ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 03-03-2013 ರಂದು ಒಟ್ಟು 19 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಮನುಷ್ಯ ಕಾಣೆಯಾದ ಪ್ರಕರಣ, 2 ರಸ್ತೆ ಅಪಘಾತ ಪ್ರಕರಣಗಳು, 1 ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ ಹಾಗು 16 ಇತರೆ ಪ್ರಕರಣಗಳು ದಾಖಲಾಗಿರುತ್ತವೆ.
ಮನುಷ್ಯ ಕಾಣೆಯಾದ ಪ್ರಕರಣ :
ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 55/13 ಕಲಂ. ಹುಡುಗ ಕಾಣೆಯಾಗಿದ್ದಾನೆ.
ದಿನಾಂಕ: 03-03-2013 ರಂದು ಪಿರ್ಯಾದಿ ಕೃಷ್ಣಮೂತರ್ಿ ಬಿನ್. ಲೇಟ್. ಕಾಳೇಗೌಡ, ಪುರಗ್ರಾಮ, ಕೆ,ಆರ್, ಪೇಟೆ ತಾ|| ಮಂಡ್ಯ ಜಿಲ್ಲೆ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ 02-03-13 ರಂದು ಬೆಳಿಗ್ಗೆ 05-00 ಗಂಟೆ ಸಮಯದಲ್ಲಿ ಸದರಿ ಹಾಸ್ಟಲ್ನಲ್ಲಿ ನನ್ನ ತಂಗಿಯ ಮಗ ಚೇತನ, ಮುರಾರ್ಜಿ ದೇಸಾಯಿ ಸ್ಕೂಲ್ ನಲ್ಲಿ ಇರುವುದಿಲ್ಲವೆಂದು ಹಾಸ್ಟೆಲ್ ವಾರ್ಡನ್ ದೂರವಾಣಿ ಮುಖಾಂತರ ತಿಳಿಸಿದ್ದ ಮೇರೆಗೆ ನಾನು ಹಾಸ್ಟಲ್ ಗೆ ಬಂದು ವಿಚಾರ ಮಾಡಿ ನೋಡಲಾಗಿ ನನ್ನ ತಂಗಿಯ ಮಗ ಇರಲಿಲ್ಲ ನಾವುಗಳು ಇಲ್ಲಿಯವರೆವಿಗೂ ನಮ್ಮ ಸಂಬಂಧಿಕರ ಮನೆಗಳಲ್ಲಿ ಹುಡುಕಿದರೂ ಎಲ್ಲೂ ಪತ್ತೆಯಾಗಿರುವುದಿಲ್ಲ ಅವನನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ರಸ್ತೆ ಅಪಘಾತ ಪ್ರಕರಣಗಳು :
1. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 41/13 ಕಲಂ. 279,337 304[ಎ] ಐ.ಪಿ.ಸಿ.
ದಿನಾಂಕ: 03-03-2013 ರಂದು ಪಿರ್ಯಾದಿ ಶಿವರಾಜು ಬಿನ್. ಚಂದ್ರಪ್ಪ, 23ವರ್ಷ, ಶಿಳ್ಳೇಕ್ಯಾತ ಜನಾಂಗ, ಕೂಲಿಕೆಲಸ, ಅಗಚಹಳ್ಳಿ ಗ್ರಾಮ ರವರು ನೀಡಿದ ದೂರು ಏನೆಂದರೆ ದಿನಾಂಕಃ 03-03-2013 ರಂದು ಬೆಳಿಗ್ಗೆ 10-00 ಗಂಟೆ ಸಮಯದಲ್ಲಿ ಬೆಳ್ಳೂರು ಪೊಲೀಸ್ ಠಾಣಾ ಸರಹದ್ದಿನ ಆಂದ್ರ ಡಾಬಾ ರೆಸ್ಟೋರೆಂಟ್ನ ಮುಂಭಾಗದ ಎನ್ಹೆಚ್-48 ದಕ್ಷಿಣ ಪಥದ ರಸ್ತೆಯಲ್ಲಿ ಆರೋಪಿ ಕೆಎ-04-ಎಂಎಲ್-8704 ಕಾರಿನ ಚಾಲಕ, ಸದರಿ ಕಾರನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ರಸ್ತೆ ದಾಟುತಿದ್ದ ಪಾದಚಾರಿಗೆ ಡಿಕ್ಕಿಪಡಿಸಿದಪರಿಣಾಮ ಪಾದಚಾರಿಗೆ ಪೆಟ್ಟಾಗಿರುತ್ತದೆಂದು ಗಾಯಾಳು ಕೀರ್ತಿ ಮೃತಪಟ್ಟಿರುವುದರಿಂದ ಈ ಪ್ರಕರಣಕ್ಕೆ 279-337 ಐ.ಪಿ.ಸಿ ಕೇಸಿನಲ್ಲಿ ಕಲಂ 337 ಐಪಿಸಿ ಬದಲಿಗೆ 304 (ಎ) ಐ.ಪಿ.ಸಿ. ಯನ್ನು ಅಳವಡಿಸಿಕೊಳ್ಳಲು ಘನ ನ್ಯಾಯಾಲಯದಲ್ಲಿ ನಿವೇದಿಸಿಕೊಂಡಿರುತ್ತೆ.
2. ನಾಗಮಂಗಲ ಪಟ್ಟಣ ಪೊಲೀಸ್ ಠಾಣೆ ಮೊ.ನಂ. 23/13 ಕಲಂ. 279-304(ಎ) ಕೂಡ 187 ಐ.ಎಂ.ವಿ. ಕಾಯ್ದೆ.
ದಿನಾಂಕ: 03-03-2013 ರಂದು ಪಿರ್ಯಾದಿ ಕೆ.ಬಿ ಚಂದ್ರೇಗೌಡ ಬಿನ್. ಬಸವರಜು , 35 ವರ್ಷ ಹೆಂಚಿನ ಪ್ಯಾಕ್ಟರಿಯಲ್ಲಿ ಕೆಲಸ, ಸ್ವಂತ ಸ್ಥಳ ಕಲ್ಲುದೇವನಹಳ್ಳಿ ಗ್ರಾಮ, ನಾಗಮಂಗಲ ತಾ. ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 03-03-13 ರಂದು ಪಿರ್ಯಾದಿ ಹಾಗು ಆತನ ಸ್ನೇಹಿತರು ಟೀ ಕುಡಿಯಲು ಎ.ಶ್ರೀರಾಮನಹಳ್ಳಿ ಗೇಟ್ ಹತ್ತಿರ ಹೋಗುತ್ತಿದ್ದಾಗ ನಾಗಮಂಗಲ ಕಡೆಯಿಂದ ಮೈಸೂರು ಕಡೆಗೆ ಆದಂತೆ ಎ.ಶ್ರೀರಾಮನಹಳ್ಳಿ ಗ್ರಾಮದ ವೆಂಕಟೇಶರವರ ಜಮೀನಿನ ನೇರ ಮೈಸೂರು ಬೆಳ್ಳೂರು ರಸ್ತೆಯಲ್ಲಿ ಸಿ.ಕೆ.ಡಬ್ಲ್ಯೂ 8008 ರ ಕಾರನ್ನು ಚಾಲಕ ಚಾಲನೆ ಮಾಡಿಕೊಂಢು ಹೋಗುತ್ತಿದ್ದು ಮೈಸೂರು ಕಡೆಯಿಂದ ಬೆಳ್ಳೂರು ಕಡೆಗೆ ಆದಂತೆ ಕೆ,55 ಎಂ. 2474 ಕಾರಿನ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಓಡಿಸಿಕೊಂಢು ಬಂದು ಸಿ.ಕೆ.ಡಬ್ಲ್ಯೂ-8008 ರ ಕಾರಿನ ಬಲ ಭಾಗಕ್ಕೆ ಡಿಕ್ಕಿ ಮಾಡಿಸಿದ ಪರಿಣಾಮ ಸದರಿ ಕಾರಿನ ಚಾಲಕ ಸ್ಥಳದಲ್ಲೇ ಮೃತ ಪಟ್ಟಿರುತ್ತಾನೆ ಆದ್ದರಿಂದ ಆರೋಪಿ ಚಾಲಕನ ಮೇಲೆ ಸೂಕ್ತ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ :
ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ.42/13 ಕಲಂ. 143-147-504-506-354-114-324 ಕೂಡ 149 ಐ.ಪಿ.ಸಿ ಮತ್ತು ಕಲಂ: 3 ಕ್ಲಾಸ್(1) ಸಬ್ ಕ್ಲಾಸ್ (10)&(11) ಎಸ್.ಸಿ/ಎಸ್.ಟಿ [ಪಿಎ] ಆಕ್ಟ್, 1989.
ದಿನಾಂಕ: 03-03-2013 ರಂದು ಪಿರ್ಯಾದಿ ಮಮತ ಕೋಂ. ಬಾಲಕೃಷ್ಣ, 28ವರ್ಷ, ಹಂದಿಜೋಗಿ, ಕೂಲಿಕೆಲಸ/ಗೃಹಿಣಿ, ವಾಸ ಕೆಂಬಾರೆ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕಃ 01-03-2013 ರಂದು ಸಂಜೆ 6 ಗಂಟೆಯಲ್ಲಿ ಪಿರ್ಯಾಧಿಯವರು ಅವರ ಮನೆಯ ಬಳಿ ಇರುವಾಗ ಆರೋಪಿಗಳಾದ 1]ಮಂಜುನಾಥ, 2] ಶ್ರೀನಿವಾಸ 3] ಆಟೋ ಲಕ್ಷ್ಮಣ್, ಬೆಳ್ಳೂರು, 4] ವೆಂಕಟೇಶ್, 5]ವೆಂಕಟೇಶ್, ಕರಿಜೀರನಹಳ್ಳಿ, 6]ನಾಗ, ಬೆಳ್ಳೂರು, ಹಾಗು 7]ಕೆ.ಇ.ಬಿ.ಸೋಮ ರವರುಗಳು ಅಕ್ರಮ ಗುಂಪು ಕಟ್ಟಿಕೊಂಡು ಜಾತಿ ನಿಂದನೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿ ಪಿರ್ಯಾಧಿಯವರು ಹಿಡಿದು ಎಳೆದಾಡಿ ಅವಮಾನಗೊಳಿಸಿ ರಿಪೀಸ್ ಪಟ್ಟಿ ಹಾಗೂ ಬೇವಿನ ಕೋಲಿನಿಂದ ಹೊಡೆದು ಡಿ.ಎಸ್.ಎಸ್. ವೆಂಕಟೇಶ್ ರವರು ಅವಳಿಗೆ ಒಂದು ಗತಿ ಕಾಣಿಸಿ ಎಷ್ಟೇ ಖರ್ಚು ಆದರೂ ನಾನು ನೋಡಿಕೊಳ್ಳುತ್ತೇನೆಂದು ಕುಮ್ಮಕ್ಕು ನೀಡುತ್ತಿದ್ದನು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment