ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 01-02-2013 ರಂದು ಒಟ್ಟು 14 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಮನುಷ್ಯ ಕಾಣೆಯಾದ ಪ್ರಕರಣ, 1 ವಂಚನೆ ಪ್ರಕರಣ, 1 ಅಪಹರಣ ಪ್ರಕರಣ, 1 ರಾಬರಿ ಪ್ರಕರಣ ಹಾಗು 10 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.
ಮನುಷ್ಯ ಕಾಣೆಯಾದ ಪ್ರಕರಣ :
ಕೆ.ಎಂ. ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 28/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.
ದಿನಾಂಕ: 01-02-2013 ರಂದು ಪಿರ್ಯಾದಿ ಹೆಚ್.ಎಂ.ಗಿರಿಜಾ ಕೋಂ. ಡಿ.ಪಿ.ಕಾಂತರಾಜು, ಕೆ.ಎಂ.ದೊಡ್ಡಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಗಂಡ ಡಿ.ಪಿ.ಕಾಂತರಾಜು. ರವರು ತೊರೆಬೊಮ್ಮನಹಳ್ಳಿಯಲ್ಲಿರುವ ವೆಟನರಿ ಆಸ್ಪತ್ರೆಯಲ್ಲಿ 'ಡಿ'. ದರ್ಜಿಯ ಕೆಲಸ ಮಾಡುತ್ತಿದ್ದು ದಿನಾಂಕ: 26-01-2013 ರಂದು ಬೆಳಿಗ್ಗೆ 07-30 ಗಂಟೆ ಸಮಯದಲ್ಲಿ ಕೆಲಸಕ್ಕೆ ಹೋಗಿ ಬರುತ್ತೇನೆಂದು ಮನೆಯಿಂದ ಹೋದವನು ವಾಪಸ್ಸು ಮನೆಗೆ ಬಂದಿರುವುದಿಲ್ಲ ಪತ್ತೆಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ವಂಚನೆ ಪ್ರಕರಣ :
ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 28/13 ಕಲಂ. 420 ಐ.ಪಿ.ಸಿ.
ದಿನಾಂಕ: 01-02-2013 ರಂದು ಪಿರ್ಯಾದಿ ಚಂದ್ರೇಗೌಡ, ಆಹಾರ ನಿರೀಕ್ಷಕರು, ಕೆ.ಆರ್..ಪೇಟೆ ತಾ| ಕಚೇರಿ ರವರು ನೀಡಿದ ದೂರು ಏನೆಂದರೆ ಹೊನ್ನಪ್ಪ ಬಿನ್. ತಿಮ್ಮೇಗೌಡ, ರಾಯಸಮುದ್ರ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಬಿ.ಪಿ.ಎಲ್. ಪಡಿತರ ಚೀಟಿ ಹೊಂದಿದ್ದು ಅದರಲ್ಲಿಯು ಸಹ ಮೇಲ್ಕಂಡ ಕುಂಟುಂಬದ ಸದಸ್ಯರ ಹೆಸರಿದ್ದು ಈ ಚೀಟಿಯಲ್ಲಿಯು ಸರ್ಕಾರ ರಿಯಾಯಿತಿ ದರದಲ್ಲಿ ಆಹಾರ ಸಾಮಗ್ರಿ ಪಡೆದು ಸರ್ಕಾರಕ್ಕೆ ವಂಚನೆ ಮಾಡಿರುತ್ತಾರೆಂದು ಆದ ಕಾರಣ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಅಪಹರಣ ಪ್ರಕರಣ :
ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 16/13 ಕಲಂ. 365,324,506 ಕೂಡ 34 ಐ.ಪಿ.ಸಿ.
ದಿನಾಂಕ: 01-02-2013 ರಂದು ಪಿರ್ಯಾದಿ ಶ್ರೀನಿವಾಸ, ಟೈಲ್ಸ್ ಫಿಟ್ಟಿಂಗ್ ಕೆಲಸ, ವಾಸ ಆಡಿಲಿಂಗನಪಾಳ್ಯ ಗ್ರಾಮ, ಮಾಗಡಿ ತಾಲ್ಲೂಕು, ರಾಮನಗರ ಜಿಲ್ಲೆ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿಗಳು ಪಿರ್ಯಾದಿಯನ್ನು ಒಂದು ಟೆಂಪೋ ಟ್ರಾವೆಲ್ನಲ್ಲಿ ಎತ್ತಿಹಾಕಿಕೊಂಡು ಈ ಬಾರಿ ನಡೆಯುವ ಮಾಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಎ.ಮಂಜುರವರಿಗೆ ಕ್ಯಾನ್ವಾಸ್ ಮಾಡುತ್ತಿದ್ದಾರೆ. ನೀವು ನಿಮ್ಮಪ್ಪ ಊರಿನಲ್ಲಿ ಕ್ಯಾನ್ವಾಸ್ ಮಾಡೋದು ಬೇಡ, ಚುನಾವಣೆವರೆಗೆ ನೀವು ಊರು ಬಿಟ್ಟು ಹೋಗಿ ಚುನಾವಣೆ ಮುಗಿದ ಮೇಲೆ ಬರಬೇಕು ಎಂದು ಹೆದರಿಸಿ ಪ್ರಾಣ ಭಯ ಹಾಕಿದ. ನಾನು ಅದಕ್ಕೆ ಪ್ರತಿರೋಧಿಸಿದಾಗ ಟೆಂಪೋ ಒಳಗಡೆ ಇದ್ದ ಯಾರೋ ಮತ್ತಿಬ್ಬರೂ ಕಬ್ಬಿಣದ ರಾಡನ್ನು ತೋರಿಸಿ ಕಬ್ಬಿಣದ ರಾಡಿನಲ್ಲಿ ಒಬ್ಬ ನನ್ನ ಎಡತೊಡೆ ಮತ್ತು ಎಡಸೊಂಟಕ್ಕೆ ಹೊಡೆದು ನೋವುಂಟು ಮಾಡಿರುತ್ತಾರೆ ಇವರುಗಳ ಮೇಲೆ ಸೂಕ್ತ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ರಾಬರಿ ಪ್ರಕರಣ :
ಮೇಲುಕೋಟಿ ಪೊಲೀಸ್ ಠಾಣೆ ಮೊ.ನಂ. 17/13 ಕಲಂ. 392 ಐ.ಪಿ.ಸಿ.
ದಿನಾಂಕ: 01-02-2013 ರಂದು ಪಿರ್ಯಾದಿ ದೇವಮ್ಮ ಕೋಂ. ಲೇಟ್. ಜವರೇಗೌಡ, ಗೃಹಿಣಿ, ಮಾಡರಹಳ್ಳಿ ಗ್ರಾಮ, ದೇವಮ್ಮ ಕೋಂ. ಲೇಟ್. ಜವರೇಗೌಡ, ಗೃಹಿಣಿ, ಮಾಡರಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಫಿರ್ಯಾದಿಯವರು ಅವರ ಮನೆಯಲ್ಲಿ ಮಲಗಿದ್ದಾಗ ಯಾರೋ ಮನೆಯ ಬಾಗಿಲನ್ನು ತಟ್ಟಿದ್ದು ಬಾಗಿಲನ್ನು ತೆಗೆದಾಗ ಇಬ್ಬರು ವ್ಯೆಕ್ತಿಗಳು ಬಾಯಿ, ಕಣ್ಣನ್ನು ಮುಚ್ಚಿ ಕತ್ತಿನಲ್ಲಿದ್ದ ಚಿನ್ನದ ತಾಳಿ, ಕತ್ತಿನ ಗುಂಡು, ಕಿವಿಯ ಓಲೆಯನ್ನು ಕಿತ್ತುಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment