ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 12-06-2013 ರಂದು ಒಟ್ಟು 16 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಕಳ್ಳತನ ಪ್ರಕರಣ, 1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ, 1 ಸಾಮಾನ್ಯ ಕಳವು ಪ್ರಕರಣ, 1 ಯು.ಡಿ.ಆರ್. ಪ್ರಕರಣ ಹಾಗು 12 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.
ಕಳ್ಳತನ ಪ್ರಕರಣ :
ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 457-380 ಐ.ಪಿ.ಸಿ.
ದಿನಾಂಕ: 12-06-2013 ರಂದು ಪಿರ್ಯಾದಿ ಮಾಯಮ್ಮ ಕೊಂ. ಇಂದ್ರೇಶ, ಅಶೋಕನಗರ ಗ್ರಾಮ ರವರು ನೀಡಿದ ದೂರು ಏನೆಂದರೆ ದಿನಾಂಕ:10-06-2013 ರಿಂದ ದಿನಾಂಕ: 12-06-2013 ರ ಮದ್ಯಾಹ್ನ 12-00 ಗಂಟೆ ಸಮಯದಲ್ಲಿ ಯಾರೋ ಕಳ್ಳರು ಹೆಸರು ವಿಳಾಸ ತಿಳಿಯಬೇಕು ಪಿರ್ಯಾದಿಯವರು ಮನೆಗೆ ಬೀಗ ಹಾಕಿಕೊಂಡು ಹಾರೋಹಳ್ಳಿಗೆ ಹೋಗಿದ್ದು ವಾಪಸ್ ಬಂದು ನೋಡಿದಾಗ ಮನೆಯಲ್ಲಿದ್ದ ಓನಿಡಾ ಕಂಪನಿಯ ಟಿವಿ, ಒಂದು ಅಂಚೆ, 15 ಜೊತೆ ಬಟ್ಟೆಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೊಗಿರುತ್ತಾರೆ ಪತ್ತೆಮಾಡಿಕೊಡಿ ಎಂದು ದೂರು ನೀಡಿ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :
ಬಿಂಡಿಗನವಿಲೆ ಪೊಲೀಸ್ ಠಾಣೆ ಮೊ.ನಂ. 86/13 ಕಲಂ. 323-506-498(ಎ) ಐ.ಪಿ.ಸಿ.
ದಿನಾಂಕ: 12-06-2013 ರಂದು ಪಿರ್ಯಾದಿ ಲತಾ ಕೋಂ. ನಾಗರಾಜು, ಬಿಂಡಿಗನವಿಲೆ ಗ್ರಾಮ, ನಾಗಮಂಗಲ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಗಂಡ ನಾಗರಾಜು ಬಿನ್. ವೀರಭದ್ರೇಗೌಡ ರವರು ಪಿಯರ್ಾದಿಯವರಿಗೆ ತಿಳಿಯದಂತೆ ಎರಡು ವಿವಾಹವಾಗಿದ್ದು ಅದರಲ್ಲಿ ಎರಡನೆಯವಳು ಮೃತಪಟ್ಟಿರುತ್ತಾಳೆ. ಈಗ ಮೂರನೆಯವಳು ಪುಷ್ಪ. ಇವರೊಂದಿಗೆ ನನ್ನೊಂದಿಗೆ ಒಟ್ಟಿಗೆ ಒಂದೇ ಮನೆಯಲ್ಲಿ ವಾಸವಿದ್ದರು. ಈಗ 6 ತಿಂಗಳಿನಿಂದ ಮೂರನೆಯ ಹೆಂಡತಿಯೊಂದಿಗೆ ಸೇರಿಕೊಂಡು ನನ್ನೊಂದಿಗೆ ಪ್ರತಿದಿನ ಗಲಾಟೆ ಮಾಡಿ ಚಿತ ್ರಹಿಂಸೆ ನೀಡುತ್ತಿದ್ದರು. ಅವರು ದಿನಾಂಕಃ 10-06-2013 ರ ರಾತ್ರಿ 7 ಗಂಟೆ ಸಮಯದಲ್ಲಿ ನಾನೊಬ್ಬಳೆ ಮನೆಯಲ್ಲಿ ಇದ್ದಾಗ ಏಕಾಎಕಿ ಇಬ್ಬರು ನನ್ನ ಮನೆಗೆ ನುಗ್ಗಿ ನನಗೆ ಕೈಗಳಿಂದ ಚೆನ್ನಾಗಿ ಹೊಡೆದು ನನ್ನನ್ನು ಮನೆಯಿಂದ ಹೊರಹೋಗುವಂತೆ ಹೇಳಿ ಮನೆಯನ್ನು ಖಾಲಿ ಮಾಡದಿದ್ದರೆ ನಿನ್ನನ್ನು ಹಾಗೂ ನಿನ್ನ ಮಗುವನ್ನು ಕೊಲೆ ಮಾಡುವುದಾಘಿ ಬೆದರಿಕೆ ಹಾಕಿರುತ್ತಾರೆ. ನಾನು ಜೀವಂತವಾಗಿ ಬದುಕಿದ್ದರು ನನ್ನಿಂದ ವಿವಾಹ ವಿಚ್ಚೇದನ ಪಡೆಯದೆ ನನಗೆ ತಿಳಿಯದಂತೆ ಎರಡು ಮದುವೆಯಾಗಿದ್ದು ಈಗ ನನ್ನ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವ ಮೇಲ್ಕಂಡವರ ಮೇಲೆ ಕಾನೂನಿನ ರೀತ್ಯಾ ಕ್ರಮ ಜರುಗಿಸಬೇಕೆಂದು ಫಿರ್ಯಾದಿಯವರು ಠಾಣೆಗೆ ಹಾಜರಾಗಿ ಕೊಟ್ಟ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಸಾಮಾನ್ಯ ಕಳವು ಪ್ರಕರಣ :
ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 245/13 ಕಲಂ. 379 ಐ.ಪಿ.ಸಿ.
ದಿನಾಂಕ: 12-06-2013 ರಂದು ಪಿರ್ಯಾದಿ ಮಹಾಲಿಂಗು ಬಿನ್. ಲೇಟ್|| ಮಾದಯ್ಯಸ್ವಾಮಿ, ವಿವೇಕಾನಂದಾ ರಸ್ತೆ, ಅಶೋಕನಗರ, ಮಂಡ್ಯ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಲಕ್ಷ್ಮಮ್ಮ ಕೋಂ. ಗಿರೀಶ, 30 ವರ್ಷ, ಪರಿಶಿಷ್ಟ ಜಾತಿ, ಕೂಲಿ ಕೆಲಸ, ಅರಕೆರೆ ಗ್ರಾಮ, ಶ್ರೀರಂಗಪಟ್ಟಣ, ತಾ|| ರವರು ನೀಡಿದ ದೂರಿನ ವಿವರವೇನೆಂದರೆ ಒಬ್ಬ ಅಪರಿಚಿತ ಹೆಂಗಸು ನಮ್ಮ ಸೀಮೆ ಹಸುವನ್ನು ಕಳವು ಮಾಡಿಕೊಂಡು ಹೋಗುತ್ತಿದ್ದಳು, ಅವಳನ್ನು ನಾನು, ಕಳವು ಮಾಡಿದ್ದ ಹಸುವಿನ ಸಮೇತ ಹಿಡಿದು, ಹೆಸರು ಮತ್ತು ವಿಳಾಸ ಕೇಳಲು ಲಕ್ಷ್ಮಮ್ಮ ಕೋಂ. ಲೇಟ್|| ಗಿರೀಶ, 30 ವರ್ಷ, ಪರಿಶಿಷ್ಟ ಜಾತಿ, ಕೂಲಿ, ಅರಕೆರೆ ಗ್ರಾಮ, ಶ್ರೀರಂಗಪಟ್ಟಣ ತಾ|| ಎಂದು ತಿಳಿಸಿದರು. ಇವಳ ವಶದಲ್ಲಿ ಇದ್ದ ನಮ್ಮ ಹಾಲ್ಬ್ಲಾಕ್ ಹಸು ಸುಮಾರು ಮೈಯಲ್ಲ ಕಪ್ಪು ಇದ್ದು ತೆನೆಯಾಗಿದ್ದು, ಕೊಂಬು ಇರುವುದಿಲ್ಲ. ಇದರ ಬೆಲೆ 30,000=00 ರೂ ( ಮುವತ್ತು ಸಾವಿರ ರೂಪಾಯಿ) ಆಗಿರುತ್ತದೆ. ತಾವು ಪರಿಶೀಲಿಸಿ ತಾವು ಈ ಬಗ್ಗೆ ಕಾನೂನು ಕ್ರಮ ಜರುಗಿಸಲು ಕೋರುತ್ತೇನೆ. ಎಂದು ದೂರು ನೀಡಿರುತ್ತಾರೆ ಈ ಬಗ್ಗೆ ಪ್ರಕರಣ ನೊಂದಾಯಿಸಲಾಗಿದೆ.
ಯು.ಡಿ.ಆರ್. ಪ್ರಕರಣ :
ಕೆರೆಗೋಡು ಪೊಲೀಸ್ ಠಾಣೆ ಯು.ಡಿ.ಆರ್. ನಂ. 03/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 12-06-2013 ರಂದು ಪಿರ್ಯಾದಿ ಸಿ.ಪಿ.ಚಂದ್ರ ಬಿನ್. ಲೇಟ್. ಪಂಚಲಿಂಗಪ್ಪ, ಚಂದಗಾಲು ಗ್ರಾಮ, ದುದ್ದ ಹೋಬಳಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ರೂಪ ಕೋಂ. ಮಲ್ಲೇಶ್, 25 ವರ್ಷ, ಗೃಹಿಣಿ. ಅಂಕಣ್ಣನದೊಡ್ಡಿ ಗ್ರಾಮ ರವರು ತನ್ನ ಮಗುವಿಗೆ ಹಾಲು ಕಾಯಿಸಲು ಸ್ಟೌವ್ ಹಚ್ಚುವಾಗ ಆಕಸ್ಮಿಕವಾಗಿ ಆಕೆಯ ಮೈಗೆ ಬೆಂಕಿ ತಗುಲಿ ಮೈಯಲ್ಲಾ ಸುಟ್ಟು ಹೋಗಿದ್ದರಿಂದ ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ಸೇರಿಸಿ ನಂತರ ಮೈಸೂರು ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸುತ್ತಿದ್ದಾಗ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕಃ 12-06-2013 ರಂದು ಬೆಳಿಗ್ಗೆ 08-00 ಗಂಟೆಯಲ್ಲಿ ಕೆ.ಆರ್.ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾಳೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment