ಪತ್ರಿಕಾ ಪ್ರಕಟಣೆ
ಮಂಡ್ಯ ಉಪ ವಿಭಾಗದ ಅಪರಾಧ ಪತ್ತೆ ದಳದಿಂದ 8 ಮಂದಿ ಆರೋಪಿಗಳ ಬಂಧನ ಇವರುಗಳಿಂದ 2 ಲಕ್ಷ ರೂ ಮೌಲ್ಯದ ಕಳುವು ಮಾಡಿ ಸುಟ್ಟಿರುವ ಏರಟೆಲ್ ಫೀಡರ್ ವೈರ್ ನ ಬಾಬ್ತು 447 ಕೆ.ಜಿ. ಯಷ್ಟು ತಾಮ್ರದ ಕೇಬಲ್ ವಶ
ಮಂಡ್ಯ ಉಪ ವಿಭಾಗದ ಅಪರಾಧ ಪತ್ತೆ ದಳದವರು ದಿನಾಂಕ:13-12-2011 ರಂದು ಮಾರುತಿ ಓಮ್ನಿ ಕಾರ್ ನಂ ಕೆಎ-03-ಎನ್ 570 ರಲ್ಲಿ ಅನುಮಾನಸ್ಪದವಾಗಿ ಇದ್ದ 4 ಜನ ಅಸಾಮಿಗಳನ್ನು ಅದರಲ್ಲಿದ್ದ ಸುಟ್ಟಿರುವ ತಾಮ್ರದ ಕೇಬಲ್ ನ ಸಮೇತ ಬಂಧಿಸಿ ಅವರುಗಳನ್ನು ವಿಚಾರಣೆಗೊಳಪಡಿಸಲಾಗಿ ಸದರಿ ಅಸಾಮಿಗಳು ಈ ಕೆಳಕಂಡ ಇತರೆ ಆರೋಪಿಗಳ ಜೊತೆ ಸೇರಿ ಈಗ್ಗೆ ಸುಮಾರು 1 ತಿಂಗಳಿನಿಂದ ನೆಲಮಂಗಲ ಗ್ರಾಮಾಂತರ ಠಾಣಾ ವ್ಯಾಪ್ತಿಗೆ ಸೇರಿದ ಬೂದಿಹಾಳದ ಬಳಿ ಇರುವ ಏರಟೆಲ್ ನ ಗೋಡಾನ್ ಬಳಿ ಸಂಗ್ರಹಿಸಿ ಇಡಲಾಗಿದ್ದ ಸುಮಾರು 7 ಲಕ್ಷ ರೂ ಮೌಲ್ಯದ ಏರಟೆಲ್ ಫೀಡರ್ ಕೇಬಲ್ ನ್ನು ಬಂಡಲ್ ಸಮೇತ 3 ಬಾರಿ ಕಳವು ಮಾಡಿಕೊಂಡು ಬಂದು ಮಂಡ್ಯ ಕೆರೆ ಅಂಗಳದಲ್ಲಿ ಮಂಡ್ಯ ಕೆರೆ ಅಂಗಳದಲ್ಲಿ ಮಂಡ್ಯದ ಜಬ್ಬರ್ ಸರ್ಕಲ್ ನ ವಾಸಿ ಫಾರುಕ್ ಅಬ್ದುಲ್ಲಾ ಎಂಬುವವರೊಂದಿಗೆ ಸೇರಿ ಸುಟ್ಟು ಹಾಕಿ ಆತನಿಗೆ ಮಾರಾಟ ಮಾಡಿದ 447 ಕೆ.ಜಿ ಯಷ್ಟು ತಾಮ್ರದ ಕೇಬಲ್ ನ್ನು ವಶಪಡಿಸಿಕೊಂಡಿರುತ್ತದೆ. ಇವುಗಳ ಒಟ್ಟು ಮೌಲ್ಯ 2 ಲಕ್ಷ ರೂಗಳಾಗಿರುತ್ತದೆ.
ಆರೋಪಿಗಳ ಹೆಸರು ವಿಳಾಸ
1.ಅಂದಾನಿ ಬಿನ್ ಲೇ|| ದೊಡ್ಡಯ್ಯ, 28 ವರ್ಷ, ಪರಿಶಿಷ್ಟ ಜನಾಂಗ, ಡ್ರೈವರ್ ಕೆಲಸ, ವಾಸ ಮಲ್ಲೇಶ್ವರ ಬಡಾವಣೆ, ರಾಮನಗರ ಟೌನ್.
2.ಶಿವಕುಮಾರ @ ರವಿ ಬಿನ್ ಮಹದೇವ, 24 ವರ್ಷ, ದೊಂಬಿದಾಸರ ಜನಾಂಗ, ಕೂಲಿ ಕೆಲಸ, ವಾಸ ಹನುಮಂತ ನಗರ, ಐಜೂರು, ರಾಮನಗರ ಟೌನ್.
3] ರಂಗನಾಥ ಬಿನ್ ರಂಗಪ್ಪ, 28ವರ್ಷ, ದೊಂಬಿದಾಸರ ಜನಾಂಗ, ಕೂಲಿ ಕೆಲಸ, ವಾಸ-26ನೇ ವಾಡರ್್, 2ನೇ ಕ್ರಾಸ್, ಐಜೂರು, ರಾಮನಗರ ಟೌನ್
4] ಪ್ರತಾಪ ಬಿನ್ ವೀರ, 19ವರ್ಷ, ತಮಿಳು ಜನಾಂಗ, ಪ್ಲಂಬರ್ ಕೆಲಸ, ವಾಸ-ತಮಿಳು ಕಾಲೋನಿ ಚನ್ನಪಟ್ಟಣ ಟೌನ್
5] ರಾಜೇಶ ಬಿನ್ ಲೇ. ನಾಗರಾಜು. 23 ವರ್ಷ, ವಕ್ಕಲಿಗರು, ಕೂಲಿಕೆಲಸ, ವಾಸ-ಕೋಡಿಪುರ, 25ನೇ ವಾಡರ್್, ಐಜೂರು, ರಾಮನಗರ ಟೌನ್
6] ಮುನಿಯ ಬಿನ್ ಏಳುಮಲೈ, 24 ವರ್ಷ, ಪರಿಶಿಷ್ಟ ಜನಾಂಗ, ಕೂಲಿ ಕೆಲಸ, ವಾಸ- ಕಾಶೀಮಠ, ಐಜೂರು, ರಾಮನಗರ ಟೌನ್
7] ಕಾಳಯ್ಯ ಬಿನ್ ಲೇ. ರಾಮಸ್ವಾಮಿ, 23 ವರ್ಷ, ಪರಿಶಿಷ್ಟ ಜನಾಂಗ, ಕೂಲಿ ಕೆಲಸ, ವಾಸ- ನಾಗರಕಟ್ಟೆ, ಐಜೂರು, ರಾಮನಗರ ಟೌನ್
8] ಫಾರುಕ್ ಅಬ್ದುಲ್ಲಾ ಬಿನ್ ಸುಬಾನುಲ್ಲಾ, 35 ವರ್ಷ, ಮುಸ್ಲೀಂ ಜನಾಂಗ, ಟಿಂಕರ್ ಕೆಲಸ, ವಾಸ- ನಾಲಬಂದವಾಡಿ, ಜಬ್ಬರ್ ಸರ್ಕಲ್, ಮಂಡ್ಯ. ಸದರಿ ಆರೋಪಿಗಳನ್ನು ದಿನಾಂಕಃ15-12-2011 ರಂದು ನ್ಯಾಯಾಲಯಕ್ಕೆ ಹಾಜರ್ಪಡಿಸಿದ್ದು ನ್ಯಾಯಾಂಗ ಬಂಧನದಲ್ಲಿರುತ್ತಾರೆ.
ಈ ಪತ್ತೆ ಕಾರ್ಯದಲ್ಲಿ ಪಾಲ್ಗೊಂಡಿದ್ದ ಅದಿಕಾರಿ ಮತ್ತು ಸಿಬ್ಬಂದಿಯವರಾದ ಮಂಡ್ಯ ಪಶ್ಚಿಮ ಠಾಣೆಯ ಪಿಎಸ್ಐ ಜೆ. ಮಂಜು, ಮಂಡ್ಯ ಪಶ್ಚಿಮ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಕೆ. ಪ್ರಭಾಕರ್, ಎಎಸ್ಐ ಸಿ.ಕೆ.ಪುಟ್ಟಸ್ವಾಮಿ, ಎಎಸ್ಐ ಕೆ.ಎಸ್. ಶಿವಲಿಂಗೇಗೌಡ ಸಿಬ್ಬಂದಿಗಳಾದ ನಾರಾಯಣ, ನಿಂಗಣ್ಣ, ಅಕರ್ೇಶ, ಟಿ.ಲಿಂಗರಾಜು, ಕೆ.ಸಿ.ನಟರಾಜು, ಪುಟ್ಟಸ್ವಾಮಿ, ಮಂಜುನಾಥ, ಭರತ್, ಪರಶುರಾಮ, ಚಂದ್ರಶೇಖರ, ಜೀಪ್ ಚಾಲಕರುಗಳಾದ ರವಿ, ಶ್ರೀನಿವಾಸ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮಂಡ್ಯ ಜಿಲ್ಲೆ ರವರು ಪ್ರಶಂಶಿಸಿರುತ್ತಾರೆ.