ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 04-04-2013 ರಂದು ಒಟ್ಟು 23 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಯು.ಡಿ.ಆರ್. ಪ್ರಕರಣ, 1 ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ, 1 ಮಹಿಳಾ ದೌರ್ಜನ್ಯ / ವರದಕ್ಷಿಣೆ ಕಿರುಕುಳ ಪ್ರಕರಣ, 1 ಅಕ್ರಮ ಮರಳು ಕಳವು ಪ್ರಕರಣ, 1 ಕನರ್ಾಟಕ ಗೋಸಂರಕ್ಷಣಾ ಕಾಯ್ದೆ ಮತ್ತು ಕನರ್ಾಟಕ ಗೋಹತ್ಯಾ ನಿಷೇದ ಕಾಯ್ದೆ ಪ್ರಕರಣ ಹಾಗು 18 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.
ಯು.ಡಿ.ಆರ್. ಪ್ರಕರಣ :
ಕೆ ಆರ್ ಪೇಟೆ ಟೌನ್ ಪೊಲೀಸ್ ಠಾಣೆ ಯು.ಡಿ.ಆರ್. .ನಂ. 1/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 04-01-2013 ರಂದು ಪಿರ್ಯಾದಿ ರಾಘವೇಂದ್ರ ಬಿನ್. ಕೆಂಪೇಗೌಡ, ಕೋಮನಹಳ್ಳಿ ಗ್ರಾಮ, ಕೆ.ಆರ್.ಪೇಟೆ ತಾಲೋಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ನಮ್ಮ ಜಮೀನಿನ ಬಳಿ ಇರುವ ಕೆಂಪೇಗೌಡರ ಕಟ್ಟೆಯಲ್ಲಿ ಒಂದು ಶವವು ತೇಲುತ್ತಿದ್ದು, ಹತ್ತಿರ ಹೋಗಿ ನೋಡಲಾಗಿ ಗಂಡಸಿನ ಶವವಾಗಿದ್ದು ವಯಸ್ಸು ಸುಮಾರು 30-35 ಆಗಿದ್ದು, ಕೋಲುಮುಖ, ಕುರುಚಲುಗಡ್ಡ, ತುಂಬುತೋಳಿನ ಶಟರ್್, ಬಿಳಿಪ್ಯಾಂಟು ಧರಿಸಿರುತ್ತಾನೆ. ಈತನು ಕೆರೆಯಲ್ಲಿ ನೀರು ತೆಗೆದುಕೊಳ್ಳಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿಗೆ ಬಿದ್ದು ಮೃತಪಟ್ಟಿರುತ್ತಾನೆ. ಆದ ಕಾರಣ ಕಾನೂನು ರೀತಿಯ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ :
ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 6/13 ಕಲಂ. 143-341-323-504-506 ಕೂಡ 149 ಐ.ಪಿ.ಸಿ. ಮತ್ತು 3 ಕ್ಲಾಸ್. (1) ಮತ್ತು (10) ಎಸ್.ಸಿ./ಎಸ್.ಟಿ. ಆಕ್ಟ್.
ದಿನಾಂಕ: 04-01-2013 ರಂದು ಪಿರ್ಯಾದಿ ಜಯರಾಮಯ್ಯ ಬಿನ್. ಲೇಟ್.ದೊಡ್ಡಕರಿಯಯ್ಯ, 55 ವರ್ಷ, ಪರಿಶಿಷ್ಟ ಜಾತಿ, ದೇವೇಗೌಡನಕೊಪ್ಪಲು ಗ್ರಾಮ, ಪಾಂಡವಪುರ ತಾಲ್ಲೋಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯ ಹೆಂಡತಿ ಜಯಮ್ಮಳು ಚಿಕ್ಕಾಡೆ ಗ್ರಾಮ ಪಂಚಾಯ್ತಿಯ ಸದಸ್ಯರಾಗಿದ್ದು ಚಿಕ್ಕಾಡೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರ ಹಾಗೂ ಉಪಧ್ಯಕ್ಷರ ಚುನಾವಣೆಗೆ ಭಾಗವಾಹಿಸಲು ಮದ್ಯಾಹ್ನ 12-00 ಗಂಟೆಯಲ್ಲಿ ನನ್ನ ಹೆಂಡತಿಯನ್ನು ಕರೆದುಕೊಂಡು ಹೋಗುತ್ತಿದ್ದಾಗ ಆರೋಪಿಗಳಾದ ಚಿಕ್ಕಾಡೆ. ಗ್ರಾಮದ ವಿಜೇಯೇಂದ್ರ ಬಿನ್ ನಂಜೇಗೌಡ @ ಶಿವಣ್ಣ, ನಾಗೇಂದ್ರ, ಸಿ.ಹೆಚ್.ಗಿರೀಶ್, ಸಿ.ಎಂ.ಕಿರಣ್, ಬಾಲಕೃಷ್ಣ, ಚೇತನ್ ಹಾಗೂ ದೇವೇಗೌಡನಕೊಪ್ಪಲು ಗ್ರಾಮದ ರಾಘವೇಂದ್ರ.ಅವಿನಾಶ್.ಇವರುಗಳು ನನ್ನ ಹೆಂಡತಿ ಓಟು ಮಾಡಲು ಒಳಗೆ ಹೊಗಲು ಬಿಡದೆ ಎಳೆದಾಡಿ ಹೊರಗೆ ತಳ್ಳಿ ನನ್ನನ್ನು ನೋಡಿ ಹೊಲೆಯ ನನ್ನ ಮಗನೆ, ಬೋಳಿ ಮಗನೆ ಸೂಳೆಮಗನೆ ನೀನು ಇದ್ದರೆ ತಾನೇ ನಿನ್ನ ಹೆಂಡತಿ ಓಟು ಮಾಡುವುದು ನಿಮ್ಮನ್ನೆ ಮುಗಿಸುತ್ತೇನೆ ಎಂದು ಬೈದು ಜಾತಿ ನಿಂದನೆ ಮಾಡಿರುತ್ತಾರೆ ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಅಕ್ರಮ ಮರಳು ಕಳವು ಪ್ರಕರಣ :
ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ.ನಂ. 3/13 ಕಲಂ. 188-379 ಐ.ಪಿ.ಸಿ.
ದಿನಾಂಕ: 04-01-2013 ರಂದು ಪಿರ್ಯಾದಿ ಎಂ.ಹೆಚ್. ಸಿದ್ದೇಗೌಡ ಬಿನ್ ಕೆಂಪೇಗೌಡ, ಗ್ರಾಮ ಲೆಕ್ಕಾಧೀಕಾರಿ, ಎಸ್.ಐ ಹಾಗಲಹಳ್ಳಿ ವೃತ್ತ, ಮದ್ದೂರು ತಾ: ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1] ಕೆ.ಎ 05 ಸಿ 3804 ರ ಲಾರಿ ಮಾಲಿಕ 2] ಲಾರಿ ಚಾಲಕ ಹೆಸರು ಮತ್ತು ವಿಳಾಸ ತಿಳಿಯ ಬೇಕಾಗಿರುತ್ತೆ, ಶಿಂಷಾ ನದಿ ಪಾತ್ರದಲ್ಲಿ ನಿಷೇದಾಜ್ಞೆಯನ್ನು ಉಲ್ಲಂ ್ಲಘನೆ ಮಾಡಿ ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಾಣೆ ಮಾಡುತ್ತಿದ್ದು ಇಬ್ಬರು ಪರಾರಿಯಾಗಿರುತ್ತಾರೆ ಸದರಿಯವರ ಮೇಲೆ ಕೇಸು ದಾಖಲು ಮಾಡಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಕರ್ನಾಟಕ ಗೋಸಂರಕ್ಷಣಾ ಕಾಯ್ದೆ ಮತ್ತು ಕನರ್ಾಟಕ ಗೋಹತ್ಯಾ ನಿಷೇದ ಕಾಯ್ದೆ ಪ್ರಕರಣ :
ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 7/13 ಕಲಂ. 4, 5, 8, 9 ಮತ್ತು 11 [ಡಿ] ಕನರ್ಾಟಕ ಗೋಸಂರಕ್ಷಣಾ ಕಾಯ್ದೆ ಮತ್ತು ಕನರ್ಾಟಕ ಗೋಹತ್ಯಾ ನಿಷೇದ ಕಾಯ್ದೆ 1964.
ದಿನಾಂಕ: 04-01-2013 ರಂದು ಪಿರ್ಯಾದಿ ಎಂ. ಮಂಜುನಾಥ್, ಆರಕ್ಷಕ ಉಪ ನಿರೀಕ್ಷಕರು, ಪೂರ್ವ ಪೊಲೀಸ್ ಠಾಣೆ, ಮಂಡ್ಯ ಸಿಟಿ ರವರು ನೀಡಿದ ದೂರು ಏನೆಂದರೆ ಮಂಡ್ಯ ಸಿಟಿ ಹೊಳಲು ಸರ್ಕಲ್ ಕಡೆಯಿಂದ ವೀರಾಂಜನೇಯ ಎಂಬ ಹೆಸರಿನ ಕೆಎ-11-9770 ರ 407 ಗೂಡ್ಸ್ ಟೆಂಪೋದಲ್ಲಿ ಎಮ್ಮೆಗಳನ್ನು ತುಂಬಿಕೊಂಡು ಬರುತ್ತಿದ್ದಾನೆ ಅವುಗಳನ್ನು ರಕ್ಷಿಸಿ ಎಂದು ಬಂದ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಗಳ ಜೊತೆ ಮತ್ತು ಪಂಚರುಗಳೊಂದಿಗೆ ಠಾಣೆಯ ಮುಂದಿನ ಬೆಂಗಳೂರು ಮುಖ್ಯ ರಸ್ತೆಯಲ್ಲಿ ಸಂಜೆ 06-15 ಗಂಟೆಯ ಸಮಯದಲ್ಲಿ ನಿಂತಿದ್ದಾಗ ನಂದಾ ಸರ್ಕಲ್ ಕಡೆಯಿಂದ ಕೆಎ-11-9770 ರ 407 ಗೂಡ್ಸ್ ಟೆಂಪೋ ಸುತ್ತಲೂ ಟಾರ್ಪಲ್ ಕಟ್ಟಿಕೊಂಡು ಬಂದದ್ದನ್ನು ನಾವುಗಳೆಲ್ಲರೂ ಒಟ್ಠಾಗಿ ಸೇರಿ ತಡೆದು ನಿಲ್ಲಿಸಿ ಪರಿಶೀಲಿಸಿ ನೋಡಲಾಗಿ ಒಂಬತ್ತು ಎಮ್ಮೆಗಳನ್ನು ತುಂಬಿಕೊಂಡು ಸಾಗಣೆ ಮಾಡುತ್ತಿದುದ್ದು ಕಂಡು ಬಂತು ಆರೋಪಿಗಳಾದ 1 ಜಗದೀಶ ಬಿನ್ ಮಲ್ಲಯ್ಯ ಶೆಟ್ಟಿ, 29 ವರ್ಷ, ಬಣಜಿಗ ಶೆಟ್ಟಿ, ಜನಾಂಗ, ಟೆಂಪೋ ಚಾಲಕ ವಾಸ ಕೆ. ಗೌಡಗೆರೆ, ಕೆರಗೋಡು ಹೋಬಳಿ ಮಂಡ್ಯ ತಾಲ್ಲೋಕ್ 2] ಸಜ್ಜು ಗುತ್ತಲು ಮಂಡ್ಯ ಸಿಟಿ ಪೂರ್ಣ ವಿಳಾಸ ತಿಳಿಯಬೇಕಾಗಿದೆ ವಶಕ್ಕೆ ತೆಗೆದುಕೊಂಡು ಕೇಸು ದಾಖಲಿಸಿರುತ್ತೆ.
No comments:
Post a Comment