ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 11-04-12 ರಂದು ಒಟ್ಟು 23 ಪ್ರಕರಣಗಳು ವರದಿಯಾಗಿದ್ದು ಅವುಗಳಲ್ಲಿ 2 ಕಳ್ಳತನ ಪ್ರಕರಣಗಳು, 3 ಅಕ್ರಮ ಮರಳು ಸಾಗಣಿಕೆ ಪ್ರಕರಣಗಳು, 1 ಮಹಿಳಾ ದೌರ್ಜನ್ಯ ಪ್ರಕರಣ, 2 ಯು.ಡಿಆರ್ ಪ್ರಕರಣಗಳು ಹಾಗೂ 15 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.
ಕಳ್ಳತನ ಪ್ರಕರಣಗಳು :
1. ಕೆಸ್ತೂರು ಪೊಲೀಸ್ ಠಾಣೆ ಮೊ.ಸಂ.51/12 ಕಲಂ.379 ಐಪಿಸಿ.
ದಿ:11-04-12 ರಂದು ಪಿರ್ಯಾದಿ ಮಲ್ಲಿಕಾರ್ಜನ ಬಿನ್ ಈರೇಗೌಡ, ಮುಟ್ಟನಹಳ್ಳಿ ಗ್ರಾಮ, ಮದ್ದೂರು ತಾಲೋಕು. ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ವಿವರವೇನೆಂದರೆ ಕೆ.ಎ. 02 ಇ.ಡಬ್ಲ್ಯೂ. 7935 ಹೀರೋ ಹೋಂಡಾ ಪ್ಯಾಷನ್ ಬೈಕನಲ್ಲಿ ಬಂದು ಬೈಕನ್ನು ದೇವಸ್ಥಾನದ ಮುಂದಿನ ಜಾಗದಲ್ಲಿ ನಿಲ್ಲಿಸಿ ಹೋಗಿ ನಂತರ ಪೂಜೆ ಮುಗಿಸಿಕೊಂಡು ವಾಪಸ್ಸು ಬಂದು ನೋಡಲಾಗಿ ಸದರಿ ಬೈಕನ್ನು ಯಾರೋ ಕಳ್ಳರು ಕಳ್ಳತಮಾಡಿಕೊಂಡು ಹೋಗಿರುತ್ತಾರೆ ಪತ್ತೆಮಾಡಿ ಕೊಡಿ ಇತ್ಯಾದಿ ದೂರು.
2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ಸಂ212/12 ಕಲಂ.379 ಐ.ಪಿ.ಸಿ
ದಿ: 11-04-2012 ರಂದು ಎಂ.ಸ್ವಾಮಿ ಬಿನ್ ಮುದ್ದೇಗೌಡ, ತಡಗವಾಡಿ ಗ್ರಾಮ, ಶ್ರೀರಂಗಪಟ್ಟಣ ತಾ|| ರವರು ನೀಡಿದ ದೂರಿನ ವಿವರವೇನೆಂದರೆ ನನ್ನ ಮೋಟಾರ್ ಬೈಕ್ ವಾಹನ ಟಿವಿಎಸ್ ವಿಕ್ಟರ್ ಗಾಡಿ ನಂ ಕೆ.ಎ- 11 - ಕೆ -4295 ರಲ್ಲಿ ಮಿನಿವಿಧಾನ ಸೌಧದ ಆವರಣದಲ್ಲಿ ಸುಮಾರು 1-00 ಗಂಟೆ ವೇಳೆಯಲ್ಲಿ ವಾಹನ ನಿಲ್ಲಿಸಿ ಬೀಗ ಹಾಕಿ ತಾಲ್ಲೂಕು ಕಛೇರಿಗೆ ಹೋಗಿ ನನ್ನ ಸ್ವಂತ ಕೆಲಸ ಮುಗಿಸಿ 1-30 ಗಂಟೆಗೆ ಹೊರಗೆ ಬಂದು ಮೋಟಾರ್ ಬೈಕ್ ನೋಡಲಾಗಿ ಇರಲಿಲ್ಲ. ಎಲ್ಲಾ ಕಡೆ ಹುಡುಕಿದರು ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿ ಕಳ್ಳತನ ಮಾಡಿರುವವರ ಮೇಲೆ ಕಾನೂನು ರೀತ್ಯಾ ಕ್ರಮ ಜರುಗಿಸಬೇಕಾಗಿ ಕೋರಿಕೆ. ವಾಹನದ ಅಂದಾಜು ಬೆಲೆ ಸುಮಾರು 20,000 ರೂ. ಆಗುತ್ತದೆ. ಎಂದು ದೂರು.
ಅಕ್ರಮ ಮರಳು ಸಾಗಣಿಕೆ ಪ್ರಕರಣಗಳು :
1. ಕೊಪ್ಪ ಪೊಲೀಸ್ ಠಾಣೆ ಮೊ.ಸಂ.68/12 ಕಲಂ.ಕಲಂ.188-379 ಐಪಿಸಿ ರೆ.ವಿ. 4[1], 1[ಎ] & 21[1] ಎಂಎಂಆರ್ಡಿ ಆಕ್ಟ್..
ದಿ: 11-04-2012 ರಂದು ನವೀನ್. ಪಿ.ಎಸ್. ಭೂ ವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಮಂಡ್ಯ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಯಡವನಹಳ್ಳಿ ಗ್ರಾಮದ ಶಿಂಷಾನದಿ ಪಾತ್ರದಲ್ಲಿ, ಕೊಪ್ಪ ಹೋ, ಮದ್ದೂರು ತಾ ಇಲ್ಲಿ ನಂಬರ್ ಇಲ್ಲದ ಟ್ರಾಕ್ಟರ್ ಚಾಲಕರು ಮತ್ತು ಮಾಲೀಕರು, ಅಕ್ರಮ ಮರಳು ಗಣಿಗಾರಿಕೆ & ಸಾಗಾಣಿಕೆಗೆ ನಿರ್ಬಂಧವಿದ್ದು ನಿಷೇಧಾಜ್ಞೆ ಜಾರಿ ಯಲ್ಲಿರುತ್ತದೆ. ಆದರೂ ಮೇಲ್ಕಂಡ ಟ್ರಾಕ್ಟರ್ ಚಾಲಕ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಕಳ್ಳತನದಿಂದ ಅಕ್ರಮ ಮರಳು ಸಾಗಣಿಕೆ ಮಾಡಿರುತ್ತಾರೆ.
2. ಕೊಪ್ಪ ಪೊಲೀಸ್ ಠಾಣೆ ಮೊ.ಸಂ.69/12 ಕಲಂ.ಕಲಂ.188-379 ಐಪಿಸಿ ರೆ.ವಿ. 4[1], 1[ಎ] & 21[1] ಎಂಎಂಆರ್ಡಿ ಆಕ್ಟ್..
ದಿ:11-04-12 ರಂದು ಪಿರ್ಯಾದಿ ನವೀನ್. ಪಿ.ಎಸ್. ಭೂ ವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಮಂಡ್ಯ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಶಿಂಷಾನದಿ ಪಾತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆ & ಸಾಗಾಣಿಕೆಗೆ ನಿರ್ಬಂಧವಿದ್ದು ನಿಷೇಧಾಜ್ಞೆ ಜಾರಿ ಯಲ್ಲಿರುತ್ತದೆ. ಆದರೂ ಕೆಎ-11-ಟಿ-9523/9524 ರ ಮರಳು ತುಂಬಿದ ಟ್ರಾಕ್ಟರ್ ಚಾಲಕ ಮತ್ತು ಮಾಲೀಕರು ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಕಳ್ಳತನದಿಂದ ಅಕ್ರಮ ಮರಳು ಸಾಗಣಿಕೆ ಮಾಡಿರುತ್ತಾರೆ ಅವರ ಮೇಲೆ ಕ್ರಮ ಜರುಗಿಸಲು ದೂರು.
3. ಕೊಪ್ಪ ಪೊಲೀಸ್ ಠಾಣೆ ಮೊ.ಸಂ.70/12 ಕಲಂ.ಕಲಂ.188-379 ಐಪಿಸಿ ರೆ.ವಿ. 4[1], 1[ಎ] & 21[1] ಎಂಎಂಆರ್ಡಿ ಆಕ್ಟ್..
ದಿ:11-04-12 ರಂದು ಪಿರ್ಯಾದಿ ನವೀನ್. ಪಿ.ಎಸ್. ಭೂ ವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಮಂಡ್ಯ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಶಿಂಷಾನದಿ ಪಾತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆ & ಸಾಗಾಣಿಕೆಗೆ ನಿರ್ಬಂಧವಿದ್ದು ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಆದರೂ ಕೆಎ-11-ಟಿ-4720/4721 ರ ಮರಳು ತುಂಬಿದ ಟ್ರಾಕ್ಟರ್ ಚಾಲಕ ಮತ್ತು ಮಾಲೀಕರು ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಕಳ್ಳತನದಿಂದ ಅಕ್ರಮ ಮರಳು ಗಣಿಗಾರಿಗೆ ಮತ್ತು ಸಾಗಾಣಿಕೆಯಲ್ಲಿ ತೊಡಗಿದು ಅವರ ಮೇಲೆ ಕ್ರಮ ಜರುಗಿಸಲು ದೂರು.
ಮಹಿಳಾ ದೌರ್ಜನ್ಯ ಪ್ರಕರಣ :
ಕಿಕ್ಕೇರಿ ಪೊಲೀಸ್ ಠಾಣೆ ಮೊ.ಸಂ.56/12 ಕಲಂ.143-504-324-498(ಎ)-506 ಕೂಡ 149 ಐಪಿಸಿ
ದಿ:11-04-2012 ರಂದು ಗಾಯತ್ರಿ ಕೋಂ ನಂಜಪ್ಪ, ಅಂಚೇಬೀರನಹಳ್ಳಿ ಗ್ರಾಮ, ಕಿಕ್ಕೇರಿ ಹೋಬಳಿ, ಕೆ.ಆರ್ ಪೇಟೆ ತಾಲ್ಲೋಕು ರವರು ಠಾಣೆಗೆ ಹಾಜರಾಗಿ ನೀಡಿದ ಪಿರ್ಯಾದು ಏನೆಂದರೆ ಈಗ್ಗೆ ಸುಮಾರು 11 ತಿಂಗಳ ಹಿಂದೆ ಅಂಚೇಬಿರನಹಳ್ಳಿ ಗ್ರಾಮ ನಂಜಪ್ಪ ಎಂಬುವವರಿಗೆ 10,000/- ರೂ ವರದಕ್ಷಿಣೆ, 15 ಗ್ರಾಂ ಚಿನ್ನ ಕೊಟ್ಟು ನನ್ನ ಮದುವೆ ಮಾಡಿದ್ದು ಸರಿಯಸ್ಟೆ, ಪಿರ್ಯಾದಿಯವರ ನಾದಿನಿ, ಅತ್ತಿಗೆ, ಇವರ ಗಂಡ ಎಲ್ಲರೂ ಪಿರ್ಯಾದಿಯವರ ಮನೆಯಲ್ಲಿ ಉಳಿದುಕೊಂಡಿದ್ದರು ಈಗಿರುವಲ್ಲಿ ಕೆಲವು ದಿವಸಗಳು ಅನ್ಯೋನ್ಯವಾಗಿದ್ದು ನಂತರ ಮೇಲ್ಕಂಡ ಆರೋಪಿಗಳು ಪಿರ್ಯಾದಿಯವರಿಗೆ ಮತ್ತು ಅವರ ಗಂಡನಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ಕಿರುಕುಳ ನೀಡುತ್ತಿದ್ದರು. ದಿನಾಂಕ 10-04-12 ರಂದು ಸಂಜೆ 7-30 ಗಂಟೆ ಯಲ್ಲಿ ಮೇಲ್ಕಂಡ ಆರೋಪಿಗಳು ಪಿರ್ಯಾದಿಯವರನ್ನು ಅವರ ಗಂಡನನ್ನು ಉದ್ದೇಶಿಸಿ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದು, ಆರೋಪಿ 4 ರವರು ಮಚ್ಚನಿಂದ ಪಿರ್ಯಾದಿಯವರ ಕೈಗೆ ಹೊಡೆದು ಗಾಯಗೊಳಿಸಿ, ಪಿರ್ಯಾದಿಯವರ ಗಂಡನನ್ನು ಹಿಡಿದುಕೊಂಡು ಎಳೆದಾಡಿ ತರಚಿದ ಗಾಯಗೊಳಿಸಿ ಎಲ್ಲರೂ ಇವತ್ತಲ್ಲ ನಾಳೆ ಕೊಲೆ ಮಾಡುತ್ತೆವೆ ಎಂದು ಕೊಲೆ ಬೆದರಿಕೆಯನ್ನು ಹಾಕಿ ಗಲಾಟೆ ಮಾಡಿದರು ಎಂದು ಎಂಬಿತ್ಯಾದಿಯಾಗಿ ದೂರು..
ಯು.ಡಿಆರ್ ಪ್ರಕರಣಗಳು :
1. ಕೆ,ಆರ್,ಸಾಗರ ಪೊಲೀಸ್ ಠಾಣೆ ಮೊ.ಸಂ. ಯುಡಿಆರ್ ನಂ.15/12 ಕಲಂಃ174 ಸಿಆರ್.ಪಿ.ಸಿ
ದಿ:11-04-12 ರಂದು ಈರಮ್ಮ ಕೋಂ ಲೇಟ್ ಕೆಂಪೇಗೌಡ, 40 ವರ್ಷ, ವಕ್ಕಲಿಗರು, ಹೊಸ ಆನಂದೂರು ಗ್ರಾಮ, ಶ್ರೀರಂಗಪಟ್ಟಣ ತಾಲೋಕು. ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯ ಮಗಳಾದ ಶೃತಿ ಡಾಟರ್ ಆಪ್ ಲೇಟ್ ಕೆಂಪೇಗೌಡ, 19 ವರ್ಷ, ಮನೆ ಕೆಲಸ, ಒಕ್ಕಲಿಗರು, ಹೊಸ ಆನಂದೂರು ಗ್ರಾಮ, ಶ್ರೀರಂಗಪಟ್ಟಣ ತಾಲೋಕು ರವರಿಗೆ ಕಳೆದ 6 ತಿಂಗಳಿಂದ ಆಗ್ಗಾಗ್ಗೆ ಹೊಟ್ಟೆ ನೋವು ಬರುತ್ತಿದ್ದು, ಹಲವಾರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ದಿನಾಂಕ: 07-04-12 ರಂದು ಬೆಳಿಗ್ಗೆ 11-30 ಗಂಟೆಯ ಸಮಯದಲ್ಲಿ ಶೃತಿಯು ಅಡುಗೆ ಮನೆಗೆ ತಿಂಡಿ ತಿನ್ನಲು ಹೋಗಿದ್ದಾಗ ಹೊಟ್ಟೆನೋವು ಬಂದು ತಾಳಲಾರದೆ ಅಡುಗೆ ಮನೆಯಲ್ಲಿದ್ದ ಸೀಮೆಎಣ್ಣೆಯನ್ನು ತೆಗೆದುಕೊಂಡು ಮೈಮೇಲೆ ಸುರುದುಕೊಂಡು ಬೆಂಕಿ ಕಡ್ಡಿ ಗೀರಿ ಹಚ್ಚಿಕೊಂಡು ಚಿಕಿತ್ಸೆ ಫಲಕಾರಿಯಾಗದೆ ಶೃತಿಯು ಮೃತಪಟ್ಟಿರುತ್ತಾಳೆ ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಇತ್ಯಾದಿ ದೂರು ಮೇರೆಗೆ.
2. ಪಾಂಡವ ಪುರ ಪೊಲೀಸ್ ಠಾಣೆ ಮೊ.ಸಂ. 17/12 ಕಲಂ. 174 ಸಿಆರ್.ಪಿ.ಸಿ
ದಿ: 11-04-12 ರಂದು ಪಿರ್ಯಾದಿ ಆಕಾಶ್. ಡಿ. ಬಿನ್ ದಾಸಪ್ಪ, ಶಿವರಾಂ ಬಡಾವಣೆ, ಕೆನ್ನಾಳು ಗ್ರಾಮ, ಪಾ ಪುರ ತಾ. ರವರು ನೀಡಿದ ದೂರಿನ ವಿವರವೇನೆಂದರೆ ಮನೆಯ ಮುಂದಿನ ಮೈಸೂರು ಪಾಂಡವಪುರ ರಸ್ತೆಯ ಫುಟ್ಪಾತ್ ನ ಹುಲ್ಲಿನ ಮೇಲೆ ಒಬ್ಬ ಅಪರಿಚಿತ ಗಂಡಸು ಸುಮಾರು 35 ರಿಂದ 40 ವರ್ಷ ಆಸಾಮಿಯು ಮಲಗಿಕೊಂಡಿದ್ದು, ಹತ್ತಿರ ಹೋಗಿ ನೋಡಲಾಗಿ ಸದರಿ ವ್ಯಕ್ತಿಯು ಮೃತಪಟ್ಟಿರುವುದು ಕಂಡು ಬಂದು ಈ ವ್ಯಕ್ತಿಯು ಯಾವುದೋ ಖಾಯಿಲೆಯಿಂದ ನರಳಿ ಮೃತಪಟ್ಟಿದ್ದು ಈ ಬಗ್ಗೆ ಮುಂದಿನ ಕ್ರಮ ಜರುಗಿಸಬೇಕಾಗಿ ನೀಡಿದ ದೂರಿನ ಮೇರೆಗೆ ಠಾಣಾ ಯುಡಿಆರ್ ನಂ 17/2012 ಕಲಂ 174 ಸಿ.ಆರ್.ಪಿಸಿ ರೀತ್ಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತೆ.