Moving text

Mandya District Police

Daily Crime Report of 03-01-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 03-01-2013 ರಂದು ಒಟ್ಟು 21 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಯು.ಡಿ.ಆರ್. ಪ್ರಕರಣ, 1 ಹುಡುಗಿ ಕಾಣೆಯಾದ ಪ್ರಕರಣ,  1 ಕಳ್ಳತನ ಪ್ರಕರಣ,    1 ವಂಚನೆ ಪ್ರಕರಣ ಹಾಗು 17 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.  


ಯು.ಡಿ.ಆರ್. ಪ್ರಕರಣ :

ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಯು.ಡಿಆರ್. ನಂ. 01/13 ಕಲಂ. ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 03-01-13 ರಂದು ಪಿರ್ಯಾದಿ ನಿಂಗಶೆಟ್ಟಿ ಬಿನ್. ದೊಡ್ಡಣ್ಣಶೆಟ್ಟಿ, ಅಣ್ಣಹಳ್ಳಿ ಗ್ರಾಮ, ಕಸಬಾ ಹೋಬಳಿ, ಮಳವಳ್ಳಿ ತಾಲ್ಲೂಕು ರವರು ನೀಡಿದ ದೂರಿನ ವಿವರವೇನೆಂದರೆ ಅವರ ತಂದೆ ದೊಡ್ಡಣ್ಣಶೆಟ್ಟಿ, ಅಣ್ಣಹಳ್ಳಿ ಗ್ರಾಮ ರವರು ಯಾವುದೋ ಪ್ಲಾಸ್ಟಿಕ್ ಹಗ್ಗದಿಂದ ತನಗೆ ತಾನೇ ನೇಣು ಹಾಕಿಕೊಂಡು ಒದ್ದಾಡುತ್ತಿದ್ದಾಗ ನನ್ನ ಅಣ್ಣ ಮರಿನಾಗಶೆಟ್ಟಿ ಹಾಗೂ ನನ್ನ ಅತ್ತಿಗೆ ಯಶೋಧಮ್ಮ ಇಬ್ಬರೂ ಸೇರಿ ಹಗ್ಗದಿಂದ ಬಿಡಿಸಿ ನೀರು ಬಿಟ್ಟಿರುತ್ತಾರೆ. ಅಷ್ಟರಲ್ಲಿ ನಾನು ಕೂಡ ಮನೆಯಿಂದ ಎದ್ದು ಬಂದು ನೋಡಲಾಗಿ ನಮ್ಮ ತಂದೆ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

ಕಳ್ಳತನ ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 4/13 ಕಲಂ. 457, 380 ಐ.ಪಿ.ಸಿ.

ದಿನಾಂಕ: 03-01-13 ರಂದು ಪಿರ್ಯಾದಿ ಎಸ್.ಆರ್. ಅರವಿಂದಬಾಬು, ಕಾರ್ಯನಿವರ್ಾಹಕ ಅಧಿಕಾರಿ, ಶ್ರೀ ಲಕ್ಷ್ಮಿಜನಾರ್ಧನಸ್ವಾಮಿ ದೇವಾಲಯ, ಮಂಡ್ಯ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿಗಳಾದ ಕೆಎ-01 ಬಿ. 2657 ರ ಗೂಡ್ಸ್ ಆಟೋ ಚಾಲಕ ಮತ್ತು ಇತರೆ ಇಬ್ಬರು ಅಂಗಡಿ ಮೇಲ್ಭಾಗದಲ್ಲಿರುವ ಹೆಂಚನ್ನು ತೆಗೆದು ಒಳಗೆ ಹೋಗಿ ಇಲ್ಲಿದ್ದ ಮರದ ತುಂಡುಗಳನ್ನು ಕಳವು ಮಾಡಿ ಕೆಎ-01 ಬಿ. 2657 ರ ಗೂಡ್ಸ್ ಆಟೋದಲ್ಲಿ ಸಾಗಿಸುತ್ತಿದ್ದಾರೆಂದು ಮತ್ತು ತಮ್ಮನ್ನು ನೋಡಿ ಆಟೋದ ಡ್ರೈವರ್ ಮತ್ತು ಇತರೆ ಇಬ್ಬರು ಓಡಿ ಹೋದರೆಂದು ದೇವಾಲಯದ ಅಟೆಂಡರ್ ವೀರೇಗೌಡ ರವರು ಪಿರ್ಯಾದಿಯವರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ ಮೇರೆಗೆ ಪಿರ್ಯಾದಿಯವರು ಸದರಿ ಸ್ಥಳಕ್ಕೆ ಬಂದು ನೋಡಲಾಗಿ ಗೂಡ್ಸ್ ಆಟೋದಲ್ಲಿ ಮರದ ತುಂಡುಗಳನ್ನು ತುಂಬಿಸಿ ನಿಲ್ಲಿಸಿದ್ದು ಕಂಡು ಬಂದಿರುತ್ತದೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ವಂಚನೆ ಪ್ರಕರಣ :

ಕೆ ಆರ್ ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 1/13 ಕಲಂ. 413-420-114-506 ಐ.ಪಿ.ಸಿ.

ದಿನಾಂಕ: 03-01-13 ರಂದು ಪಿರ್ಯಾದಿ ಪುಟ್ಟಲಕ್ಷ್ಮಮ್ಮ ಕೊಂ. ಕೃಷ್ಣೇಗೌಡ, ಕತ್ತರಘಟ್ಟ ಗ್ರಾಮ, ಕೆ.ಅರ್.ಪೇಟೆ ತಾ|| ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ ವೆಂಕಟೇಗೌಡ @ ಗಿರೀಗೌಡ ಇತರೆ 4 ಜನರು ನನ್ನ ತಂದೆಯ ಮನೆಯ ಮೇಲೆ ಇರುವ ಆಸ್ತಿಯ ಹಕ್ಕನ್ನು ಕಸಿದುಕೊಳ್ಳುವ ಉದ್ದೇಶದಿಂದ ಹಕ್ಕು ನಿವೃತ್ತಿ ಪತ್ರವನ್ನು ಸೃಷ್ಟಿಸಿಕೊಂಡು ಸದರಿ ಪತ್ರದಲ್ಲಿ ನನಗೆ 50 ಸಾವಿರ ಸಂದಾಯವಾಗಿರುತ್ತದೆ ಎಂದು ಸುಳ್ಳು ಬರೆಸಿರುತ್ತಾರೆ. ಸದರಿ ಪತ್ರ ಬರೆಯಲು ಸಾಕಮ್ಮನ ಗಂಡ ಬೋರೆಗೌಡ ಕುಮ್ಮಕ್ಕು ನೀಡಿದ್ದು ಮತ್ತು ನಮ್ಮ ಸಹೋದರಿಯರಾದ ತಿಮ್ಮಮ,್ಮ ಸರೋಜಮ್ಮ ಮತ್ತು ಜಾನಕಮ್ಮರವರಿಗೆ ವೈದ್ಪಾಪ್ಯ ವೇತನ ಕೊಡಿಸುತ್ತೇನೆಂದು ಮೋಸ ಮಾಡಿ ನಿವೃತ್ತಿ ನೊಂದಣಿ ಪತ್ರಕ್ಕೆ ಸಹಿ ಮಾಡಿಸಿರುತ್ತಾರೆ ಇವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

No comments:

Post a Comment