Moving text

Mandya District Police

DAILY CRIME REPORT DATED : 09-06-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 09-06-2013 ರಂದು ಒಟ್ಟು 18 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಮನುಷ್ಯ ಕಾಣೆಯಾದ ಪ್ರಕರಣ,  2 ಕಳ್ಳತನ ಪ್ರಕರಣಗಳು,  1 ವಂಚನೆ ಪ್ರಕರಣ,  2 ಕಳವು ಪ್ರಕರಣಗಳು, 1 ಕೊಲೆ/ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ ಹಾಗು 11 ಇತರೆ  ಐ.ಪಿ.ಸಿ./ಸಿ.ಆರ್.ಪಿ.ಸಿ./ಕೆ.ಇ.ಆಕ್ಟ್./ಕೆ.ಪಿ.ಆಕ್ಟ್. ಪ್ರಕರಣಗಳು ವರದಿಯಾಗಿರುತ್ತವೆ.  

ಮನುಷ್ಯ ಕಾಣೆಯಾದ ಪ್ರಕರಣ :

ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 126/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 09-06-2013 ರಂದು ಪಿರ್ಯಾದಿ ಸಾಕಮ್ಮ ಕೋಂ|| ಲೇ|| ಪುಟ್ಟಸ್ವಾಮಯ್ಯ, 45 ವರ್ಷ, ಬುರುಡುಗುಂಟೆ ಗ್ರಾಮ, ಹೊಣಕೆರೆ ನಾಗಮಂಗಲ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 07-06-2013 ರಂದು ಬೆಳಿಗ್ಗೆ 11.00 ಗಂಟೆ ಸಮಯದಲ್ಲಿ ಪಿರ್ಯಾದಿಯವರ ಮಗಳು ಪವಿತ್ರ ತನ್ನ ಸ್ನೇಹಿತೆಯ ಊರಾದ ಮಡಿಕೆ ಹೊಸೂರು ಗ್ರಾಮಕ್ಕೆ ಹೋಗಿ ತನ್ನ ಸ್ನೇಹಿತೆಯಾದ ಜ್ಯೋತಿಯನ್ನು ನೋಡಿಕೊಂಡು ಬರುತ್ತೇನೆ ಎಂದು ಹೇಳಿ ಹೋದವರು ಇದುವರೆವಿಗೂ ವಾಪಸ್ಸು ಮನೆಗೆ ಬಂದಿರುವುದಿಲ್ಲ ಎಂದು ದೂರು ದಾಖಲಿಸಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಕಳ್ಳತನ ಪ್ರಕರಣಗಳು :

1. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 132/13 ಕಲಂ. 457-380 ಐ.ಪಿ.ಸಿ.

ದಿನಾಂಕ: 09-06-2013 ರಂದು ಪಿರ್ಯಾದಿ ಕುಶ.ಕೆ. ಬಿನ್. ಕೃಷ್ಣ.ವಿ. ಫೀಲ್ಡ್ ಆಫೀಷರ್, ಇಂಡಸ್ಟವರ್ ಪ್ರೈವೆಡ್ ಲಿಮಿಟೆಡ್. ಇಂದಿರಾ ನಗರ, 2ನೇ ಸ್ಟೇಜ್, ಬೆಂಗಳೂರು ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 08-06-2013 ರಂದು ರಾತ್ರಿ ವೇಳೆಯಲ್ಲಿ, ಮಳವಳ್ಳಿ ತಾಲ್ಲೋಕು, ಕಾಗೇಪುರ ಬಿಲ್ಡಿಂಗ್ ನಲ್ಲಿರುವ ಇಂಡಸ್ ಟವರ್ ಗೇಟ್ ನ ಬೀಗ ಮುರಿದು ಒಳಗಡೆ ಅಳವಡಿಸಿದ್ದ ಬ್ಯಾಟರಿಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಇವುಗಳ ಬೆಲೆ ಸುಮಾರು 8,000/- ರೂ.ಗಳಾಗುತ್ತೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ. ಪ್ರಕರಣ ದಾಖಲಿಸಲಾಗಿದೆ.  


2. ಮದ್ದೂರು ಪೊಲೀಸ್ ಠಾಣೆ ಮೊ.ನಂ. 261/13 ಕಲಂ. 457,380 ಐ.ಪಿ.ಸಿ.

ದಿನಾಂಕ: 09-06-2013 ರಂದು ಪಿರ್ಯಾದಿ ಎಸ್.ಶೇಖರ್ ಬಿನ್. ಶ್ರೀನಿವಾಸ, ಚಿನ್ನನದೊಡ್ಡಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 08-06-2013 ರ ರಾತ್ರಿ ಬೆಂಗಳೂರು-ಮೈಸೂರು ಹೆದ್ದಾರಿ ರಸ್ತೆಯಲ್ಲಿ, ಶ್ರೀಮೊಬೈಲ್ ಅಂಗಡಿ, ಶಿವಪುರ, ಮದ್ದೂರು ತಾ. ರವರ ಅಂಗಡಿಯ ರೋಲಿಂಗ್ ಸೆಟ್ಟರ್ ನ್ನು ಯಾರೊ ಕಳ್ಳರು ಯಾವುದೋ ಆಯುಧದಿಂದ ಮೀಟಿ ಅಂಗಡಿಯಲ್ಲಿದ್ದ ಮೊಬೈಲ್ ಮತ್ತು 30,000/- ನಗದನ್ನು ಕಳ್ಳತನ ಮಾಡಿರುತ್ತಾರೆ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ವಂಚನೆ ಪ್ರಕರಣ :

 ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 146/13 ಕಲಂ. 420 ಕೂಡ 34 ಐ.ಪಿ.ಸಿ.

ದಿನಾಂಕ: 09-06-2013 ರಂದು ಪಿರ್ಯಾದಿ ರತ್ನಮ್ಮ ಕೋಂ. ಬಸವರಾಜು, ಮಳವಳ್ಳಿ ತಾ. ಗುಂಡಾಪುರ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 03-06-2013 ರಂದು ಮದ್ಯಾಹ್ನ 03-30 ಗಂಟೆಯಲ್ಲಿ ಆರೋಪಿಗಳಾದ 1]ಶಿವು, 2]ಮೋಹನ್, ರವರುಗಳು ಒಡವೆಗಳನ್ನು ನಿಮ್ಮ ಹತ್ತಿರ ಇಡುತ್ತೇವೆಂದು ಹೇಳಿ ಪಿರ್ಯಾದಿಯವರಿಂದ 38,000/- ರೂ. ಹಣವನ್ನು ಪಡೆದುಕೊಂಡು, ಒಂದು ವಾರ ಕಳೆದು, ಹಣವನ್ನು ಕೇಳಿದಾಗ ಆರೋಪಿಗಳು ನನಗೆ ಚಿನ್ನವನ್ನು ಕೊಡುತ್ತೇನೆಂದು ಹಣವನ್ನು ಪಡೆದುಕೊಂಡು, ನನಗೆ ಹಣವನ್ನಾಗಲೀ, ಚಿನ್ನವನ್ನಾಗಲೀ ನೀಡದೆ ನನಗೆ ಮೋಸ ಮಾಡಿರುತ್ತಾರೆ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಕಳವು ಪ್ರಕರಣಗಳು :

 1. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 133/13 ಕಲಂ. 379 ಐ.ಪಿ.ಸಿ.

ದಿನಾಂಕ: 09-06-2013 ರಂದು ಪಿರ್ಯಾದಿ ಮಹದೇವ ಬಿನ್. ಚಿಕ್ಕಹಲಗಯ್ಯ, 37ವರ್ಷ, ವಕ್ಕಲಿಗರು, ವ್ಯವಸಾಯ ತಳಗವಾದಿ ಗ್ರಾಮ, ಮಳವಳ್ಳಿ ತಾ. ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 09-06-2013 ರಂದು ಬೆಳಿಗ್ಗೆ 10-30 ರಿಂದ ಮದ್ಯಾಹ್ನ 01-00 ಗಂಟೆಯಲ್ಲಿ ಪಿರ್ಯಾದಿಯವರ ಜಮೀನಿನ ಹತ್ತಿರ ಅವರ ಬಾಬ್ತು ಮೋಪೆಡ್ ಅನ್ನು ರಸ್ತೆಯಲ್ಲಿ ನಿಲ್ಲಿಸಿ ಅವರ ಕಬ್ಬಿನ ಕಳೆಯನ್ನು ಕೀಳಲು ಹೋಗಿದ್ದಾಗ ಅವರ ಟಿ.ವಿ.ಎಸ್.ಎಕ್ಸ್.ಎಲ್.ಸೂಪರ್ ಹೆವಿ ಡ್ಯೂಟಿ ನಂ.ಕೆಎ-11 ಇಎ-0589 ರ ಗಾಡಿಯನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಇದರ ಬೆಲೆ ಸುಮಾರು 25400 /- ರೂ ಗಳಾಗುತ್ತೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಕೇಸು ನೊಂದಾಯಿಸಲಾಗಿದೆ. 


2. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 205/13 ಕಲಂ. 379 ಐ.ಪಿ.ಸಿ.

ದಿನಾಂಕ: 09-06-2013 ರಂದು ಪಿರ್ಯಾದಿ ಶ್ರೀನಿವಾಸಗೌಡ ಬಿನ್. ಲೇಟ್. ಪಟೇಲ್ ಅಣ್ಣೆಗೌಡ, ಕನಗನಮರಡಿ ಗ್ರಾಮ, ಪಾಂಡವಪುರ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 14-05-2013 ರಂದು ಕನಗನಮರಡಿ ಗ್ರಾಮ, ಪಾಂಡವಪುರ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಗುಣಶೇಖರ ಕೆ. ಸಿ. ಬಿನ್. ಚೆನ್ನೇಗೌಡ, ಕನಗನಮರಡಿ ಗ್ರಾಮ, ಪಾಂಡವಪುರ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿರವರ ಜಮೀನಿಗೆ ನೀರು ಎತ್ತಲು ಲೋಕಪಾವನಿ ನದಿಯಿಂದ ನೀರು ಹಾಯಿಸಲು ಮಹೇಂದ್ರ ಮೋಟಾರ್ ಎ.ಎಲ್.ಪಿ. 420805 ಸಂಖ್ಯೆಯ 7.5 ಹೆಚ್.ಪಿ. ಮೋಟಾರನ್ನು ಅಳವಡಿಸಿದ್ದು  ದಿನಾಂಕಃ 14-05-2013 ರಂದು ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಮೋಟಾರನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ನಮ್ಮ ಗ್ರಾಮದ ಚನ್ನೇಗೌಡರ ಮಗ ಗುಣಶೇಖರ್ ಕೆ.ಸಿ. ರವರು ಕಳ್ಳತನ ಮಾಡಿರಬಹುದೆಂದು ನನಗೆ ಅನುಮಾನವಿರುತ್ತದೆ ಈ ಮೋಟಾರ್ ಬೆಲೆ 38000/- ರೂ ಆಗಿರುತ್ತದೆ ಅದನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಕೊಲೆ/ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 182/13 ಕಲಂ. 143-498(ಎ)-302 ಕೂಡ 149 ಐ.ಪಿ.ಸಿ.

ದಿನಾಂಕ: 09-06-2013 ರಂದು ಪಿರ್ಯಾದಿ ನಾಗೇಶ್ ಬಿನ್. ಬಸವೇಗೌಡ, ಪುಟ್ಟೇಗೌಡನ ದೊಡ್ಡಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1)ಪಿ.ಪಿ.ನಾಗೇಶ್ ಬಿನ್. ಪುಟ್ಟೇಗೌಡ, 2)ಬಸವಮ್ಮ ಕೊಂ. ಪುಟ್ಟೇಗೌಡ, 3)ಪುಟ್ಟೇಗೌಡ, 4)ಚೇತನ ಹಾಗು 5)ಚಂದನ ರವರುಗಳು ದಿನಾಂಕ:22-05-2013 ರ ರಾತ್ರಿ 1200 ಗಂಟೆಯಲ್ಲಿ, ಪುಟ್ಟೇಗೌಡನದೊಡ್ಡಿ ಸಿ.ಎ.ಕೆರೆ ಹೋಬಳಿ ರವರು ನೀಡಿದ ದೂರು ಏನೆಂದರೆ ಪಿರ್ಯಾದಿರವರ ಮಗಳು ನಂದಿನಿ ಎಂಬುವರನ್ನು ಆರೋಪಿ ಪಿ.ಪಿ.ನಾಗೇಶ ಎಂಬುವರಿಗೆ ಮದುವೆ ಮಾಡಿಕೊಟ್ಟಿದ್ದು, ಸದರಿ ಆರೋಪಿಗಳು ಇತ್ತೀಚೆಗೆ ನಿಮ್ಮ ಅಪ್ಪನ ಮನೆಯಿಂದ ಹಣ ತೆಗೆದುಕೊಂಡು ಬಾ ಎಂದು ಕಿರುಕುಳ ನೀಡಿ ದಿನಾಂಕ: 05-06-2013 ರ ರಾತ್ರಿ 1100 ಗಂಟೆಯ ಸಮಯದಲ್ಲಿ ಬೆಂಕಿ ಹಚ್ಚಿ ನಂತರ ಚಿಕಿತ್ಸೆಗಾಗಿ ಕೆ.ಆರ್.ಆಸ್ಪತ್ರೆಗೆ ದಾಖಲುಮಾಡಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ: 09-06-2013 ರಂದು ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

No comments:

Post a Comment