ದಿನಾಂಕ:31-12-2013 ಮತ್ತು ದಿನಾಂಕ:01-01-2014 ರಂದು ರಾಜ್ಯಾದ್ಯಂತ ಕ್ರಿಶ್ಚಿಯನ್ನರು ನೂತನ ವಷರ್ಾರಂಭ ಆಚರಣೆಯನ್ನು ಸಂಭ್ರಮದಿಂದ ಆಚರಿಸಲಿದ್ದಾರೆ(.) ಸದರಿ ದಿನಗಳಂದು ಕ್ರೈಸ್ತ ಸಮುದಾಯದವರು ವಿಶೇಷ ಪ್ರಾರ್ಥನೆ ಸಲ್ಲಿಸಲು ಪ್ರಾರ್ಥನಾ ಮಂದಿರಗಳಿಗೆ ಭೇಟಿ ನೀಡಲಿದ್ದಾರೆ (.) ಹೊಸ ವರ್ಷಾಚರಣೆ ಸಂಬಂದ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಠಿಯಿಂದ ಈ ಕೆಳಕಂಡ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.
1] ಜಿಲ್ಲೆಯಲ್ಲಿ ಇರುವ ಎಲ್ಲಾ ಹೊಟೇಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್ ಮತ್ತು ಸಂಘ ಸಂಸ್ಥೆಗಳಲ್ಲಿ ಹಾಗೂ ಇನ್ನಿತರೆ ಕಡೆಗಳಲ್ಲಿ ನಡೆಸುವ ಹೊಸ ವರ್ಷದ ಕಾರ್ಯಕ್ರಮಗಳು ರಾತ್ರಿ 1230 ಗಂಟೆಯೊಳಗೆ ಮುಕ್ತಾಯಗೊಳಿಸಲು ಕ್ರಮ ಕೈಗೊಳ್ಳುವುದು.
2] ಹೊಟೇಲ್, ರೆಸ್ಟೋರೆಂಟ್, ಕ್ಲಬ್,ರೆಸಾರ್ಟ್ ಮತ್ತು ಸಂಘ ಸಂಸ್ಥೆಗಳಲ್ಲಿ ಹಾಗೂ ಇನ್ನಿತರೆ ಕಡೆಗಳಲ್ಲಿ ಆಯೋಜಿಸಲಾಗುವ ಕಾರ್ಯಕ್ರಮಗಳು ಆಯಾಯ ಹೋಟೆಲ್ ಹಾಗೂ ಸಂಸ್ಥೆಗಳ ಒಳ ಆವರಣದಲ್ಲಿಯೇ ನಡೆಯಬೇಕು ಹಾಗೂ ಕಾರ್ಯಕ್ರಮಗಳು ನಡೆಯುವ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಹೊಟೇಲ್/ರೆಸ್ಟೊರೆಂಟ್, ಕ್ಲಬ್/ರೆಸಾರ್ಟ್ ಮಾಲೀಕರು ಹಾಗೂ ಕಾರ್ಯಕ್ರಮ ಆಯೋಜಕರು ನೋಡಿಕೊಳ್ಳುವುದು, ಒಂದು ಪಕ್ಷ ಯಾವುದಾದರೂ ಅಹಿತಕರ ಘಟನೆಗಳು ನಡೆದಲ್ಲಿ ಸಂಬಂದಪಟ್ಟ ಕಾರ್ಯಕ್ರಮ ಆಯೋಜಕರನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದಾಗಿ ತಿಳಿಸುವುದು.
3] ಯಾವುದೇ ವ್ಯಕ್ತಿಗಳು ಕುಡಿದು ವಾಹನ ಚಾಲನೆ ಮಾಡದಂತೆ ನೋಡಿಕೊಳ್ಳುವುದು. ಪೊಲೀಸ್ ಗಸ್ತನ್ನು ಏರ್ಪಡಿಸಿ, ಕುಡಿದು ವಾಹನ ಚಾಲನೆ ಮಾಡುವವರ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವುದು.
4] ಹೊಸವರ್ಷ ಆಚರಣೆ ನೆಪದಲ್ಲಿ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರನ್ನು ಬಲವಂತವಾಗಿ ನಿಲ್ಲಿಸಿ ಶುಭ ಕೋರುವ ನೆಪದಲ್ಲಿ ಕಿರಿಕಿರಿ ಮಾಡದಂತೆ ಹಾಗೂ ಹೆಣ್ಣುಮಕ್ಕಳಿಗೆ ಹಾಗೂ ಮಹಿಳೆಯರಿಗೆ ಶುಬಕೋರುವ ನೆಪದಲ್ಲಿ ಕೀಟಲೆ ಅಸಭ್ಯವಾಗಿ ವರ್ತಿಸದಂತೆ ಕ್ರಮಗಳನ್ನು ಕೈಗೊಳ್ಳುವುದು.
5] ಹೊಸವರ್ಷ ಆಚರಣೆ ಸಂಬಂದ ಏರು ದ್ವನಿಯಲ್ಲಿ ದ್ವನಿವರ್ದಕಗಳನ್ನು ಬಳಸದಂತೆ ಎಚ್ಚರಿಕೆ ನೀಡುವುದು.
6] ಹೊಸವರ್ಷ ಆಚರಣೆ ಸಂಬಂದ ಮಹಿಳಾ ಹಾಸ್ಟೆಲ್, ಕಾಲೇಜು ಹಾಗೂ ಪ್ರಮುಖ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸ್ ಗಸ್ತುನ್ನು ಏರ್ಪಡಿಸುವುದು.
ಆದ್ದರಿಂದ, ನೂತನ ವರ್ಷದ ಮುನ್ನಾ ದಿನದ ಹಾಗೂ ಹೊಸವರ್ಷದ ದಿನದಂದು ಮುಂಜಾಗ್ರತಾ ವಹಿಸಿ ಯಾವುದೇ ಅಹಿತಕರ ಘಟನೆಗಳು ನಡೆಯದ ಹಾಗೆ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
No comments:
Post a Comment