Moving text

Mandya District Police

DAILY CRIME REPORT DATED : 03-02-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 03-02-2013 ರಂದು ಒಟ್ಟು 19 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಕಳವು ಪ್ರಕರಣಗಳು,  3 ಯು.ಡಿ.ಆರ್. ಪ್ರಕರಣಗಳು,  1 ಮನುಷ್ಯ ಕಾಣೆಯಾದ ಪ್ರಕರಣ,  2 ಹಗಲು/ರಾತ್ರಿ ಕಳ್ಳತನ ಪ್ರಕರಣಗಳು,  1 ವಂಚನೆ ಪ್ರಕರಣ,  2 ರಸ್ತೆ ಅಪಘಾತ ಪ್ರಕರಣಗಳು ಹಾಗು 8 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 


ಕಳವು ಪ್ರಕರಣಗಳು :

1. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 53/13 ಕಲಂ. 379 ಐ.ಪಿ.ಸಿ.

ದಿನಾಂಕ: 03-02-2013 ರಂದು ಪಿರ್ಯಾದಿ ಮಲ್ಲೇಶ ಲೇಟ್ ಮಲ್ಲೇಗೌಡ, 48 ವರ್ಷ, ಕೋಡಿಶೆಟ್ಟಿಪುರ ಗ್ರಾಮರವರು ನೀಡಿದ ದೂರಿನ ಸಾರಾಂಶವೇನೆಂದರ ಅವರ ಇಂಡಿಗೋ ಕಾರ್ ನಂ. ಕೆ.ಎ-11-ಎ-1840 ನ್ನು ನಿಲ್ಲಿಸಿ ಮನೆಯಲ್ಲಿ ಮಲಗಿಕೊಂಡು ಬೆಳಿಗ್ಗೆ 06-00 ಗಂಟೆಗೆ ಮನೆಯ ಹೊರಗಡೆ ಬಂದು ನೋಡಿದಾಗ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2.ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 28/13 ಕಲಂ. 379 ಐ.ಪಿ.ಸಿ.

ದಿನಾಂಕ: 03-02-2013 ರಂದು ಪಿರ್ಯಾದಿ ನಾಗರತ್ನ, ಸ್ವರ್ಣಸಂದ್ರ, ಮಂಡ್ಯ ರವರು ನೀಡಿದ ದೂರು ಏನೆಂದರೆ ಮಳವಳ್ಳಿ ಸಕರ್ಾರಿ ಬಸ್ ನಿಲ್ದಾಣದಲ್ಲಿ ಮಂಡ್ಯಕ್ಕೆ ಬಸ್ನ್ನು ಹತ್ತುವ ವೇಳೆಯಲ್ಲಿ ತನ್ನ ಕತ್ತಿನಲ್ಲಿದ್ದ 40 ಗ್ರಾಂ ಚಿನ್ನದ ಸರವನ್ನು ಕಳ್ಳತನ ಮಾಡಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಯು.ಡಿ.ಆರ್. ಪ್ರಕರಣಗಳು :

1. ಪಾಂಡವಪುರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 03/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 03-02-2013 ರಂದು ಪಿರ್ಯಾದಿ ಲೋಕೇಶ ಬಿನ್. ಲೇಟ್. ಜವರಯ್ಯ, ಹೊನಗಾನಹಳ್ಳಿ ಗ್ರಾಮ, ಪಾಂಡವಪುರ ತಾಲ್ಲೋಕು ರವರು ನೀಡಿದ ದೂರಿನ ವಿವರವೇನೆಂದರೆ ಹರೀಶ.ಹೆಚ್.ಜೆ. 23 ವರ್ಷ, ಹೊನಗಾನಹಳ್ಳಿ ಗ್ರಾಮ, ಪಾಂಡವಪುರ ತಾಲ್ಲೋಕು ಎಂಬುವವರು ಟಿಪ್ಪರ್ ಕೆಲಸಕ್ಕೆಂದು ಹೋಗಿದ್ದು, ಕ್ರಷರ್ ಹತ್ತಿರ ನಿಂತಿದ್ದ ಟಿಪ್ಪರ್ ನಂ ಕೆಎ-01-9326 ಮೇಲೆ ಹತ್ತಿದಾಗ ಮೇಲೆ ಹಾದು ಹೋಗಿದ್ದ ವಿಧ್ಯುತ್ ತಂತಿ ತಾಗಿದ್ದು, ಪರಿಣಾಮ ವಿಧ್ಯುತ್ ಮೈಮೇಲೆ ಹರಿದು ಟಿಪ್ಪರ್ ಮೇಲಿಂದ ಕೆಳಕ್ಕೆ ಬಿದ್ದ ಪರಿಣಾಮ ಬೆನ್ನು ಮತ್ತು ತಲೆಯ ಹಿಂಭಾಗ ಪೆಟ್ಟಾಗಿದ್ದು  ಮಿಷನ್ ಆಸ್ಪತ್ರೆಗೆ ಸೇರಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಮೃತಪಟ್ಟಿರುತ್ತಾರೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಬೆಳಕವಾಡಿ ಪೊಲೀಸ್ ಠಾಣೆ ಯು.ಡಿ.ಆರ್. ನಂ. 05/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 03-02-2013 ರಂದು ಪಿರ್ಯಾದಿ ಮಹಾದೇವ ಬಿನ್. ಕುಳ್ಳಿ ಮರೀಗೌಡ, ಜೆ.ಸಿ.ನಗರ ಬೆಂಗಳೂರು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಮಹದೇವ ಬಿನ್ ದೊಡ್ಡನಿಂಗೇಗೌಡ ಎಂಬುವವರು ಮಲವಿಸರ್ಜನೆಗೆ ಹೋಗಿ ಹೆಡ್ವಕ್ಸರ್್ ಬಳಿ ನೀರು ತೆಗೆದುಕೊಳ್ಳಲು ಹೋಗಿ ಕಾಲು ಜಾರಿ ನೀರಿನಲ್ಲಿ ಮುಳುಗಿ ಸತ್ತುಹೋಗಿರುತ್ತಾನೆಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 01/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 03-02-2013 ರಂದು ಪಿರ್ಯಾದಿ ಕಾತರ್ಿಕ್ ಬಿನ್. ಲೋಕೇಶ್, 16 ವರ್ಷ, 10 ನೇ ತರಗತಿ ವಿದ್ಯಾಥರ್ಿ, ಕಾಳೇನಹಳ್ಳಿ, ಹೊಸಕೊಪ್ಪಲು, ಕೆ.ಆರ್. ನಗರ ತಾಲ್ಲೂಕು ರವರು ನೀಡಿದ ದೂರು ಏನೆಂದರೆ ಆರೋಪಿ ರವಿಕುಮಾರ ಬಿನ್. ಪುಟ್ಟಸ್ವಾಮಿಗೌಡ ರವರು ಆದಿಚುಂಚನಗಿರಿ ಕ್ಷೇತ್ರದಲ್ಲಿರುವ ಐಲ್ಯಾಂಡ್ ಕಲ್ಯಾಣಿ ಕೆರೆಗೆ ಸ್ನಾನಕ್ಕಾಗಿ ಹೋಗಿ ನೀರಿನಲ್ಲಿ ಇಳಿದು ಸ್ನಾನ ಮಾಡುತ್ತಿದ್ದಾಗ ರವಿಕುಮಾರ ಕೆರೆಯ ನೀರಿನಲ್ಲಿ ಈಜುತ್ತಿದ್ದಾಗ ಸರಿಯಾಗಿ ಈಜುಬಾರದೆ ಇದ್ದುದರಿಂದ ರವಿಕುಮಾರ ಆಕಸ್ಮಿಕವಾಗಿ ಕೆರೆಯ ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾನೆ 


ಮನುಷ್ಯ ಕಾಣೆಯಾದ ಪ್ರಕರಣ :

ಬೆಳಕವಾಡಿ ಪೊಲೀಸ್ ಠಾಣೆ ಮೊ.ನಂ. 10/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.  

ದಿನಾಂಕ: 03-02-2013 ರಂದು ಪಿರ್ಯಾದಿ ನಟರಾಜು, ಹುಲ್ಲಂಬಳ್ಳಿ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ನಟರಾಜು ಬಿನ್. ನಂಜಯ್ಯ, ಹುಲ್ಲಂಬಳ್ಳಿ ಗ್ರಾಮ ಎಂಬುವವರು ಪೂರಿಗಾಲಿಗೆ ಹೋಗಿ ಬರುತ್ತೇನೆಂದು ಹೋದವನು ಮನೆಗೆ ವಾಪಸ್ ಬಂದಿರುವುದಿಲ್ಲ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಹಗಲು/ರಾತ್ರಿ ಕಳ್ಳತನ ಪ್ರಕರಣಗಳು :

1. ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 18/13 ಕಲಂ. 454-380 ಐ.ಪಿ.ಸಿ.

ದಿನಾಂಕ: 03-02-2013 ರಂದು ಪಿರ್ಯಾದಿ ಯಮುನಾ ಕೊಂ ಗುರಪ್ಪ, ಎಂ.ಎಸ್ಸಿ. ವಿದ್ಯಾರ್ಥನಿರವರು ನೀಡಿದ ದೂರು ಏನೆಂದರೆ ಆರೋಪಿ ಕೃಷ್ಣ ಬಿನ್. ಸಣ್ಣೇಗೌಡ, ದಿನಗೂಲಿ ನೌಕರ, ಕೃಷಿಮಹಾವಿದ್ಯಾಲಯ, ವಿ.ಸಿ.ಫಾರಂ ರವರು ರೂಂ ಒಳಗಡೆ ಇಟ್ಟಿದ್ದ ಭರಣಿ ಕೊಂ. ಕೃಷ್ಣಮೂರ್ತಿ ರವರ ಬ್ಯಾಗ್ ನಲ್ಲಿದ್ದ ಸ್ಯಾಮ್ಸಂಗ್ ಮೋಬೈಲ್, ನಾಗಮಣಿ ಕೊಂ ವೆಂಕಟರಮಣಪ್ಪ ರವರ ಬ್ಯಾಗ್ ನಲ್ಲಿದ್ದ ಕಾರ್ಬನ್ ಮೊಬೈಲ್ ಕಳ್ಳತನವಾಗಿದ್ದವು. ಇವುಗಳನ್ನು ಕೃಷ್ಣ ಎಂಬುವನು ರೂಂ ಬಾಗಿಲು ತೆಗೆದು ಕಳ್ಳತನ ಮಾಡಿಕೊಂಡು ಹೋಗಿರುತ್ತಾನೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಮದ್ದೂರು ಪೊಲೀಸ್ ಠಾಣೆ ಮೊ.ನಂ. 56/13 ಕಲಂ. 457-380 ಐ.ಪಿ.ಸಿ.

ದಿನಾಂಕ: 03-02-2013 ರಂದು ಪಿರ್ಯಾದಿ ಹೆಚ್ಸಿ.ಶಿವಕುಮಾರ ಬಿನ್. ಲೇ|| ಹೆಚ್.ಕೆ. ಚಲುವಯ್ಯ, 56ವರ್ಷ, ಒಕ್ಕಲಿಗರು, ಕೆ. ಹೊನ್ನಲಗೆರೆ ಗ್ರಾಮರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ಮನೆಯ ಬಾಗಿಲನ್ನು ಯಾರೋ ಕಳ್ಳರು ಹೊಡೆದು ಒಳಗೆ ನುಗ್ಗಿ ಮನೆಯಲ್ಲಿದ್ದ 168 ಗ್ರಾಂ ಚಿನ್ನದ ವಡವೆಗಳು ಮತ್ತು 12 ಸಾವಿರ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ವಂಚನೆ ಪ್ರಕರಣ :

ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 24/13 ಕಲಂ. 420 ಐ.ಪಿ.ಸಿ.

ದಿನಾಂಕ: 03-02-2013 ರಂದು ಪಿರ್ಯಾದಿ ಎನ್.ಡಿ.ಮಂಜುಳ ಕೋಂ. ಡಾ|| ಕೆ.ಪಿ.ವೆಂಕಟೇಶ್, ವಾಸ ಪೂರ್ಣ ನಿಲಯ, 12ನೇ ಕ್ರಾಸ್, ವಿ.ವಿ.ನಗರ, ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಜಯಲಕ್ಷ್ಮಿ, 7ನೇ ಕ್ರಾಸ್, ವಿ.ವಿ.ನಗರ, ಮಂಡ್ಯ ಸಿಟಿ ರವರು ಫಿರ್ಯಾದಿಯ ಅತ್ತೆಯವರಿಗೆ ಬೀರುವನ್ನು ಕ್ಲೀನ್ ಮಾಡಿಕೊಡುವುದಾಗಿ ನಂಬಿಸಿ ಕ್ಲೀನ್ ಮಾಡುವಾಗ ಅವರಿಗೆ ಗೊತ್ತಿಲ್ಲದಂತೆ ಅವರ ಬೀರುವಿನಲ್ಲಿದ್ದ ಹವಳ ಮತ್ತು ಚಿನ್ನದ ಮುಡಿ ಚೈನ್ ಮತ್ತು ಒಂದು ಬಿಳಿ ಅರಳಿನ ಚಿನ್ನದ ಉಂಗುರ ಇವುಗಳ ಒಟ್ಟು ತೂಕ 40 ಗ್ರಾಂ ಇರುತ್ತೆ ಹಾಗೂ 1500/- ರೂ. ನಗದು ಹಣವನ್ನು ಹಾಗೂ ಫಿರ್ಯಾದಿಯವರ ಬೆಡ್ರೂಮಿನ ಬೀರುವಿನಲ್ಲಿದ್ದ ಫಿರ್ಯಾದಿಯವರ ಬಾಬ್ತು 15 ಗ್ರಾಂ ತೂಕದ ಚಿನ್ನದ ಒಂಟಿ ಬಳೆ ಮತ್ತು 15 ಗ್ರಾಂ ತೂಕದ ಒಂದು ಚಿನ್ನದ ಚೈನ್ ಇದರಲ್ಲಿ ವೆಂಕಟೇಶ್ವರಸ್ವಾಮಿಯ ಚಿನ್ನದ ಡಾಲರ್ ಇರುತ್ತೆ. ಇವುಗಳನ್ನು ಜಯಲಕ್ಷ್ಮಿಯು ಕಳವು ಮಾಡಿಕೊಂಡು ಮೋಸ ಮಾಡಿರುತ್ತಾರೆ. ಈ ಬಗ್ಗೆ ಕಾನೂನು ರೀತ್ಯ ಕ್ರಮ ಜರುಗಿಸಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ರಸ್ತೆ ಅಪಘಾತ ಪ್ರಕರಣಗಳು :

1. ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 27/13 ಕಲಂ. 279-337-304(ಎ) ಐ.ಪಿ.ಸಿ. ಕೂಡ 187 ಐ.ಎಂ.ವಿ. ಕಾಯಿದೆ. 

ದಿನಾಂಕ: 03-02-2013 ರಂದು ಪಿರ್ಯಾದಿ ರುದ್ರೇಗೌಡ ಬಿನ್. ಹಲಗೇಗೌಡ, ಅಗ್ರಹಾರ ಬಡಾವಣೆ, ಕೆ.ಆರ್.ಪೇಟೆ ಟೌನ್ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾವುದೋ ಟ್ರಾಕ್ಟರ್ ಚಾಲಕ, ಹೆಸರು ಮತ್ತು ವಿಳಾಸ ತಿಳಿಯಬೇಕು ಇವರು ಟ್ರಾಕ್ಟರ್ ಅನ್ನು ವೇಗವಾಗಿ ಚಲಿಸಿದ ಪರಿಣಾಮ ಆಟೋರಿಕ್ಷಾ ಟ್ರೇಲರ್ ಗೆ  ತಗುಲಿ ಉರುಳಿ ಬಿದ್ದು ಆಟೋದಲ್ಲಿದ್ದ ನಾರ್ಗೋನಹಳ್ಳಿ ಗ್ರಾಮದ ಶ್ರೀನಿವಾಸ ಮತ್ತು ಮಾರ್ಗೋನಹಳ್ಳಿಯ ಮಂಜ ರವರಿಗೆ ತಲೆಗೆ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದರು. ಉಳಿದವರೆಲ್ಲರಿಗೂ ಮೈಕೈ ಮುಖ ಸೇರಿದಂತೆ ರಕ್ತ ಗಾಯಗಳಾಗಿದ್ದು ಅಪಘಾತ ಮಾಡಿದ ಟ್ರಾಕ್ಟರ್ ನ್ನು ಅದರ ಚಾಲಕ ಕಿಕ್ಕೇರಿ ಕಡೆಗೆ ಓಡಿಸಿಕೊಂಡು ಹೊರಟು ಹೋದನು ನಂಬರ್ ನೋಡಲಾಗಲಿಲ್ಲ ಟ್ರಾಕ್ಟರ್ ಚಾಲಕನ ಮೇಲೆ ಕ್ರಮ ಕೈಗೊಳ್ಳಿ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


2. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 21/13 ಕಲಂ. 279,304[ಎ] ಐಪಿಸಿ ಕೂಡ 187 ಐ.ಎಂ..ವಿ. ಆಕ್ಟ್.

ದಿನಾಂಕ:03-02-2013 ರಂದು ಪಿರ್ಯಾದಿ ಕುಮಾರ್ ಬಿನ್. ಚಿಕ್ಕೇಗೌಡ, ಕಂಚನಹಳ್ಳಿ ಗ್ರಾಮ, ಬೆಳ್ಳೂರು ಹೋಬಳಿ, ನಾಗಮಂಗಲ ತಾಲ್ಲೂಕು ರವರು ನೀಡಿದ ದೂರು ಏನೆಂದರೆ ದಿನಾಂಕಃ03-02-2013 ರಂದು ಸಂಜೆ 05-00 ಗಂಟೆ ಸಮಯದಲ್ಲಿ ಬೆಳ್ಳೂರು ಪೊಲೀಸ್ ಠಾಣ ಸರಹದ್ದಿಗೆ ಸೇರಿದ ಚಂದ್ರಶೇಖರಪುರದ ಐಯ್ಯನ ಕೆರೆಯ ತಿರುವಿನಲ್ಲಿ ಆರೊಪಿ ಕೆಎ-05-ಸಿ-6233ರ ಲಾರಿಯ ಚಾಲಕ, ಸದರಿ ಲಾರಿಯನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಎದುರುಗಡೆಯಿಂದ ಬರುತ್ತಿದ್ದ ಕೆಎ-11-ಕ್ಯೂ-7913ರ ಬೈಕಿಗೆ ಡಿಕ್ಕಿ ಪಡಿಸಿದ ಪರಿಣಾಮ ಸದರಿ ಬೈಕಿನಲ್ಲಿ ಸವಾರಿ ಮಾಡಿಕೊಂಡು ಬರುತ್ತಿದ್ದ ಮೂರು ಜನರು ಸ್ಥಳದಲ್ಲೇ ಮೃತರಾಗಿರುತ್ತಾರೆಂದು ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 

No comments:

Post a Comment