ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 19-06-2013 ರಂದು ಒಟ್ಟು 26 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಗೋ ಹತ್ಯೆ ನಿಷೇದ ಮತ್ತು ಗೋ ಸಂರಕ್ಷಣೆ ಕಾಯ್ದೆ ಪ್ರಕರಣ, 1 ಅಕ್ರಮ ಮರಳು ಗಣಿಗಾರಿಕೆ/ಸಂಗ್ರಹಣೆ/ಸಾಗಾಣಿಕೆ ಪ್ರಕರಣ, 2 ಮನುಷ್ಯ ಕಾಣೆಯಾದ ಪ್ರಕರಣಗಳು, 2 ರಾಬರಿ ಪ್ರಕರಣಗಳು, 3 ಯು.ಡಿ.ಆರ್. ಪ್ರಕರಣಗಳು, 2 ಕರ್ನಾಟಕ ಭೂ ಕಂದಾಯ ಅಧಿನಿಯಮ/ಅಕ್ರಮ ಮರಳು ಸಂಗ್ರಹಣೆ/ಸಾಗಾಣಿಕೆ ಪ್ರಕರಣಗಳು, 1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಾಯಿದೆ ಪ್ರಕರಣ, 1 ವಂಚನೆ ಪ್ರಕರಣ, 1 ಕಳ್ಳತನ ಪ್ರಕರಣ ಹಾಗು 12 ಇತರೆ ಐ.ಪಿ.ಸಿ./ಸಿ.ಆರ್.ಪಿ.ಸಿ./ಕೆ.ಪಿ.ಆಕ್ಟ್. ಪ್ರಕರಣಗಳು ವರದಿಯಾಗಿರುತ್ತವೆ.
ಗೋ ಹತ್ಯೆ ನಿಷೇದ ಮತ್ತು ಗೋ ಸಂರಕ್ಷಣೆ ಕಾಯ್ದೆ ಪ್ರಕರಣ :
ಬೆಳಕವಾಡಿ ಪೊಲೀಸ್ ಠಾಣೆ ಮೊ.ನಂ. 76/13 ಕಲಂ. 8-9-11 ಗೋ ಹತ್ಯ ನಿಷೇದ ಮತ್ತು ಗೋ ಸಂರಕ್ಷಣೆ ಕಾಯ್ದೆ 1964.
ದಿನಾಂಕ: 19-06-2013 ರಂದು ಪಿರ್ಯಾದಿ ಎಂ.ಮಹದೇವಸ್ವಾಮಿ, ಪಿ.ಎಸ್.ಐ. ಬೆಳಕವಾಡಿ ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಮನು ಬಿನ್ ಮೋಹನ್ ರಾಜ್, ಹೊಸಹಳ್ಳಿ ಗ್ರಾಮ, ಬಿ.ಜಿ ಪುರ ಹೋ||, ಮಳವಳ್ಳಿ ತಾ|| ರವರು ಐದು ಮದ್ಯ ವಯಸ್ಸಿನ ಹಸು ಮತ್ತು ಕರುಗಳನ್ನು ಅನಧಿಕೃತವಾಗಿ ಬೇರೆ ಕಡೆಗೆ ಕಸಾಯಿಖಾನೆಗೆ ಸಾಗಿಸಲು ಟಾಟಾ ಏಸ್ ಗೂಡ್ಸ್ ವಾಹನದ ಕಿರಿದಾದ ಜಾಗದಲ್ಲಿ ಹಿಂಸೆಯಿಂದ ನಿತ್ರಾಣವಾದ ಸ್ಥಿತಿಯಲ್ಲಿ ಸಾಗಿಸುತ್ತಿದ್ದರಿಂದ ಸ್ವತಃ ಕೇಸು ದಾಖಲಿಸಿರುತ್ತೆ.
ಅಕ್ರಮ ಮರಳು ಗಣಿಗಾರಿಕೆ/ಸಂಗ್ರಹಣೆ/ಸಾಗಾಣಿಕೆ ಪ್ರಕರಣ :
ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 135/13 ಕಲಂ. 3-42-44 ಕೆ.ಎಂ.ಎಂ.ಸಿ.ಆರ್ 1994 ನಿಯಮ ಕೂಡ 4(1ಎ)-21 (1 ರಿಂದ 5) ಎಂ.ಎಂ.ಆರ್.ಡಿ-1957 ನಿಯಮ ಮತ್ತು 379 ಐ.ಪಿ.ಸಿ.
ದಿನಾಂಕ: 19-06-2013 ರಂದು ಪಿರ್ಯಾದಿ ಶ್ರೀ ಹೆಚ್.ಆರ್.ಮಲ್ಲಿಕಾರ್ಜುನಸ್ವಾಮಿ, ರಾಜಸ್ವ ನಿರೀಕ್ಷಕರು, ಕಸಬಾ ಹೋಬಳಿ, ನಾಗಮಂಗಲ ತಾಲ್ಲೂಕ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 19-06-2013ರ ಬೆಳಗಿನ ಜಾವ 05-00 ಗಂಟೆಯಲ್ಲಿ ಆರೋಪಿ ಕೆ.ಎ-42-8074ರ ಲಾರಿ ಚಾಲಕ ದಿನಾಂಕಃ 19-06-2013ರಂದು ಬೆಳಿಗ್ಗೆ 05-00ಗಂಟೆ ಸಮಯದಲ್ಲಿ ಪಿರ್ಯಾದಿಯವರು ಅಕ್ರಮ ಮರಳು ಸಾಗಾಣಿಕೆಯ ತಪಾಸಣೆಯ ಬಗ್ಗೆ ಪಿ.ನೇರಳೇಕೆರೆ ಗ್ರಾಮದ ಹತ್ತಿರ ತಪಾಸಣೆ ಮಾಡುತ್ತಿದ್ದಾಗ, ಆರೋಪಿತ ಲಾರಿ ಚಾಲಕ ಲಾರಿಯಲ್ಲಿ ಅಕ್ರಮವಾಗಿ ಪರವಾನಗಿ ಇಲ್ಲದೆ ಕದ್ದು ಮರಳು ಸಾಗಾಣಿಕೆ ಮಾಡುತ್ತಿರುತ್ತಾರೆಂದು ಇತ್ಯಾದಿ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣಗಳು :
1. ಕೆರೆಗೋಡು ಪೊಲೀಸ್ ಠಾಣೆ ಮೊ.ನಂ. 89/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.
ದಿನಾಂಕ: 19-06-2013 ರಂದು ಪಿರ್ಯಾದಿ ಜಯಸ್ವಾಮಿಗೌಡ ಬಿನ್ ಸಿದ್ದೇಗೌಡ, ಗಂಟಗೌಡನಹಳ್ಳಿ ಗ್ರಾಮ ರವರು ನೀಡಿದ ದೂರು ಏನೆಂದರೆ ದಿನಾಂಕ: 16-06-2013 ರಂದು ಬೆಳಿಗ್ಗೆ 9-00 ಗಂಟೆಯಲ್ಲಿ ಸಿದ್ದೇಗೌಡ, ವಯಸ್ಸು 85 ವರ್ಷ, ಗಂಟಗೌಡನಹಳ್ಳಿ ಗ್ರಾಮದ ತನ್ನ ಮನೆಯಿಂದ ಕೆರಗೋಡು ಆಸ್ಪತ್ರೆಗೆ ಹೋಗಿ ಬರುವುದಾಗಿ ಹೋದವರು ವಾಪಸ್ಸ್ ಬರಲಿಲ್ಲವೆಂದು ಸಿದ್ದೇಗೌಡ್ರ ಬಿನ್. ಸ್ವಾಮಿಗೌಡ ಎಂಬುವವರು ದಿನಾಂಕ:19-06-2013 ರಂದು ಮಧ್ಯಾಹ್ನ 12-00 ಘಂಟೆಗೆ ಕೆರಗೋಡು ಠಾಣೆಗೆ ಹಾಜರಾಗಿ ಚಹರೆ ವಿವರಗಳೊಂದಿಗೆ ಕೊಟ್ಟ ಲಿಖಿತ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 385/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.
ದಿನಾಂಕ: 19-06-2013 ರಂದು ಪಿರ್ಯಾದಿ ಜಿ. ಎನ್ ರಮೇಶ ಬಿನ್ ಜೆ ಡಿ ನಾರಾಯಣ, ಗುಂಬಸ್ ರಸ್ತೆ, ಗಂಜಾಂ, ಶ್ರೀರಂಗಪಟ್ಟಣ ತಾ. ರವರು ನೀಡಿದ ದೂರಿನ ವಿವರವೇನೆಂದರೆ ಜಾಹ್ನವಿ ಜೆ. (ಮಾನವಿ) ಬಿನ್. ಜಯರಾಮು, 23-ವರ್ಷ, ವಕ್ಕಲಿಗರು ಗೋಸೇಗೌಡರ ಬೀದಿ, ಕೋಲ ಮುಖ, ಗೋದಿ ಬಣ್ಣ, ಸಾಧಾರಣ ಶರೀರ, ಚೂಡಿಧಾರ ಧರಿಸಿರುತ್ತಾಳೆ ಇವರು ದಿನಾಂಕ;-13-06-2013 ರ ಮದ್ಯಾಹ್ನ ಸುಮಾರು 4 ಗಂಟೆಯ ಸಮಯದಲ್ಲಿ ಶ್ರೀರಂಗಪಟ್ಟಣದ ತಮ್ಮ ಮನೆಯಿಂದ ವಿವಾಹದ ಆಹ್ವಾನ ಪತ್ರಿಕೆಯನ್ನು ಸ್ನೇಹಿತರಿಗೆ ನೀಡುವುದಾಗಿ ಹೋಗಿ ಕಾಣೆಯಾಗಿದ್ದು ಎಲ್ಲಾ ಕಡೆ ವಿಚಾರಮಾಡಲಾಗಿ ಎಲ್ಲೂ ಪತ್ತೆ ಆಗದ ಕಾರಣ ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ರಾಬರಿ ಪ್ರಕರಣಗಳು :
1. ಕಿರುಗಾವಲು ಪೊಲೀಸ್ ಠಾಣೆ ಮೊ.ನಂ. 81/13 ಕಲಂ. 392 ಐ.ಪಿ.ಸಿ.
ದಿನಾಂಕ: 19-06-2013 ರಂದು ಪಿರ್ಯಾದಿ ಜ್ಯೋತಿ ಬಿನ್ ಚೌಡಯ್ಯ, ಮೆಣಸಿಕ್ಯಾತನಹಳ್ಳಿ ಗ್ರಾಮ, ಟಿ.ನರಸೀಪುರ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 19-06-2013 ರಂದು ಸುಮಾರು 02-00ಗಂಟೆಯಲ್ಲಿ ಹೆಗ್ಗೂರು ರಸ್ತೆಯ ಪಕ್ಕದಲ್ಲಿದ್ದ ಮೆಡಿಕಲ್ನಿಂದ ಸ್ವಲ್ಪ ಮುಂದೆ ಹೆಗ್ಗೂರು ರಸ್ತೆಯ ಪಕ್ಕದಲ್ಲಿದ್ದ ಬೇಲಿಯಲ್ಲಿ ಬೆಳೆದಿದ್ದ ರೋಜಾ ಗಿಡದ ಎಲೆಗಳನ್ನು ಕಿತ್ತುಕೊಳ್ಳುತ್ತಿದ್ದಾಗ ಯಾರೋ ಒಬ್ಬ ವ್ಯಕ್ತಿಯು ಕಿರುಗಾವಲು ಕಡೆಯಿಂದ ಮೋಟಾರ್ ಬೈಕ್ನಲ್ಲಿ ಬಂದು ನನ್ನ ಕತ್ತಿಗೆ ಕೈಹಾಕಿ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಹೆಗ್ಗೂರು ಕಡೆಗೆ ಹೊರಟುಹೋದನು ಆಗ ಆತ ಹೋಗುತ್ತಿದ್ದ ಬೈಕ್ನ್ನು ಗಮನಿಸಿದಾಗ ಅದು ಹಿರೋಹೋಂಡಾ ಸ್ಲ್ಪೆಂಡರ್ ಬೈಕ್ ನಂ. ಕೆ.ಎ.-42-ಇ-6482 ಆಗಿದ್ದು ಆತ ನೀಲಿಬಣ್ಣದ ಜೀನ್ಸ್ ಪ್ಯಾಂಟ್, ಹಳದಿ ಬಣ್ಣದ ಟೀ ಷರ್ಟ್ ಹಾಗೂ ತಲೆಯಲ್ಲಿ ಕ್ಯಾಪ್ ಹಾಕಿದ್ದನು ಮತ್ತು ಆತನ ಮುಂಗೈ ಮೇಲೆ ಹಸಿರು ಹಚ್ಚೆ ಹಾಕಿತ್ತು ನನ್ನ ಕತ್ತಿನಲ್ಲಿದ್ದ ಚಿನ್ನದ ಸರವು ಸುಮಾರು 05ಗ್ರಾಂ ತೂಕದ್ದಾಗಿದ್ದು ಕಳವು ಮಾಡಿಕೊಂಡು ಹೋಗಿರುವ ವ್ಯಕ್ತಿಯನ್ನು ಪತ್ತೆ ಮಾಡಿ ನನ್ನ ಸರವನ್ನು ಕೊಡಿಸಿಕೊಡಬೇಕಾಗಿ ಕೋರಿಕೊಳ್ಳುತ್ತೇನೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಮೇಲುಕೋಟೆ ಪೊಲೀಸ್ ಠಾಣೆ ಮೊ.ನಂ. 105/13 ಕಲಂ. 395 ಐ.ಪಿ.ಸಿ.
ದಿನಾಂಕ: 19-06-2013ರಂದು ಪಿರ್ಯಾದಿ ಸಿದ್ದೇಗೌಡ ಬಿನ್. ಶಿವಣ್ಣ, 30 ವರ್ಷ, ಒಕ್ಕಲಿಗರು, ವ್ಯವಸಾಯ ಮತ್ತು ಮೋಟಾರ್ ರಿಪೇರಿ ಕೆಲಸ, ಮಾದೇಗೌಡನಕೊಪ್ಪಲು ಗ್ರಾಮ, ದುದ್ದ ಹೋಬಳಿ, ಮಂಡ್ಯ ತಾಲ್ಲೂಕು, ಮಂಡ್ಯ ಜಿಲ್ಲೆ ರವರು ನೀಡಿದ ದೂರಿನ ವಿವರವೇನೆಂದರೆ ತನಗೆ ಪರಿಚಯವಿದ್ದ ಬಳಘಟ್ಟ ಗ್ರಾಮದ ಸಾಕಮ್ಮರವರನ್ನು ತನ್ನ ಮೋಟಾರ್ ಸೈಕಲ್ ನಂ.ಕೆ.ಎ-11 ಕೆ-4526 ರಲ್ಲಿ ಕೂರಿಸಿಕೊಂಡು ಹೋಗುತ್ತಿದ್ದಾಗ ಸಾಕಮ್ಮಳ ಕಡೆಯ ನಾಲ್ಕು ಜನರು ಅಡ್ಡಹಾಕಿ ಪಿರ್ಯಾದಿಯನ್ನು ಅವರ ಬೈಕ್ನಲ್ಲಿ ಕೂರಿಸಿಕೊಂಡು ಸದರಿ ಸ್ಥಳದ ಬಳಿ ಆರೋಪಿಗಳು ಬಲವಂತವಾಗಿ ಕರೆದುಕೊಂಡು ಹೋಗಿ ಪಿರ್ಯಾದಿಗೆ ಮಚ್ಚಿನ ಅಂಡಿನಿಂದ ಎಡಗೈ ಮತ್ತು ಬೆನ್ನಿಗೆ ಹೊಡೆದು ಮತ್ತು ಕೈಗಳಿಂದ ಹೊಡೆದು ಪಿರ್ಯಾದಿಯ ಟಿ.ವಿ.ಎಸ್ ವಿಕ್ಟರ್ ಮೋಟಾರ್ ಸೈಕಲ್ ನಂ.ಕೆ.ಎ-11 ಕೆ-4526ನ್ನು, ಒಂದು ಲವಾ ಮೊಬೈಲ್ ಸೆಟ್, ಒಂದು 2ಹೆಚ್.ಪಿ ಸಿಂಗಲ್ ಮೋಟಾರ್ ಮತ್ತು ನಗದು ಹಣ ರೂ. 5000/-ಗಳನ್ನು ಬಲವಂತವಾಗಿ ಕಿತ್ತುಕೊಂಡು ಹೋಗಿರುತ್ತಾರೆ ಇವುಗಳ ಒಟ್ಟು ಮೌಲ್ಯ 33,000/- ರೂ.ಗಳಾಗಿರುತ್ತೆಂದು ಸಾಕಮ್ಮ ಮತ್ತು ಇತರೇ 4 ಜನ ಗಂಡಸರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಇತ್ಯಾದಿಯಾಗಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಯು.ಡಿ.ಆರ್. ಪ್ರಕರಣಗಳು :
1. ಬೆಳ್ಳೂರು ಪೊಲೀಸ್ ಠಾಣೆ ಯು.ಡಿ.ಆರ್. ನಂ. 13/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 19-06-2013ರಂದು ಪಿರ್ಯಾದಿ ಪದ್ಮನಾಭ ಬಿನ್. ಲೇಟ್. ಜಯಕುಮಾರಯ್ಯ, ಜೈನರ ಬೀದಿ, ಬೆಳ್ಳೂರು ಟೌನ್ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 19-06-2013 ರಂದು 02-30 ಪಿ.ಎಂ. ಗಂಟೆಯಲ್ಲಿ ಜೈನರ ಬೀದಿ, ಬೆಳ್ಳೂರು ರವರು ನೀಡಿದ ದೂರಿನ ವಿವರವೇನೆಂದರೆ, ವಿನಯಕುಮಾರ್, ಬೆಳ್ಳೂರು ಟೌನ್ ಎಂಬುವವರು ಪಿರ್ಯಾದಿಯ ಮಗ ನೇಣುಹಾಕಿಕೊಂಡು ನೇತಾಡುತ್ತಿದುದ್ದನ್ನು ಕಂಡು ಕೂಗಿಕೊಂಡು ಅಕ್ಕ-ಪಕ್ಕದ ಜನರು ಸೇರಿಕೊಂಡರು, ಅಲ್ಲಿಗೆ ಬಂದು ನೋಡಲಾಗಿ ನನ್ನ ಮಗ ಸತ್ತುಹೋಗಿದ್ದ ತನ್ನ ಹೆಂಡತಿ ತೀರಿಹೋಗಿದ್ದರಿಂದ ಹಾಗೂ ಈತನಿಗೆ ಗಂಟಲು ಆಪರೇಷನ್ ಆಗಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ಪ್ಲಾಸ್ಟಿಕ್ ಹಗ್ಗದಿಂದ ಮನೆಯ ಹಿತ್ತಲಿನ ಹೊಂಗೆಮರದ ದಡಿಗೆ ನೇತುಹಾಕಿಕೊಂಡು ಸತ್ತುಹೋಗಿರುತ್ತಾನೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಕೆ.ಆರ್.ಪೇಟೆ ಗ್ರಾಮಾಂತರ ಠಾಣೆ ಯು.ಡಿ.ಅರ್. ನಂ. 17/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 19-06-2013ರಂದು ಪಿರ್ಯಾದಿ ಮಾದೇಗೌಡ ಬಿನ್. ಕೃಷ್ಣೇಗೌಡ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಮಂಜಮ್ಮ @ಮಂಜುಳ ಕೋಂ. ಮಾದೇಗೌಡ, 28ವರ್ಷ, ರಂಗೇಗೌಡನಕೊಪ್ಪಲು ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯ ಹೆಂಡತಿ ಹೊಟ್ಟೆನೊವು ತಾಳಲಾರದೆ ಯಾವುದೊ ಮಾತ್ರೆ ಸೇವಿಸಿ, ಚಿಕಿತ್ಸೆಗಾಗಿ ಕೆ.ಆರ್.ಆಸ್ಪತ್ರೆಗೆ ಸೇರಿಸಿದ್ದರು ಗುಣವಾಗದೆ ಮೃತಪಟ್ಟಿರುತ್ತಾರೆ ಈ ಬಗ್ಗೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
3. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 18/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 19-06-2013ರಂದು ಪಿರ್ಯಾದಿ ರಾಜೇಗೌಡ ಬಿನ್. ಲೇಟ್. ಜವರೇಗೌಡ, ರಂಗೇಗೌಡನಕೊಪ್ಪಲು ಗ್ರಾಮ ರವರು ನೀಡಿದ ದಿನಾಂಕ: 18-06-2013 ರ ಸಂಜೆ 0600 ಗಂಟೆಯಲ್ಲಿ ಅವರ ಮಗ ನಾಗೇಶ್ ಬಿನ್ ಲೇಟ್ ರಾಜೇಗೌಡ, 32 ವರ್ಷ, ರಂಗೇಗೌಡನಕೊಪ್ಪಲು ಗ್ರಾಮ ರವರು ಹೊಟ್ಟೆನೋವು ತಾಳಲಾರದೆ ಕ್ರಿಮಿನಾಶಕ ಸೇವಿಸಿ ಮೃತಪಟ್ಟಿರುತ್ತಾರೆ, ಈ ಬಗ್ಗೆ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಕರ್ನಾಟಕ ಭೂ ಕಂದಾಯ ಅಧಿನಿಯಮ/ಅಕ್ರಮ ಮರಳು ಸಂಗ್ರಹಣೆ/ಸಾಗಾಣಿಕೆ ಪ್ರಕರಣಗಳು :
1.ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 180/13 ಕಲಂ. ಕರ್ನಾಟಕ ಭೂ ಕಂದಾಯ ಅಧಿನಿಯಮ, ಕಲಂ 70-73,
1964 ಹಾಗೂ 379 ಐ.ಪಿ.ಸಿ.
ದಿನಾಂಕ: 19-06-2013ರಂದು ಪಿರ್ಯಾದಿ ಜಿ.ವೆಂಕಟರಾಮಯ್ಯ, ತಹಸೀಲ್ದಾರ್, ನಾಗಮಂಗಲ ತಾಲ್ಲೂಕು, ನಾಗಮಂಗಲ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 19/06/2013 ದೊಡ್ಡೇನಹಳ್ಳಿ ಗ್ರಾಮದ ಸವರ್ೇ ನಂ. 26/ಪಿ1ರ ಜಮೀನಿನಲ್ಲಿ ಆರೋಪಿ ಕೆಂಪೇಗೌಡ ಬಿನ್. ಕಗ್ಗೇಗೌಡ, ಅಂಕನಹಳ್ಳಿ ದಾಖಲೆ, ಹೊಸೂರು ಗ್ರಾಮ, ಬೆಳ್ಳೂರು ಹೋಬಳಿ ರವರು ಸದರಿ ಜಮೀನಿನಲ್ಲಿ ಯಾವುದೇ ಪರವಾನಿಗೆ ಪಡೆಯದೆ ಸುಮಾರು 30 ಲೋಡ್ಗಳಷ್ಟು ಮರಳನ್ನು ಅಕ್ರಮವಾಗಿ ದಾಸ್ತಾನು ಮಾಡಿರುತ್ತಾರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2.ಬೆಳ್ಖೂರು ಪೊಲೀಸ್ ಠಾಣೆ ಮೊ.ನಂ. 181/13 ಕಲಂ. ಕರ್ನಾಟಕ ಭೂ ಕಂದಾಯ ಅಧಿನಿಯಮ, ಕಲಂ 70-73, 1964 ಹಾಗೂ 379 ಐ.ಪಿ.ಸಿ.
ದಿನಾಂಕ: 19-06-2013ರಂದು ಪಿರ್ಯಾದಿ ಜಿ.ವೆಂಕಟರಾಮಯ್ಯ, ತಹಸೀಲ್ದಾರ್, ನಾಗಮಂಗಲ ತಾಲ್ಲೂಕು, ನಾಗಮಂಗಲ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 19-06-2013 ದೊಡ್ಡ ಜಟಕ ಗ್ರಾಮದ ಸರ್ವೆ ನಂ. 169ರಲ್ಲಿ ರಾಮಸ್ವಾಮಿ ಬಿನ್. ಮುಗಯ್ಯ ಮತ್ತು ಸವರ್ೆ ನಂ.-39/1ಎ ರಲ್ಲಿ ಸಾವಿತ್ರಮ್ಮ ಕೋಂ. ಶಿವಯ್ಯರವರ ಜಮೀನಿನಲ್ಲಿ, ಬೆಳ್ಳೂರು ನಲ್ಲಿ ಆರೋಪಿಗಳು ಯಾವುದೇ ಪರವಾನಗಿ ಪಡೆಯದೆ ಸುಮಾರು 25+5 ಲೋಡ್ಗಳಷ್ಟು ಮರಳನ್ನು ಅಕ್ರಮವಾಗಿ ದಾಸ್ತಾನು ಮಾಡಿರುತ್ತಾರೆ ಇವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಕೇಸು ದಾಖಲಿಸಲಾಗಿದೆ.
ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಾಯಿದೆ ಪ್ರಕರಣ :
ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 150/13 ಕಲಂ. 498[ಎ]-323-506-ಕೂಡ 149 ಐಪಿಸಿ 3 & 4 ಡಿ.ಪಿ.ಅಕ್ಟ್.
ದಿನಾಂಕ: 19-06-2013ರಂದು ಪಿರ್ಯಾದಿ ಆಶಾ ಕೊಂ. ಶಿವಲಿಂಗ, ಸಣ್ಣಮಲ್ಲೇಗೌಡರ ಬೀದಿ, ಮಳವಳ್ಳಿ ಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 19-06-2013 ರ ಹಿಂದಿನ ದಿನಗಳಲ್ಲಿ ಮಳವಳ್ಳಿ ಟೌನ್, ದಿ:19-06-13 ರ ಹಿಂದಿನ ದಿನಗಳಲ್ಲಿ, ಮಳವಳ್ಳಿ ಟೌನ್, ಸಣ್ಣಮಲ್ಲೇಗೌಡರ ಬೀದಿಯ, ಅವರ ಮನೆಯಲ್ಲಿ ಆರೋಪಿ ಅವರ ಗಂಡ 1] ಶಿವಲಿಂಗ ಹಾಗು 2] ಶಿವಣ್ಣ [ಮಾವ] 3] ಶ್ರೀಮತಿ. ಗೌರಮ್ಮ [ಅತ್ತೆ] 4] ಶ್ರೀಮತಿ. ಇಂದಿರಾ [ ಪತಿಯ ಅಕ್ಕ] 5] ಕೆಂಚೇಗೌಡ [ಪತಿಯ ಭಾವ] 6] ಶ್ರೀನಿವಾಸ, ಮಳವಳ್ಳಿ ಟೌನ್ ರವರುಗಳು ಎಲ್ಲರೂ ಸೇರಿ ಲಗ್ನ ಕಾಲದಲ್ಲಿ ಕೊಟ್ಟಿರುವ ವರದಕ್ಷಿಣಿ ಸಾಲದು ಎಂದೂ ನಿಮ್ಮ ತಂದೆಯ ಹತ್ತಿರ 1,00,000/- ರೂ.ಗಳನ್ನು ಪಡೆದುಕೊಂಡು ಬಾ ಎಂದೂ ಮನೆಯಲ್ಲಿ ಕಿರುಕುಳ ನೀಡಲು ಪ್ರಾರಂಭಿಸಿದ್ದರಿಂದ ಸದರಿಯವರಿಗೆ 1,00,000/-ರೂ. ಇಲ್ಲ ಎಂದು 40,000/- ರೂ. ಗಳನ್ನು ಕೊಟ್ಟಿರುತ್ತಾರೆ. ಅದರೂ ಸಹ ಹಣ ತೆಗೆದುಕೊಂಡು ಬರುವಂತೆ, ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ನೀಡಿ ನಿನ್ನನ್ನು ಸಾಯಿಸುತ್ತೇನೆಂದು ಬೆದರಿಕೆ ಹಾಕಿರುತ್ತಾರೆಂದು ಇನ್ನೂ ಇತ್ಯಾದಿಯಾಗಿ ನೀಡಿದ ದೂರಾಗಿರುತ್ತದೆ ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ.
ವಂಚನೆ ಪ್ರಕರಣ :
ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 253/13 ಕಲಂ. 420 ಐ.ಪಿ.ಸಿ.
ದಿನಾಂಕ: 19-06-2013ರಂದು ಪಿರ್ಯಾದಿ ಎಸ್.ವಷರ್ಿತ್ ಸಚ್ಚಿದೇವ್ ಬಿನ್. ಶಿವಲಿಂಗೇಗೌಡ, 30 ವರ್ಷ, ವಾಸ ನಂ. 4009/ಸಿ, 1ನೇ ಕ್ರಾಸ್, ಬಂದೀಗೌಡ ಬಡಾವಣೆ, ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ರಮ್ಯಶ್ರೀ ಬಿನ್. ವೀರಭದ್ರ, ಶ್ರೀಲಕ್ಷ್ಮಿವೆಂಕಟೇಶ್ವರ ಪ್ಲೋರ್ಮಿಲ್ [ಪುರಿಬಟ್ಟಿ], 3ನೇ ಕ್ರಾಸ್, ಸಿಹಿನೀರುಕೊಳ, ಮಂಡ್ಯ ಸಿಟಿ ರವರು ನೀಡಿದ ದೂರು ಏನೆಂದರೆ ದಿನಾಂಕ: 12-09-2011 ರಿಂದ 18-01-2012 ರ ವೇಳೆಯಲ್ಲಿ ಬಂದೀಗೌಡ ಬಡಾವಣೆ, ಮಂಡ್ಯ ಸಿಟಿ ರವರು ಫಿರ್ಯಾದಿಗೆ ಮೋಸ ಮಾಡುವ ದುರುದ್ದೇಶದಿಂದ ಬೇರೆ ಯಾರಿಗೋ ಸೇರಿದ ಚೆಕ್ ಅನ್ನು ತಮ್ಮ ಚೆಕ್ ಎಂದು ಫಿರ್ಯಾದಿಗೆ ನಂಬಿಸಿ ಕೊಟ್ಟು ಇದುವರೆಗೂ ಸಾಲದ ಹಣವನ್ನು ವಾಪಸ್ ನೀಡದೆ ಮೋಸ ಮಾಡಿರುತ್ತಾರೆ. ಈ ಬಗ್ಗೆ ಆರೋಪಿಯ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ಘನ ನ್ಯಾಯಾಲಯದ ಮುಖಾಂತರ ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಕಳ್ಳತನ ಪ್ರಕರಣ :
ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 254/13 ಕಲಂ. 380 ಐ.ಪಿ.ಸಿ.
ದಿನಾಂಕ: 19-06-2013ರಂದು ಪಿರ್ಯಾದಿ ಎಸ್.ಸುಮಿತ್ರ ಕೋಂ.. ಡಿ.ಎನ್.ನಂಜುಂಡಯ್ಯ, 36 ವರ್ಷ, 8ನೇ ಕ್ರಾಸ್, ಗಾಂಧಿನಗರ, ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 15-06-13 ರಂದು , 8ನೇ ಕ್ರಾಸ್, ಗಾಂಧಿನಗರ, ಮಂಡ್ಯ ಸಿಟಿಯಲ್ಲಿರುವ ಫಿರ್ಯಾದಿಯವರ ವಾಸದ ಮನೆಯಲ್ಲಿ ದಿನಾಂಕ:15-.06-.2013 ರಂದು ಬೆಳಿಗ್ಗೆ 8.00 ರಿಂದ 9.30 ಗಂಟೆ ಸಮಯದಲ್ಲಿ ನಾನು ಸ್ನಾನ ಮಾಡಲು ನನ್ನ ಬಾಬ್ತು ಚಿನ್ನದ ಮಾಂಗಲ್ಯ ಸರವನ್ನು ಬಿಚ್ಚಿ ಹಂಡೆಯ ಮೇಲೆ ಇಟ್ಟು ಸ್ನಾನ ಮುಗಿಸಿ ಬಂದು ತಿಂಡಿ ತಿಂದು ತಟ್ಟೆಯನ್ನು ಹೊರಗಡೆ ಇಡುವ ಸಮಯದಲ್ಲಿ ಒಬ್ಬ ಶನಿಮಹಾತ್ಮ ದೇವರ ಫೋಟೋವನ್ನು ಹಿಡಿದುಕೊಂಡು ಬಿಕ್ಷುಕನು ಬಂದನು. ಆಗ ನಾನು ನಮ್ಮ ಮನೆಯ ಹಿಂಬಾಗದಲ್ಲಿ ಇದ್ದ ನಮ್ಮ ಸೋದರ ಮಾವನ ಮಗಳ ಹತ್ತಿರ ಹೋಗಿ ಆಕೆಯಿಂದ 2/- ರೂಪಾಯಿ ಬಿಕ್ಷೆ ಕೊಡಿಸಿದೆ. ಆಗ ಸದರಿ ಸರವು ಅಲ್ಲೇ ಇತ್ತು. ನಂತರ 5 ನಿಮಿಷ ಬಿಟ್ಟು ನನ್ನ ಚಿನ್ನದ ಸರವನ್ನು ಹಾಕಿಕೊಳ್ಳಲು ಹೋದಾಗ ನನ್ನ ಚಿನ್ನದ ಸರ ಇರಲಿಲ್ಲ. ನನಗೆ ಆ ಬಿಕ್ಷುಕನ ಮೇಲೆ ಅನುಮಾನ ಇರುತ್ತೆ. ಆತನು ಎಣ್ಣೆಗೆಂಪು ಬಣ್ಣದಿಂದ ಕೂಡಿದ್ದು ದುಂಡು ಮುಖದವನಾಗಿದ್ದು ಸುಮಾರು 45 ರಿಂದ 50 ವರ್ಷ ವಯಸ್ಸಾಗಿರುತ್ತೆ. ಸದರಿ ಚಿನ್ನದ ಸರವು 63 ಗ್ರಾಂ ತೂಕದ ಒಂದು ಎರಡೆಳೆ ಚಿನ್ನದ ಮಾಂಗಲ್ಯ ಸರ ಮತ್ತು ಚಿನ್ನದ ತಾಳಿ 2] ಎರಡು ಚಿನ್ನದ ಗುಂಡುಗಳು ಮತ್ತು ಒಂದು ಕಾಸು ಹಾಗೂ ಒಂದು ಚಿನ್ನದ ಕೊಂಡಿಗಳಾಗಿದ್ದು ಒಟ್ಟು ತೂಕ 76 ಗ್ರಾಂ.ಇದ್ದು ಮೌಲ್ಯ 1,75,000/-ರೂಪಾಯಿಗಳಾಗುತ್ತೆ ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸುವಂತೆ ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment