ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 08-06-2013 ರಂದು ಒಟ್ಟು 15 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಾಯಿದೆ ಪ್ರಕರಣ, 2 ಅಕ್ರಮ ಮರಳು ಸಾಗಾಣಿಕೆ ಪ್ರಕರಣಗಳು ಹಾಗು ಇತರೆ 12 ಐ.ಪಿ.ಸಿ./ಸಿ.ಆರ್.ಪಿ.ಸಿ./ಕೆ.ಇ.ಆಕ್ಟ್. ಪ್ರಕರಣಗಳು ವರದಿಯಾಗಿರುತ್ತವೆ.
ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಾಯಿದೆ ಪ್ರಕರಣ :
ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 138/13 ಕಲಂ. 498(ಎ)-324-323 ಐ.ಪಿ.ಸಿ.
ದಿನಾಂಕ: 08-06-2013 ರಂದು ಪಿರ್ಯಾದಿ ಜ್ಯೋತಿ, ಆನೆಗೊಳ ಗ್ರಾಮ, ಕಿಕ್ಕೇರಿ ಹೋಬಳಿ, ಕೆ.ಆರ್, ಪೇಟೆ ತಾಲ್ಲೋಕು ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 06-06-2013 ರಾತ್ರಿ08-30ಗಂಟೆಯಲ್ಲಿ ಆನೆಗೊಳ ಗ್ರಾಮದ ಪಿರ್ಯಾಧಿಯವರ ಮನೆ ಮುಂಬಾಗ ಆರೋಪಿತ ಅವರ ಗಂಡ ಚನ್ನಮಹೇಶಚಾರ್ ಆನೆಗೊಳ ಗ್ರಾಮ, ಕಿಕ್ಕೇರಿ ಹೋಬಳಿ, ಕೆ.ಆರ್.ಪೇಟೆರವ ಮಾನಸಿಕವಾಗಿ ಮತ್ತು ದೈಹಿಕವಾಗಿ ತೊಂದರೆ ಕೊಟ್ಟು ಕೈಗಳಿಂದ ಹೊಡೆದು, ಮನೆಯಿಂದ ಬಿಟ್ಟು ಹೋಗು ಎಂದು ಜಗಳ ತೆಗೆದು ದೊಣ್ಣೆಯಿಂದ ಎಡ ಮೊಳಕೈಗೆ ಮತ್ತು ಬಲಕಾಲಿಗೆ ಹೊಡೆದು ನೋವುಂಟು ಮಾಡಿರುತ್ತಾನೆಂದು ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಅಕ್ರಮ ಮರಳು ಸಾಗಾಣಿಕೆ ಪ್ರಕರಣಗಳು :
1. ಹಲಗೂರು ಪೊಲೀಸ್ ಠಾಣೆ ಮೊ.ನಂ. 120/13 ಕಲಂ. 188-379 ಐ.ಪಿ.ಸಿ.
ದಿನಾಂಕ: 08-06-2013 ರಂದು ಪಿರ್ಯಾದಿ ಎಸ್.ಲಿಂಗಸ್ವಾಮಿ, ಗ್ರಾಮಲೆಕ್ಕಾದಿಕಾರಿ, ಮೇಗಳಾಪುರ ವೃತ್ತ, ಕಸಬಾ ಹೋಬಳಿ, ಮಳವಳ್ಳಿ ತಾ|| ರವರು ನೀಡಿದ ದೂರಿನ ಸಾರಾಂಶವೇನೆಂದರೆ ನಂ. ಕೆಎ-10/2220 ಲಾರಿ ಚಾಲಕನು ಅಕ್ರಮವಾಗಿ ಲಾರಿಯಲ್ಲಿ ಮರಳನ್ನು ಸಾಗಿಸುತ್ತಿದ್ದಾರೆಂಬ ಮಾಹಿತಿ ಮೇರೆಗೆ ಸ್ಢಳಕ್ಕೆ ಪರಿಶೀಲಿಸಲು ಹೋದಾಗ, ಲಾರಿ ಚಾಲಕನು ಪುರದದೊಡ್ಡಿ ಶ್ರೀ ಶನೇಶ್ವರ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ನಿಲ್ಲಿಸಿ ಪರಾರಿಯಾಗಿರುತ್ತಾನೆ, ಸದರಿ ಲಾರಿಯ ಸದರಿ ಲಾರಿ ಮಾಲೀಕರು ಹಾಗೂ ಚಾಲಕರ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹಾಕಿ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಈ ಮೂಲಕ ತಮ್ಮಲ್ಲಿ ಕೋರುತ್ತೇನೆ ಎಂದು ಇತ್ಯಾದಿಯಾಗಿ ನೀಡಿದ ದೂರು ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.
2. ಹಲಗೂರು ಪೊಲೀಸ್ ಠಾಣೆ ಮೊ.ನಂ. 121/13 ಕಲಂ. 188-379 ಐ.ಪಿ.ಸಿ.
ದಿನಾಂಕ: 08-06-2013 ರಂದು ಪಿರ್ಯಾದಿ ಎಸ್.ಲಿಂಗಸ್ವಾಮಿ, ಗ್ರಾಮಲೆಕ್ಕಾದಿಕಾರಿ, ಮೇಗಳಾಪುರ ವೃತ್ತ, ಕಸಬಾ ಹೋಬಳಿ, ಮಳವಳ್ಳಿ ತಾ|| ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 07/08-06-2013 ರ ಬೆಳಿಗಿನ ಜಾವ 03-00 ಗಂಟೆಯಲ್ಲಿ ಪುರದದೊಡ್ಡಿ ಗ್ರಾಮದ ಬಳಿ ನಂ. ಕೆಎ-02 ಡಿ-9103 ಲಾರಿ ಚಾಲಕನು ಅಕ್ರಮವಾಗಿ ಲಾರಿಯಲ್ಲಿ ಮರಳನ್ನು ಸಾಗಿಸುತ್ತಿದ್ದಾರೆಂಬ ಮಾಹಿತಿ ಮೇರೆಗೆ ಸ್ಢಳಕ್ಕೆ ಪರಿಶೀಲಿಸಲು ಹೋದಾಗ, ಲಾರಿ ಚಾಲಕನು ಪುರದದೊಡ್ಡಿ ಶ್ರೀ ಶನೇಶ್ವರ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ನಿಲ್ಲಿಸಿ ಪರಾರಿಯಾಗಿರುತ್ತಾನೆ, ಸದರಿ ಲಾರಿಯ ಸದರಿ ಲಾರಿ ಮಾಲೀಕರು ಹಾಗೂ ಚಾಲಕರ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹಾಕಿ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಈ ಮೂಲಕ ತಮ್ಮಲ್ಲಿ ಕೋರುತ್ತೇನೆ ಎಂದು ಇತ್ಯಾದಿಯಾಗಿ ನೀಡಿದ ದೂರು ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.
No comments:
Post a Comment