ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ
ಮಂಡ್ಯ ಜಿಲ್ಲೆ, ಮಂಡ್ಯ
ದಿನಾಂಕಃ 29-12-2013
ಪತ್ರಿಕಾ ಪ್ರಕಟಣೆ
ದಿನಾಂಕ 28/12/13 ರಂದು ಬೆಳಗ್ಗೆ 9-00 ಗಂಟೆ ಸಮಯದಲ್ಲಿ ಸಿಪಿಐ, ಕೆ.ಆರ್. ಪೇಟೆ ಶ್ರೀ. ಕೆ. ರಾಜೇಂದ್ರ ಮತ್ತು ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣಾ ಪಿಎಸ್ಐ ಎಂ.ಶಿವಕುಮಾರ್ ಮತ್ತು ಕ್ರೈಂ ಸಿಬ್ಬಂದಿಗಳು ಕೆ.ಆರ್.ಪೇಟೆ ಟೌನ್ಲ್ ನಲ್ಲಿ ಗಸ್ತು ಮಾಡುತ್ತಿದ್ದಾಗ ಟೌನಿನ ಮೈಸೂರು ರಸ್ತೆಯ ಲಲಿತಾ ಪೆಟ್ರೋಲ್ ಬಂಕ್ ಬಳಿ ಗಸ್ತು ಮಾಡುತ್ತಿದ್ದಾಗ, ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆಯ ಎಂಓಬಿ ಆಸಾಮಿಯು ಲಲಿತಾ ಪೆಟ್ರೋಲ್ ಬಂಕ್ ಹತ್ತಿರ ರಸ್ತೆಯ ನಡೆದುಕೊಂಡು ಹೋಗುತ್ತಿರುವುದು ಕಂಡು ಬಂದಿದ್ದು, ತಕ್ಷಣ ಅವನನ್ನು ಹಿಡಿದುಕೊಂಡು ಹೆಸರು ವಿಳಾಸ ವಿಚಾರಿಸಲಾಗಿ ರಮೇಶ್ ಗೌಡ @ ರಮೇಶ ಬಿನ್ ನಂಜೇಗೌಡ ಬಣ್ಣೇನಹಳ್ಳಿ ಗ್ರಾಮ ಕೆ.ಆರ್.ಪೇಟೆ ತಾ|| ಎಂತಲೂ ತಿಳಿಸಿದ್ದು, ನಂತರ ಆತನನ್ನು ಕೂಲಂಕುಷವಾಗಿ ವಿಚಾರ ಮಾಡಲಾಗಿ ಈ ಹಿಂದೆ ಬಾಂಬೆಯಲ್ಲಿ ಲೋಕೇಶಗೌಡ ಎಂಬುವರ ಮನೆಯಲ್ಲಿ ಚಿನ್ನದ ಒಡವೆಗಳನ್ನು ಕಳ್ಳತನ ಮಾಡಿಕೊಂಡು ಬಂದು ಅವುಗಳನ್ನು ನಮ್ಮ ಮನೆಯಲ್ಲಿ ಇಟ್ಟಿರುವುದಾಗಿ, ಇವತ್ತು ಕೆ.ಆರ್.ಪೇಟೆಯಲ್ಲಿ ಸಂತೆ ಇರುವುದರಿಂದ ಯಾರಾದರೂ ಗಿರಾಕಿಗಳು ಸಿಕ್ಕರೆ ಒಡವೆಗಳನ್ನು ತೋರಿಸಿ ಮಾರಾಟ ಮಾಡುವುದಾಗಿ ತಿಳಿಸಿದ್ದು, ನಂತರ ಆರೋಪಿಯನ್ನು ಆತನ ಗ್ರಾಮವಾದ ಬಣ್ಣೇನಹಳ್ಳಿ ಗ್ರಾಮಕ್ಕೆ ಕರೆದುಕೊಂಡು ಆತನ ಮನೆಗೆ ತೆರಳಿ ಪಂಚರ ಸಮಕ್ಷಮ ಆರೋಪಿಯು ತನ್ನ ಮನೆಯಲ್ಲಿಟ್ಟಿದ್ದ ಸುಮಾರು 75 ಗ್ರಾಂ ತೂಕದ ಚಿನ್ನದ ವಿವಿಧ ರೀತಿಯ ಒಡವೆಗಳನ್ನು ಅಮಾನತುಪಡಿಸಿಕೊಂಡಿರುತ್ತೆ. ನಂತರ ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣೆಗೆ ಆತನ ವಿರುದ್ದ ಪ್ರಕರಣ ದಾಖಲು ಮಾಡಿದ್ದು, ನಂತರ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆತನನ್ನು ನ್ಯಾಯಾಂಗ ಬಂದನಕ್ಕೆ ಆದೇಶಿಸಿರುತ್ತದೆ. . ಈ ಬಗ್ಗೆ ಈಗಾಗಲೇ ಮಹಾರಾಷ್ಟ್ರ ರಾಜ್ಯದ ಮುಂಬೈನ ಅಂದೇರಿ ಸಹರ್ ಪೊಲೀಸ್ ಠಾಣೆಯಲ್ಲಿ ಮೊ.ನಂ. 335/2013 ಕಲಂಃ 381 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿ ಹಾಲಿ ತನಿಖೆಯಲ್ಲಿರುತ್ತದೆ ತಿಳಿದು ಬಂದಿರುತ್ತದೆ
No comments:
Post a Comment