Moving text

Mandya District Police

DAILY CRIME REPORT DATED : 04-02-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 04-02-2013 ರಂದು ಒಟ್ಟು 13 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಅತ್ಯಾಚಾರ ಪ್ರಕರಣ,  2 ಯು.ಡಿ.ಆರ್. ಪ್ರಕರಣಗಳು,  1 ಕಳವು ಪ್ರಕರಣ,  1 ಮಹಿಳಾ ದೌರ್ಜನ್ಯ / ವರದಕ್ಷಿಣೆ ಕಿರುಕುಳ ಪ್ರಕರಣ,  1 ಮನುಷ್ಯ ಕಾಣೆಯಾದ ಪ್ರಕರಣ ಹಾಗು 7 ಇತರೆ ಪ್ರಕರಣಗಳು ದಾಖಲಾಗಿರುತ್ತವೆ.  


ಅತ್ಯಾಚಾರ ಪ್ರಕರಣ :

ಬೆಳಕವಾಡಿ ಪೊಲೀಸ್ ಠಾಣೆ ಮೊ.ನಂ. 11/13 ಕಲಂ. 376 ಐ.ಪಿ.ಸಿ.

ದಿನಾಂಕ: 04-02-2013 ರಂದು ಚಿಕ್ಕಬಾಗಿಲು ಗ್ರಾಮದ  ಪಿರ್ಯಾದಿ ರವರು ನೀಡಿದ ದೂರು ಏನೆಂದರ ಆರೋಪಿ ಮಹೇಶ @ ಚಿದರಹಳ್ಳಿ ಮಹೇಶ, ಸು:24 ವರ್ಷ, ಪರಿಶಿಷ್ಟ ಜನಾಂಗ, ಚಿಕ್ಕಬಾಗಿಲು ಗ್ರಾಮ, ಬಿ.ಜಿ.ಪುರ ಹೋ|| ಮಳವಳ್ಳಿ ತಾ||  ಪಿರ್ಯಾದಿಯವರ ಇಚ್ಛೆಗೆ ವಿರುದ್ದವಾಗಿ ಬಲಂತವಾಗಿ ಅತ್ಯಾಚಾರ ಮಾಡಿರುತ್ತಾರೆ, ಇದರಿಂದ ಪಿರ್ಯಾದಿಯವರಿಗೆ ತೊಂದರೆ ಯಾಗಿರುವ ಬಗ್ಗೆ ಗ್ರಾಮದಲ್ಲಿ ದಿನಾಂಕ:04-02-13 ರಂದು ಬೆಳಿಗ್ಗೆ ಪಂಚಾಯಿತಿ ಸೇರಿಸಿ ತೀರ್ಮಾನವಾಗದಿದ್ದಾಗ ಹಾಗೂ ಆರೋಪಿತನು ಪಂಚಾಯಿತಿಗೆ ಬಾರದಿದ್ದರಿಂದ ಠಾಣೆಗೆ ಈ ದಿನ ತಡವಾಗಿ ಬಂದು ಆರೋಪಿತನ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಿ ಎಂದು ಕೊಟ್ಟ ದೂರು ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  



ಯು.ಡಿ.ಆರ್. ಪ್ರಕರಣಗಳು :

 1. ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 02/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 04-02-2013 ರಂದು ಪಿರ್ಯಾದಿ ಬಿ.ಎನ್.ಕೆಂಪರಾಜು ಬಿನ್ ನಚಿಜಯ್ಯ, ಬಾಚನಹಳ್ಳಿ ಗ್ರಾಮ, ಮಳವಳ್ಳಿ ತಾಲ್ಲೋಕು ರವರು ನೀಡಿದ ದೂರಿನ ವಿವರವೇನೆಂದರೆ,  ನಂದಿನಿ, ಬಾಚನಹಳ್ಳಿ ಗ್ರಾಮ, ಮಳವಳ್ಳಿ ತಾಲ್ಲೋಕು ರವರಿಗೆ ಹೊಟ್ಟೆ ನೋವು ಜಾಸ್ತಿಯಾಗಿ ದಿನಾಂಕ: 31-01-2013 ರಂದು ರಾತ್ರಿ 08-30 ಗಂಟೆಯ ಸಮಯದಲ್ಲಿ ಹೊಟ್ಟೆ ನೋವು ಜಾಸ್ತಿಯಾಗಿ ಔಷದಿ ತೆಗೆದುಕೊಳ್ಳುತ್ತಿದ್ದು, ನೋವು ತಾಳಲಾರದೆ ಯಾವುದೋ ವಿಷದ ಔಷದಿಯನ್ನು ಕುಡಿದು ಒದ್ದಾಡುತ್ತಿದ್ದವಳನ್ನು ಮಳವಳ್ಳಿ ಆಸ್ಪತ್ರೆಗೆ ಕರೆದುಕೊಂಡು ಬಂದು ನಂತರ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಂಡ್ಯ ಜನರಲ್ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆಗೆ ಸೇರಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ: 03-02-2013 ರಂದು ರಾತ್ರಿ 09-30 ಗಂಟೆ ಸಮಯದಲ್ಲಿ ಮೃತಪಟ್ಟಿರುತ್ತಾಳೆ ಶವವು ಜನರಲ್ ಆಸ್ಪತ್ರೆಯ ಶವಗಾರದಲ್ಲಿ ಇರುತ್ತದೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಮಂಡ್ಯ. ಪೂರ್ವ ಪೊಲೀಸ್ ಠಾಣೆ ಮೊ.ನಂ. 04/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 04-02-2013 ರಂದು ಪಿರ್ಯಾದಿ ಚನ್ನಪ್ಪ ಬಿನ್ ಸಿದ್ದಶೆಟ್ಟಿ ಕಾರಸವಾಡಿ, ಮಹದೇಶ್ವರ ಬಡಾವಣೆ, ಮಂಡ್ಯ ಸಿಟಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ನನ್ನ 04 ವರ್ಷದ ಅಮೂಲ್ಯ ಸತ್ತು ಹೋಗಿರುತ್ತಾಳೆಂದು ವೈದ್ಯರು ತಿಳಿಸಿದ್ದು  ಹಾಗು ಸಂಜಯ್ನನ್ನು ಚಿಕಿತ್ಸೆಗೆ ವಿಕ್ರಂ ಆಸ್ಪತ್ರೆಗೆ ಸೇರಿಸಿ ಹೆಣ್ಣು ಮಗುವಿನ ಶವವನ್ನು ಊರಿಗೆ ತೆಗೆದುಕೊಂಡು ಹೋಗಿದ್ದು ಆಸ್ಪತ್ರೆಯಲ್ಲಿ ಗಂಡು ಮಗು  ಸಂಜಯ  ಚಿಕಿತ್ಸೆ ಪಡೆಯುತ್ತಿದ್ದು ದಿನಾಂಕ: 04-02-2013 ರಂದು ಭೆಳಿಗ್ಗೆ 06-30 ರ ಸಮಯದಲ್ಲಿ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿಸಂಜಯ್ನನ್ನು ಮೈಸೂರಿಗೆ ಕರೆದುಕೊಂಡು ಆಂಬ್ಯುಲೆನ್ಸ್ನಲ್ಲಿ ಕರೆದುಕೊಂಡು ಹೋಗುತ್ತಿರುವಾಗ  ಮಾರ್ಗದ ಮದ್ಯೆ ಬೆಳಿಗ್ಗೆ 07-15 ರಲ್ಲಿ ಮೈಸೂರು ಸಮೀಪ ಮಗು ಸಂಜಯ್ ಮೃತಪಟ್ಟಿರುತ್ತಾನೆ ಆದ್ದರಿಂದ ಅವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


 ಕಳವು ಪ್ರಕರಣ :

ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 37/13 ಕಲಂ. 379, 436 ಐ.ಪಿ.ಸಿ.

        ದಿನಾಂಕ: 04-02-2013 ರಂದು ಪಿರ್ಯಾದಿ ಬಸವೇಗೌಡ, ಎ.ಎಲ್. ನುಡಿಭಾರತಿ ಸಮುದಾಯ ಭವನದ ಮಾಲೀಕರು,  ಗುತ್ತಲು ರವರು ನೀಡಿದ ದೂರು ಏನೆಂದರರೆ ಯಾರೊ ದುಷ್ಕಮರ್ಿಗಳು ಬೆಂಕಿ ಹಚ್ಚಿ ಕಾಣೆಯಾಗಿರುತ್ತಾರೆ ಇದರಿಂದಾಗಿ ಪೆಟ್ಟಿ ಅಂಗಡಿ ಸಂಪೂರ್ಣ ಭಸ್ಮಗೊಂಡಿದ್ದು ಅಂಗಡಿಯಲ್ಲಿದ್ದ ನಗದು ಸುಮಾರು 15.ಸಾವಿರ ಮತ್ತು ಎರಡು ಸಿಲಿಂಡರ್ ಗಳನ್ನು (ಭಾರತ್ ಗ್ಯಾಸ್ ಕಂಪನಿ) ಕಳವು ಮಾಡಿರುತ್ತಾರೆ ಪಕ್ಕದಲ್ಲಿದ್ದ ಸುಮಾರು 15.ಸಾವಿರ ರೂ ಬೆಲೆ ಬಾಳುವ ಹಣ್ಣಗಳು ಭಸ್ಮವಾಗಿದೆ ಸುಮಾರು 2 ಲಕ್ಷ ರೂ ಬೆಲೆ ಬಾಳುವ ಪದಾರ್ಥಗಳು ಸುಟ್ಟು ಕಟ್ಟಡ ವಿಕಾರಗೊಂಡಿರುತ್ತೆದೆ ಅವರುಗಳ ಮೇಲೆ ಸೂಕ್ತ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 



ಮಹಿಳಾ ದೌರ್ಜನ್ಯ / ವರದಕ್ಷಿಣೆ ಕಿರುಕುಳ ಪ್ರಕರಣ :

ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 19/13 ಕಲಂ. 498(ಎ)-323-506 ಕೂಡ 34 ಐ.ಪಿ.ಸಿ.

ದಿನಾಂಕ: 04-02-2013 ರಂದು ಪಿರ್ಯಾದಿ ಲಕ್ಷಮ್ಮ  ಕೊಂ. ಐಯ್ಯಪ್ಪ ಸ್ವಾಮಿ ದೇವಸ್ಥಾನದ ಹತ್ತಿರ, ಶಂಕರಪುರ ರವರು ನೀಡಿದ ದೂರು ಏನೆಂದರೆ ಆರೋಪಿಗಳಾದ 1] ಮಧು 2] ನಾಗಣ್ಣ  3] ಲಕ್ಷಮ್ಮ  ಎಲ್ಲರೂ ಶಿವಳ್ಳಿ ಗ್ರಾಮದ ವಾಸಿಗಳು  ನನ್ನ ಮಗಳಿಗೆ ಸರಿಯಾಗಿ ಊಟ ಬಟ್ಟೆ ತಂದುಕೊಡದೆ ನೀನು ಸರಿಯಾಗಿ ಕೆಲಸ ಮಾಡುವುದಿಲ್ಲ ಕೆಲಸಕ್ಕೆ ಬಾರದವಳು ನೋಡಲು ಚೆನ್ನಾಗಿಲ್ಲ ಕಪ್ಪಾಗಿದ್ದಿಯಾ ಎಂದು ಸಣ್ಣ ಪುಟ್ಟ ವಿಚಾರಕ್ಕೆಲ್ಲ ಬೈಯುವುದು, ಹೊಡೆಯುವುದು ಮಾಡುತ್ತಾ ಮಾನಸಿಕ ಹಾಗೂ ದೈಹಿಕ ಹಿಂಸೆ ಕಿರುಕುಳ ಕೊಡುತ್ತಿದ್ದರು. ಹಿಂಸೆ ಕಿರುಕುಳದ ಅವಮಾನವನ್ನು ತಾಳಲಾರದೆ ನನ್ನ ಮಗಳು ಗಂಡನ ಮನೆಯಲ್ಲಿ ನೇಣು ಹಾಕಿಕೊಂಡಿರುತ್ತಾಳೆ ಆರೋಪಿಗಳ ಮೇಲೆ ಸೂಕ್ತ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


ಮನುಷ್ಯ ಕಾಣೆಯಾದ ಪ್ರಕರಣ :

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 54/13 ಕಲಂ. ಹೆಂಗಸು ಮತ್ತು ಮಗು ಕಾಣೆಯಾಗಿದ್ದಾರೆ.

ದಿನಾಂಕ: 04-02-2013 ರಂದು ಪಿರ್ಯಾದಿ ಕುಮಾರ ಬಿನ್ ತಿಬ್ಬಯ್ಯ, 40 ವರ್ಷ, ಒಕ್ಕಲಿಗರು, ಚಂದಗಾಲು ಗ್ರಾಮ, ಶ್ರೀರಂಗಪಟ್ಟಣ ತಾ|| ರವರುಗಳು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಹೆಂಡತಿ ಲೀಲಾವತಿ ಹಾಗು ಮಗು ರೇಖಾ, 11 ವರ್ಷ ರವರುಗಳು ದಿನಾಂಕ: 04-02-2013 ರಂದು ಬೆಳಿಗ್ಗೆ 11-00 ಗಂಟೆಯಲ್ಲಿ ಪಿರ್ಯಾದಿಯವರ ಮನೆಯಿಂದ 20,000/- ರೂ. ಹಣ ಮತ್ತು 50 ಗ್ರಾಂ, ಚಿನ್ನದ ಚೈನನ್ನು ತೆಗೆದುಕೊಂಡು  ಹೊರಟುಹೋಗಿರುತ್ತಾರೆ ಇವರುಗಳನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  

No comments:

Post a Comment