Moving text

Mandya District Police

DAILY CRIME REPORT DATED : 02-06-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 02-06-2013 ರಂದು ಒಟ್ಟು 21 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ರಸ್ತೆ ಅಪಘಾತ ಪ್ರಕರಣ,  1 ವಂಚನೆ ಪ್ರಕರಣ,  1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ, 2 ವಾಹನ ಕಳವು ಪ್ರಕರಣಗಳು ಹಾಗು 16 ಇತರೆ ಐ.ಪಿ.ಸಿ./ಸಿ.ಆರ್.ಪಿ.ಸಿ./ಕೆ.ಪಿ.ಆಕ್ಟ್./ಅಬಕಾರಿ ಕಾಯಿದೆ ಪ್ರಕರಣಗಳು ವರದಿಯಾಗಿರುತ್ತವೆ. 

ರಸ್ತೆ ಅಪಘಾತ ಪ್ರಕರಣ :

ಬಿಂಡಿಗನವಿಲೆ ಪೊಲೀಸ್ ಠಾಣೆ ಮೊ.ನಂ. 81/13 ಕಲಂ: 279, 304(ಎ) ಐಪಿಸಿ ಕೂಡ 187 ಐಎಂವಿ ಆಕ್ಟ್.

ದಿನಾಂಕ: 02-06-2013 ರಂದು ಪಿರ್ಯಾದಿ ಚಂದ್ರ ಬಿನ್. ಚಿಕ್ಕತಗಡಯ್ಯ, ಮನೆ ನಂ:1046, ಪವನಧಾಮ, ಬೀರೇಶ್ವರ ನಗರ, ಚುಂಚನ ಘಟ್ಟ ಮೇನ್ರೋಡ್, ಬೆಂಗಳೂರು ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ರಸ್ತೆಯಲ್ಲಿ ಎದುರಿಗೆ ನೋ ಎಂಟ್ರಿಯಲ್ಲಿ ನಂ.ಟಿ.ಎನ್-70-ಜೆ-4550 ರ ಲಾರಿ ಚಾಲಕ ಲಾರಿಯನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ಮುಂಭಾಗ ಹೋಗುತ್ತಿದ್ದ ಮೋಟಾರ್ ಬೈಕಿಗೆ ಡಿಕ್ಕಿ ಮಾಡಿ ಅಪಘಾತ ಉಂಟುಮಾಡಿದ. ಈ ಅಪಘಾತದಿಂದ ಮೋಟಾರ್ ಬೈಕಿನಲ್ಲಿದ್ದ ಬೈಕ್ ಸವಾರರಿಬ್ಬರಿಗೂ ತೀವ್ರ ಸ್ವರೂಪದ ಪೆಟ್ಟುಗಳಾಗಿ ಮೋಟಾರ್ ಬೈಕಿಗೆ ಬೆಂಕಿ ಹತ್ತಿಕೊಂಡಿತು ಇದರಿಂದ ಶೇಖರ್ರವರ ದೇಹ ಸುಟ್ಟು ಕರಕಲಾಗಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟರು. ಈ ಅಪಘಾತ ಮಾಡಿದ ಮೇಲ್ಕಂಡ ಲಾರಿ ಚಾಲಕನ ಮೇಲೆ ಕಾನೂನಿನ ರೀತ್ಯಾ ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

ವಂಚನೆ ಪ್ರಕರಣ :

ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 174/13 ಕಲಂ. 120(ಬಿ), 255-256-257-258-259-260-463-464-465-466-467-420-468-469-471-472-473-474-475 ಐ.ಪಿ.ಸಿ.

ದಿನಾಂಕ: 02-06-2013 ರಂದು ಪಿರ್ಯಾದಿ ನಂದೀಶ ಬಿನ್. ಲೇಟ್. ಮರಿಸ್ವಾಮಿ, ಹೊನ್ನಾಯಕನಹಳ್ಳಿ ಗ್ರಾಮ, ಸಿ.ಎ.ಕೆರೆ ಹೋ. ಮದ್ದೂರು ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಹೆಚ್.ಪಿ.ರಮೇಶ್ ಬಿನ್ ಲೇಟ್. ಪುಟ್ಟಣ್ಣ, ಹೊನ್ನಾಯಕನಹಳ್ಳಿ ಗ್ರಾಮ, ಸಿ.ಎ.ಕೆರೆ ಹೋ. ಮದ್ದೂರು ತಾಲ್ಲೂಕು ರವರು ಪಿಯರ್ಾದಿಯವರಿಗೆ ಸೇರಿದ ಆಸ್ತಿ ಖಾತೆ ನಂ.292/ 352/2ನ್ನು ಪಿರ್ಯಾದಿ  ತಂದೆ ತಾಯಿ ಹಾಗೂ ತಂಗಿ, ತಮ್ಮ ರವರ ಸಹಿಯನ್ನು ಪೋರ್ಜರಿ ಮಾಡಿ, ಖಾತೆ ಮಾಡಿಸಿಕೊಂಡಿರುತ್ತಾರೆಂದು ಪಿರ್ಯಾದಿ  ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

ಮದ್ದೂರು ಪೊಲೀಸ್ ಠಾಣೆ ಮೊ.ನಂ. 257/13 ಕಲಂ. 498(ಎ), 504 ಐ.ಪಿ.ಸಿ. ಕೂಡ 3 & 4 ಡಿ.ಪಿ. ಕಾಯ್ದೆ.

ದಿನಾಂಕ: 02-06-2013 ರಂದು ಪಿರ್ಯಾದಿ ಮಂಜುಳಾ, 18ವರ್ಷ, ರುದ್ರಾಕ್ಷಿಪುರ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಅವರ ಗಂಡ ರಾಮಣ್ಣ, 25ವರ್ಷ, ರುದ್ರಾಕ್ಷಿಪುರ ಗ್ರಾಮ ಎಂಬುವವರು ನನ್ನ ಶೀಲದ ಬಗ್ಗೆ ಗಲಾಟೆ ಮಾಡಿ ಹಾಗೂ ವರದಕ್ಷಿಣೆ ಬಾಕಿ ಹಣದ 5,000/- ಬಗ್ಗೆ ಗಲಾಟೆ ಮಾಡಿದ್ದರಿಂದ ನನ್ನ ಮನಸ್ಸಿಗೆ ತುಂಬಾ ಬೇಜಾರಾಗಿ ನಾನು ಯಾಕೆ ಬದುಕಿರಬೇಕು ಅಂತಾ ಸೀಮೆ ಎಣ್ಣೆಯನ್ನು ಮೈ ಮೇಲೆ ಶನಿವಾರದಂದು ಸಂಜೆಯಲ್ಲಿ ನಾನು ನನ್ನ ಮೇಲೆ ಸೀಮೆಎಣ್ಣೆಯನ್ನು ಸುರಿದುಕೊಂಡು ಬೆಂಕಿ ಹಚ್ಚಿಕೊಂಡೆನು. ಇದಕ್ಕೆಲ್ಲಾ ನನ್ನ ಗಂಡನೇ ಕಾರಣನಾಗಿರುತ್ತಾನೆ ಅವರ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ವಾಹನ ಕಳವು ಪ್ರಕರಣಗಳು :

1. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 238/13 ಕಲಂ. 379 ಐ.ಪಿ.ಸಿ.

       ದಿನಾಂಕ: 02-06-2013 ರಂದು ಪಿರ್ಯಾದಿ ಎಸ್.ಶಿವಸ್ವಾಮಿ ಬಿನ್. ಲೇಟ್. ಜಿ.ಸಿದ್ದಯ್ಯ, 28 ವರ್ಷ, ಬೆಳಕವಾಡಿ ಗ್ರಾಮ, ಮಳವಳ್ಳಿ ತಾಲ್ಲೂಕು ರವರು ನೀಡಿದ ದೂರು ಏನೆಂದರೆ ಫಿರ್ಯಾದಿಯವರು ತಮ್ಮ ಬಾಬ್ತು ಕೆಎ-05 ಇಎಸ್ 845 ನಂಬರಿನ ಹೀರೊಹೊಂಡ ಸ್ಪ್ಲೆಂಡರ್ ಮೋಟಾರ್ ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಇದರ ಬೆಲೆ ಸುಮಾರು 25,000/- ರೂ. ಗಳಾಗಿರುತ್ತೆ ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 357/13 ಕಲಂ. 379 ಐ.ಪಿ.ಸಿ.

      ದಿನಾಂಕ: 02-06-2013 ರಂದು ಪಿರ್ಯಾದಿ ಲಿಂಗರಾಜು ಬಿನ್. ಲೇಟ್. ಲಿಂಗೇಗೌಡ, ವಯಸ್ಸು 52 ವರ್ಷ, ಒಕ್ಕಲಿಗರು, ವಕೀಲರು, ಮುಂಡಗದೊರೆ ಗ್ರಾಮ, ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 24-05-13  ರಂದು ಮಧ್ಯಾಹ್ನ 03-30 ರಲ್ಲಿ ಕಾರ್ಮಿಕ ಉಪ ನಿರೀಕ್ಷಕರ ಕಚೇರಿಯ ಎದುರು, ಹಳೇ ಎಸ್.ಬಿ.ಎಂ ರಸ್ತೆ, ಶ್ರೀರಂಗಪಟ್ಟಣ ಟೌನ್.ಕೆ.ಎ-11-ಹೆಚ್-5872-ಬಜಾಜ್-4-ಎಸ್ ಚಾಂಪಿಯನ್ ನಲ್ಲಿ  ಹೋಗಿ ನನ್ನ ಮೋಟರ್ ಸೈಕಲ್ ಅನ್ನು, ನಿಲ್ಲಿಸಿ ಒಳಗೆ ಹೋಗಿ ತಮ್ಮ ಕೆಲಸ ಮುಗಿಸಿಕೊಂಡು ವಾಪಸ್ ಬಂದು ನೋಡಲಾಗಿ  ಮೋಟಾರ್  ಸೈಕಲ್ ಇರಲಿಲ್ಲ ಇದರ ಬೆಲೆ ಸುಮಾರು 7000/-  ರೂ. ಗಳಾಗಿರುತ್ತೆ ಇದನ್ನು ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

No comments:

Post a Comment