ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ
ಮಂಡ್ಯ ಜಿಲ್ಲೆ, ದಿನಾಂಕಃ 08-06-2013.
ಮಂಡ್ಯ ಜಿಲ್ಲೆ, ದಿನಾಂಕಃ 08-06-2013.
ಪತ್ರಿಕಾ ಪ್ರಕಟಣೆ
1] ದಿನಾಂಕಃ 07-06-2013 ರಂದು ಮದ್ಯಾಹ್ನ 12-30 ಗಂಟೆಯಲ್ಲಿ ಶ್ರೀರಂಗಪಟ್ಟಣ ತಾಲ್ಲೂಕು ಜಕ್ಕನಹಳ್ಳಿ ಗ್ರಾಮದ ಹತ್ತಿರ ವಿರುವ ರಾಮ್ದೇವ್ ಕಲ್ಲುಕೊರೆ ಪಕ್ಕದಲ್ಲಿರುವ ಟಿ.ಎಂ.ಹೊಸೂರು ಗ್ರಾಮದ ನಾಗರಾಜು @ ಕೆಂಚಪ್ಪ ಬಿನ್ ಮರಿತಿಮ್ಮೇಗೌಡರವರ ಕಲ್ಲುಕೊರೆಯಲ್ಲಿ ಅಕ್ರಮವಾಗಿ ಟ್ರಾಕ್ಟರ್ ಇಂಜಿನ್ಗೆ ಕಂಪ್ರೆಷರ್ ಆಳವಡಿಸಿ ಕಂಪ್ರೆಷರ್ ಜಾಕ್ ಮೂಲಕ ಕುಳಿಗಳನ್ನು ಹೊಡೆಯುತ್ತಾ ಬಂಡೆಯನ್ನು ಸ್ಟೋಟಿಸಲು ತಯಾರಾಗಿದ್ದರೆಂದು ಡಿಎಸ್ಪಿ ಶ್ರೀರಂಗಪಟ್ಟಣ ರವರಿಗೆ ಬಂದ ಮಾಹಿತಿ ಮೇರೆಗೆ, ಸದರಿ ಕಲ್ಲು ಗಣಿಗಾರಿಕೆಯ ಮೇಲೆ ದಾಳಿ ಮಾಡಿ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಮೇರೆಗೆ, ಶ್ರೀರಂಗಪಟ್ಟಣ ಪೊಲೀಸ್ ಠಾಣೆಯ ಪಿ.ಎಸ್.ಐ ಬಿ.ಜಿ.ಕುಮಾರ್ರವರು ತಮ್ಮ ಠಾಣೆಯ ಸಿಬ್ಬಂದಿಗಳೊಂದಿಗೆ ದಿನಾಂಕ. 07/06/13 ರಂದು ಮಧ್ಯಾಹ್ನ 01-00 ಗಂಟೆಗೆ ಮೇಲ್ಕಂಡ ಕಲ್ಲುಕೊರೆ ಹತ್ತಿರ ಹೋಗಿ ನೋಡಲಾಗಿ 3 ಜನರಿದ್ದು 3 ಜನರು ರಲ್ಲಿ ಒಬ್ಬ ವ್ಯಕ್ತಿ ಕಂಪ್ರೆಸ್ ರ್ ಟ್ರಾಕ್ಟರ್ ನಲ್ಲಿ ಕುಳಿತ್ತಿದ್ದು ಮತ್ತೊಬ್ಬ ವ್ಯಕ್ತಿ ಡ್ರಿಲಿಂಗ್ ಮಿಷನ್ ಜಾಕ್ ಮೂಲಕ ಕುಳಿಗಳನ್ನು ಹೊಡೆಯುತ್ತಿದ್ದು ಇನ್ನೊಬ್ಬ ವ್ಯಕ್ತಿ ಟ್ರಾಕ್ಟ್ರ್ ಪಕ್ಕ ನಿಂತಿದ್ದು ಇವರು ಕಲ್ಲು ಕೋರೆಯಲ್ಲಿ ಕುಳಿಗಳಿಗೆ ಸ್ಪೋಟಕ ವಸ್ತುಗಳನ್ನು ಹಾಕುತ್ತಿದ್ದು, ಹತ್ತಿರ ಹೋದಾಗ ಕೆಲಸ ಮಾಡುತ್ತಿದ್ದ 3 ಜನರು ಓಡಲು ಪ್ರಯತ್ನಿಸಿದಾಗ ಪಿ.ಎಸ್.ಐ. ಮತ್ತು ಸಿಬ್ಬಂದಿಗಳು ಸುತ್ತುವರಿದು 3 ಜನರನ್ನು ಹಿಡಿದುಕೊಂಡು,. ಸದರಿ ಆಸಾಮಿಗಳನ್ನು ಪ್ರಶ್ನಿಸಲಾಗಿ ತಮ್ಮಗಳ ಹೆಸರು 1] ನಾಗರಾಜು @ ಕೆಂಚಪ್ಪ ಬಿನ್ ಮರಿತಿಮ್ಮೇಗೌಡ 50 ವರ್ಷ, ಒಕ್ಕಲಿಗರು, ವಾಸ ಟಿ ಎಂ ಹೊಸೂರು ಗ್ರಾಮ, ಶ್ರೀರಂಗಪಟ್ಟಣ ತಾಲ್ಲೂಕು 2] ಪೆರಿಯಾ ನಾಯಾಗಂ ಬಿನ್ ಮೈಕಲ್ 25 ವರ್ಷ ಕಿಶ್ಚಿಯನ್ ಡ್ರಿಲ್ಲಿಂಗ್ ಕೆಲಸ ವಾಸ ಜಾಗೇರಿ ಗ್ರಾಮ ಕೊಳ್ಳೆಗಾಲ ತಾ ಚಾಮರಾಜನಗರ ಜಿಲ್ಲೆ 3) ಮೆಸ್ಲಿಯಾ ಪೆರಿಯಾನಾಯಾಂಗಂ ಬಿನ್ ಜಾನ್ ಪೀಟರ್ 21 ವರ್ಷ ಕಿಶ್ಚಿಯನ್ ಡ್ರಿಲ್ಲಿಂಗ್ ಕೆಲಸ ವಾಸ ಜಾಗೇರಿ ಗ್ರಾಮ ಕೊಳ್ಳೆಗಾಲ ತಾ ಚಾಮರಾಜನಗರ ಜಿಲ್ಲೆೆ ಎಂದು ತಿಳಿಸಿದ್ದು, ಇವರುಗಳು ನಾಗರಾಜು ರವರ ಕಲ್ಲುಕೋರೆಯಲ್ಲಿ ಕೆಲಸ ಮಾಡುತ್ತಿದ್ದು, ಬಂಡೆಗಳಿಗೆ ಕುಳಿಗಳನ್ನು ಹಾಕಲಾಗಿದ್ದು, ಸದರಿ ಕುಳಿಗಳಿಗೆ ಎಲ್ಲರೂ ಸೇರಿ ಸ್ಪೋಟಕ ವಸ್ತುಗಳನ್ನು ತುಂಬಿ ಮೆಗ್ಗರ್ ಮೂಲಕ ಸ್ಪೋಟಕ ಮಾಡಲು ತಯಾರಾಗಿರುವುದಾಗಿ ತಿಳಿಸಿದ್ದು, ಸದರಿಯವರು ಕಲ್ಲು ಕೋರೆ ಕೆಲಸ ಮಾಡುತ್ತಿದ್ದ ಲೈಸನ್ಸ್ ಬಗ್ಗೆ ವಿಚಾರ ಮಾಡಲಾಗಿ ತಮ್ಮಲ್ಲಿ ಯಾವುದೇ ಲೈಸೆನ್ಸ್ ಇರುವುದಿಲ್ಲವೆಂದು ಇವುಗಳನ್ನು ಪಾಂಡವಪುರ ಟೌನಿನ ನಾಜೀಮುಲ್ಲಾ ಎಂಬುವರಿಂದ ಖರೀದಿಸಿರುವುದಾಗಿ ತಿಳಿಸಿರುತ್ತಾರೆ. ಸದರಿಯವರು ಲೈಸೆನ್ಸ್ ಇಲ್ಲದೆ ಅಕ್ರಮವಾಗಿ ಕಲ್ಲು ಕೋರೆ ಸಿಡಿಸಲು ಕುಳಿಗಳಿಗೆ ಸ್ಪೋಟಕ ವಸ್ತುಗಳನ್ನು ತುಂಬಿ ಸ್ಪೋಟಕ ಮಾಡಲು ಸಿದ್ದರಾಗಿದ್ದರಿಂದ, ಸ್ಪೋಟಕ ವಸ್ತುಗಳನ್ನು ಬಳಸಿ ಸಿಡಿಸಿದಲ್ಲಿ ಮಾನವ ಜೀವ ಮತ್ತು ಸ್ವತ್ತು ನಾಶ ಉಂಟಾಗುವ ಸಾದ್ಯತೆ ಇರುವುದರಿಂದ ಸ್ಥಳದಲ್ಲಿ ದೊರೆತ 1] ಟಿ ಎನ್ 33 ಆರ್ 9076 ಕಂಪ್ರೆಸರ್ ಟ್ರಾಕ್ಟರ್ 2) ಒಂದು ಕಂಪ್ರೆಸರ್ ಜಾಕ್ 3) 4 ಡ್ರಿಲಿಂಗ್ ರಾಡ್ಗಳು ಸುಮಾರು 3 ಅಡಿ ಉದ್ದವಿರುತ್ತದೆ 5) ಬಿಳಿ ವೈರ್ ಸುತ್ತಿರುವ 50 ಎಲೆಕ್ಟ್ರೀಕ್ ಡೆಟೋನೇಟರ್ಸ್ 6] 15 ಕೆ.ಜಿ. ಅಮೋನಿಯಂ ನೈಟ್ರೇಟ್ ಇರುವ ಒಂದು ಚೀಲ 7] 02 ಪವರ್ ಜಲ್ 901 ಎಕ್ಸಪ್ಲೋಸಿವ್ 25 ಎಂ.ಎಂ. ಮತ್ತು 125 ಗ್ರಾಂ ತೂಕದ ಸ್ಪೋಟಕ ವಸ್ತುಗಳನ್ನು ಹಾಗೂ ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಮೇಲ್ಕಂಡ ಆರೋಪಿತರ ಮೇಲೆ ಸ್ವಯಂ ವರದಿಯನ್ನು ತಯಾರು ಮಾಡಿ ಶ್ರೀರಂಗಪಟ್ಟಣ ಪೊಲೀಸ್ ಠಾಣಾ ಮೊ.ಸಂ.367/13 ಕಲಂ285-286 ಐಪಿಸಿ 3-4-5 ಎಕ್ಸ್ಪ್ಲೋಸಿವ್ ಸಬ್ಸ್ಟ್ಯಾನ್ಸ್ ಆಕ್ಟ್ 1908 ರೀತ್ಯಾ ಕೇಸು ದಾಖಲಿಸಿ, ಆರೋಪಿಗಳನ್ನು ನ್ಯಾಯಾಲಯಕ್ಕ್ಮೆ ಹಾಜರು ಪಡಿಸಿ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ.
ಸದರಿ ಪ್ರಕರಣವನ್ನು ಪತ್ತೆ ಮಾಡಿದ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯ ಪಿಎಸ್ಐ ಶ್ರೀ ಬಿ.ಜಿ.ಕುಮಾರ್ ಮತ್ತು ಸಿಬ್ಬಂದಿಯವರುಗಳನ್ನು ಮಂಡ್ಯ ಜಿಲ್ಲಾ ಪೊಲೀಸ್ ಅಧಿಕಾರಿಗಳಾದ ಶ್ರೀ.ಭೂಷಣ್ ಜಿ. ಬೊರಸೆ, ಐ.ಪಿ.ಎಸ್. ರವರು ಪ್ರಶಂಸಿರುತ್ತಾರೆ
No comments:
Post a Comment