ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ,
ಮಂಡ್ಯ ಜಿಲ್ಲೆ, ದಿನಾಂಕಃ 15-06-2013.
ಕೆ.ಅರ್.ಪೇಟೆ ತಾಲ್ಲೋಕು, ಬೂಕನಕೆರೆ ಹೋಬಳಿ, ವರನಾಥಕಲ್ಲಹಳ್ಳಿ ಗ್ರಾಮದ ಬಳಿ ಹೇಮಾವತಿ ನದಿ ಪಾತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದ್ದು ಈ ಸಂಬಂದವಾಗಿ ಶ್ರೀರಂಗಪಟ್ಟಣ ಉಪವಿಭಾಗದ ಉಪ ಪೊಲೀಸ್ ಅಧೀಕ್ಷಕರಾದ ಕಲಾ ಕೃಷ್ಣಸ್ವಾಮಿ ಇವರ ಮಾರ್ಗದರ್ಶನದಲ್ಲಿ ಕೆ.ಅರ್.ಪೇಟೆ ವೃತ್ತದ ಸಿಪಿಐ ಶ್ರೀ.ಎಸ್.ಎನ್.ಸಂದೇಶ್ ಕುಮಾರ್ ರವರ ನೇತೃತ್ವದಲ್ಲಿ ಕೆ.ಆರ್.ಪೇಟೆ ಟೌನ್ ಪಿ.ಎಸ್.ಐ. ಶ್ರೀ ರಂಗಸ್ವಾಮಿ ಮತ್ತು ಗ್ರಾಮಾಂತರ ಠಾಣೆಯ ಪಿ.ಎಸ್.ಐ. ಶ್ರೀ ಸಂತೋಷ್ ಕಶ್ಯಪ್ ಹಾಗು ಸಿಬ್ವಂಧಿಯವರು ದಿನಾಂಕಃ 14.06.2013 ರಂದು ಹೇಮಾವತಿ ನದಿ ಪಾತ್ರದ ವರಹನಾಥಕಲ್ಲಹಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಇಟಾಚಿ ಯಂತ್ರಗಳನ್ನು ಬಳಸಿ ಮರಳು ತುಂಬುತ್ತಿದ್ದವರ ವಿರುದ್ದ ದಾಳಿ ನಡೆಸಿ ಸುಮಾರು 10 ಹಿಟಾಚಿ, 1 ಜೆಸಿಬಿ ಯಂತ್ರ, ಟಿಪ್ಪರ್ ಮತ್ತು ಟ್ರ್ಯಾಕ್ಟರ್ ಹಾಗೂ ಅಪಾರ ಮೊತ್ತದ ಮರಳು ಸಂಗ್ರಹ ಮಾಡಿರುವುದನ್ನು ವಶಕ್ಕೆ ಪಡೆದು ಕೆ.ಅರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊ.ಸಂ. 174/13 ಕಲಂ. 379 ಐಪಿಸಿ ಕೂಡ ನಿಯಮ 3, 42 ಮತ್ತು 44 ಉಪ ಖನಿಜ ನಿಯಮ-1994 ಹಾಗೂ ನಿಯಮ 4(1ಎ) ಮತ್ತು 21 (1 ರಿಂದ 5) ಎಂ.ಎಂ.ಅರ್.ಡಿ. ಅಕ್ಟ್ 1957 ರ ರೀತ್ಯ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ಇದೇ ರೀತಿ ದಿನಾಂಕಃ 31.05.2013. ರಂದು ತಾಲ್ಲೋಕಿನ ಯಗಚಗುಪ್ಪೆ-ಕೂಡಲಕುಪ್ಪೆ ಗ್ರಾಮದ ಹೇಮಾವತಿ ನದಿ ಮುಳುಗಡೆ ಪ್ರದೇಶದಲ್ಲಿ ಅಕ್ರಮ ಮರಳು ಗಣಿಗಾರಿಕೆ ಮಾಡುತ್ತಿದ್ದವರ ವಿರುದ್ದ ಕ್ರಮ ಕೈಗೊಂಡು 1 ಲಾರಿ, 1 ಟಿಪ್ಪರ್, 4 ಇಟಾಚಿ ಯಂತ್ರಗಳನ್ನು ಹಾಗೂ ಅಪಾರ ಪ್ರಮಾಣದ ಮರಳು ಸಂಗ್ರಹ ಮಾಡಿರುವುದನ್ನು ವಶಕ್ಕೆ ಪಡೆದು ಕೆ.ಅರ್.ಪೇಟೆ ಗ್ರಾಮಾಂತರ ಠಾಣೆಯಲ್ಲಿ ಮೊ.ಸಂ. 154/13 ಕಲಂ.188-379 ಐಪಿಸಿ ಕೂಡ ನಿಯಮ 3, 42 ಮತ್ತು 44 ಉಪ ಖನಿಜ ನಿಯಮ-1994 ಹಾಗೂ ನಿಯಮ 4(1ಎ) ಮತ್ತು 21 (1 ರಿಂದ 5) ಎಂ.ಎಂ.ಅರ್.ಡಿ. ಅಕ್ಟ್ 1957 ರ ರೀತ್ಯ ಪ್ರಕರಣವನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ದಿನಾಂಕಃ 29.05.2013 ರಂದು ತಾಲ್ಲೋಕಿನಲ್ಲಿ ಅಕ್ರಮ ಮರಳು ಗಣಿಗಾರಿಕೆ ಸಂಬಂದ ಅನಿರೀಕ್ಷಿತ ದಾಳಿ ನಡೆಸಿ ಅಂದಾಜು 9.50 ಲಕ್ಷ ಮೌಲ್ಯದ 150 ಟ್ರಕ್/ಟ್ರ್ಯಾಕ್ಟರ್ ಮರಳನ್ನು ವಶಪಡಿಸಿಕೊಂಡು ಸಹಾಯಕ ಅಭಿಯಂತರರು ಲೋಕೋಪಯೋಗಿ ಇಲಾಖೆ ಕೆ.ಅರ್.ಪೇಟೆ ರವರ ವಶಕ್ಕೆ ತಹಶೀಲ್ದಾರವರ ಮುಖಾಂತರ ನೀಡಿರುತ್ತೆ. ಇದೇ ರೀತಿ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ 7 ಲಾರಿ, 1 ಟಿಪ್ಪರ್ ಹಾಗೂ 10 ಟ್ರ್ಯಾಕ್ಟರ್ಗಳ ಮೇಲೆ ಕ್ರಮ ಜರುಗಿಸಿ ಇವರಿಂದ 1,59,000/- ರೂಗಳ ದಂಡವನ್ನು ವಿಧಿಸಿರುತ್ತೆ.
ದಿನಾಂಕಃ 13.06.13. ರಂದು ಪೂವನಹಳ್ಳಿ ಗ್ರಾಮದಲ್ಲಿ ಪೊಲೀಸ್ ರಕ್ಷಣೆಯಲ್ಲಿ ಸುಮಾರು 2 ಲಕ್ಷದ ಮರಳನ್ನು ವಶಕ್ಕೆ ಪಡೆದು ನಂತರ ಕೆ.ಅರ್.ಪೇಟೆ ಲೋಕೋಪಯೋಗಿ ಇಲಾಖೆಯ ವಶಕ್ಕೆ ನೀಡಿರುತ್ತಾರೆ.
ಮೇಲ್ಕಂಡ ಮರಳು ಗಣಿಗಾರಿಕೆ ಮಾಡುತ್ತಿರುವವರ ಮೇಲೆ ದಾಳಿ ನಡೆಸಿ ಪ್ರಕರಣ ದಾಖಲಿಸುವಲ್ಲಿ ಕೆ.ಆರ್.ಪೇಟೆ ವೃತ್ತದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂಧಿಗಳು ಉತ್ತಮ ಕರ್ತವ್ಯ ನಿರ್ವಹಿಸಿರುತ್ತಾರೆ.
ಮೇಲ್ಕಂಡ ಮರಳು ಗಣಿಗಾರಿಕೆ ಮಾಡುತ್ತಿರುವವರ ಮೇಲೆ ದಾಳಿ ನಡೆಸಿ ಪ್ರಕರಣ ದಾಖಲಿಸುವಲ್ಲಿ ಕೆ.ಆರ್.ಪೇಟೆ ವೃತ್ತದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂಧಿಗಳು ಉತ್ತಮ ಕರ್ತವ್ಯ ನಿರ್ವಹಿಸಿರುತ್ತಾರೆ.
No comments:
Post a Comment