ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 10-01-2013 ರಂದು ಒಟ್ಟು 15 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಕಳ್ಳತನ ಪ್ರಕರಣ, 1 ಮನುಷ್ಯ ಕಾಣೆಯಾದ ಪ್ರಕರಣ ಹಾಗು 13 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.
ಕಳ್ಳತನ ಪ್ರಕರಣ :
ನಾಗಮಂಗಲ ಪಟ್ಟಣ ಪೊಲೀಸ್ ಠಾಣೆ ಮೊ.ನಂ. 11/13 ಕಲಂ. 457-380 ಐ.ಪಿ.ಸಿ.
ದಿನಾಂಕ:10-01-2013 ರಂದು ಪಿರ್ಯಾದಿ ಮಹಮದ್ ಅಪ್ರತಾಬ್ ಬಿನ್. ಅಮೀರ್ ಜಾನ್, ಹನೀಫ್ ಮೊಹಲ್ಲಾ ನಾಗಮಂಗಲ ಟೌನ್ & ತಾಲ್ಲೂಕು ಮಂಡ್ಯ ಜೆಲ್ಲೆ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 09-01-2013 ರಂದು ರಾತ್ರಿ ವೇಳೆಯಲ್ಲಿ ನಾಗಮಂಗಲ ಟೌನ್ನ ಮಂಡ್ಯ ರಸ್ತೆಯಲ್ಲಿರುವ ಮೊಬೈಲ್ ಅಂಗಡಿಯ ಶೆಲ್ಟರ್ನ್ನು ಜಖಂಗೊಳಿಸಿ ಅಂಗಡಿಯಲ್ಲಿದ್ದ ಸುಮಾರು 20000-00 ರೂ ಬೆಲೆ ಬಾಳುವ ಮೊಬೈಲ್ನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ ಕಳುವು ಮಾಡಿದ ಆರೋಪಿಗಳನ್ನು ಮತ್ತು ಮಾಲನ್ನು ಪತ್ತೆ ಮಾಡಿ ಕಾನೂನು ರೀತ್ಯಾ ಕ್ರಮ ಜರುಗಿಸಬೆಕೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ :
ಕೊಪ್ಪ ಪೊಲೀಸ್ ಠಾಣೆ ಮೊ.ನಂ. 2/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.
ದಿನಾಂಕ: 10-01-2013 ರಂದು ಪಿರ್ಯಾದಿ ಲಕ್ಷ್ಮಿ ಕೋಂ. ರಾಜಣ್ಣ. ಚಿಕ್ಕಂಕನಹಳ್ಳಿ, ಆತಗೂರು ಹೋ, ಮದ್ದೂರು ತಾ. ರವರು ನೀಡಿದ ದೂರಿನ ವಿವರವೇನೆಂದರೆ ಅವರ ಮಗಳು ಶ್ವೇತಾ ಕೋಂ. ಸತೀಶ್. 24ವರ್ಷ, ಆಬಲವಾಡಿ, ಕೊಪ್ಪ ಹೋ. ರವರು ಮನೆಯಿಂದ ಹೋಗುವಾಗ ತಿಳಿಹಳದಿ ಬಣ್ಣದ ಸೀರೆ ಅದಕ್ಕೆ ಹೊಂದಿಕೊಂಡಂತಹ ಬಣ್ಣದ ರವಿಕೆ ತೊಟ್ಟಿರುತ್ತಾಳೆ. ಹಾಗಾಗಿ ಮೇಲ್ಕಂಡ ಚಹರೆಯುಳ್ಳ ನನ್ನ ಮಗಳನ್ನು ಕೂಡಲೇ ಪತ್ತೆ ಮಾಡಿಕೊಡಲು ಕೋರಿ ನೀಡಿದ ದೂರಿನ ಮೇರೆಗೆ ಪ್ರಥಮ ವರ್ತಮಾನ ವರದಿ ದಾಖಲಿಸಲಾಗಿದೆ.
No comments:
Post a Comment