್ತೆ, ಮಂಡ್ಯಸಿಟಿ ರವರು ನೀಡಿದ ದೂರು ಏನೆಂದರೆ ದಿನಾಂಕ 23-05-2013 ರ ರಾತ್ರಿ 09-00 ರಿಂದ 09-30 ಗಂಟೆಯಲ್ಲಿ, ಮಂಡ್ಯ ಸಿಟಿ ಎಸ್.ಎಫ್. ಸರ್ಕಲ್ ಹತ್ತಿರವಿರುವ ವಿಜಯಾನಂದ ಮಿಲ್ಟ್ರಿ ಹೋಟೆಲ್ ಮುಂದೆ ಅವರ ಬೈಕ್. ನಂ. ಕೆ.ಎ.11 ಎಸ್.7665 ರ ಹೀರೊಹೋಂಡಾ ಸ್ಪ್ಲೆಂಡರ್ ಮೋಟಾರ್ ಸೈಕಲನ್ನು ನಿಲ್ಲಿಸಿ ಬೀಗ ಹಾಕಿ ಹೋಟೆಲ್ ಗೆ ಊಟಕ್ಕೆ ಹೋದೆನು. ಅದೇ ರಾತ್ರಿ ವಾಪಸ್ಸು 09-30 ಗಂಟೆಗೆ ಊಟ ಮುಗಿಸಿ ನನ್ನ ಬೈಕ್ ನಿಲ್ಲಿಸಿದ ಸ್ಥಳಕ್ಕೆ ನೋಡಲು ನನ್ನ ಬೈಕ್ ಇರಲಿಲ್ಲ, ನಾನು ಯಾರೋ ಮಿಸ್ಸಾಗಿ ತೆಗೆದುಕೊಂಡು ಹೋಗಿರಬಹುದೆಂದು ಇದುವರೆಗೂ ಕಾದು ಎಲ್ಲಾ ಕಡೆಗಳಲ್ಲಿ ಹುಡುಕಿ ನೋಡದೆನು. ಸಿಕ್ಕಿರುವುದಿಲ್ಲ. ಆದ್ದರಿಂದ ಯಾರೋ ಕಳ್ಳರು ನನ್ನ ಬೈಕನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಕೇಸು ದಾಖಲಿಸಲಾಗಿದೆ.
2. ಹಲಗೂರು ಪೊಲೀಸ್ ಠಾಣೆ ಮೊ.ನಂ. 113/13 ಕಲಂ. 188-379 ಐ.ಪಿ.ಸಿ.
ದಿನಾಂಕ: 28-05-2013 ರಂದು ಪಿರ್ಯಾದಿ .ಸಿ.ಶ್ರೀಕಂಠಸ್ವಾಮಿ ಗ್ರಾಮ ಲೆಕ್ಕಿಗರು. ತಾಃ ಕಛೇರಿ. ಮಳವಳ್ಳಿ ತಾಃ ರವರು ನೀಡಿದ ಪಿರ್ಯಾದು ಏನೆಂದರೆ ದಿನಾಂಕ: 28-05-2013 ರಂದು ರಾತ್ರಿ 09-25 ಗಂಟೆ ಸಮಯದಲ್ಲಿ ಕನಕಪುರ-ಮಳವಳ್ಳಿ ಮುಖ್ಯ ರಸ್ತೆಯಲ್ಲಿ ಪಿರ್ಯಾದಿಯವರು ತಮ್ಮ ಸಿಬ್ಬಂದಿಯವರ ಜೊತೆ ಅಕ್ರಮ ಮರಳು ಸಾಗಾಣಿಕೆ ತಡೆಗಟ್ಟುವ ಬಗ್ಗೆ ಪುರದದೊಡ್ಡಿ ಗೇಟ್ ಚೆಕ್ಪೋಸ್ಟ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ನಂ. ಕೆಎ-10-7789 ಲಾರಿಯ ಚಾಲಕ ಮತ್ತು ಮಾಲೀಕ ಇವರುಗಳು ನಂ. ಕೆಎ-18.-ಎ-1921 & ಕೆಎ-17-ಎ-7555 ಕ್ಯಾಂಟರ್ ವಾಹನದ ಚಾಲಕರು ಮತ್ತು ಮಾಲೀಕರುಗಳು, ಹೆಸರು ವಿಳಾಸ ತಿಳಿಯಬೇಕಾಗಿದೆ ಇವರುಗಳು ಅಕ್ರಮವಾಗಿ ಕಳ್ಳತನದಿಂದ ಯಾವುದೇ ಪರವಾನಗೆಯನ್ನು ಹೊಂದದೆ ಮರಳನ್ನು ಕದ್ದು ಸಾಗಿಸುತ್ತಿದ್ದವರನ್ನು ಹಿಡಿದು ವಿಚಾರ ಮಾಡಲಾಗಿ ಯಾವುದೇ ಪರವಾನಿಗೆ ಇರುವುದಿಲ್ಲ ಎಂದು ತಿಳಿಸಿ ವಾಹನದ ಚಾಲಕರುಗಳು ವಾಹನವನ್ನು ಸ್ಥಳದಲ್ಲೇ ಬಿಟ್ಟು ಓಡಿಹೋಗಿರುತ್ತಾರೆ ಸದರಿ ವಾಹನದ ಚಾಲಕರು ಮತ್ತು ಮಾಲೀಕರ ವಿರುದ್ದ ಕಾನೂನು ಕ್ರಮ ಜರುಗಿಸಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
3. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 343/13 ಕಲಂ. 379 ಐ.ಪಿ.ಸಿ.
ದಿನಾಂಕ: 28-05-2013 ರಂದು ಪಿರ್ಯಾದಿ ಕುಮಾರ ಬಿನ್. ತಿಮ್ಮೇಗೌಡ, 26 ವರ್ಷ, ಒಕ್ಕಲಿಗರು, ವ್ಯವಸಾಯ, ಗೌಡಹಳ್ಳಿ ಗ್ರಾಮ, ಶ್ರೀರಂಗಪಟ್ಟಣ ತಾಲ್ಲೋಕು ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 28-05-2013 ರಂದು ಬೆಳಿಗ್ಗೆ 10-00 ಗಂಟೆಯಲ್ಲಿ, ಶ್ರೀರಂಗಪಟ್ಟಣ ತಾಲ್ಲೋಕು, ಶ್ರೀರಾಂಪುರ ಗ್ರಾಮದ ಚೌಡೇಶ್ವರಿ ಜಲ್ಲಿ ಕ್ರಷರ್ ಬಳಿ ಪಿರ್ಯಾದಿಯವರು ಮತ್ತು ಅವರ ಸ್ನೇಹಿತಿ ಭರತೇಶ ರವರು ಶ್ರೀರಾಂಪುರ ಬಳಿ ಇರುವ ಚೌಡೇಶ್ವರಿ ಜಲ್ಲಿ ಕ್ರಷರ್ ಬಳಿ ನನ್ನ ಬಾಬ್ತು ಮೋಟರ್ ಸೈಕಲ್ನಲ್ಲಿ ಹೋಗುತ್ತಿದ್ದಾಗ ಆರೋಪಿ ಪ್ರಸನ್ನ ಬಿನ್ ಪುಟ್ಟಯ್ಯ, 36 ವರ್ಷ, ಇತರೆ 3 ಜನರು ಗಣಂಗೂರು ಗ್ರಾಮ, ಎಲ್ಲರೂ ಶ್ರೀರಂಗಪಟ್ಟಣ ತಾಲ್ಲೋಕು ರವರುಗಳು ಚೌಢೇಶ್ವರಿ ಜಲ್ಲಿ ಕ್ರಷರ್ ನಿಂದ ಕೆ.ಎ-11-8250 ಟಾಟಾ-ಏಸ್ ಆಪೇ ಆಟೋದಲ್ಲಿ ಸುಮಾರು 16,000/- ರೂ. ಬೆಲೆ ಬಾಳುವ ಕಬ್ಬಿಣದ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದು ಆಟೋದಿಂದ ಮನು, ಪ್ರಸನ್ನ ಮತ್ತು ಚಂದ್ರು ರವರುಗಳು ಓಡಿ ಹೋಗಿದ್ದು ಪುಟ್ಟಯ್ಯನ ಪ್ರಸನ್ನ ರವರನ್ನು ಹಿಡಿದು ಕೊಂಡು ಬಂದು ಈ ಆರೋಪಿಗಳ ಮೇಲೆ ಕಾನೂನು ರೀತಿ ಕ್ರಮ ತೆಗೆದುಕೊಳ್ಳುವಂತೆ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment