ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 03-06-2013 ರಂದು ಒಟ್ಟು 23 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಮಹಿಳಾ ದೌರ್ಜನ್ಯ/ದಕ್ಷಿಣೆ ಕಿರುಕುಳ ಪ್ರಕರಣ, 2 ಕಳ್ಳತನ ಪ್ರಕರಣಗಳು, 1 ಎನ್,ಡಿ,ಪಿ,ಎಸ್ ಕಾಯ್ದೆ ಪ್ರಕರಣ, 2 ವಾಹನ ಕಳವು ಪ್ರಕರಣಗಳು, 2 ಮನುಷ್ಯ ಕಾಣೆಯಾದ ಪ್ರಕರಣಗಳು, 1 ರಾಬರಿ ಪ್ರಕರಣ ಹಾಗು 14 ಇತರೆ ಐ.ಪಿ.ಸಿ./ಸಿ.ಆರ್.ಪಿ.ಸಿ./ಕೆ.ಪಿ.ಆಕ್ಟ್./ಅಬಕಾರಿ ಕಾಯಿದೆ ಪ್ರಕರಣಗಳು ವರದಿಯಾಗಿರುತ್ತವೆ.
ಮಹಿಳಾ ದೌರ್ಜನ್ಯ/ದಕ್ಷಿಣೆ ಕಿರುಕುಳ ಪ್ರಕರಣ :
ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 104/13 ಕಲಂ. 143-498(ಎ)-506 ಕೂಡ 149 ಐ.ಪಿ.ಸಿ ಮತ್ತು 3 & 4 ಡಿ.ಪಿ ಆಕ್ಟ್.
ದಿನಾಂಕ: 03-06-2013 ರಂದು ಪಿರ್ಯಾದಿ ರೂಪಿಣಿ ಕೋಂ. ಬಿ.ಕೆ. ಶಿವಕುಮಾರ, 20 ವರ್ಷ, ವಿಶ್ವಕರ್ಮ ಜನಾಂಗ, ಗೃಹಿಣಿ, ಬೇವುಕಲ್ಲು ಗ್ರಾಮ, ದುದ್ದ ಹೋ. ರವರು ನೀಡಿದ ದೂರಿನ ವಿವರವೇನೆಂದರೆ ಬಿ.ಕೆ. ಶಿವಕುಮಾರ ರವರೊಂದಿಗೆ ಹಿರಿಯರ ಸಮ್ಮುಖದಲ್ಲಿ ಸಾಂಪ್ರದಾಯಿಕವಾಗಿ ಮದುವೆಯಾಯಿತು. ಅವರು ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ಕಿರುಕುಳಕೊಡುತ್ತಿದ್ದು ನೀನು ನಿಮ್ಮ ತಂದೆ-ತಾಯಿಯಿಂದ 50.000/- ರೂ ನಗದು ಹಣ, ಒಂದು ಮೋಟಾರು ಸೈಕಲ್ಲನ್ನು ಹೆಚ್ಚಿನ ವರದಕ್ಷಿಣೆಯಾಗಿ ತೆಗೆದುಕೊಂಡು ಬಾ ಎಂದು ಹಿಂಸೆ ಕಿರುಕುಳ ಕೊಡುತ್ತಿದ್ದರು ಹಾಗೂ ಮನೆಗೆ ಬಂದರೆ ಕೊಲೆ ಮಾಡುತ್ತೇವೆಂದು ನನಗೆ ಪ್ರಾಣ ಬೆದರಿಕೆ ಹಾಕಿ ಕಳುಹಿಸಿರುತ್ತಾರೆ ಅವರ ಮೇಲೆ ಸೂಕ್ತ ಕ್ರಮ ಜರುಗಿಸಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಕಳ್ಳತನ ಪ್ರಕರಣಗಳು :
1. ಕೆರೆಗೋಡು ಪೊಲೀಸ್ ಠಾಣೆ ಮೊ.ನಂ. 79/13 ಕಲಂ. 457-380 ಐ.ಪಿ.ಸಿ.
ದಿನಾಂಕ: 03-06-2013 ರಂದು ಪಿರ್ಯಾದಿ ಸಿದ್ದಬಸಪ್ಪಾಜಿ ಬಿನ್. ಶಿವಣ್ಣ, ತಂಗಳಗೆರೆಗ್ರಾಮ, ಬಸರಾಳು ಹೋ. ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕಃ 02-06-2013 ರಂದು ರಾತ್ರಿ ವೇಳೆ, ಮಂಡ್ಯ ತಾ. ತಂಗಳಗೆರೆ ಗ್ರಾಮದ ದೇವಸ್ಥಾನದ ಬಾಗಿಲು ಬೀಗ ಹೊಡೆದು ಒಳಗೆ ಹೋಗಿ ಒಳಗಡೆ ಇಟ್ಟಿದ್ದ ಬೆಳ್ಳಿಯ ದೇವರ ಮೇಲಿನ ಸಾಮಾನು ಹಾಗೂ ಗೋಲಕವನ್ನು ಹೊಡೆದು ಹಣವನ್ನು ಕಳವು ಮಾಡಿಕೊಂಡು ಹೋಗಿದ್ದು, ಅಂದಾಜು ಬೆಲೆ 18,000/- ರೂ ಆಗಿರುತ್ತೆ ಪತ್ತೆ ಮಾಡಿಕೊಡಿ ಎಂದು ಇತ್ಯಾದಿ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2.ಹಲಗೂರು ಪೊಲೀಸ್ ಠಾಣೆ ಮೊ.ನಂ. 118/13 ಕಲಂ. 457, 380 ಐ.ಪಿ.ಸಿ.
ದಿನಾಂಕ: 03-06-2013 ರಂದು ಪಿರ್ಯಾದಿ ಚಲುವರಾಜು ಬಿನ್.ಲೇಟ್ಃ ದೊಡ್ಡಮೊಳ್ಳೇಗೌಡ, ಮಾರಗೌಡನಹಳ್ಳಿ ಗ್ರಾಮ ರವರು ನೀಡಿದ ಪಿರ್ಯಾದು ಏನೆಂದರೆ ದಿನಾಂಕ: 31-05-2013 ರಂದು ಮಧ್ಯರಾತ್ರಿ ಯಾರೋ ಕಳ್ಳರು ಮಾರಗೌಡನಹಳ್ಳಿ ಗ್ರಾಮದ ಎಂ.ಸಿ. ಚಲುವರಾಜು ಬಿನ್. ಚಿಕ್ಕಮೊಳ್ಳೇಗೌಡ 1] ಎಂ.ಕೆ.ಕೃಷ್ಣಸ್ವಾಮಿ ಬಿನ್. ಕುಳ್ಳೇಗೌಡ, 2]ಪುಟ್ಟಸ್ವಾಮಿ ಬಿನ್. ದೊಡ್ಡಮೊಳ್ಳೇಗೌಡ 3] ಬಸವರಾಜು ಬಿನ್. ಕುಂಟಬಸವೇಗೌಡ ಇವರುಗಳಿಗೆ ಸೇರಿದ ಪಂಪ್ಸೆಟ್ಗಳ ಮನೆಗೆ ನುಗ್ಗಿ ಅವುಗಳನ್ನು ಬಿಚ್ಚಿ ಹಾಗೆಯೇ ಬಿಟ್ಟು ಹೋಗಿರುತ್ತಾರೆ ಈ ಕೃತ್ಯದಿಂದ ನನಗೆ ಸುಮಾರು 3 ಸಾವಿರ, ಚಿಕ್ಕಲಿಂಗೇಗೌಡರವರಿಗೆ 4,500/- ರೂ. ಹಾಗೂ ಚಲುವರಾಜು ರವರಿಗೆ 3000/- ರೂ. ಗಳಷ್ಟು ನಷ್ಟ ಉಂಟಾಗಿರುತ್ತದೆ. ಕಳುವಾಗಿರುವ ವಸ್ತುಗಳನ್ನು ಪತ್ತೆಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಎನ್,ಡಿ,ಪಿ,ಎಸ್ ಕಾಯ್ದೆ ಪ್ರಕರಣ :
ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 144/13 ಕಲಂ. 20 ಕ್ಲಾಸ್ [ಎ] [1] ಎನ್,ಡಿ,ಪಿ,ಎಸ್ ಕಾಯ್ದೆ 1985.
ದಿನಾಂಕ: 03-06-2013 ರಂದು ಪಿರ್ಯಾದಿ ಕೆ,ಆರ್,ಪ್ರಸಾದ್, ಆರಕ್ಷಕ ವೃತ್ತ ನಿರೀಕ್ಷಕರು, ಶ್ರೀರಂಗಪಟ್ಟಣ ವೃತ್ತ ರವರು ನೀಡಿದ ದೂರು ಏನೆಂದರೆ ಆರೋಪಿ ಮದುರೈ ಬಿನ್ ವೇಲಾಯುದನ್ ಹೊಸ ಆನಂದೂರುಗ್ರಾಮ ರವರು ಗಾಂಜಾ ಗಿಡಗಳನ್ನು ಬೆಳೆದಿದ್ದು ಈ ಬಗ್ಗೆ ದೊರೆತ ಮಾಹಿತಿ ಮೇರೆಗೆ ಠಾಣಾ ಪಿ,ಎಸ್,ಐ. ರವರು ಹಾಗೂ ಸಿಬ್ಬಂದಿಗಳನ್ನು ಕರೆದುಕೊಂಡು ಮನೆಯ ಅಕ್ಕಪಕ್ಕ ಬೆಳೆದಿದ್ದ ಗಾಂಜಾ ಗಿಡಗಳನ್ನು ಅಮಾನತ್ತುಪಡಿಸುವ ಸಮಯದಲ್ಲಿ ಗೆಜೆಟೆಡ್ ಅಧಿಕಾರಿಗಳನ್ನು ಹಾಜರಿರುವಂತೆ ಕೋರಿದ್ದು ಅವರ ಸಮಕ್ಷಮ ಮನೆಯ ಮುಂದೆ ಇದ್ದ ವ್ಯಕ್ತಿಯನ್ನು ವಿಚಾರ ಮಾಡಲಾಗಿ ಆತನು ತನ್ನ ಮನೆಯ ಮುಂದೆ ಬೆಳೆದಿರುವುದು ಅಕ್ರಮ ಎಂದು ಒಪ್ಪಿಕೊಂಡಿದ್ದು ಬೆಳೆದಿರುವ ಗಾಂಜಾ ಗಿಡಗಳನ್ನು ಪರಿಶೀಲಿಸಲಾಗಿ 3 ಗಿಡಗಳು ಬೆಳೆದಿದ್ದು ಮೂರು ಗಿಡಗಳಿಂದ ಒಟ್ಟು 6 ಕೆ.ಜಿ 625 ಗ್ರಾಂ ತೂಕ ಇರುತ್ತದೆ ಆದ್ದರಿಂದ ಆರೋಪಿತನ ಮೇಲೆ ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ವರದಿಯನ್ನು ಸ್ವೀಕರಿಸಿಕೊಂಡು ಠಾಣಾ ಮೊ.ನಂ 144/13 ಕಲಂ: 20 ಕ್ಲಾಸ್ [ಎ] [1] ಎನ್,ಡಿ,ಪಿ,ಎಸ್ ಕಾಯ್ದೆ 1985 ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ವಾಹನ ಕಳವು ಪ್ರಕರಣಗಳು :
1. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 239/13 ಕಲಂ. 379 ಐ.ಪಿ.ಸಿ.
ದಿನಾಂಕ: 03-06-2013 ರಂದು ಪಿರ್ಯಾದಿ ಬಿ.ಕೆ. ಚಂದ್ರಶೇಖರ ಬಿನ್. ಲೇಟ್. ಕಾಳಯ್ಯ, 42 ವರ್ಷ, ಬೇಲೂರು ಗ್ರಾಮ ರವರು ನೀಡಿದ ದೂರು ಏನೆಂದರೆ ದಿನಾಂಕ: 29-05-2013 ರ ಮದ್ಯಾಹ್ನ 03-15 ಗಂಟೆಯಲ್ಲಿ ಸಾಯಂಕಾಲ 06-30 ರ ಸಮಯದಲ್ಲಿ ಅವರ ಹೋಂಡಾ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಬೈಕ್. ನಂ. ಕೆ.ಎ.11-ಎಸ್-9898 ನ್ನು ನಿಲ್ಲಿಸಿದ್ದ ಸ್ಥಳಕ್ಕೆ ಬಂದು ನೋಡಲು ಅವರ ಬೈಕ್ ಅಲ್ಲಿ ಇರಲಿಲ್ಲ. ಯಾರೋ ಮಿಸ್ ಆಗಿ ತೆಗೆದುಕೊಂಡು ಹೋಗಿರಬಹುದೆಂದು ಇದುವರೆಗೆ ಕಾದು ಎಲ್ಲಾ ಕಡೆಗಳಲ್ಲಿ ಹುಡುಕಿ ಸಿಗದ ಕಾರಣ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ತಿಳಿದು ಪತ್ತೆ ಮಾಡಿಕೊಡಲು ಈ ದಿನ ಠಾಣೆಗೆ ಬಂದು ದೂರು ನೀಡಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 239/13 ಕಲಂ. 379 ಐ.ಪಿ.ಸಿ.
ದಿನಾಂಕ: 03-06-2013 ರಂದು ಪಿರ್ಯಾದಿ ಸಿ.ಡಿ.ವೆಂಕಟೇಶ ಬಿನ್. ಹೆಚ್.ದಾಸೇಗೌಡ, 40ವರ್ಷ, 1ನೇ ಕ್ರಾಸ್, ಚಿಕ್ಕೇಗೌಡನದೊಡ್ಡಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಮಧ್ಯಾಹ್ನ 03-00 ಗಂಟೆಗೆ ಬಂದು ನೋಡಲಾಗಿ ಮೋಟಾರ್ ಸೈಕಲ್ ಇರಲಿಲ್ಲ. ಇದುವರೆಗೆ ಎಲ್ಲಾ ಕಡೆ ಹುಡುಕಾಡಿದರು ಸಿಕ್ಕಿರುವುದಿಲ್ಲ. ಸದರಿ ಮೋಟಾರ್ ಸೈಕಲ್ ಅನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಇದರ ಬೆಲೆ ಸುಮಾರು 20,000/- ರೂ. ಗಳಾಗಿರುತ್ತೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣಗಳು :
1. ಮಂಡ್ಯ. ಪೂರ್ವ ಪೊಲೀಸ್ ಠಾಣೆ ಮೊ.ನಂ. 241/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.
ದಿನಾಂಕ: 03-06-2013 ರಂದು ಪಿರ್ಯಾದಿ ಮೀನಾಕ್ಷಿ ಕೋಂ. ಗೂಳಯ್ಯ, ನಮದು ನಿಲಯ, ನಂ 114, ಆಲಹಳ್ಳಿ ಮಂಡ್ಯ ಟೌನ್. ರವರು ನೀಡಿದ ದೂರು ಏನೆಂದರೆ ದಿನಾಂಕ: 19-04-2013 ರಂದು ಬೆಳಿಗ್ಗೆ 06-00 ಗಂಟೆಯಲ್ಲಿ ಮಂಡ್ಯ ಸಿಟಿ, ಹಾಲಳ್ಳಿ ಮನೆ. ನಂ. 114, 6ನೇ ಕ್ರಾಸ್, ನಮದು ನಿಲಯ ಪಿರ್ಯಾಧಿಯವರ ವಾಸದ ಮನೆಯಿಂದ ಅವರ ಗಂಡ ಗೂಳಯ್ಯ ಬಿನ್. ಲೇಟ್. ಹೊಂಬನ್ ಗೂಳಯ್ಯ, 65 ವರ್ಷ, ನಿವೃತ್ತ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಆಲಹಳ್ಳಿ ಗ್ರಾಮ, ಮಂಡ್ಯ ಸಿಟಿ ರವರು 19ನೇ ಏಪ್ರಿಲ್ ಬೆಳಿಗ್ಗೆ ಸುಮಾರು 6 ಗಂಟೆಗೆ ಹೊರಟವರು ಇದುವರೆವಿಗೂ ಮನೆಗೆ ಬರಲಿಲ್ಲ, ದಯವಿಟ್ಟು ನಮ್ಮ ಯಜಮಾನರಾದ ಗೂಳಯ್ಯನವರ ಸುಳಿವಿನ ಬಗ್ಗೆ ಹುಡುಕಿಸಿಕೊಡಬೇಕೆಂದು ನೀಡಿದ ದೂರು ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 161/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.
ದಿನಾಂಕ:03-06-2013ರಂದು ಪಿರ್ಯಾದಿ ಮಹಾಲಿಂಗನಾಯಕ ಬಿನ್. ಲೇಟ್. ಜವರಪ್ಪ, ಮಡುವಿನಕೋಡಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ:27-5-2013 ರಂದು ಮಡುವಿನಕೋಡಿ ಗ್ರಾಮದಿಂದ ರಂಜಿತ ಕೋಂ. ಲೋಕೇಶ, 21 ವರ್ಷ, ನಾಯಕ ಜನಾಂಗ, ಮಡುವಿನಕೋಡಿ ಗ್ರಾಮ, ಕೆ.ಆರ್.ಪೇಟೆ ತಾ. ರವರು ಕೆ.ಆರ್.ಪೇಟೆ ಕಾಲೇಜ್ಗೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು ಇದುವರೆಗೂ ಮನೆಗೆ ಬಂದಿರುವುದಿಲ್ಲ. ರಂಜಿತ ಪೂವನಳ್ಳಿ ಗ್ರಾಮದ ಸವರ್ೆಶ್ ಎಂಬುವವನ ಜೊತೆ ಹೋಗಿರಬಹುದೆಂದು ಅನುಮಾನವಿರುತ್ತೆ. ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ರಾಬರಿ ಪ್ರಕರಣ :
ಮದ್ದೂರು ಪೊಲೀಸ್ ಠಾಣೆ ಮೊ.ನಂ. 258/13 ಕಲಂ. 392 ಐ.ಪಿ.ಸಿ.
ದಿನಾಂಕ:03-06-2013ರಂದು ಪಿರ್ಯಾದಿ ಬಿ.ಎನ್. ಪ್ರವೀಣ್ ಕುಮಾರ್ (36), ಬಿನ್ ಎಂ ನಾಗರಾಜು, # 109, 2ನೇ ಸ್ಟೇಜ್, ಎ ಬ್ಲಾಕ್, 6ನೇ ಮೈನ್, 9ನೇ ಕ್ರಾಸ್, ಆರ್.ಹೆಚ್.ಸಿ.ಹೆಚ್. ಲೇ-ಔಟ್, ಶ್ರೀಗಂಧದ ಕಾವಲ್, ಬೆಂಗಳೂರು-91 ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ:2/6/13 ರಂದು ರಾತ್ರಿ 8-30 ಘಂಟೆಗೆ ಪಿರ್ಯಾದಿಯವರು ತಮ್ಮ ಕುಟುಂಬದವರೊಡನೆ ಬೆಂಗಳೂರಿಗೆ ಹೋಗಲು ಕೆಎ-05/ಎಡಿ-9443 ರ ಕಾರಿನಲ್ಲಿ ನಿಡಘಟ್ಟ ಗ್ರಾಮದಿಂದ ಸ್ವಲ್ಪ ಮುಂದಕ್ಕಾದಂತೆ ಹೋಗುತ್ತಿದ್ದಾಗ ಯಾರೋ ವ್ಯಕ್ತಿಗಳು ಕಾರಿಗೆ ಕಲ್ಲು ಹೊಡೆದಾಗ ಕಾರಿನ ಚಾಲಕ ಕಾರನ್ನು ನಿಲ್ಲಿಸಿ ನೋಡಲಾಗಿ ಕಾರಿನ ಮುಂಬಾಗದ ಹೆಡ್ ಲೈಟ್ ಜಖಂಗೊಂಡಿತ್ತು. ಅದನ್ನು ನೋಡುತ್ತಿರುವಾಗ ಯಾರೋ ಒಬ್ಬ ವ್ಯಕ್ತಿ ಅಲ್ಲಿಗೆ ಬಂದನು ಅಲ್ಲಿಗೆ ಬಂದ 3 ಜನರಲ್ಲಿ ಒಬ್ಬ ವ್ಯಕ್ತಿ ಕಾರಿನ ಕಾರಿನ ಹಿಂಭಾಗದ ಗಾಜನ್ನು ಹೊಡೆದು ರತ್ನಮ್ಮ ಎಂಬುವರ ಕುತ್ತಿಗೆಗೆ ಕೈ ಹಾಕಿ ಒಂದು ಉಮಾಗೋಲ್ಡ್ ಚೈನನ್ನು ಕಿತ್ತುಕೊಂಡು ನಂತರ ಪಿರ್ಯಾದಿಯ ಹೆಂಡತಿಯ ಕತ್ತಿನಲ್ಲಿದ್ದ ಚೈನನ್ನು ಕಿತ್ತುಕೊಂಡಾಗ ಸ್ವಲ್ಪ ಉದ್ದ ಚೈನು ಹಾಗೂ ಲಕ್ಷ್ಮಿ ಡಾಲರ್ ಮಾತ್ರ ಆತನ ಕೈಗೆ ಕಿತ್ತು ಹೋಯ್ತು ಮತ್ತೊಬ್ಬನು ಮದುವೆ ಹೆಣ್ಣಿನ ಕುತ್ತಿಗೆಗೆ ಕೈ ಹಾಕಿ ಚೈನು ಕಿತ್ತುಕೊಳ್ಳಲು ಪ್ರಯತ್ನಿಸಿದರು. ಆದರೆ ಚೈನು ಆತನ ಕೈಗೆ ಬರಲಿಲ್ಲ. ಪಿರ್ಯಾದಿಯನ್ನು ಹೆದರಿಸಿಶರ್ಟ್ ಜೇಬಿನಲ್ಲಿದ್ದ 2 ಮೊಬೈಲ್ಗಳು (ನೋಕಿಯಾ, ರಿಯನ್ಸ್ ಸಿ.ಡಿ.ಎಂ.ಎ.) ಮೊಬೈಲ್ ನಂ. 9379196701 ಮತ್ತು 9379496701 ಹಾಗೂ ನನ್ನ ಪರ್ಸ್ ನಲ್ಲಿದ್ದ 1500/- ರೂಗಳ್ನು ಕಿತ್ತುಕೊಂಡು ಹೋಗಿರುತ್ತಾರೆ. ಅವರು ಸುಮಾರು 30 ರಿಂದ 35 ವರ್ಷದೊಳಗಿನ ವಯೋಮಾನದವರಾಗಿದ್ದು, ಕನ್ನಡ ಭಾಷೆ ಮಾತ್ರ ಮಾತನಾಡುತ್ತಿದ್ದರು ಅವರನ್ನು ಪತ್ತೆಹಚ್ಚಿ ಕಸಿದುಕೊಂಡಿರುವ ಸುಮಾರು 12,000/- ಬೆಲೆಬಾಳುವ ವಸ್ತುಗಳನ್ನು ಜೊತೆಗೆ ಹಣವನ್ನು ಕೊಡಿಸಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment