ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 10-06-2013 ರಂದು ಒಟ್ಟು 19 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣಗಳು, 1 ಯು.ಡಿ.ಆರ್. ಪ್ರಕರಣ, 1 ವಾಹನ ಕಳವು ಪ್ರಕರಣ, 2 ವಂಚನೆ ಪ್ರಕರಣಗಳು, 2 ಅಕ್ರಮ ಮರಳು ಸಾಗಾಣಿಕೆ ಪ್ರಕರಣಗಳು, 1 ರಸ್ತೆ ಅಪಘಾತ ಪ್ರಕರಣ, 1 ಮನುಷ್ಯ ಕಾಣೆಯಾದ ಪ್ರಕರಣ ಹಾಗು 9 ಇತರೆ ಐ.ಪಿ.ಸಿ../ಸಿ.ಆರ್.ಪಿ.ಸಿ./ಕೆ.ಪಿ.ಆಕ್ಟ್./ಅಬಕಾರಿ ಕಾಯಿದೆ ಪ್ರಕರಣಗಳು ವರದಿಯಾಗಿರುತ್ತವೆ.
ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣಗಳು :
1. ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 154/13 ಕಲಂ. 498 [ಎ], 114, 506, ಕೂಡ 34 ಐ.ಪಿ.ಸಿ.
ದಿನಾಂಕ: 10-06-2013 ರಂದು ಪಿರ್ಯಾದಿ ನೇತ್ರಾವತಿ ಕೋಂ. ಪರಶುರಾಮ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಅವರ ಗಂಡ ಪರಶುರಾಮ ಎಂಬುವವನು ಬಂದು ತನ್ನ ಕೈಯ್ಯಿಂದ ನನ್ನ ಮೈಮೇಲೆ ಹೊಡೆದು ಕಾಲಿನಿಂದ ಒದ್ದು ನೋವುಂಟು ಮಾಡಿದನು ನಂತರ ನನ್ನನ್ನು ಮನೆಯಿಂದ ಹೊರಗೆ ಹೋಗು ಇಲ್ಲದಿದ್ದರೆ ಕೊಲೆ ಮಾಡುತ್ತೇನೆಂದು ಪ್ರಾಣ ಬೆದರಿಕೆ ಹಾಕಿದನು ಇತರೆ ಆರೋಪಿಗಳಾದ 2] ಶ್ರೀಧರ ಹಾಗು 3] ಕೆಂಪೇಗೌಡ ರವರುಗಳು ಇವರಿಗೆ ಕುಮ್ಮಕ್ಕು ನೀಡಿರುತ್ತಾರೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 178/13 ಕಲಂ. 498(ಎ)-324-504-506 ಐ.ಪಿ.ಸಿ.
ದಿನಾಂಕ: 10-06-2013 ರಂದು ಪಿರ್ಯಾದಿ ಸಿ.ಕಾಂತ ಬಿನ್. ನಾಗೇಗೌಡ, ಕೆ.ಆರ್.ಪೇಟೆ ಟೌನ್ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ನಾಗೇಗೌಡ ಬಿನ್. ನಿಂಗೇಗೌಡ, ಮಿನಿ ವಿದಾನಸೌದದ ಪಕ್ಕ, ಕೆ.ಆರ್. ಪೇಟೆ ಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ಗಂಡ ಬೇರೆ ಹೆಂಗಸಿನ ಜೊತೆ ಸಹವಾಸ ಮಾಡಿ ದಿನಾಂಕ: 10-06-2013 ರಂದು ರಾತ್ರಿ 09-00 ಗಂಟೆಯಲ್ಲಿ ಪಿರ್ಯಾದಿಯನ್ನು ಏನೆಮುಂಡೆ ಎಂದು ಬೈಯ್ದು ಹೋಗು ನಿಮ್ಮ ಅಪ್ಪನ ಮನೆಯಿಂದ ವರದಕ್ಷಣೆಗಾಗಿ 1 ಲಕ್ಷ ಹಣ 100 ಗ್ರಾಂ ಚಿನ್ನ ಹಾಗು ನನಗೆ ಉಂಗುರ ಮತ್ತು ಕತ್ತಿಗೆ ಸರವನ್ನು ತೆಗೆದುಕೊಂಡು ಬಾ ಎಂದು ತರದೆ ಬರಿಗೈಯಲ್ಲಿ ಬಂದರೆ ನಿನ್ನನ್ನು ಸೀಮೆಎಣ್ಣೆ ಹಾಕಿ ಸುಟ್ಟುಹಾಕುತ್ತೆನೆಂದು ಬೆದರಿಕೆ ಹಾಕಿ ದೊಣ್ಣೆಯಿಂದ ಪಿರ್ಯಾದಿ ಬೆನ್ನಿಗೆ, ಕುತ್ತಿಗೆಗೆ ಹೊಡೆದು ನಿನ್ನನ್ನು ಕೊಲೆ ಮಾಡದೆ ಬಿಡುವುದಿಲ್ಲವೆಂದು ಕೊಲೆ ಬೆದರಿಕೆ ಹಾಕಿರುತ್ತಾರೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಯು.ಡಿ.ಆರ್. ಪ್ರಕರಣ :
ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 15/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 10-06-2013 ರಂದು ಪಿರ್ಯಾದಿ ಶಕುಂತಲಮ್ಮ ಕೋಂ. ಲೇ|| ವೀರಸ್ವಾಮಿ. ನ್ಯೂ ತಮಿಳು ಕಾಲೋನಿ ಸ್ಲಂ, ಹಾಲಹಳ್ಳಿ ಕೆರೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪೂಗೋಡಿ ಬಿನ್. ಲೇ| ವೀರಸ್ವಾಮಿ, 18 ವರ್ಷ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 07-06-2013 ರಂದು ಬೆಳಿಗ್ಗೆ 06-00 ಗಂಟೆಯಲ್ಲಿ ಹಾಲಹಳ್ಳಿ ಕೆರೆಯಲ್ಲಿರುವ ತಮಿಳು ಕಾಲೋನಿ ಸ್ಲಂ, ನ ಅವರ ಮನೆಯಲ್ಲಿ ಹೊಟ್ಟೆನೋವು ಜಾಸ್ತಿಯಾಗಿದ್ದು ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ನೋವನ್ನು ತಾಳಲಾರದೆ ಮನೆಯಲ್ಲಿ ಇಲಿಗಳಿಗೆ ಸಿಂಪಡಿಸುವ ಔéಷದಿಯನ್ನು ಸೇವಿಸಿ ವಾಂತಿ ಬೇದಿ ಮಾಡಿಕೊಳ್ಳುತ್ತಿದ್ದು, ಚಿಕಿತ್ಸೆ ಪಲಕಾರಿಯಾಗದೇ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.
ವಾಹನ ಕಳವು ಪ್ರಕರಣ :
ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 346/13 ಕಲಂ. 379 ಐ.ಪಿ.ಸಿ.
ದಿನಾಂಕ: 10-06-2013 ರಂದು ಪಿರ್ಯಾದಿ ಕೆ.ಬಿ.ಜವರೇಗೌಡ ಬಿನ್. ಲೇಟ್. ಬಿ.ಬೋರೇಗೌಡ, 63 ವರ್ಷ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 10-06-2013 ರಂದು 09-30 ಗಂಟೆಯಲ್ಲಿ ಕಲ್ಲಹಳ್ಳಿಯ, ಬಿಸಿಲುಮಾರಮ್ಮನ ದೇವಸ್ಥಾನದ ಪಕ್ಕದಲ್ಲಿ ನಿಲ್ಲಿಸಿದ್ದ ಅವರ ಮೋಟಾರ್ ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಕೇಸು ನೊಂದಾಯಿಸಲಾಗಿದೆ.
ವಂಚನೆ ಪ್ರಕರಣಗಳು :
1.ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 376/13 ಕಲಂ. 409-420-467-469 ಐ.ಪಿ.ಸಿ.
ದಿನಾಂಕ: 10-06-2013 ರಂದು ಪಿರ್ಯಾದಿ ಸಿಸ್ಟರ್ ಹೆಲೆನಾ, ಸಿ.ಎಸ್.ಎಸ್.ಟಿ. ಸದಸ್ಯೆ, ಟೆರೆಷಿಯನ್ ಕಾಲೇಜು ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಆಂಥೋಣಿ ಪ್ರವೀಣ್ ಗಡ್ಡಂ ಬಿನ್ ಜಯರಾಜು ಗಡ್ಡಂ, 26 ವರ್ಷ, ಕಂಟ್ರಿ ಡೈರೆಕ್ಟರ್, ಫೈಥ್ಪೌಂಡೇಷನ್- ನಂ 109, ರೋಡ್ ನಂ-3, ವೆಸ್ಟ್ ಮರೇಡ್ಪಲ್ಲಿ, ಸಿಖಂದರಾಬಾದ್ ರವರು ಸ್ಕೂಲ್ ಬಸ್ ಹಾಗೂ ಕಟ್ಟಡಗಳನ್ನು ನಿರ್ಮಾಣ ಮಾಡಲು 40% ಮತ್ತು 60 % ರ ರೀತ್ಯಾ ಮಂಜೂರು ಮಾಡಿರುತ್ತೆ ಎಂದು ಕೆಲವು ಉದಾಹರಣೆಗಳನ್ನು ನೀಡಿ, ಪಿರ್ಯಾದಿಯವರನ್ನು ನಂಬಿಸಿ, ಪಾಟರ್್ನರ್ ಪ್ರಾಜೆಕ್ಟ್ ಅಗ್ರಿಮೆಂಟ್ ನ್ನು ದಿನಾಂಕ: 31-03-2011 ರಂದು ಒಪ್ಪಂದ ಮಾಡಿಸಿಕೊಂಡಿದ್ದು, ಈ ಒಪ್ಪಂದದ ಪ್ರಕಾರ ಮೈಸೂರು ಟೆರಿಷಿಯನ್ ಕಾಲೇಜಿನ ಅಡಿಷನಲ್ ವಿಂಗ್ನ್ನು ಮಾಡಿಸುತ್ತೇನೆ. ಕಟ್ಟಡ ನಿರ್ಮಾಣ ಮಾಡುತ್ತೇನೆ ಎಂದು ಇತ್ಯಾದಿಯಾಗಿ ಹೇಳಿ ಪಿರ್ಯಾದಿಯವರಿಂದ 2 ಕೋಟಿ 10 ಲಕ್ಷ ನಗದು ಹಣವನ್ನು ಪಡೆದುಕೊಂಡು ಹೋಗಿರುತ್ತಾರೆ ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.
2.ಹಲಗೂರು ಪೊಲೀಸ್ ಠಾಣೆ ಮೊ.ನಂ. 126/13 ಕಲಂ. 420 ಐ.ಪಿ.ಸಿ.
ದಿನಾಂಕ:10-06-2013 ರಂದು ಪಿರ್ಯಾದಿ ಎಸ್.ಎಂ.ಕುಮಾರ ಬಿನ್. ಮರೀಗೌಡ. ಬೆಳತ್ತೂರು ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಪ್ರಿಯಾ. ಹುಬ್ಬಳ್ಳಿ ಎಂಬುವವರು ತನ್ನ ಹೆಂಡತಿಯ ಸ್ನೇಹಿತೆ ಎಂದು ಹೇಳಿ ಮನೆಗೆ ಬಂದು ಸೇರಿಕೊಂಡು ಅವರುಗಳಿಗೆ ವಂಚಿಸಿ ಮನೆಯ ಬೀರುವಿನಲ್ಲಿಟ್ಟಿದ್ದ 80 ಗ್ರಾಂ ಚಿನ್ನದ ವಡವೆಗಳನ್ನು ತೆಗೆದುಕೊಂಡು ಹೋಗಿರುತ್ತಾಳೆ ಇವುಗಳ ಬೆಲೆ ಸುಮಾರು 2.40.000/- ರೂಗಳಾಗಿರುತ್ತೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.
ಅಕ್ರಮ ಮರಳು ಸಾಗಾಣಿಕೆ ಪ್ರಕರಣಗಳು :
1. ಕೆಸ್ತೂರು ಪೊಲೀಸ್ ಠಾಣೆ ಮೊ.ನಂ. 131/13 ಕಲಂ.188-379 ಐ.ಪಿ.ಸಿ. ಕೂಡ 3-42 & 44 ಕೆ.ಎಂ.ಎಂ.ಸಿ.ಆರ್. ಕಾಯ್ದೆ-1994 ಮತ್ತು 4(1ಎ) 21(1 ರಿಂದ 5)ಎಂ.ಎಂ.ಆರ್.ಡಿ ಕಾಯ್ದೆ-1957.
ದಿನಾಂಕ: 10-06-2013 ರಂದು ಪಿರ್ಯಾದಿ ಪಿ.ಎಸ್. ನವೀನ್, ಭೂ ವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಮಂಡ್ಯ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ 1. ಮೋಹನ 2. ಕೆ.ಎ. 11-ಡಬ್ಲ್ಯೂ-9881 ಸ್ಕೂಟರ್ನ ಮಾಲೀಕರು, ಹೆಸರು ವಿಳಾಸ ತಿಳಿಯಬೇಕಿರುತ್ತೆ ಇವರು ಮರಳನ್ನು ಕಳ್ಳತನದಿಂದ ಟ್ರಾಕ್ಟರ್ಗೆ ಕೂಲಿಕಾರರ ಸಹಾಯದಿಂದ ಕದ್ದು ಸಾಗಿಸುತ್ತದ್ದ ಮೇರೆಗೆ ಒಬ್ಬ ಆಸಾಮಿಯನ್ನು ವಶಕ್ಕೆ ಪಡೆದು ವರದಿಯನ್ನು ಮುಂದಿನ ಕ್ರಮಕ್ಕಾಗಿ ನೀಡಿರುತ್ತೆ ಈ ಬಗ್ಗೆ ಪ್ರಕರಣ ನೊಂದಾಯಿಸಲಾಗಿದೆ.
2. ಹಲಗೂರು ಪೊಲೀಸ್ ಠಾಣೆ ಮೊ.ನಂ. 124/13 ಕಲಂ. 188-379 ಐ.ಪಿ.ಸಿ.
ದಿನಾಂಕ: 10-06-2013 ರಂದು ಪಿರ್ಯಾದಿ ಷಣ್ಮುಖ. ಗ್ರಾಮ ಲೆಕ್ಕಾಧಿಕಾರಿಗಳು, ಮಳವಳ್ಳಿ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: ದಿನಾಂಕಃ10-6-2013 ರಂದು ರಾತ್ರಿ 11-30 ಗಂಟೆಯಲ್ಲಿ, ಟಿ.ಕೆ.ಹಳ್ಳಿ ಚೆಕ್ ಪೋಸ್ಟ್ ಬಳಿ ಆರೋಪಿ ಕೆಎ-07/8379 ಕ್ಯಾಂಟರ್ನ ಚಾಲಕ ಮತ್ತು ಮಾಲೀಕ, ಇವರುಗಳ ಹೆಸರು ವಿಳಾಸ ತಿಳಿಯಬೇಕಾಗಿದೆ ಇವರುಗಳು ಅಕ್ರಮ ಮರಳು ಕಳ್ಳ ಸಾಗಾಣೆ ಮಾಡುತ್ತಿದ್ದ ಕ್ಯಾಂಟರ್ ವಾಹನ ಸಂಖ್ಯೆ ಕೆ.ಎ-07 8379ನ್ನು ಹಿಡಿದು ಸದರಿ ವಾಹನದ ಮಾಲಿಕರು ಮತ್ತು ಚಾಲಕರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.
ರಸ್ತೆ ಅಪಘಾತ ಪ್ರಕರಣ :
ಮದ್ದೂರು ಸಂಚಾರ ಪೊಲೀಸ್ ಠಾಣೆ ಕಲಂ. 71/13 ಕಲಂ. 279,304(ಎ) ಐ.ಪಿ.ಸಿ. ಕೂಡ 187 ಐ.ಎಂ.ವಿ ಕಾಯ್ದೆ.
ದಿನಾಂಕ: 10-06-2013 ರಂದು ಪಿರ್ಯಾದಿ ಮಹೇಶಫ್ರಭು, ಸಿ.ಹೆಚ್.ಸಿ 334, ಮದ್ದೂರು ಸಂಚಾರಿ ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಯಾವುದೋ ಒಂದು ಅಪರಿಚಿತ ವಾಹನ ಒಬ್ಬ ಅಪರಿಚಿತ ವ್ಯಕ್ತಿಗೆ ಅಪಘಾತ ಮಾಡಿ ಹೊರಟು ಹೋಗಿದೆ, ವಾಹನ ಮತ್ತು ವಿಳಾಸ ತಿಳಿಯಬೇಕಾಗಿದೆ ಎಂದು ತಿಳಿಸಿದ ಮೇರೆಗೆ ಪಿರ್ಯಾದಿರವರು ಸ್ಥಳಕ್ಕೆ ಹೋಗಿ ನೋಡಲಾಗಿ ಒಬ್ಬ ವ್ಯಕ್ತಿಯು ತಲೆಯ ಹಿಂಬಾಗಕ್ಕೆ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ಈ ಬಗ್ಗೆ ಪ್ರಕರಣ ನೊಂದಾಯಿಸಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ :
ಹಲಗೂರು ಪೊಲೀಸ್ ಠಾಣೆ ಮೊ.ನಂ. 125/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.
ದಿನಾಂಕ: 10-06-2013 ರಂದು ಪಿರ್ಯಾದಿ ಹೆಚ್.ಸಿ ಶಿಲ್ಪಾ ಬಿನ್. ಚಿಕ್ಕತಮ್ಮಯ್ಯ. ಹಗಾದೂರು ಗ್ರಾಮ ರವರ ಪಿರ್ಯಾದು ಏನೆಂದರೆ ದಿನಾಂಕಃ 22-05-2013ರಂದು ಬೆಳಿಗ್ಗೆ 11-00 ಗಂಟೆಗೆ, ಹಗಾದೂರು ಗ್ರಾಮದ ಅಂಗನವಾಡಿ ಕಾರ್ಯಕತರ್ೆಯಾಗಿ ಕೆಲಸ ಮಾಡುತ್ತಿದ್ದ ಅವರ ತಾಯಿಯಾದ ಸರೋಜಮ್ಮ, 53ವರ್ಷ ರವರು ಹಲಗೂರಿಗೆ ಹೋಗಿಬರುತ್ತೇನೆಂದು ಹೇಳಿ ಮನೆಯಿಂದ ಹೋದವಳು ಇಲ್ಲಿಯವರೆಗೆವಿಗೂ ವಾಪಸ್ಸು ಮನೆಗೆ ಬಂದಿರುವುದಿಲ್ಲ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment