Moving text

Mandya District Police

DAILY CRIME REPORT DATED : 22-06-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 22-06-2013 ರಂದು ಒಟ್ಟು 15 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಅಪಹರಣ ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ,  1 ವಾಹನ ಕಳವು ಪ್ರಕರಣ,  1 ಮಹಿಳಾ ದೌಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ,  1 ಮನಿಲೆಂಡರ್ ಕಾಯಿದೆ-1961 ಹಾಗು ಕರ್ನಾಟಕ  ಪ್ರೊಹಿಬಿಷನ್ ಚಾರ್ಜಿಂಗ್   ಎಕ್ಸಾಬಂರ್ಡೆಂಟ್ ಇಂಟ್ರಸ್ಟ್ ಕಾಯಿದೆ -2004 ಪ್ರಕರಣ,  1 ಯು.ಡಿ.ಆರ್. ಪ್ರಕರಣ,  1 ಆಕಸ್ಮಿಕ ಬೆಂಕಿ ನಷ್ಟ ಪ್ರಕರಣ,  1 ಕಳ್ಳತನ ಪ್ರಕರಣ ಹಾಗು 8 ಇತರೆ ಐ.ಪಿ.ಸಿ. ಪ್ರಕರಣಗಳು ವರದಿಯಾಗಿರುತ್ತವೆ. 


ಅಪಹರಣ ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 388/13 ಕಲಂ. 366 ಐ.ಪಿ.ಸಿ.

ದಿನಾಂಕ: 22-06-2013 ರಂದು ಪಿರ್ಯಾದಿ ಶಿವಾನಂದ ಬಿನ್. ಮರೀಗೌಡ, ಕ್ಯಾತನಹಳ್ಳಿ ಗ್ರಾಮ, ಪಾಂಡವಪುರ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಶಿವ ಬಿನ್. ಲೇಟ್ ಚಂದ್ರು, ಕೀಲಾರ ಗ್ರಾಮ, ಮಂಡ್ಯ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 21-06-2013ರಂದು ಮಧ್ಯಾಹ್ನ,  ಕ್ಯಾತನಹಳ್ಳಿ, ಪಾಂಡವಪುರ ತಾ. ರವರು ಪಿರ್ಯಾದಿಯವರ ಮಗಳನ್ನು ಪುಸಲಾಯಿಸಿ ಮದುವೆ ಮಾಡಿಕೊಳ್ಳುವ ಉದ್ದೇಶದಿಂದ ಅಪಹರಣ ಮಾಡಿಕೊಂಡು ಹೋಗಿರುತ್ತಾನೆಂದು ಅನುಮಾನವಿರುತ್ತದೆ ಅವಳನ್ನು ಪತ್ತೆಮಾಡಿ ಕಾನೂನು ಕ್ರಮ ತೆಗೆದುಕೊಳ್ಳುವಂತೆ ದೂರು ನೀಡಿದ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ. 


ಮನುಷ್ಯ ಕಾಣೆಯಾದ ಪ್ರಕರಣ :

ಬಸರಾಳು ಪೊಲೀಸ್ ಠಾಣೆ ಮೊ.ನಂ. 88/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.

ದಿನಾಂಕ: 22-06-2013 ರಂದು ಪಿರ್ಯಾದಿ ಶಫೀ ಅಹಮದ್ ಬಿನ್. ಆಲಮ್ಬಾಯ್, ಬಸರಾಳು ಗ್ರಾಮ, ಮಂಡ್ಯ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಅವರ ಹೆಂಡತಿ ಸುಮಯಾಭಾನು ಕೋಂ. ಶéಫೀ ಅಹಮದ್, 28ವರ್ಷ, ಮುಸ್ಲಿಂ ಜನಾಂಗ, ಬಸರಾಳು ಗ್ರಾಮ ಮಂಡ್ಯ ರವರು ಮನೆಯಿಂದ ಹೊರಗೆ ಹೋದವಳು ವಾಪಸ್ಸ್ ಬಂದಿರುವುದಿಲ್ಲ ಕಾಣೆಯಾಗಿರುತ್ತಾರೆ. ಅವರನ್ನು ಪತ್ತೆ ಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ. 


ವಾಹನ ಕಳವು ಪ್ರಕರಣ :

ಮದ್ದೂರು ಪೊಲೀಸ್ ಠಾಣೆ ಮೊ.ನಂ. 277/13 ಕಲಂ. 102, 41(ಡಿ) ಸಿ.ಆರ್.ಪಿ.ಸಿ. ಕೂಡ 379 ಐ.ಪಿ.ಸಿ.

ದಿನಾಂಕ: 22-06-2013 ರಂದು ಪಿರ್ಯಾದಿ ಗೋಪಾಲ, ಸಿಪಿಸಿ-694 ಮದ್ದೂರು ಪೊಲೀಸ್ ಠಾಣೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಗೌತಮ್ ಶಂಕರ್ ವಿ.ಆರ್. @ ಲವ ವಳೆಗೆರೆಹಳ್ಳಿ ಮದ್ದೂರು ತಾ. ಎಂಬುವವರು ದಿನಾಂಕ: 21-06-2013ರಂದು ರಾತ್ರಿ ಕೆಎ06-ಎಕ್ಸ್-1280 ಹಿರೋಹೊಂಡಾ ಪ್ಯಾಷನ್ ಪ್ಲಸ್ ಗಾಡಿಯನ್ನು ರಾಮನಗರದ ಕೃಷ್ಣ ಹಾಗೂ ಆರೋಪಿಯು ಕದ್ದು ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ಕರ್ತವ್ಯದಲ್ಲಿದ್ದ ಪಿರ್ಯಾದಿಯು ವಶಕ್ಕೆ ತೆಗೆದುಕೊಂಡಿರುತ್ತಾರೆ ಅವರ ಮೇಲೆ ಸೂಕ್ತ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ. 


ಮಹಿಳಾ ದೌಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :

ಮದ್ದೂರು ಪೊಲೀಸ್ ಠಾಣೆ ಮೊ.ನಂ. 278/13 ಕಲಂ. 506-34-498(ಎ)-504-323 ಐ.ಪಿ.ಸಿ.

ದಿನಾಂಕ: 22-06-2013 ರಂದು ಪಿರ್ಯಾದಿ ಸಿ.ಡಿ.ಸುಚಿತ್ರ ಕೋಂ ಜಿ.ಪಿ.ಪ್ರತಾಪ್ ಗೆಜ್ಜಲಗೆರೆ ಮದ್ದೂರು ತಾ. ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಅವರ ಗಂಡ 1)ಜಿ.ಪಿ. ಪ್ರತಾಪ, ಅತ್ತೆ 2)ಸರೋಜಮ್ಮ ಇಬ್ಬರೂ ಗೆಜ್ಜಲಗೆರೆ ಗ್ರಾಮದವರುಗಳು ದಿನಾಂಕ:21-6-2013ರಂದು ಪಿರ್ಯಾದಿಯವರಿಗೆ ತಮ್ಮ ಖಚರ್ಿಗೆ ಹಣ ತರುವಂತೆ ಹೊಡೆದು ಬೈದು ತೊಂದರೆ ಕೊಡುತ್ತಿದ್ದು ದೈಹಿಕವಾಗಿ ಮಾನಸಿಕವಾಗಿ ಹಿಂಸೆನಿಡುತ್ತಿದ್ದು ಮನೆ ಬಿಟ್ಟು ಹೋಗದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವ ಬಗ್ಗೆ ದೂರು ನೀಡಿದ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.  


 ಮನಿಲೆಂಡರ್ ಕಾಯಿದೆ-1961 ಹಾಗು ಪ್ರೊಹಿಬಿಷನ್ ಚಾರ್ಜಿಂಗ್   ಎಕ್ಸಾಬಂರ್ಡೆಂಟ್ ಇಂಟ್ರಸ್ಟ್ ಕಾಯಿದೆ -2004 ಪ್ರಕರಣ :

ಕೆಸ್ತೂರು ಪೊಲೀಸ್ ಠಾಣೆ ಮೊ.ನಂ. 142/13 ಕಲಂ. 504-506-306 ಐ.ಪಿ.ಸಿ. ಹಾಗೂ 39 ಮನಿಲೆಂಡರ್ ಕಾಯಿದೆ-1961, ಮತ್ತು 3 & 4 ಪ್ರೊಹಿಬಿಷನ್ ಚಾರ್ಜಿಂಗ್   ಎಕ್ಸಾಬಂರ್ಡೆಂಟ್ ಇಂಟ್ರಸ್ಟ್ ಕಾಯಿದೆ -2004.

ದಿನಾಂಕ: 22-06-2013 ರಂದು ಪಿರ್ಯಾದಿ ಹೆಚ್.ಸಿ.ಅಭಿಷೇಕ್ ಗೌಡ ಬಿನ್. ಹೆಚ್.ಜೆ. ಚಂದ್ರಶೇಖರ್, 20 ವರ್ಷ, ವ್ಯವಸಾಯ, ಒಕ್ಕಲಿಗರು, ಕೆಸ್ತೂರು ಟೌನ್,  ಆತಗೂರು ಹೋಬಳಿ, ಮದ್ದೂರು ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿತ ಡಿ. ರಾಮೇಗೌಡ ಬಿನ್. ದಾಸೇಗೌಡ, ಕೆಸ್ತೂರು ಟೌನ್ ರವರು ದಿನಾಂಕ: 12-06-2013 ರಂದು ಮಧ್ಯಾಹ್ನ 12-30 ಗಂಟೆಯ ಸಮಯದಲ್ಲಿ ಆರೋಪಿಯು ಕೊಟ್ಟಿದ್ದ ಸಾಲದ ಹಣದ ವಿಚಾರವಾಗಿ ನೀನು ಸಾಲ ತೀರಿಸಲಾಗದೆ ಹೋದರೆ ನೀನು ಸಾಯುವುದೇ ಮೇಲೂ ಎಂದು ಬೈದಿದ್ದರಿಂದ ಮನನೊಂದು ಯಾವುದೋ ಕ್ರಿಮಿನಾಶಕವನ್ನು ಸೇವಿಸಿದ್ದು ಚಿಕಿತ್ಸೆಯ ಬಗ್ಗೆ ಮಂಡ್ಯ ಜಿಲ್ಲಾ ಸರ್ಕಾರಿ  ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರುತ್ತಾರೆ ಆದ್ದರಿಂದ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಕೇಸು ದಾಖಲಿಸಲಾಗಿದೆ.  


ಯು.ಡಿ.ಆರ್. ಪ್ರಕರಣ :

ಕೆರೆಗೋಡು ಪೊಲೀಸ್ ಠಾಣೆ ಯು.ಡಿ.ಆರ್. ನಂ. 04/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 22-06-2013ರಂದು ಪಿರ್ಯಾದಿ ಮಂಜುಳ @ ಮಂಜು ಕೋಂ. ರಾಜು, ಕೆರಗೋಡು ಗ್ರಾಮ, ಮಂಡ್ಯ ತಾ|| ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ತಾಯಿ  ಚನ್ನಮ್ಮ ಕೋಂ. ಚಿಕ್ಕಮುದ್ದೇಗೌಡ, ಸುಮಾರು 65 ವರ್ಷ, ಕೆರಗೋಡು ಗ್ರಾಮ, ಮಂಡ್ಯ ತಾ. ರವರು ಪಿರ್ಯಾದಿಯವರ ಮನೆಯ ಹಿಂದೆ ಗದ್ದೆಯ ಕಡೆಗೆ ಹೋಗುತ್ತಿದ್ದಾಗ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯ ಮೇಲೆ ಹೆಜ್ಜೆ ಇಟ್ಟು, ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೆ ಮೃತಪಟ್ಟಿರುತ್ತಾರೆ ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರನ ನೊಂದಾಯಿಸಲಾಗಿದೆ.  


ಆಕಸ್ಮಿಕ ಬೆಂಕಿ ನಷ್ಟ ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 220/13 ಕಲಂ. 435 ಐ.ಪಿ.ಸಿ.

ದಿನಾಂಕ: 22-06-2013ರಂದು ಪಿರ್ಯಾದಿ ಸಿ.ಪ್ರಕಾಶ್ ಬಿನ್. ಚಿಕ್ಕಪುಟೇಗೌಡ, ಚಿಕ್ಕಮರಳಿ ಗ್ರಾಮ, ಪಾಂಡವಪುರ ತಾ. ರವರು ನೀಡಿದ ದೂರು ಏನೆಂದರೆ ಪಿರ್ಯಾದಿರವರ ಕಬ್ಬಿನ ಬೆಳೆಗೆ   ದಿನಾಂಕ: 21-06-2013ರಂದು ರಾತ್ರಿ ವೇಳೆ ಯಾರೋ ಕಿಡಿಗೇಡಿಗಳು ವೇಸ್ಟ್.ಡೀಸಲ್ ಹಾಕಿ ಜಮೀನಿನಲ್ಲಿ ಬೆಳೆದಿದ್ದ ಕಬ್ಬಿನ ಬೆಳೆಗೆ ಬೆಂಕಿ ಹಚ್ಚಿರುತ್ತಾರೆ ಈ ಘಟನೆಯಿಂದ ಪಿರ್ಯಾದಿಗೆ ಸುಮಾರು 100.000/- ( ಒಂದು ಲಕ್ಷ) ರೂಪಾಯಿಗಳಷ್ಟು. ನಷ್ಟ ಆಗಿರುತ್ತದೆ ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ದೂರು ನೀಡಿದ ಮೇರೆಗೆ ಕೇಸು ದಾಖಲಿಸಲಾಗಿದೆ.


 ಕಳ್ಳತನ ಪ್ರಕರಣ :

ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 147/13 ಕಲಂ. 457-380 ಐ.ಪಿ.ಸಿ.

ದಿನಾಂಕ: 22-06-2013ರಂದು ಪಿರ್ಯಾದಿ ಜೇತುಸಿಂಗ್ ಬಿನ್. ಗಣೇಶ್ ಜೀ, ಕಿಕ್ಕೇರಿ ಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 21-06-2013ರ ರಾತ್ರಿ ಯಾರೋ ಕಳ್ಳರು ಕಿಕ್ಕೇರಿ ಟೌನ್ ನಲ್ಲಿರುವ ಪಿರ್ಯಾದಿಯವರ ಚಿಲ್ಲರೆ ಅಂಗಡಿಯ ಬೀಗ ಮುರಿದು ರೂ 10,000/- ರೂ ನಗದು ಮತ್ತು ರೂ. 14,000/- ರೂ ಮೌಲ್ಯದ ಪದಾರ್ಥಗಳನ್ನು ಯಾರೊ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ .ಎಂದು ದೂರು ನೀಡಿದ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.  

No comments:

Post a Comment