ಪೊಲೀಸ್ ಸೂಪರಿಂಟೆಂಡೆಂಟ್ ರವರ ಕಛೇರಿ,
ಮಂಡ್ಯ ಜಿಲ್ಲೆ,
ಮಂಡ್ಯ, ದಿನಾಂಕಃ-05-12-2015.
-:ಪತ್ರಿಕಾ ಪ್ರಕಟಣೆ:-
ಈ ದಿವಸ ದಿನಾಂಕಃ-05-12-2015 ರಂದು ಮದ್ಯಾಹ್ನ 1-00 ಗಂಟೆಯ ಸಮಯದಲ್ಲಿ ಶ್ರೀಮತಿ.ಭವಿತ, ಮ.ಪಿ.ಎಸ್.ಐ ಮಂಡ್ಯ ಗ್ರಾಮಾಂತರ ಠಾಣೆರವರಿಗೆ ಜಿಲ್ಲಾ ಪೋಲಿಸ್ ಕಛೇರಿಯಿಂದ ಬಂದ ಮಾಹಿತಿ ಏನೆಂದರೆ, ಮಂಡ್ಯ ನಗರದ ಗಾಂದಿನಗರ 8 ನೇ ಕ್ರಾಸ್‍ನಲ್ಲಿರುವ ಶ್ರೀಮತಿ ಕಾಳಮ್ಮ ಎಂಬುವವರಿಗೆ ಸೇರಿದ ಮನೆ ನಂಬರ್ 2033/6 ರಲ್ಲಿ ಮನೆಯ ಮಾಲೀಕರ ಮಗನಾದ ಸಿ.ಎಂ.ರಾಮು ಎಂಬುವವನು ಹುಡುಗಿಯರನ್ನಿಟ್ಟುಕೊಂಡು ವೇಶ್ಯವಾಟಿಕೆ ದಂದೆಯಲ್ಲಿ ತೊಡಗಿ ಹೆಚ್ಚಿನ ಹಣವನ್ನು ಸಂಪಾದನೆ ಮಾಡುತ್ತಿದ್ದಾನೆಂತಲೂ ಈ ಬಗ್ಗೆ ದಾಳಿ ನಡೆಸಿ ನಿಯಾಮಾನುಸಾರ ಕ್ರಮ ಕೈಗೊಳ್ಳಲು ಸೂಚಿಸಿದರ ಮೇರೆಗೆ ಸದರಿ ವಿಚಾರವನ್ನು ಡಿ.ವೈ.ಎಸ್.ಪಿ. ಮಂಡ್ಯ ಉಪ-ವಿಭಾಗರವರಿಗೆ ತಿಳಿಸಿ ಅವರಿಂದ ಸರ್ಚ್‍ವಾರೆಂಟ್ ಪಡೆದು ಅವರ ಜೊತೆಯಲ್ಲಿ ಪಶ್ಚಿಮ ಪೋಲಿಸ್ ಠಾಣೆಯ ಮಹಿಳಾ ಪಿ.ಎಸ್.ಐ. ಜಯಲಕ್ಮಮ್ಮ ಹಾಗು ಇತರೆ ಸಿಬ್ಬಂದಿಗಳೊಂದಿಗೆ ಹಾಗೂ ಪಂಚಾಯ್ತುದಾರರನ್ನು ನೇಮಕ ಮಾಡಿಕೊಂಡು ಮೆಲ್ಕಂಡ ಮನೆಯ ಮೇಲೆ ದಾಳಿ ಮಾಡಲಾಗಿ ಸದರಿ ಮನೆಯು ಮಂಡ್ಯ ಸಿಟಿ ಗಾಂದಿನಗರದ 8 ನೇ ಕ್ರಾಸಿನಲ್ಲಿರುವ ಶ್ರೀಮತಿ ಕಾಳಮ್ಮ ಎಂಬುವವರಿಗೆ ಸೇರಿದ ಮನೆ ನಂಬರ್ 2033/6 ಆಗಿದ್ದು, ಸದರಿ ಮನೆಯು 1ನೇ ಅಂತಸ್ತಿನಲ್ಲಿರುವ ಆರ್.ಸಿ.ಸಿ. ಮನೆ ಆಗಿರುತ್ತದೆ.
ಮನೆಯ ಬಾಗಿಲನ್ನು ತಟ್ಟಿದಾಗ ಒಳಗಿಂದ ಬಾಗಿಲು ತೆರೆದಾಗ ಇಬ್ಬರು ಹೆಣ್ಣುಮಕ್ಕಳು ಅರೆಬರೆ ಬಟ್ಟೆಯನ್ನು ಧರಿಸಿರುವ ಸ್ಥಿತಿಯಲ್ಲಿದ್ದು, ಮತ್ತು ಇಬ್ಬರು ಗಂಡಸರು ಅರೆ ಬೆತ್ತಲೆ ಸ್ಥಿತಿಯಲ್ಲಿದ್ದು, ಸದರಿ ಗಂಡಸರನ್ನು ವಿಚಾರಮಾಡಲಾಗಿ ಒಬ್ಬನು ತನ್ನ ಹೆಸರು ಸಿ.ಎಂ ರಾಮು ಬಿನ್ ಮಂಚಯ್ಯ 45 ವರ್ಷ, ಕೂಲಿಕೆಲಸ, ವಾಸ:- ನಂಬರ್ 2033/6 ಗಾಂದಿನಗರ, 8ನೇ ಕ್ರಾಸ್, ಮಂಡ್ಯ ಸಿಟಿ ಎಂತಲೂ ತಾನು ಇದೇ ಮನೆಯಲ್ಲಿ ಹೆಣ್ಣುಮಕ್ಕಳನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದು, ತನ್ನ ಬಳಿಯಿರುವ ಮೊಬೈಲ್‍ಗಳ ಮೂಲಕ ಗಿರಾಕಿಗಳನ್ನು ಸಂಪರ್ಕಿಸಿ ವೇಶ್ಯಾವಾಟಿಕೆಯನ್ನು ನಡೆಸುತ್ತಿರುವುದಾಗಿ ತಿಳಿಸಿರುತ್ತಾನೆ, ಮತ್ತೊಬ್ಬನು ತನ್ನ ಹೆಸರು ಗಂಗಾಧರ ಬಿನ್ ಲೇಟ್ ಕಾಳೇಗೌಡ, 23 ವರ್ಷ, ವಕ್ಕಲಿಗರು, ಡ್ರೈವರ್ ಕೆಲಸ, ವಾಸ:-ಕಾಳೇನಳ್ಳಿ ಗ್ರಾಮ. ಎಂತಲೂ ತಿಳಿಸಿರುತ್ತಾನೆ. ಹೆಣ್ಣುಮಕ್ಕಳನ್ನು ವಿಚಾರ ಮಾಡಲಾಗಿ ಒಬ್ಬಳು ಆದಿವಾಲ ಗ್ರಾಮ, ಹಿರಿಯೂರು ಹೋಬಳಿ, ಚಿತ್ರದುರ್ಗಾ ಜಿಲ್ಲೆ ಎಂತಲೂ ಮತ್ತೊಬ್ಬಳು, ಚಿಕ್ಕಜಾಜೂರು ಗ್ರಾಮ, ಚಿತ್ರದುರ್ಗಾ ಜಿಲ್ಲೆ, ಎಂತಲೂ ತಿಳಿಸಿರುತ್ತಾರೆ. ಇಬ್ಬರೂ ಹೆಣ್ಣುಮಕ್ಕಳು ತಾವು ನೆನ್ನೆ ರಾತ್ರಿ ಅಂದರೆ ದಿನಾಂಕ:04-12-2015 ರಂದು ಬಂದಿದ್ದಾಗಿಯೂ ಸದರಿ ಮನೆಯಲ್ಲಿರುವ ರಾಮು ಎಂಬುವರು ತಮ್ಮನ್ನು ವೇಶ್ಯಾವಾಟಿಕೆಗಾಗಿ ಕರೆಸಿ, ವೈಶ್ಯಾವಾಟಿಕೆಯಲ್ಲಿ ತೊಡಗಿಸಿರುತ್ತಾರೆಂದು ತಿಳಿಸಿರುತ್ತಾರೆ.
ಸದರಿ ಮೇಲ್ಕಂಡ ಸಿ.ಎಂ ರಾಮುರವರು ಕಾನೂನಿಗೆ ವಿರುದ್ದವಾಗಿ ತಮ್ಮ ಮನೆಯನ್ನು ವೇಶ್ಯವಾಟಿಕೆಯ ದಂಧೆಗೆ ಉಪಯೋಗಿಸಿ ಹುಡುಗಿಯರನ್ನು ವೇಶ್ಯವಾಟಿಕೆ ದಂಧೆಗೆ ತೊಡಗಿಸಿ ಇದರಿಂದ ಹಣ ಸಂಪಾದನೆ ಮಾಡುವ ದಂಧೆಯಲ್ಲಿ ತೊಡಗಿದ್ದರಿಂದ ಮತ್ತು ಗಂಗಾದರ ಎಂಬುವವನು ವೇಶ್ಯವಾಟಿಕೆಯಲ್ಲಿ ತೊಡಗಿದ್ದರಿಂದ, ಗಂಗಾಧರ ಮತ್ತು ಸಿ.ಎಂ.ರಾಮುರವರುಗಳ ವಿರುದ್ದ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿರುತ್ತದೆ.
No comments:
Post a Comment