ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 02-02-2013 ರಂದು ಒಟ್ಟು 18 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಮನೆ ಕಳ್ಳತನ ಪ್ರಕರಣಗಳು, 1 ಮನುಷ್ಯ ಕಾಣೆಯಾದ ಪ್ರಕರಣ, 1 ರಸ್ತೆ ಅಪಘಾತ ಪ್ರಕರಣ, 2 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣಗಳು ಹಾಗು 12 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.
1. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 55/13 ಕಲಂ. 457, 380 ಐ.ಪಿ.ಸಿ.
ದಿನಾಂಕ: 02-02-2013 ರಂದು ಪಿರ್ಯಾದಿ ಜೆ.ಎಂ. ಜಮುನಾ, ಶಶ್ರೂಷಕಿ, ಚಿನಕುರಳಿ ಪ್ರಾಥಮಿಕ ಆರೋಗ್ಯ ಕೇಂದ್ರ ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರು ಚಿನಕುರಳಿ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯ ಕರ್ತವ್ಯ ನಿಮಿತ್ತ ಆಸ್ಪತ್ರೆಗೆ ಹೋಗಿದ್ದು, ಕರ್ತವ್ಯ ಮುಗಿಸಿ ಬೆಳಗ್ಗೆ 08-00 ಗಂಟೆಗೆ ವಾಪಾಸ್ ವಸತಿಗೃಹಕ್ಕೆ ಬಂದಾಗ ಮನೆಯ ಹಿಂದಿನ ಬಾಗಿಲನ್ನು ಹಾರೆಯಿಂದ ತಿವಿದು ಚಿಲಕ ಹೊಡೆದಿದ್ದು, ಮನೆಯಲ್ಲಿದ್ದ 5 ಸಾವಿರ ರೂ ನಗದು ಹಣ, ಸುಮಾರು 75 ಸಾವಿರ ರೂ ಬೆಲೆಬಾಳುವ ಒಂದು ಚಿನ್ನದ ನಕ್ಲೇಸ್, 2150 ರೂ. ಮೊತ್ತದ ಒಂದು ಟೈಟಾನ್ ರಾಗ ವಾಚ್, 2 ಸಾವಿರ ರೂ ಮೊತ್ತದ ಎರಡು ಸೊನಾಟ ವಾಚ್, 5 ಸಾವಿರ ರೂ ಮೊತ್ತದ 2 ಜೊತೆ ಬೆಳ್ಳಿಯ ಕಾಲು ಚೈನ್ಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳುವಾಗಿರುವ ವಸ್ತುಗಳನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 20/13 ಕಲಂ. 454, 380 ಐ.ಪಿ.ಸಿ.
ದಿನಾಂಕ: 02-02-2013 ರಂದು ಪಿರ್ಯಾದಿ ಮಲ್ಲಾಜಮ್ಮ ಕೋಂ, ಲೇಟ್ ಗವಿಸಿದ್ದಯ್ಯ ಗೌಡಗೆರೆ. ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿಗಳಾದ 1) ಪ್ರಮೋದ 2) ಪ್ರಕಾಶ, ಗೌಡಗೆರೆ ಗ್ರಾಮ, ಮಳವಳ್ಳಿ ತಾಲ್ಲೋಕು. ಪಿರ್ಯಾದಿಯವರ ಮನೆಯ ಬೀಗ ಮುರಿದು ಒಳ ಪ್ರವೇಶಿಸಿ ಮನೆಯೊಳಗಿದ್ದ ಡಿವಿಡಿ, ಕಬ್ಬಿನಣದ ಸರಳುಗಳು, ಸಾಮಾನುಗಳು, 5 ಸಿಮೆಂಟ್ ಮೂಟೆಗಳು ಒಟ್ಟು 6000 ರೂ ಬೆಳೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ :
ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 35/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.
ದಿನಾಂಕ: 02-02-2013 ರಂದು ಪಿರ್ಯಾದಿ ಸಣ್ಣತಾಯಮ್ಮ ಕೋಲಕಾರನದೊಡ್ಡಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಅವರ 19 ವರ್ಷದ ಮಗಳು ಕೋಲಕಾರನದೊಡ್ಡಿ ಗ್ರಾಮ ಮಂಡ್ಯ ತಾ. ರವರು ದಿನಾಂಕ: 01-02-2013 ರಂದು ನಮ್ಮ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು ಇದುವರೆವಿಗೂ ವಾಪಸ್ ಬಂದಿರುವುದಿಲ್ಲ. ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ ಆದ್ದರಿಂದ ನನ್ನ ಮಗಳನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ರಸ್ತೆ ಅಪಘಾತ ಪ್ರಕರಣ :
1. ಬೆಳಕವಾಡಿ ಪೊಲೀಸ್ ಠಾಣೆ ಮೊ.ನಂ. 09/13 ಕಲಂ. 279-337-304(ಎ) ಐ.ಪಿ.ಸಿ.
ದಿನಾಂಕ: 02-02-2013 ರಂದು ಪಿರ್ಯಾದಿ ಎಂ. ಲೋಕೇಶ್ ಬಿನ್. ಮಲ್ಲಪ್ಪ, ಕೊಳ್ಳೆಗಾಲ ಟೌನ್, ಚಾಮರಾಜನಗರ ನಗರ ಜಿಲ್ಲೆ ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರು ಚಲುವ, ಮಾಂಬಳ್ಳಿ ಗ್ರಾಮ, ಕೊಳ್ಳೆಗಾಲ ತಾ|| ರವರ ಬೈಕಿನಲ್ಲಿ ಬೆಳಕವಾಡಿ-ಮಳವಳ್ಳಿ ರಸ್ತೆಯ ನಿಂಗಪ್ಪನಕಟ್ಟೆಯ ಹತ್ತಿರ ತಿರುವಿನಲ್ಲಿ ತಿರುಗಿಸಿದಾಗ ಹಳ್ಳಕ್ಕೆ ಬಿದ್ದು ಚಲುವನಿಗೆ ತಲೆಗೆ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದು, ಹಿಂಬದಿಯಲ್ಲಿ ಕುಳಿತಿದ್ದ ಪಿರ್ಯಾದಿಯವರಿಗೆ ಪೆಟ್ಟಾಗಿರುತ್ತೆಂದು ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 18/13 ಕಲಂ. 498(ಎ) 504, 506, 323 ರೆ:ವಿ 34 ಐ.ಪಿ.ಸಿ.
ದಿನಾಂಕ: 02-02-2013 ರಂದು ಪಿರ್ಯಾದಿ ರಶ್ಮಿ ಕೋಂ. ಡಿ.ವಿ. ಗೋವಿಂದರಾಜು, ಟಿ.ಕಾಗೇಪುರ, ಮಳವಳ್ಳಿ ತಾಲ್ಲೋಕು ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿಗಳಾದ 1) ಡಿ.ವಿ.ಗೋವಿಂದರಾಜು, 2) ಅತ್ತೆ ಶಿವಮ್ಮ, 3) ಮೈದುನಾ ಗಿರೀಶ, 4) ನಾದಿನಿ ಶಾರದಮ್ಮ ಟಿ.ಕಾಗೇಪುರ ಗ್ರಾಮ ಪಿರ್ಯಾದಿಯವರಿಗೆ, ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ಕಿರುಕುಳ ನೀಡಿ ಅವಾಚ್ಯ ಶಬ್ದಗಳಿಂದ ಬೈಯ್ದಿ, ನಿಮ್ಮ ತಂದೆಯ ಮನೆಯಿಂದ 1,00000 ರೂ. ವರದಕ್ಷಿಣೆ ತರುವಂತೆ ಹಿಂಸೆ ನೀಡಿ ಇಲ್ಲವಾದರೆ ನಿನ್ನನ್ನು ಕೊಲೆ ಮಾಡುತ್ತೇವೆ ಎಂದು ಹಾಗೂ ನಿನ್ನನ್ನು ಕೊಲೆ ಮಾಡಿ ನನ್ನ ಮಗನಿಗೆ ಬೇರೆ ಮಧುವೆ ಮಾಡುತ್ತೇವೆ ಎಂದು ಹೇಳಿರುತ್ತಾರೆ ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣ :
ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 19/13 ಕಲಂ. 498(ಎ) ರೆ:ವಿ 34 ಐ.ಪಿ.ಸಿ.
ದಿನಾಂಕ: 02-02-2013 ರಂದು ಪಿರ್ಯಾದಿ ಸೌಜನ್ಯ ಕೋಂ.ಸಿದ್ದು @ ಸಿದ್ದೇಗೌಡ, ಕೆ.ಜಿ.ದೊಡ್ಡಿ ಗ್ರಾಮ ರವರು ನೀಡಿದ ದೂರು ಏನೆಂದರೆ ಆರೋಪಿಗಳಾದ 1)ಸಿದ್ದು @ ಸಿದ್ದೇಗೌಡ 2) ಸಿದ್ದಮ್ಮ, 3) ಶಿವು ಕೆ.ಜಿ.ದೊಡ್ಡಿ ಗ್ರಾಮ, ಪಿರ್ಯಾದಿಯವರಿಗೆ, ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ಕಿರುಕುಳ ನೀಡಿ ನಿನ್ನನ್ನು ಮಧುವೆಯಾಗಿರುವುದೇ ದುಡ್ಡಿಗಾಗಿ ಎಂದು ನಿಮ್ಮ ತಂದೆಯ ಮನೆಯಿಂದ ಹೆಚ್ಚು ವರದಕ್ಷಿಣೆ ತರುವಂತೆ ಹಿಂಸೆ ನೀಡಿ ಇಲ್ಲವಾದರೆ ನಿನ್ನನ್ನು ಕೊಲೆ ಮಾಡುತ್ತೇವೆ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment