ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 20-06-2013 ರಂದು ಒಟ್ಟು 30 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 3 ಮನುಷ್ಯ ಕಾಣೆಯಾದ ಪ್ರಕರಣಗಳು, 2 ಕಳ್ಳತನ ಪ್ರಕರಣಗಳು, 1 ವಂಚನೆ ಪ್ರಕರಣ, 1 ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ ಹಾಗು 23 ಇತರೆ ಐ.ಪಿ.ಸಿ./ಸಿ.ಆರ್.ಪಿ.ಸಿ./ಕೆ.ಪಿ.ಆಕ್ಟ್./ಅಬಕಾರಿ ಕಾಯಿದೆ ಪ್ರಕರಣಗಳು ವರದಿಯಾಗಿರುತ್ತವೆ.
ಮನುಷ್ಯ ಕಾಣೆಯಾದ ಪ್ರಕರಣಗಳು :
1. ಕಿರುಗಾವಲು ಪೊಲೀಸ್ ಠಾಣೆ ಮೊ.ನಂ. 82/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.
ದಿನಾಂಕ: 20-06-2013 ರಂದು ಪಿರ್ಯಾದಿ ಸೈಯದ್ ಬಾಷ, ಚನ್ನೇಗೌಡ ಬಡಾವಣೆ, ಮದ್ದೂರು ಟೌನ್ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 19-06-2013 ಸಂಜೆ 04-00 ಗಂಟೆಯಲ್ಲಿ ಶಿವಪುರದ ಹತ್ತಿರ ರಾಜ್ಯ ಹೆದ್ದಾರಿಯಲ್ಲಿ ಪಿರ್ಯಾದಿಯ ಅಣ್ಣರವರು ಪ್ಲಾಸ್ಟಿಕ್ ವ್ಯಾಪಾರ ಮಾಡಿಕೊಂಡು ಮನೆಗೆ ಶಿವಪುರದ ಬಳಿ ಬರುತ್ತಿದ್ದಾಗ ಕೆ.ಎ.03-ಎಂ.ಪಿ.-4399 ಕಾರ್ ಹಿಂದಿನಿಂದ ಬಂದು ಡಿಕ್ಕಿ ಮಾಡಿದ ಪರಿಣಾಮ ಅವರಿಗೆ ಪೆಟ್ಟಾಗಿರುತ್ತೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ನಾಗಮಂಗಲ ಪಟ್ಟಣ ಪೊಲೀಸ್ ಠಾಣೆ ಮೊ.ನಂ. 100/13 ಕಲಂ. ಮನುಷ್ಯ ಕಾಣೆಯಾಗಿದ್ಧಾನೆ.
ದಿನಾಂಕ: 20-06-2013 ರಂದು ಪಿರ್ಯಾದಿ ವಜೀದ್ ಖಾನಂ ಕೋಂ. ಅಥ್ಥರ್ ಖಾನ್, ಹನೀಫ್ ಮೊಹಲ್ಲಾ ಮಂಡ್ಯ ರಸ್ತೆ, ನಾಗಮಂಗಲ ಟೌನ್ ರವರು ನೀಡಿದ ದೂರು ಏನೆಂದರೆ ದಿನಾಂಕ: 15-06-2013 ಬೆಳಗಿ ಜಾವ 06-00 ಗಂಟೆಯಲ್ಲಿ, ಆರೋಪಿ ಅಥ್ಥರ್ ಖಾನ್, 42 ವರ್ಷ, ಕಾರ್ ನಂಬರ್ ಕೆ.ಎ.-09-ಎನ್-3804, ಸಿಲ್ವರ್ ಬಣ್ಣದ ಅಸೆಂಟ್ ಕಾರ್ ಹನೀಫ್ ಮೂಹಲ್ಲಾ ನಾಗಮಂಗಲ ಟೌನ್ ರವರು ಮನೆಯಿಂದ ಹೊರಗೆ ಹೋದವರು ಇದುವರೆಗೂ ವಾಪಸ್ಸ್ ಮನೆಗೆ ಬಂದಿರುವುದಿಲ್ಲ ಕಾಣೆಯಾಗಿರುವ ನನ್ನ ಗಂಡನನ್ನು ಹುಡುಕಿಕೊಡಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.
3. ಮೇಲುಕೋಟೆ ಪೊಲೀಸ್ ಠಾಣೆ ಮೊ.ನಂ. 106/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆೆ.
ದಿನಾಂಕ: 20-06-2013 ರಂದು ಪಿರ್ಯಾದಿ ಲಕ್ಷ್ಮಿ ಕೋಂ. ಶಿವಕುಮಾರ, 30ವರ್ಷ, ಪಿ.ಹೊಸಹಳ್ಳಿಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕಃ13-06-2013 ರಂದು ಬೆಳಿಗ್ಗೆ 08-00 ಗಂಟೆಯಲ್ಲಿ ಪಿ.ಹೊಸಹಳ್ಳಿ, ಶಿವಕುಮಾರ, 38ವರ್ಷ, ಪಿ.ಹೊಸಹಳ್ಳಿ ಗ್ರಾಮ ರವರು ಕಾಣೆಯಾಗಿರುವ ನನ್ನ ಗಂಡನನ್ನು ಪತ್ತೆಮಾಡಿಕೊಡಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.
ಕಳ್ಳತನ ಪ್ರಕರಣಗಳು :
1. ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 144/13 ಕಲಂ. 380 ಐ.ಪಿ.ಸಿ.
ದಿನಾಂಕ: 20-06-2013 ರಂದು ಪಿರ್ಯಾದಿ ಕೆ. ಗೋವಿಂದ, ರಾಜುಬಡ್ತಿ ಮುಖ್ಯ ಶಿಕ್ಷಕರು, ಹಿರಿಯ ಪ್ರಾಥಮಿಕ ಶಾಲೆ, ಹಿರಿಕಳಲೇ ಗ್ರಾಮ, ಕೆ.ಆರ್ ಪೇಟೆ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 19-06-2013 ರಾತ್ರಿ ವೇಳೆಯಲ್ಲಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹಿರಿಕಳಲೇ ಗ್ರಾಮ, ಕಸಬಾ ಈ ದಿವಸ ಬೆಳಿಗ್ಗೆ 09-30 ಗಂಟೆಗೆ ಶಾಲೆಗೆ ಬಂದು ಕಂಪ್ಯೂಟರ್ ಕೊಠಡಿಯ ಬಾಗಿಲು ತೆಗೆದು ನೋಡಲಾಗಿ ರೂಂ.ನಲ್ಲಿದ್ದ ಕಂಪ್ಯೂಟರ್ನ 02 ಮಾನಿಟರ್, 01 ಕೀ ಬೋರ್ಡ್, 04 ಸ್ಪೀಕರ್, 01 ಮೌಸ್ ನ್ನು ಯಾರೋ ಕಳ್ಳತನ ಮಾಡಿರುತ್ತಾರೆ ರೂಂನ ಬಾಗಿಲು, ಕಿಟಕಿ, ಗ್ಲಾಸ್ ಗಳು ಹಾಗೇ ಇರುತ್ತವೆ ಎಂದು ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 217/13 ಕಲಂ. 457-380 ಐ.ಪಿ.ಸಿ.
ದಿನಾಂಕ: 20-06-2013 ರಂದು ಪಿರ್ಯಾದಿ ಸ್ವಾಮಿಗೌಡ, ಕೆಂಚನಹಳ್ಳಿ ಗ್ರಾಮ, ಪಾಂಡವಪುರ ತಾಲ್ಲೋಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 19-06-2013 ರ ರಾತ್ರಿ ವೇಳೆ, ಚಂದ್ರೆ ಗ್ರಾಮ, ಪಾಂಡವಪುರ ತಾಲ್ಲೋಕು ನಲ್ಲಿ ಪಿರ್ಯಾದಿಯವರ ಬಾಬ್ತು ಜಮೀನಿಗೆ ಹಾಕಿದ್ದ ಪಂಪ್ ಸೆಟ್ನ ತಾಮ್ರದ ವೈರಿರುವ ಆರ್ಮೇಚರ್ ಭಾಗವನ್ನು ಯಾರೋ ಕಳ್ಳರು ರಾತ್ರಿ ವೇಳೆ ಬಿಚ್ಚಿರುವುದು ಕಂಡು ಬಂತು ನಮ್ಮ ಪಕ್ಕದ ಜಮೀನಿನವರುಗಳಾದ ಮೂಗೇಗೌಡರವರ ಮಗ ಮಾದೇಗೌಡ, ಚಿಕ್ಕಕರೀಗೌಡರವರ ಮಗ ಚನ್ನೇಗೌಡ, ಜವರೇಗೌಡರವರ ಮಗ ಚಿಕ್ಕಮೊಗೇಗೌಡ ಅವರುಗಳ ಜಮೀನಿನಲ್ಲಿ ಅಳವಡಿಸಿದ್ದ ಮೋಟಾರ್ ಗಳ ತಾಮ್ರದ ವೈರಿರುವ ಆರ್ಮೇಚರ್ ಭಾಗವನ್ನು ಕಳವು ಮಾಡಿರುತ್ತಾರೆ ಒಟ್ಟು ಬೆಲೆ ಸುಮಾರು 20 ರಿಂದ 25 ಸಾವಿರ ರೂಗಳಾಗಬಹುದು. ಕಳವು ಮಾಡಿರುವವರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಲು ಕೋರಿ ನೀಡಿದ ದೂರಿನ ಮೇರೆಗೆ ಕೇಸು ದಾಖಲಿಸಲಾಗಿದೆ.
ವಂಚನೆ ಪ್ರಕರಣ :
ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 258/13 ಕಲಂ. 417-493-497-313-506 ಐ.ಪಿ.ಸಿ.
ದಿನಾಂಕ: 20-06-2013 ರಂದು ಪಿರ್ಯಾದಿ ಎನ್.ಎಸ್.ಲೀನಾ ಬ್ರಿಗೇಡಾ ಡಿಮೈಲ್, 35 ವರ್ಷ, ನಂ. 1748/1ಎ, 5ನೇ ಕ್ರಾಸ್, ಕ್ರಿಶ್ಚಿಯನ್ ಕಾಲೋನಿ, ಮಂಡ್ಯ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಹೆಚ್.ಟಿ.ರಾಜೇಶ್ ಬಿನ್. ತಿಮ್ಮೇಗೌಡ, ಹನಿಯಂಬಾಡಿ ಗ್ರಾಮ, ಕೊತ್ತತ್ತಿ ಹೋಬಳಿ, ಮಂಡ್ಯ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಡಿಸೆಂಬರ್-2007 ರಿಂದ ಮಾರ್ಚ್-2013/ 8ನೇ ಕ್ರಾಸ್, ಚಾಮುಂಡೇಶ್ವರಿನಗರ, ಮಂಡ್ಯ ರವರು, ಫೆಬ್ರವರಿ-2007 ರಲ್ಲಿ ಮೊಬೈಲ್ ಮುಖಾಂತರ ಕರೆ ಮಾಡಿ, ಎಸ್ಎಂಎಸ್ ಕಳುಹಿಸಿ ಪರಿಚಯ ಮಾಡಿಕೊಂಡು ನಿನ್ನನ್ನು ಪ್ರೀತಿಸುತ್ತೇನೆ, ಮದುವೆಯಾಗುತ್ತೇನೆಂದು ನಂಬಿಸಿ ಡಿಸೆಂಬರ್-2007 ರಲ್ಲಿ ತನ್ನ ಇಷ್ಟಕ್ಕೆ ವಿರೋಧವಾಗಿ ದೈಹಿಕ ಸಂಪರ್ಕ ಬೆಳೆಸಿ ಗಭರ್ಿಣಿ ಮಾಡಿ ದಿನಾಂಕ: 26-01-2008 ರಂದು ಕೆಂಗೇರಿಯ ಸಹನಾ ಆಸ್ಪತ್ರೆಯಲ್ಲಿ ಬಲವಂತವಾಗಿ ಗರ್ಭಪಾತ ಮಾಡಿಸಿರುತ್ತಾನೆ. ಇದಾದ ಮೇಲೂ ತನಗೆ ಬೇಕಾದಾಗಲೆಲ್ಲಾ ಹಿಂಸಿಸಿ ಪದೇ ಪದೇ ದೈಹಿಕ ಸಂಭೋಗ ಮಾಡಿ 2009 ರಲ್ಲಿ ಮದುವೆಯಾಗುವುದಿಲ್ಲ ಎಂದು ಬಿಟ್ಟುಬಿಟ್ಟಿದ್ದು ನಂತರ ದಿನಾಂಕ: 24-05-2009ರಂದು ಫಿರ್ಯಾದಿಯು ದೀಪಕ್ ಎಂಬುವನೊಂದಿಗೆ ಮದುವೆ ಆಗಿದ್ದರೂ ಸಹ ಆರೋಪಿತನು ಫಿರ್ಯಾದಿಯನ್ನು ಹೆದರಿಸಿ ಮತ್ತೆ ದೈಹಿಕ ಸಂಪರ್ಕ ಬೆಳೆಸಿದ್ದರಿಂದ ಮನನೊಂದು ತನ್ನ ಗಂಡನಿಂದ ವಿಚ್ಛೇದನಾ ಪಡೆದುಕೊಂಡಿದ್ದು ತದನಂತರ ಅನೇಕ ಬಾರಿ ಆರೋಪಿಯು ಫಿರ್ಯಾದಿಯೊಂದಿಗೆ ಬಲವಂತವಾಗಿ ದೈಹಿಕ ಸಂಭೋಗ ಮಾಡಿದ್ದರಿಂದ ಗಭರ್ಿಣಿಯಾಗಿ ದಿನಾಂಕ: 10-07-2010 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದು ಮುಂದೆ ಮದುವೆಯಾಗುವುದಾಗಿ ಸುಳ್ಳು ಕಾರಣಗಳನ್ನು ಹೇಳುತ್ತಾ ಅಕ್ಟೋಬರ್-2012 ರಲ್ಲಿ ಮಂಡ್ಯ ಚಾಮುಂಡೇಶ್ವರಿನಗರದ 8ನೇ ಕ್ರಾಸ್ನಲ್ಲಿ ಬಾಡಿಗೆ ಮನೆ ಮಾಡಿ ಇರಿಸಿಕೊಂಡು 5 ತಿಂಗಳು ತನ್ನೊಂದಿಗೆ ಸಂಸಾರ ಮಾಡಿಕೊಂಡಿದ್ದು ಈ ವಿಚಾರವನ್ನು ಯಾರಿಗಾದರೂ ಹೇಳಿದರೆ ನಿನ್ನನ್ನು ಮತ್ತು ನಿನ್ನ ಮಗುವನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸುವುದಾಗಿ ಬೆದರಿಕೆ ಹಾಕಿ ಮಾರ್ಚ್.-2013 ರಿಂದ ತನ್ನೊಂದಿಗಿನ ಸಂಬಂಧವನ್ನು ನಿರಾಕರಿಸಿ ಬೇರೆ ಮದುವೆಯಾಗಲು ತಯಾರಿ ನಡೆಸಿರುತ್ತಾನೆ ಈ ಬಗ್ಗೆ ಆರೋಪಿತನ ಮೇಲೆ ಕಾನೂನು ರೀತ್ಯ ಕ್ರಮ ಜರುಗಿಸಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ :
ಕೆರೆಗೋಡು ಪೊಲೀಸ್ ಠಾಣೆ ಮೊ.ನಂ. 90/13 ಕಲಂ. 323-448-504-506 ಕೂಡ 149 ಐ.ಪಿ.ಸಿ. ಜೊತೆಗೆ 3ಕ್ಲಾಸ್ (1) ಸಬ್ ಕ್ಲಾಸ್ (10) ಎಸ್ಸಿ/ಎಸ್ಟಿ ಆಕ್ಟ್.
ದಿನಾಂಕ: 20-06-2013 ರಂದು ಪಿರ್ಯಾದಿ ಜೆ.ಪ್ರದೀಪ ಬಿನ್. ಜಡಿಯಯ್ಯ, ಜನತಾ ಕಾಲೋನಿ, ಹುಲಿವಾನ ಗ್ರಾಮ, ಕೆರಗೋಡು ಹೋಬಳಿ, ಮಂಡ್ಯರವರು ನೀಡಿದ ದೂರಿನ ಸಾರಾಂಶವೇನೆಂದರೆ ಅರೋಪಿಗಳಾದ 1). ನಾಗೇಶ, 2). ಮುದ್ದುರಾಜ, 3). ಬೋರೇಗೌಡ, 4).ಮಹೇಶ (ಶೇಷ) 5) ಮಂಜ ಎಲ್ಲರೂ ಹುಲಿವಾನ ಗ್ರಾಮ ಇವರುಗಳು ನೀರು ಹಿಡಿಯುವ ವಿಚಾರದಲ್ಲಿ ವಾಟರ್ಮೆನ್ ನಾಗೇಶನು ತನಗೆ ನೀನು ಮಾದಿಗ ಜನಾಂಗದವನು ಎಂದು ಬೈದು ಕಪಾಳಕ್ಕೆ ಹೊಡೆದು ನಂತರ ದಿನಾಂಕಃ 19-06-2013ರಂದು ಸಂಜೆ 06-30 ಗಂಟೆಯಲ್ಲಿ ಮುದ್ದುರಾಜ, ಬೋರೇಗೌಡ, ಮಹೇಶ (ಶೇಷ), ಮಂಜ ಎಂಬುವರು ಮನೆಗೆ ನುಗ್ಗಿ ಎಳೆದಾಡಿ ಕಪಾಳಕ್ಕೆ ಹೊಡೆಯುತ್ತಿದ್ದಾಗ ನನ್ನ ತಾಯಿ ಕೇಳಿದ್ದಕ್ಕೆ ಮಾದಿಗ ಬಡ್ಡಿ, ಎಂದು ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿರುತ್ತಾರೆ. ಮತ್ತೆ ಸೋಮವಾರ ನಿಮ್ಮ ಮಗನನ್ನು ಕೊಲ್ಲುತ್ತೇವೆಂದು ಕೊಲೆ ಬೆದರಿಕೆ ಹಾಕಿರುತ್ತಾರೆ. ಅಲ್ಲದೆ ನಮ್ಮ ಮನೆಯವರನ್ನು ಸುಟ್ಟುಹಾಕುತ್ತೇವೆಂದು ಕೊಲೆ ಬೆದರಿಕೆ ಹಾಕಿದ್ದು. ನನ್ನ ತಂದೆ ತಾಯಿ ಇಬ್ಬರನ್ನು ಕತ್ತರಿಸಿ ಜೈಲಿಗೆ ಹೋಗುತ್ತೇವೆ ಎಂದು ಬೆದರಿಕೆ ಹಾಕಿರುತ್ತಾರೆ. ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.
No comments:
Post a Comment