ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 23-06-2013 ರಂದು ಒಟ್ಟು 21 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಯು.ಡಿ.ಆರ್. ಪ್ರಕರಣ, 2 ಮನುಷ್ಯ ಕಾಣೆಯಾದ ಪ್ರಕರಣಗಳು, 1 ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ, 1 ವರದಕ್ಷಿಣೆ ಕಿರುಕುಳ ಪ್ರಕರಣ, 1 ರಾಬರಿ ಪ್ರಕರಣ ಹಾಗು ಇತರೆ 15 ಇತರೆ ಐ.ಪಿ.ಸಿ./ಸಿ.ಆರ್.ಪಿ.ಸಿ./ಕೆ.ಪಿ.ಆಕ್ಟ್./ಅಬಕಾರಿ ಕಾಯಿದೆ ಪ್ರಕರಣಗಳು ವರದಿಯಾಗಿರುತ್ತವೆ.
ಯು.ಡಿ.ಆರ್. ಪ್ರಕರಣ :
ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ ಸಂ: 30/13 ಕಲಂ.174 ಸಿ.ಆರ್.ಪಿ.ಸಿ.
ದಿನಾಂಕ: ದಿನಾಂಕ:23-06-2013 ರಂದು ಪಿರ್ಯಾದಿ ಜಯತೀರ್ಥ ಬಿನ್ ಎಸ್ ಕೆ ಗೋಪಿನಾಥ 22 ವರ್ಷ ಬ್ರಾಹ್ಮಣರು ಅರ್ಚಕರ ವೃತ್ತಿ ವಾಸ ನಂ 77 ಮುಖ್ಯ ರಸ್ತೆ ಶ್ರೀರಂಗಪಟ್ಟಣ ಟೌನ್ ರವರು ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ:23-06-2013 ರ ಬೆಳಿಗ್ಗೆ 9-00 ಗಂಟೆಗಿಂತ ಹಿಂದಿನ ಸಮಯದಲ್ಲಿ ಪಶ್ಚಿಮವಾಹಿನಿ ಬಳಿ ಮೃತ ಅಪರಿಚಿತ ಗಂಡಸು ಸುಮಾರು 65-70 ವರ್ಷ ಈಗ್ಗೆ 5-6 ತಿಂಗಳಿಂದ ಪಶ್ಚಿಮವಾಹಿನಿ ಬಳಿ ಕೆಲಸ ಮಾಡಿಕೊಂಡು ಬರುವ ಭಕ್ತಧೀಗಳಿಂದ ಭಿಕ್ಷೆ ಮಾಡಿಕೊಂಡು ಬಂದ ಹಣದಿಂದ ಮಧ್ಯಪಾನ ಮಾಡಿ ಅಲ್ಲಿ ಇಲ್ಲಿ ಮಲಗುತ್ತಿದ್ದು ಸರಿಯಾಗಿ ಊಟಮಾಡದೇ ದೇಹ ನಿಂತ್ರಾಣಗೊಂಡಿದ್ದು, ಆತ ಬದುಕಿದ್ದಾಗ ನನ್ನ ಹೆಸರು ಕಡಗೂಟ ಶೆಟ್ಟಹಳ್ಳಿ ಎಂದು ತಿಳಿಸಿದ್ದು, ದಿನಾಂಕ;-23-06-2013 ರಂದು ಬೆಳಿಗ್ಗೆ 08-00 ಗಂಟೆಯಲ್ಲಿ ಶ್ರೀರಂಗಪಟ್ಟಣ ಪಶ್ಚಿಮವಾಹಿನಿ ದೇವಸ್ಥಾನದ ಬಳಿ ಕುಳಿತ್ತಿದ್ದು 09-00 ಗಂಟೆಯಲ್ಲಿ ನೋಡಿದ್ದಾಗ ಸತ್ತುಹೋಗಿದ್ದನು. ಈ ಬಗ್ಗೆ ಮುಂದಿನ ಕ್ರಮ ಜರುಗೀಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿರುತ್ತೆ.
ಮನುಷ್ಯ ಕಾಣೆಯಾದ ಪ್ರಕರಣಗಳು
1.ಮಂಡ್ಯಪೂರ್ವ ಪೊಲೀಸ್ ಠಾಣೆ, ಮಂಡ್ಯ ಮೊ ಸಂ: 250/13 ಕಲಂ: ಹೆಂಗಸು ಕಾಣೆಯಾಗಿದ್ದಾಳೆ.
ದಿನಾಂಕ: ದಿನಾಂಕ:23-06-2013 ರಂದು ಪಿರ್ಯಾದಿ ಕೆ,ಸಿದ್ದರಾಜು ಬಿನ್ ಕಾಳಪ್ಪ ವಾಸ ಸೀತಾರಾಮಾಂಜನೇಯ ರೈಸ್ ಮಿಲ್ ಹಿಂಬಾಗ, ಗಾಡಿ ಚಿಕ್ಕಣ್ಣನವರ ಮನೆ, ಗುತ್ತಲು ಮಂಡ್ಯ ಸಿಟಿರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 21-06-2013 ರಂದು ರಾತ್ರಿ 08-30 ಗಂಟೆಯಲ್ಲಿ ಮಂಡ್ಯ ಸಿಟಿ, ಎಸ್.ಎಪ್ ಸರ್ಕಲ್ ಬಳಿಯಿಂದ ನಳಿನಿ ಮನೆಗೆ ಹೋಗುತ್ತೇನಂತ ಹೇಳಿ ಹೋದಳು ಆದರೆ ನನ್ನ ಹೆಂಡತಿ ಮನೆಗೆ ಬರಲಿಲ್ಲ. ನಾನು ನಮ್ಮ ಸಂಬಂದಿಕರ ಮನೆಗಳಲ್ಲಿ ವಿಚಾರ ಮಾಡಲಾಗಿ ಅಲ್ಲಿಗೂ ಸಹ ಹೋಗಿರುವುದಿಲ್ಲ. ಅಂದಿನಿಂದ ಇಂದಿನವರೆಗೂ ಹುಡುಕಾಡಿದರೂ ಸಹ ಪತ್ತೆಯಾಗಿರುವುದಿಲ್ಲ ಆದ್ದರಿಂದ ಅವರನ್ನು ಪತ್ತೆ ಮಾಡಿಕೊಡಬೇಕೆಂದು ಕೋರುತ್ತೇನೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿರುತ್ತೆ.
2.ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ ಸಂ: 138/13 ಕಲಂ ಹುಡುಗ ಕಾಣೆಯಾಗಿದ್ದಾನೆ,
ದಿನಾಂಕ:23-06-2013ರಂದು ಪಿರ್ಯಾದಿ ಯಲಕ್ಕಿ ತಿಮ್ಮೆಗೌಡ, ಬೆಟ್ಟಗೊನಹಳ್ಳಿರವರು ನೀಡಿದ ದೂರಿನ ಸಾರಾಂಶವೆನೆಂದರೆ ದಿನಾಂಕ: 20-06-2013ರಂದು ಸಂಜಯ್, 13 ವರ್ಷ ಶಾಲೆಗೆ ಹೊಗಿಬರುತ್ತೇನೆಂದು ಹೊದವನು ವಾಪಸ್ಸು ಮನೆಗೆ ಬಂದಿರುವುದಿಲ್ಲ ಆದ್ದರಿಂದ ಅವನನ್ನು ಪತ್ತೆ ಮಾಡಿಕೊಡಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.
ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ
ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 222/13 ಕಲಂ. 3(1) (10) ಎಸ್.ಸಿ. & ಎಸ್.ಟಿ. ಆಕ್ಟ್ ಹಾಗೂ 504 ಕೂಡ 34 ಐ.ಪಿ.ಸಿ.
ದಿನಾಂಕ:23-06-2013ರಂದು ಪಿರ್ಯಾದಿ ರೇವಣ್ಣ. ಟಿ.ಎಂ. ಬಿನ್. ಮರಿಲಿಂಗಯ್ಯ, ತಿರುಮಲಾಪುರ ಗ್ರಾಮ, ಪಾಂಡವಪುರ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1]ಪುರುಷೋತ್ತಮ ಬಿನ್ ಶಿವಣ್ಣ, 2]ಯೋಗೇಶ ಬಿನ್ ಶಿವಣ್ಣ, ಇಬ್ಬರೂ ದೊಡ್ಡಬ್ಯಾಡರಹಳ್ಳಿ ಗ್ರಾಮ ರವರುಗಳು ದಿನಾಂಕ: 19-06-2013ರಂದು 11-00 ಗಂಟೆಯಲ್ಲಿ ನಾನು ಅಂದರೆ ರೇವಣ್ಣ .ಟಿ.ಎಂ. ನಾವು ಚಕ್ಕು ವಿತರಣೆ ಮಾಡುತ್ತಿದ್ದ. ಸಂದರ್ಭದಲ್ಲಿ ಅತಿಕ್ರಮ ಪ್ರವೇಶ ಮಾಡಿ ಸಕರ್ಾರಿ ಕೆಲಸಕ್ಕೆ ಅಡ್ಡಿಪಡಿಸಿ ಗ್ರಾಮ ಲೆಕ್ಕಿಗರ ಎದುರಿನಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ ''ಹೊಲೆಯ ನನ್ನ ಮಗನೆ ಎಂದು ದಿನಾಂಕ-19-06-2013 ರಂದು ಬೆಳಗ್ಗೆ 11-00 ಘಂಟೆ ಸಮಯದಲ್ಲಿ ದೊಡ್ಡಬ್ಯಾಡರಹಳ್ಳಿ ಗ್ರಾಮದ ಶಿವಣ್ಣ ರವರ ಮಕ್ಕಳಾದ 1ನೇ ಪುರುಷೋತ್ತಮ ಮತ್ತು 2ನೇ ಯೋಗೇಶ ರವರು ಜಾತಿ ನಿಂದನೆಮಾಡಿ ನನ್ನನ್ನು ಅವಮಾನಗೊಳಿಸಿರುತ್ತಾರೆ. ಮತ್ತು ನನಗೆ ಮಾನಸಿಕವಾಗಿ ತುಂಬ ಬೇಸರವಾಗಿದ್ದು ಇವರ ಮೇಲೆ ಕಾನೂನು ರೀತಿ ಶಿಸ್ತಿನ ಕ್ರಮ ಕೈಗೊಂಡು ನನಗೆ ನ್ಯಾಯ ದೊರಕಿಸಿ ಕೊಡಬೇಕೆಂದು ತಮ್ಮಲ್ಲಿ ಮನವಿ.ನಾನು ಈಗಾಗಲೇ ತಾಲ್ಲೋಕು ದಂಡಾಧಿಕಾರಿಗಳಿಗೆ ಲಿಖಿತವಾಗಿ ದೂರು ನೀಡಿದ್ದು, ಈವರೆಗೂ ಯಾವುದೇ ರೀತಿಯ ಕ್ರಮ ಕೈಗೊಂಡಿರುವುದಿಲ್ಲ. ಆದ್ದರಿಂದ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ವರದಕ್ಷಿಣೆ ಕಿರುಕುಳ ಪ್ರಕರಣ
ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 180/13 ಕಲಂ. 498(ಎ)-34 ಐ.ಪಿ.ಸಿ. ಮತ್ತು 3-4 ಡಿ.ಪಿ. ಆಕ್ಟ್.
ದಿನಾಂಕ:23-06-2013ರಂದು ಪಿರ್ಯಾದಿ ಗೀತಾ ಕೊಂ. ಲೇಟ್.ಗೋವಿಂದರಾಜು, ಚೌಡೇನಹಳ್ಳಿ ಗ್ರಾಮರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ ಪಿರ್ಯಾದಿಯವರ ಅತ್ತೆ ಅಣ್ಣೇಗೌಡ ಹಾಗು ಮಾವ ರತ್ನಮ್ಮ ಇಬ್ಬರೂ ಚೌಡೇನಹಳ್ಳಿ ಗ್ರಾಮ ರವರುಗಳು ಅವರ ಮಗ, ಪಿರ್ಯಾದಿವರ ಗಂಡ ಲೇಟ್ ಗೋವಿಂದರಾಜನಿಗೆ ಅನೇಕ ವರ್ಷಗಳಿಂದ ಏಡ್ಸ್ ರೋಗವಿದ್ದರೂ ಸಹ ವರದಕ್ಷಿಣೆ ಆಸೆಗೋಸ್ಕರ ಪಿರ್ಯಾದಿಯೊಡನೆ ವಿವಾಹಮಾಡಿ ವಂಚಿಸಿ 1.00.000/- ರೂಪಾಯಿ ಹಣ, 85 ಗ್ರಾಂ ಚಿನ್ನ, 3/4 ಕೆ.ಜಿ ಬೆಳ್ಳಿ ಪದಾರ್ಥಗಳನ್ನು ಲಪಟಾಯಿಸಿ ತವರುಮನೆಗೆ ಕಳುಹಿಸಿ ಮಾನಸಿಕವಾಗಿ ಹಾಗೂ ಸಾಮಾಜಿಕವಾಗಿ ತುಂಬಾ ಹಿಂಸೆ ಹಾಗು ಅವಮಾನವಾಗಿರುತ್ತದೆ ಆದ್ದರಿಂದ ಇವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಕೇಸು ದಾಖಲಿಸಲಾಗಿದೆ.
ರಾಬರಿ ಪ್ರಕರಣ
ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 251/13 ಕಲಂ. 392 ಐ.ಪಿ.ಸಿ.
ದಿನಾಂಕ:23-06-2013ರಂದು ಪಿರ್ಯಾದಿ ಮಂಜುಳ ಬಿನ್. ಯೋನಂದ, ಸ್ವರ್ಣಸಂದ್ರ, ಮಂಡ್ಯ ನಗರ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 23-06-2013ರಂದು ರಾತ್ರಿ 1045 ಗಂಟೆಯಲ್ಲಿ ಸ್ವರ್ಣಸಂದ್ರದ ಅವರ ಅಂಗಡಿಯ ಬಾಗಿಲು ಮುಚ್ದಿಕೊಂಡು ಮನೆಗೆ ಹೋಗುತ್ತಿದ್ಧಾಗ ಯಾರೋ ಕಳ್ಳರು ಹಿಂಬಾಲಿಸಿ ಕತ್ತಿನಲ್ಲಿದ್ದ ತಾಳಿ ಮತ್ತು ಎರಡು ಗುಂಡುಗಳನ್ನು ಕಿತ್ತುಕೊಂಡು ಬಿಳಿ ಬಣ್ಣದ ಹೊಂಡ ಆಕ್ಟಿವ್ ನಲ್ಲಿ ಹೋಗಿರುತ್ತಾರೆಂದು ಅದರ ತೂಕ ಒಟ್ಟು 8 ಗ್ರಾಂ ಇರುತ್ತದೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment