ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 13-06-2013 ರಂದು ಒಟ್ಟು 19 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ರಸ್ತೆ ಅಪಘಾತ ಪ್ರಕರಣ, 1 ರಾಬರಿ ಪ್ರಕರಣ, 5 ಮನುಷ್ಯ ಕಾಣೆಯಾದ ಪ್ರಕರಣಗಳು, 1 ಕಳವು ಪ್ರಕರಣ, 1 ವಂಚನೆ ಪ್ರಕರಣ ಹಾಗು 10 ಇತರೆ ಐ.ಪಿ.ಸಿ./ಕೆ.ಪಿ.ಆಕ್ಟ್./ಅಬಕಾರಿ ಕಾಯಿದೆ ಪ್ರಕರಣಗಳು ವರದಿಯಾಗಿರುತ್ತವೆ.
ರಸ್ತೆ ಅಪಘಾತ ಪ್ರಕರಣ :
ನಾಗಮಂಗಲ ಪಟ್ಟಣ ಪೊಲೀಸ್ ಠಾಣೆ ಮೊ.ನಂ. 96/13 ಕಲಂ. 279-304(ಎ) ಐ.ಪಿ.ಸಿ.
ದಿನಾಂಕ: 13-06-2013 ರಂದು ಪಿರ್ಯಾದಿ ಮಹದೇವ, 38 ವರ್ಷ, ಬಸವೇಶ್ವರ ನಗರ, ನಾಗಮಂಗಲ ತಾಲ್ಲೋಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ನಂ.ಕೆ.ಎ.02-ಸಿ-5859 ರ ಲಾರಿ ಚಾಲಕ ಹೆಚ್.ಎಸ್. ರಮೇಶ್ ಲಾರಿಯನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಢು ಬಂದು ರಸ್ತೆಯನ್ನು ದಾಟುತ್ತಿದ್ದ ಶಿವಕುಮಾರನಿಗೆ ಡಿಕ್ಕಿ ಪಡಿಸಿದ್ದು ಹುಡುಗನ ಎರಡು ಕಾಲುಗಳ ಮೇಲೆ ಲಾರಿಯ ಚಕ್ರಗಳು ಹರಿದು ಲಾರಿಯನ್ನು ಚಾಲಕ ನಿಲ್ಲಿಸಿರುತ್ತಾನೆ. ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಕರೆದುಕೊಂಡು ಹೋಗುತ್ತಿದ್ದಾಗ ದಾರಿ ಮಧ್ಯದಲ್ಲಿ ಮೃತನಾಗಿದ್ದರಿಂದ ವಾಪಸ್ ತಂದು ನಾಗಮಂಗಲ ಸರ್ಕಾರಿ ಅಸ್ಪತ್ರೆಯ ಶವಗಾರದಲ್ಲಿ ಇಟ್ಟಿರುತ್ತದೆ ಈ ಬಗ್ಗೆ ಕ್ರಮ ತೆಗೆದುಕೊಳ್ಳಲು ನೀಡಿದ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.
ರಾಬರಿ ಪ್ರಕರಣ :
ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 379/13 ಕಲಂ. 394 ಐ.ಪಿ.ಸಿ.
ದಿನಾಂಕ: 13-06-2013 ರಂದು ಪಿರ್ಯಾದಿ ಚಂದ್ರ ಬಿನ್. ನಾಗರಾಜು, ಟ್ರಾನ್ಸಪೋರ್ಟ್ ಏಜೆನ್ಸಿ, ವಾಸ ನಂ. #2, 2ನೇ ಮೈನ್, ಮೈಕೋ ಲೇ ಔಟ್, ಮಹಾಲಕ್ಷೀಪುರಂ, ಬೆಂಗಳೂರು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ಮೂತ್ರ ವಿಸರ್ಜನೆ ಮಾಡಿ ವಾಪಸ್ಸು ಬಂದು ಕಾರಿನಲ್ಲಿ ಕುಳಿತುಕೊಳ್ಳಲು ಹೋದಾಗ ಅಪರಿಚಿತ 4ಜನ ವ್ಯಕ್ತಿಗಳು, ಎಲ್ಲರೂ ಕನ್ನಡ ಭಾಷೆಯಲ್ಲಿ ಮಾತನಾಡುತ್ತಾರೆ 20ವರ್ಷದಿಂದ 25ವರ್ಷದವರಾಗಿರುತ್ತಾರೆ ಈ ಆರೋಪಿಗಳು ಪಿರ್ಯಾದಿಯವರ 1)ಕೆಂಪು ಬಣ್ಣದ ಹುಂಡೈ ಇಯಾನ್ ಕಾರು 2)ಸುಮಾರು 30ಗ್ರಾಂ. ತೂಕದ ಕತ್ತಿನ ಚಿನ್ನದ ಚೈನು 3)ಸುಮಾರು 24ಗ್ರಾಂ. ತೂಕದ ಕೈಚೈನು 4)ಒಂದು ನೋಕಿಯಾ ಮೊಬೈಲ್ 5)ಒಂದು ಪರ್ಸ ಮತ್ತು 6000/- ರೂ ನಗದು ಹಣ. ಒಟ್ಟು ಬೆಲೆ ಸುಮಾರು 5,00,000/- ರೂಪಾಯಿಗಳಾಗಿದ್ದು ಅಪರಿಚಿತ ವ್ಯಕ್ತಿಗಳು ಇವುಗಳನ್ನು ಕಿತ್ತುಕೊಂಡು ಹೋಗಿರುತಾರೆ ಮುಂದಿನ ಕ್ರಮ ಜರುಗಿಸಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣಗಳು :
1. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 246/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.
ದಿನಾಂಕ:13-06-2013 ರಂದು ಪಿರ್ಯಾದಿ ಎಚ್, ಲಿಂಗಯ್ಯ, ಜಯಚಾಮರಾಜಪುರ, ಹಾಲಿ ವಾಸ ಜಯಂತಿ ಗ್ರಾಮ, ಬಿದರೆ ಅಂಚೆ, ಶಿವಮೊಗ್ಗ ಜಿಲ್ಲೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆಶಾರಾಣಿ, ಜಯಚಾಮರಾಜಪುರ, ವಾಜಯಂತಿ ಗ್ರಾಮ, ಶಿವಮೊಗ್ಗ ಜಿಲ್ಲೆಯ ರವರು ಅವಳ ಮೋಬೈಲ್ ಪೋನ್ 9535855495 ನಂಬರ್ ನಿಂದ ಪಿರ್ಯಾದಿಯವರ ತಂಗಿ ಗೌರಮ್ಮರವರ ಮೊ.ನಂ. 9739663063ಕ್ಕೆ ಪೋನ್ ಮಾಡಿ ನಾನು ಯಾರನ್ನೋ ಪ್ರಿತಿಸುತ್ತಿದ್ದೇನೆ, ನಾನು ಬೆಂಗಳೂರಿನಲ್ಲಿ ಇದ್ದೇನೆ ನನ್ನನ್ನು ಯಾರು ಹುಡುಕಬೇಡಿ ಎಂದು ತಿಳಿಸಿರುತ್ತಾಳೆ. ಈಗ ಅವಳ ಪೋನ್ ನಂ. ಸ್ವಿಚ್ಆಪ್ ಆಗಿರುತ್ತದೆ, ಆದ್ದರಿಂದ ಇವಳನ್ನು ಪತ್ತೆ ಮಾಡಿಕೊಡಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.
2. ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 182/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.
ದಿನಾಂಕ:13-06-2013 ರಂದು ಪಿರ್ಯಾದಿ ವಿಶ್ವನಾಥ ಬಿನ್. ಚಂದ್ರಚಾರಿ, ಮಲ್ಲೇನಹಳ್ಳಿ ಗ್ರಾಮ, ಕೆ.ಅರ್. ಪೇಟೆ ತಾ|| ರವರು ನೀಡಿದ ದೂರಿನ ಸಾರಾಂಶವೇನೆಂದರೆ ಶ್ರೀನಿವಾಸಚಾರಿ ಬಿನ್ ಚಂದ್ರಚಾರಿ, 26ವರ್ಷ, ಮಲ್ಲೇನಹಳ್ಳಿ ಗ್ರಾಮ, ಕೆ.ಅರ್. ಪೇಟೆ ರವರು ದಿನಾಂಕ: 03.06.2013 ರಂದು ಬೆಳಿಗ್ಗೆ 09.30 ಗಂಟೆಯಲ್ಲಿ ಮಲ್ಲೇನಹಳ್ಳಿ ಗ್ತಾಮ, ಕೆ.ಆರ್.ಪೇಟೆ ತಾ|| ರವರು ಪಿರ್ಯಾದಿಯವರ ಮನೆಯಿಂದ ಕೆಲಸಕ್ಕೆ ಹೋಗುತ್ತೇನೆಂದು ಹೇಳಿ ಹೋದವನು ಮನೆಗೆ ಹಿಂದಿರುಗಿ ಬಂದಿರುವುದಿಲ್ಲ. ಈ ದಿವಸದವರೆಗೂ ಎಲ್ಲಾ ಕಡೆ ಹುಡುಕಾಡಲಾಗಿ ಎಲ್ಲೂ ಪತ್ತೆಯಾಗಿರುವುದಿಲ್ಲ. ಆದ್ದರಿಂದ ಕಾಣೆಯಾಗಿರುವ ನನ್ನ ತಮ್ಮ ಶ್ರೀನಿವಾಸಚಾರಿಯನ್ನು ಪತ್ತೆಮಾಡಿಕೊಡಿ ಎಂದು ಈ ದಿವಸ ತಡವಾಗಿ ಬಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
3. ಅರಕೆರೆ ಪೊಲೀಸ್ ಠಾಣೆ ಮೊ.ನಂ. 189/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.
ದಿನಾಂಕ:13-06-2013 ರಂದು ಪಿರ್ಯಾದಿ ನಿಂಗೇಗೌಡ, ವಾಸಃ ಪೀಹಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 08-06-2013 ರಂದು ಪೀಹಳ್ಳಿ ಫಿರ್ಯಾದಿಯವರ ಮನೆಯಿಂದ ನಾಗರತ್ನ ಕೊಂ. ಕೆ.ಸಿ ವಾಸು, ಕುದುರಗುಂಡಿ ಗ್ರಾಮರವರು ಪೀಹಳ್ಳಿ ಗ್ರಾಮದ ತನ್ನ ತಂದೆಯ ಮನೆಯಿಂದ ಎಲ್ಲಿಗೋ ಹೊರಟು ಹೋಗಿದ್ದು, ಕಾಣೆಯಾಗಿದ್ದು, ಇವಳನ್ನು ಕುದುರಗುಂಡಿ ಗ್ರಾಮದ ಇಂದ್ರ ಬಿನ್. ಬೋರೇಗೌಡರವರು ಕರೆದುಕೊಂಡು ಹೋಗಿರುತ್ತಾರೆ ಎಂದು ಅನುಮಾನವಿರುತ್ತದೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
4. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 247/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.
ದಿನಾಂಕ:13-06-2013 ರಂದು ಪಿರ್ಯಾದಿ ಶಿವಲಿಂಗು ಬಿನ್, ಹೊಸಹಳ್ಳಿ, ಮಂಡ್ಯ ಸಿಟಿ, ಸ್ವಂತ ಸ್ಥಳ ದೊಡ್ಡಹಾಲಹಳ್ಳಿ ಗ್ರಾಮ, ಕನಕಪುರ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 01-06-2013 ರಂದು ಅವರ ಹೆಂಡತಿ ಸ್ವರ್ಣ ಮನೆಯಲ್ಲಿ ಇರಲಿಲ್ಲ. ಸರಸ್ವತಿಕಲ್ಯಾಣ ಮಂಟಪದ ಹೊಸಹಳ್ಳಿಯಿಂದ ಹೋದವಳು ಅವಳನ್ನು ಎಲ್ಲಾ ಕಡೆ ತಮ್ಮ ಸಂಬಂಧಿಕರ, ಸ್ನೇಹಿತರ ಮನೆಗಳಲ್ಲಿ ವಿಚಾರಿಸಲಾಗಿ ಪತ್ತೆ ಆಗಿರುವುದಿಲ್ಲ. ಮನೆ ಬಿಟ್ಟು ಹೋಗುವಾಗ ಮನೆಯಲ್ಲಿಟ್ಟಿದ್ದ ವಡವೆ ಮತ್ತು ಹಣವನ್ನು ತೆಗೆದುಕೊಂಡು ಹೋಗಿರುತ್ತಾಳೆ. ಆದ್ದರಿಂದ ಕಾಣೆಯಾಗಿರುವ ತಮ್ಮ ಹೆಂಡತಿಯನ್ನು ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
5. ಮೇಲುಕೋಟೆ ಪೊಲೀಸ್ ಠಾಣೆ ಮೊ.ನಂ. 101/13 ಕಲಂ. ಹೆಂಗಸು ಮತ್ತು ಮಕ್ಕಳು ಕಾಣೆಯಾಗಿದ್ದಾರೆ.
ದಿನಾಂಕ:13-06-2013 ರಂದು ಪಿರ್ಯಾದಿ ಸಿ.ಸಿಂಗೇಗೌಡ ಬಿನ್. ಚಲುವೇಗೌಡ, 50 ವರ್ಷ, ಒಕ್ಕಲಿಗರು, ಅಂಗಡಿ ವ್ಯಾಪಾರಿ, ಒಕ್ಕಲಿಗರ ಬೀದಿ, ಮೇಲುಕೋಟೆ ಟೌನ್, ಪಾಂಡವಪುರ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 13-06-2013 ರಂದು ಮದ್ಯಾಹ್ನ, ಮೇಲುಕೋಟೆಯ ಪಿರ್ಯಾದಿಯವರ ಮನೆಯಿಂದ ಅವರ ಮಗಳು ಶ್ರೀಮತಿ ರಮ್ಯಳು ತನ್ನ ಮಕ್ಕಳಾದ ಪೃಥ್ವೀಗೌಡ, ಮತ್ತು ರಿಷಿಗೌಡ, ರವರನ್ನು ಕರೆದುಕೊಂಡು ಅಂಗಡಿವಾಡಿಗೆ ಹೋಗಿಬರುತ್ತೇನೆಂದು ಹೇಳಿ ಹೋದವಳು ಇದುವವರೆವಿಗೂ ಮನೆಗೆ ಬಂದಿರುವುದಿಲ್ಲವೆಂದು ಇತ್ಯಾದಿಯಾಗಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣ :
ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 155/13 ಕಲಂ. 379 ಐ.ಪಿ.ಸಿ.
ದಿನಾಂಕ:13-06-2013 ರಂದು ಪಿರ್ಯಾದಿ ಎಸ್.ಶಿವಪ್ರಸಾದ್, ಮುತ್ಸಂದ್ರ ವಯಾ- ವತರ್ೂರು, ಬೆಂಗಳೂರು-87 ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕಃ 12-04-2013 ರಂದು ಬಲಮುರಿ ಕ್ಷೇತ್ರ, ಶ್ರೀರಂಗಪಟ್ಟಣದ ಆರೋಪಿ ಪುನೀತ ಬಿನ್. ರಂಗಸ್ವಾಮಿ, ಲಕ್ಷ್ಮೀಕಾಂತ ನಗರ, ಹೆಬ್ಬಾಳ, ಮೈಸೂರು ರವರು ಆರೋಪಿಯಿಂದ ವಶಪಡಿಸಿಕೊಂಡಿರುವ 10 ಮೊಬೈಲ್ಗಳನ್ನು ನೋಡಲಾಗಿ, ಇವುಗಳನ್ನು ಮೈಸೂರಿನ ಲಕ್ಷ್ಮೀಕಾಂತನಗರ ಹೆಬ್ಬಾಳದ ಪುನೀತ್ ಬಿನ್. ರಂಗಸ್ವಾಮಿ, ಎಂಬುವವನು ಕಳ್ಳತನ ಮಾಡಿರುವುದು ಗೊತ್ತಾಗಿರುತ್ತದೆ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ವಂಚನೆ ಪ್ರಕರಣ :
ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 248/13 ಕಲಂ. 167-420-406-409-465-467-468-471 ಐ.ಪಿ.ಸಿ.
ದಿನಾಂಕ:13-06-2013 ರಂದು ಪಿರ್ಯಾದಿ ಈ ಪ್ರಕರಣದ ಪಿರ್ಯಾದಿ ರಹೀಂಖಾನ್ @ ಪಾಷ, ಎಸ್.ಡಿ.ಎಂ.ಸಿ. ಅಧ್ಯಕ್ಷರು, ಸರ್ಕಾರಿ, ಅಜಾದ್ನಗರ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 01-04-2013 ರಂದು ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಓಲ್ಡ್ಟೌನ್, ಅಜಾದ್ನಗರದ ಆರೋಪಿತ ಗೋಹರ್ ಭಾನು, ಮುಖ್ಯಶಿಕ್ಷಕಿ, ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಅಜಾದ್ನಗರ, ಮಂಡ್ಯ ಸಿಟಿ ರವರು ಪ್ರತಿವರ್ಷ ರಾಜ್ಯ ಸರ್ಕಾರದಿಂದ ನೀಡುವ ಬಿಸಿಯೂಟ ಯೋಜನೆಗೆ ಮತ್ತು ಇತರೆ ಯೋಜನೆಗಳಿಗೆ ನೀಡುವ ಅನುದಾನದ ಹಣವನ್ನು ಬಳಸಿರುವ ಬಗ್ಗೆ ಸರಿಯಾಗಿ ನಿರ್ವಹಣೆ ಮಾಡದೆ ಎಸ್.ಡಿ.ಎಂ.ಸಿ. ಅಧ್ಯಕ್ಷರ ಮತ್ತು ಸದಸ್ಯರ ಸಹಿಯನ್ನು ಪೋರ್ಜರಿ ಮಾಡಿ ಸದರಿ ಹಣವನ್ನು ಸ್ವಂತಕ್ಕೆ ದುರುಪಯೋಗಪಡಿಸಿಕೊಂಡು ನಂಬಿಕೆ ದ್ರೋಹವೆಸಗಿ ಮೋಸ ಮಾಡಿರುತ್ತಾರೆ. ಈ ಬಗ್ಗೆ ಆರೋಪಿಯ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ಘನ ನ್ಯಾಯಾಲಯದ ಮುಖಾಂತರ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment