ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 14-06-2013 ರಂದು ಒಟ್ಟು 15 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ರಸ್ತೆ ಅಪಘಾತ ಪ್ರಕರಣಗಳು, 1 ವಾಹನ ಕಳವು ಪ್ರಕರಣ, 1 ಮನುಷ್ಯ ಕಾಣೆಯಾದ ಪ್ರಕರಣ, 1 ಎಸ್.ಸಿ./ ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ, 2 ಯು.ಡಿ.ಆರ್. ಪ್ರಕರಣಗಳು, 1 ಅಕ್ರಮ ಮರಳು ಕಳವು/ಸಾಗಾಣಿಕೆ ಮತ್ತು ಕರ್ನಾಟಕ ಉಪಖನಿಜ ನಿಯಮ -1994 ಹಾಗೂ ನಿಯಮ 4(1ಎ) ಮತ್ತು 21 (1 ರಿಂದ 5) ಎಂ.ಎಂ.ಆರ್.ಡಿ.-1957 ಪ್ರಕರಣ.
1. ಹಲಗೂರು ಪೊಲೀಸ್ ಠಾಣೆ ಮೊ.ನಂ. 279. 304(ಎ) ಐಪಿಸಿ ರೆ/ವಿ 187 ಐ.ಎಂ.ವಿ. ಕಾಯ್ದೆ.
ದಿನಾಂಕ: 14-6-2013 ರಂದು ಪಿರ್ಯಾದಿ ಜಿ.ಎಸ್.ದೇವರಾಜು ಬಿನ್. ಲೇಟ್. ಚಿಕ್ಕಮರೀಗೌಡ, ಗುಂಡಾಪುರ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಕುಮಾರ. ಕೆಎ-11-ಎ-1976 ಶಾಲಾ ವಾಹನದ ಚಾಲಕ, ಗುಂಡಾಪುರ ಗ್ರಾಮ ರವರು ಶಾಲ ವಾಹನವನ್ನು ನಿರ್ಲಕ್ಷತೆಯಿಂದ ಅತಿಜೋರಾಗಿ ಓಡಿಸಿದ ಪರಿಣಾಮ ರೂಪ ಎಂಬ ಹೆಣ್ಣು ಮಗು ವಾಹನದ ಹಿಂಬದಿಯ ಚಕ್ರಕ್ಕೆ ಸಿಕ್ಕಿ ತೀವ್ರ ಪೆಟ್ಟಾಗಿದ್ದು ಚಿಕಿತ್ಸೆಗಾಗಿ ಹಲಗೂರು ಆಸ್ಪತ್ರೆಗೆ ಕರೆತಂದಾಗ ಆಸ್ಪತ್ರೆಯ ವೈದ್ಯರು ಮಗು ಮೃತಪಟ್ಟಿರುತ್ತಾಳೆ ಎಂದು ತಿಳಿಸಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2.ನಾಗಮಂಗಲ ಟೌನ್ ಪೊಲೀಸ್ ಠಾಣೆ ಮೊ.ನಂ. 97/13 ಕಲಂ. 279,304(ಎ) ಐ.ಪಿ.ಸಿ 187 ಐ.ಎಂ.ವಿ ಕಾಯಿದೆ.
ದಿನಾಂಕ: 14-6-2013 ರಂದು ಪಿರ್ಯಾದಿ ಲೊಕೇಶ್ ಬಿನ್. ಚಿಕ್ಕ ತಿಮ್ಮೇಗೌಡ, 39 ವರ್ಷ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 14-06-2013 ರಂದು ರಾತ್ರಿ 07-50 ಗಂಟೆನಾಗಮಂಗಲ - ಮೈಸೂರು ಮುಖ್ಯ ರಸ್ತೆಯಲ್ಲಿ ನಂ. ಕೆ.ಎ. 21-5918 ರ ಆಟೋ ಚಾಲಕ, ಹೆಸರು ವಿಳಾಸ ತಿಳಿಯಬೇಕಾಗಿರುತ್ತದೆ ಇವರು ದಿನಾಂಕ: 14-06-2013 ರಂದು ರಾತ್ರಿ 07-50 ಗಂಟೆಯಲ್ಲಿ ನಾಗಮಂಗಲ - ಮೈಸೂರು ಮುಖ್ಯ ರಸ್ತೆಯಲ್ಲಿ ಆಟೋವನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಢು ಬಂದು ಡಿಕ್ಕಿ ಪಡಿಸಿದ ಪರಿಣಾಮ ರಾಮೇಗೌಡರವರ ಎರಡು ಕಾಲುಗಳು ಮುರಿದಿದ್ದು ಸ್ಥಳದಲ್ಲೇ ಮೃತ ಪಟ್ಟೆರುತ್ತಾರೆ ಆರೋಪಿತ ಆಟೋ ಚಾಲಕನ ಮೇಲೆ ಸೂಕ್ರ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.
ವಾಹನ ಕಳವು ಪ್ರಕರಣ :
ಕೆ.ಆರ್.ಸಾಗರ ಪೊಲೀಸ್ ಠಾಣೆ ಮೊ.ನಂ. 156/13 ಕಲಂ. 379 ಐ.ಪಿ.ಸಿ.
ದಿನಾಂಕ: 14-6-2013 ರಂದು ಪಿರ್ಯಾದಿ ದಿನೇಶ್ ಬಿನ್. ಸ್ವಾಮೀಗೌಡ, ಬೆಳಗೊಳ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 13-06-2013 ರಂದು ರಾತ್ರಿ 08-30 ಗಂಟೆಯಲ್ಲಿ, ಯಾರೋ ಕಳ್ಳರು ನನ್ನ ಬಾಬ್ತು ಬೈಕ್ ನಂ. ಕೆಎ-11-ಎಲ್-13 ಹೀರೋಹೊಂಡಾ ಸ್ಪ್ಲೆಂಡರ್ ನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ, ಅದನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ :
ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 171/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.
ದಿನಾಂಕ: 14-6-2013 ರಂದು ಪಿರ್ಯಾದಿ ದೇವನಾಥ ಬಿನ್. ರಾಮೇಗೌಡ, ಮಡುವಿಕೋಡಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 11-06-13 ರಂದು ಬೆಳಗ್ಗೆ 11-30 ಗಂಟೆಯಲ್ಲಿ, ಕುರ್ನೇನಹಳ್ಳಿ ಗ್ರಾಮದಿಂದ ಅವರ ಹೆಂಡತಿ ಜ್ಯೋತಿ ಕೋಂ. ದೇವನಾಥ, 25 ವರ್ಷ, ಮನೆಕೆಲಸ, ವಕ್ಕಲಿಗ ಜನಾಂಗ ರವರು ತಾಯಿಯ ಜೊತೆ ಕೆ.ಆರ್.ಪೇಟೆ ಆಸ್ಪತ್ರೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು ಇಲ್ಲಿಯವರೆಗೂ ವಾಪಸ್ ಬಂದಿರುವುದಿಲ್ಲಾ, ಅವಳನ್ನು ಪತ್ತೆಮಾಡಿಕೊಡಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ನೊಂದಾಯಿಸಲಾಗಿದೆ.
ಎಸ್.ಸಿ./ ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ :
ಕೆಸ್ತೂರು ಪೊಲೀಸ್ ಠಾಣೆ ಮೊ.ನಂ. 134/13 ಕಲಂ. 506, ಐ.ಪಿ.ಸಿ. ಕೂಡ 3ಕ್ಲಾಸ್ (1) & (10) ಎಸ್.ಸಿ./ ಎಸ್.ಟಿ. ಕಾಯಿದೆ 1989.
ದಿನಾಂಕ: 14-6-2013 ರಂದು ಪಿರ್ಯಾದಿ ಕೆ. ರಾಮು ಬಿನ್. ಲೇಟ್. ಕರಿಯಪ್ಪ, 53 ವರ್ಷ ರವರು ನೀಡಿದ ದೂರಿನ ವಿವರವೇನೆಂದರೆ ನಾಗ ಬಿನ್. ಲೇಟ್ ಮಹದೇವ, ಚಾಕನಕೆರೆರವರು ನನ್ನನ್ನು ಅಶ್ಲೀಲವಾಗಿ ಬೈಯ್ದು, ನಿಮ್ಮ ಮನೆಯವರನ್ನು ಕೊಲೆ ಮಾಡುತ್ತೇನೆಂದು, ನಿಮ್ಮ ಜಾತಿಯವರನ್ನಾ ಕೊಲೆ ಮಾಡುತ್ತೇನೆಂದು ಜಾತಿ ನಿಂದನೆ ಮಾಡಿ ಬೈಯ್ದಿರುತ್ತಾನೆ. ನಮ್ಮ ಮನೆಗೆ ಕಲ್ಲು ಹೊಡೆದಿರುತ್ತಾನೆ, ಅದ್ದರಿಂದ ನಮಗೆ ಜೀವಬೆದರಿಕೆ ಆಗಿದೆ. ನನ್ನ ಹಾಗೂ ನಮ್ಮ ಮನೆಯವರಿಗೆ ರಕ್ಷಣೆ ನೀಡಬೇಕೆಂದು ನೀಡಿದ ಪಿರ್ಯಾದಿನ ಮೇರೆಗೆ ಕೇಸು ದಾಖಲಿಸಲಾಗಿದೆ.
ಯು.ಡಿ.ಆರ್. ಪ್ರಕರಣಗಳು :
1. ಮದ್ದೂರು ಪೊಲೀಸ್ ಠಾಣೆ ಯು.ಡಿ.ಆರ್. ನಂ. 22/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 14-6-2013 ರಂದು ಪಿರ್ಯಾದಿ ಸುರೇಶ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 07-6-2013 ರಂದು ರಾತ್ರಿ ಐ ಬಿ ಸರ್ಕಲ್ ಬಳಿ ಅಪರಿಚಿತ ಗಂಡಸು, 65 ವರ್ಷ ರವರು ನೀಡಿದ ದೂರಿನ ವಿವರವೇನೆಂದರೆ ಅಪರಿಚಿತ ಗಂಡಸು ವಯಸ್ಸು ಸುಮಾರು 65 ವರ್ಷ ಇವರು ಯಾವುದೋ ಖಾಯಿಲೆ ಬಂದು ಸತ್ತಿರುತ್ತಾನೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಯು.ಡಿ.ಆರ್. ನಂ. 16/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 14-6-2013 ರಂದು ಪಿರ್ಯಾದಿ ರತ್ಮಮ್ಮ ಕೊಂ. ಲೇಟ್. ದೇವರಾಜೇಗೌಡ, 40 ವರ್ಷ ರವರು ನೀಡಿದ ದೂರು ಏನೆಂದರೆ ಅವರ ಮಗ ಶರತ್ ಬಿನ್. ಲೇಟ್|| ದೇವರಾಜೇಗೌಡ, 19 ವರ್ಷ, ಒಕ್ಕಲಿಗರು, ಡಿಪ್ಲೋಮೊ ವಿದ್ಯಾರ್ಥಿನಿ ಇವರು ನಿಮ್ಮ ಹಳೆಯ ಮನೆಯಲ್ಲಿರುವ ತೊಲೆಗೆ ಹಳೆಯ ಸೀರೆಯಿಂದ ನೇಣು ಹಾಕಿಕೊಂಡಿರುತ್ತಾನೆ ಎಂದು ತಿಳಿಸಿದ ಮೇರೆಗೆ ಕೇಸು ದಾಖಲಿಸಲಾಗಿದೆ.
ಅಕ್ರಮ ಮರಳು ಕಳವು/ಸಾಗಾಣಿಕೆ ಮತ್ತು ಕರ್ನಾಟಕ ಉಪಖನಿಜ ನಿಯಮ -1994 ಹಾಗೂ ನಿಯಮ 4(1ಎ) ಮತ್ತು 21 (1 ರಿಂದ 5) ಎಂ.ಎಂ.ಆರ್.ಡಿ.-1957 ಪ್ರಕರಣ :
ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 174/13 ಕಲಂ. 379 ಐ.ಪಿ.ಸಿ. ಕೂಡ ನಿಯಮ 3, 42 ಮತ್ತು 44 ಕರ್ನಾಟಕ ಉಪಖನಿಜ ನಿಯಮ -1994 ಹಾಗೂ ನಿಯಮ 4(1ಎ) ಮತ್ತು 21 (1 ರಿಂದ 5) ಎಂ.ಎಂ.ಆರ್.ಡಿ.-1957
ದಿನಾಂಕ: 14-6-2013 ರಂದು ಪಿರ್ಯಾದಿ ಚಂದ್ರಸೇಖರ, ಎ.ಇ.ಇ. ಲೋಕೋಪಯೋಗಿ ಇಲಾಖೆ, ಕೆ.ಆರ್.ಪೇಟೆ ಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಲಾರಿ ಚಾಲಕರು ಮತ್ತು ಮಾಲೀಕರು ಹೆಸರು ವಿಳಾಸವನ್ನು ತಿಳಿಯಬೇಕಾಗಿರುತ್ತೆ ಮತ್ತು ಇಟಾಚಿ ವಾಹನಗಳ ಚಾಲಕರು ಮತ್ತು ಮಾಲೀಕರು ಹೆಸರು ವಿಳಾಸವನ್ನು ತಿಳಿಯಬೇಕಾಗಿರುತ್ತೆ ಇವರುಗಳು ದಿನಾಂಕ: 14-06-2013 ರಂದು ವರಹನಾಥಕಲ್ಲಹಳ್ಳಿ ಗ್ರಾಮದ ಹೇಮಾವತಿ ನದಿ ಪಾತ್ರದಲ್ಲಿ ಕೆ.ಆರ್.ಪೇಟೆ ತಾಲ್ಲೋಕು ವರಹನಾಥಕಲ್ಲಹಳ್ಳಿಯ ಹತ್ತಿರ ಹಾದುಹೋಗಿರುವ ಹೇಮಾವತಿ ನದಿ ಪಾತ್ರದಲ್ಲಿ ಕೆಲವೊಂದು ಜನ ಅಕ್ರಮವಾಗಿ ಇಟಾಚಿ ಯಂತ್ರಗಳಿಂದ ನದಿದಂಡೆಯನ್ನು ಅಗೆದು ಸಕರ್ಾರದ ನೀತಿ ಉಲ್ಲಂಘಿಸಿ ಅಕ್ರಮವಾಗಿ ಮರಳು ತೆಗೆದು ಲಾರಿಗಳಲ್ಲಿ ಸಾಗಿಸುತ್ತಿದ್ದು ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment