Moving text

Mandya District Police

DCR Dated : 04-03-2013


ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 04-03-2013 ರಂದು ಒಟ್ಟು 56 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 3 ಮನುಷ್ಯ ಕಾಣೆಯಾದ ಪ್ರಕರಣಗಳು,  1 ಯು.ಡಿ.ಆರ್. ಪ್ರಕರಣ, 3 ಅಪಘಾತ, 23 ಅಬಕಾರಿ ನಿಷೇಧ ಕಾಯ್ದೆ ಪ್ರಕರಣಗಳು,  ಹಾಗೂ 26 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 85/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 04-03-2013 ರಂದು ಪಿರ್ಯಾದಿ ಕುಳ್ಳೇಗೌಡ ಬಿನ್ ಲೇಟ್ ನಿಂಗೇಗೌಡ, ತಿಮ್ಮನಕೊಪ್ಪಲು ಗ್ರಾಮ, ಪಾಂಡವಪುರ ತಾಲ್ಲೋಕು ರವರು ನೀಡಿದ ದೂರಿನ ವಿವರವೇನೆಂದರೆ ನನ್ನ 16 ವರ್ಷದ ಮಗಳು ದಿನಾಂಕ: 02-03-2013 ರಂದು ಮಂಡ್ಯದ ಪಿ.ಇ.ಎಸ್. ಕಾಲೇಜಿಗೆ ಹೋಗುತ್ತೇನೆಂದು ಹೇಳಿ ಹೋದವಳು ವಾಪಸ್ ಮನೆಗೆ ಬಾರದೆ ಕಾಣೆಯಾಗಿರುತ್ತಾಳೆ. ಪತ್ತೆ ಮಾಡಿ ಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಶ್ರೀರಂಗಪಟ್ಟಣ  ಪೊಲೀಸ್ ಠಾಣೆ ಮೊ.ನಂ. 108/13 ಕಲಂ. ಹುಡುಗ ಕಾಣೆಯಾಗಿದ್ದಾನೆ.

ದಿನಾಂಕ: 04-03-2013 ರಂದು ಪಿರ್ಯಾದಿ ಪ್ರಸಾದ್ ಸಿ.ಎಸ್, ಬಿನ್. ಶಂಕರೇಗೌಡ, ಸಿ, ಪ್ರಾಂಶುಪಾಲರು ಹಾಗೂ ನಿಲಯ ಪಾಲಕರು, ಮೊರಾರ್ಜಿ ದೇಸಾಯಿ ವಸತಿ ಶಾಲೆ, ಗಣಂಗೂರು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರ ಶಾಲೆಯಲ್ಲಿ 6 ನೇ ತರಗತಿಯಲ್ಲಿ  ವ್ಯಾಸಂಗ ಮಾಡುತ್ತಿದ್ದ  ಪವನ್  ರವರು ದಿನಾಂಕ 01-03-13  ರಂದು  ಹುಷಾರಿಲ್ಲ ಎಂದು ತಿಳಿಸಿ  ಚಿಕಿತ್ಸೆ  ಪಡೆದಿದ್ದು,  ದಿನಾಂಕ: 02-03-13 ರಂದು ಬೆಳಿಗ್ಗೆ ನೋಡಲಾಗಿ ಶಾಲೆಯಲ್ಲಿ ಇರಲಿಲ್ಲ,  ಮನೆಗೆ ಹೋಗಿ ಕೇಳಲಾಗಿ ಮನೆಗೂ ಹೋಗಿರಲಿಲ್ಲ ಎಂದು ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


3. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 84/13 ಕಲಂ. ಹೆಂಗಸು ಹಾಗೂ ಮಗು ಕಾಣೆಯಾಗಿದ್ದಾರೆ.

        ದಿನಾಂಕ: 04-03-2013 ರಂದು ಜಿ.ಸಚ್ಚಿನ್ ಬಿನ್. ಲೇಟ್. ಗಿರಿಗೌಡ, 21ವರ್ಷ, ವ್ಯವಸಾಯ, ಒಕ್ಕಲಿಗರು, ಕಾಳೇನಹಳ್ಳಿ ಗ್ರಾಮ, ಮಂಡ್ಯ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಅವರ ಹೆಂಡತಿ ಶ್ರೀಮತಿ ಕೆ.ಜಿ.ಶೃತಿ, 23ವರ್ಷ, ಕಾಳೇನಹಳ್ಳಿ ಗ್ರಾಮ, ಹಾಗು ಮಗಳು ಚರಣ್ಯ, 1ವರ್ಷ 1ತಿಂಗಳು, ರವರೊಂದಿಗೆ ಭಾಗ್ಯಲಕ್ಷ್ಮಿ ಬಾಂಡ್ನ್ನು ಮಂಡ್ಯದಲ್ಲಿ ಪಡೆದು ಬರುವುದಾಗಿ ತಿಳಿಸಿ ಮಗಳು ಚರಣ್ಯಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿದ್ದು ಈವರೆಗೆ ಮನೆಗೆ ಬಂದಿರುವುದಿಲ್ಲ ನೆಂಟರಿಷ್ಟರ ಮನೆಗಳಲ್ಲಿ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ ಕಾಣೆಯಾಗಿರುವ ಶೃತಿ ಹಾಗೂ ಮಗು ಚರಣ್ಯಳನ್ನು ಪತ್ತೆ ಕೊಡಬೇಕೆಂದು ನೀಡಿರುವ ದೂರನ್ನು ಸ್ವೀಕರಿಸಿ ಪ್ರಕರಣ ದಾಖಲಿಸಲಾಗಿದೆ. 


ಯು.ಡಿ.ಆರ್. ಪ್ರಕರಣ :

ಹಲಗೂರು ಪೊಲೀಸ್ ಠಾಣೆ ಮೊ.ನಂ. 05/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 04-03-2013 ರಂದು ಪಿರ್ಯಾದಿ ವೆಂಕಟನಾಯಕ್, ಅರಣ್ಯ ವಾಚರ್, ಮುತ್ತತ್ತಿ ಅರಣ್ಯ ವಲಯ, ಮಳವಳ್ಳಿ ತಾಲ್ಲೋಕು, ಮಂಡ್ಯ ಜಿಲ್ಲೆ ರವರು ನೀಡಿದ ದೂರಿನ ವಿವರವೇನೆಂದರೆ ಮುತ್ತತ್ತಿ ಗ್ರಾಮದ ಕಾವೇರಿ ನದಿಯಲ್ಲಿ ಸುಮಾರು 4-5 ದಿನಗಳ ಹಿಂದೆ ಒಂದು ಅಪರಿಚಿತ ಗಂಡಸಿನ ಶವವು ನದಿಯ ದಡದಲ್ಲಿ ತೇಲುತ್ತಿದ್ದು ಶವವು ಸಂಪೂರ್ಣವಾಗಿ ಕೊಳೆತು ಹೋಗಿದ್ದು ಯಾವುದೇ ಗುರುತು ಚಹರೆಗಳು ಕಂಡು ಬಂದಿರುವುದಿಲ್ಲ ಸುಮಾರು 40 ರಿಂದ 45 ವರ್ಷ ವಯಸ್ಸಿನ ಗಂಡಸಿನ ಶವವಾಗಿದ್ದು ಆಕಸ್ಮಿಕವಾಗಿ ಕಾಲು ಜಾರಿ ಅಥವಾ ನೀರಿನಲ್ಲಿ ಸ್ನಾನ ಮಾಡಲೋ ಹೋಗಿ ಮುಳುಗಿ ಮೃತಪಟ್ಟಿರುತ್ತಾನೆ, ಶವದ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ಕೊಟ್ಟ ಲಿಖಿತ ದೂರನ್ನು ಪಡೆದು ಕೇಸು ನೊಂದಾಯಿಸಿರುತ್ತೆ.

ಅಬಕಾರಿ ನಿಷೇಧ ಕಾಯ್ದೆ ಪ್ರಕರಣಗಳು

ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ ಸಂ 109/2013 ಕಲಂ 32-34 ಕೆ.ಇ ಆಕ್ಟ್ 

ಪಿರ್ಯಾದಿ ಎಂ. ವೆಂಕಟರಾಮಪ್ಪ ಪಿ.ಎಸ್.ಐ ಶ್ರೀರಂಗಪಟ್ಟಣ  ಠಾಣೆ ಯವರು  ಗಸ್ತಿನಲ್ಲಿರುವಾಗ   ತಮಗೆ ಬಂದ  ಮಾಹಿತಿ  ಮೇರೆಗೆ  04-03-2013 ರಂದು ಸಂಜೆ 7-00 ರ ಸಮಯದಲ್ಲಿ ಲೋಕಪಾವನಿ ಸೇತುವೆ  ಬಳಿ  ಸಿಬ್ಬಂದಿಗಳೊಂದಿಗೆ   ಹೋಗಿ  ದಾಳಿ ಮಾಡಲಾಗಿ ಆರೋಪಿ ಚಿನ್ನಸ್ವಾಮಿ 26 ವರ್ಷ ಬೋವಿ ಜನಾಂಗ ಡ್ರೈವರ್ ಕೆಲಸ ಮುಂಡಗದೊರೆ ಗ್ರಾಮ   ಒಂದು  ಪ್ಲಾಸ್ಟಿಕ್ ಕವರ್ ನಲ್ಲಿ   ಸುಮಾರು 1521  ರೂನ   ಮದ್ಯದ   ಬಾಟಲ್ ಗಳನ್ನು  ಯಾವುದೇ  ಪರವಾನಿಗೆ ಇಲ್ಲದೆ   ತೆಗೆದುಕೊಂಡು   ಹೋಗುತ್ತಿದ್ದು   ವಶಕ್ಕೆ  ತೆಗೆದುಕೊಂಡ ಮೇರೆಗೆ. 

ಕೆರೆಗೋಡು ಪೊಲೀಸ್ ಠಾಣೆ ಮೊ ಸಂ 21/2013 ಕಲಂ ಕಲಂ 32-34 ಕೆ.ಇ ಆಕ್ಟ್ 

ಆರೋಪಿ ಪ್ರವೀಣ ರವರ  ಚಿಲ್ಲರೆ ಅಂಗಡಿಯ ಮೇಲೆ ದಿನಾಂಕ: 04-03-2013 ರಂದು ಸಂಜೆ 6.00 ಗಂಟೆಯ ಸಮಯದಲ್ಲಿ ಪಿ.ಎಸ್.ಐ ಕೆರಗೋಡು ಠಾಣೆ ರವರು ತಮ್ಮ  ಸಿಬ್ಬಂದಿಯೊಂದಿಗೆ ದಾಳಿ ಮಾಡಿ, ಆರೋಪಿಯು ಅನಧಿಕೃತವಾಗಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದ 1). ಓಲ್ಡ್ ಅಡ್ಮಿರಲ್ ಬ್ರಾಂದಿ 180 ಎಂ.ಎಲ್.ನ ಮದ್ಯವಿರುವ 09 ಪೌಚ್ಗಳು 2). ಕ್ರೌನ್ ವಿಸ್ಕಿ 180 ಎಂ.ಎಲ್ನ ಮದ್ಯವಿರುವ 30 ಪೌಚ್ಗಳು 3) ಹೈವಾಡ್ಸರ್್ ವಿಸ್ಕಿ 180 ಎಂ.ಎಲ್ನ ಮದ್ಯವಿರುವ 31 ಪೌಚ್ಗಳನ್ನು ಮಹಜರ್ ಮೂಲಕ ಪಂಚರ ಸಮಕ್ಷಮ ಅಮಾನತ್ತು ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಠಾಣೆಗೆ ಬಂದು ಕಾಯ್ದೆ ಕಲಂ ರೀತಿ ಪ್ರಕರಣ ದಾಖಲಿಸಿರುತ್ತದೆ. 

ಪಾಂಡವಪುರ ಪೊಲೀಸ್ ಠಾಣೆ ಮೊ ಸಂ 86/2013 ಕಲಂ 32-34 ಕೆ ಇ ಆಕ್ಟ್ 

ಪಿರ್ಯಾದಿಯವರದ ವೆಂಕಟೇಶ್. ಪೊಲೀಸ್ ಇನ್ಸ್ಪೆಕ್ಟರ್. ಪಾಂಡವಪುರ ಪೊಲೀಸ್ ಠಾಣೆ ರವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ಸಿಬ್ಬಂದಿಯವರ ಪಂಚರ ಸಮಕ್ಷಮ  ಆರೋಪಿ ರಾಜೇಗೌಡ ರವರ ಪೆಟ್ಟಿಗೆ ಅಂಗಡಿಯ ಮೇಲೆ ದಾಳಿ ಮಾಡಿದಾಗ  ಅಂಗಡಿಯಲ್ಲಿ ಮಾರಾಟ ಮಾಡುತ್ತಿದ್ದ ಆಸಾಮಿಯನ್ನು ಪಂಚರ ಸಮಕ್ಷಮ ಅಂಗಡಿಯನ್ನು ಪರಿಶೀಲಿಸಿದಾಗ ಸದರಿ ಅಂಗಡಿಯಲ್ಲಿ  ಒಂದು  ರೆಟ್ ಬಾಕ್ಸ್ನಲ್ಲಿ ಇದ್ದುದನ್ನು ತೆಗೆದು ಪರಿಶೀಲಿಸಲಾಗಿ ಬಾಕ್ಷ್ ನಲ್ಲಿ ಮದ್ಯಪಾನ ತುಂಬಿರುವ ಬಾಟಲ್ಗಳು ಇದ್ದು, ಇವುಗಳ ಒಟ್ಟು ಬೆಲೆ 1029/ರೂ. 86 ಪೈಸ ಆಗಿದ್ದು, ಇವುಗಳನ್ನು ಪಂಚರ ಸಮಕ್ಷಮ ಮಹಜರ್ ಮೂಲಕ ಅಮಾನತ್ತು ಪಡಿಸಿಕೊಂಡು ಆಸಾಮಿಯೊಂದಿಗೆ ಈ ಕೇಸಿನ ಮುಂದಿನ ತನಿಖೆಯ ಸಂಬಂದ ವಶಕ್ಕೆ ತೆಗೆದುಕೊಂಡು ರಾತ್ರಿ 08-00 ಗಂಟೆಗೆ ಬಂದು ವರದಿ ನೀಡಿರುವುದಾಗಿ ಇತ್ಯಾದಿ

ಬೆಳಕವಾಡಿ  ಪೊಲೀಸ್ ಠಾಣೆ ಮೊ ಸಂ 21/2013 ಕಲಂ 32-34 ಕೆ ಇ ಆಕ್ಟ್ 

04/03/13 ರಂದು ದಬ್ಬಹಳ್ಳಿ ಗ್ರಾಮದಲ್ಲಿ ಆರೋಪಿಯ ರಾಜು ಬಿನ್ ಲೇ|| ರಾಜೇಗೌಡ, ನು ತನ್ನ ಪೆಟ್ಟಿ ಅಂಗಡಿಯಲ್ಲಿ ಯಾವುದೇ ರಹದಾರಿ ಇಲ್ಲದೇ ಅಕ್ರಮವಾಗಿ ಮದ್ಯ ಮಾರಾಟು ತ್ತಿದ್ದು, ಪೊಲೀಸರನ್ನು ಕಂಡು ಓಡಿಹೋಗಿದ್ದು, ನಂತರ ಪೆಟ್ಟಿಅಂಗಡಿಯಲ್ಲಿ ದೊರೆತ ಮದ್ಯ ತುಂಬಿದ ಪ್ಯಾಕೆಟ್ಗಳನ್ನು ಮತ್ತು ಬಾಟೆಲ್ಗಳನ್ನು ಅಮಾನತ್ತುಪಡಿಸಿಕೊಂಡು ಆರೋಪಿಯ ವಿರುದ್ದ ಸ್ವತಃ ಕೇಸು ದಾಖಲಿಸಿರುತ್ತೆ. 

ಬಸರಾಳು ಪೊಲೀಸ್ ಠಾಣೆ ಮೊ ಸಂ 18/2013 ಕಲಂ 32-34 ಕೆ ಇ ಆಕ್ಟ್ 

ರಾಜೇಶ ಬಿನ್ ನಾಗರಾಜು ಎಂಬುವರು ತಮ್ಮ ಪೆಟ್ಟಿಗೆ ಅಂಗಡಿಯಲ್ಲಿ   ಅಕ್ರಮವಾಗಿ ಮದ್ಯವನ್ನು ಇಟ್ಟುಕೊಂಡು ಯಾವುದೇ ಪರವಾನಿಗೆ ಇಲ್ಲದೆ ಬಂದ ಗಿರಾಕಿಗಳಿಗೆ ಮಾರಾಟ ಮಾಡುತ್ತಿದಾಪಂಚರ ಸಮಕ್ಷಮ ಪರಿಶೀಲಿಸಲಾಗಿ ಹೈವಡ್ರ್ಸ ವಿಸ್ಕಿ 180 ಎಂ.ಎಲ್. ಮದ್ಯ ತುಂಬಿದ 11 ಟೆಟ್ರಾ ಪಾಕೇಟ್ಗಳು, ಕ್ರೌನ್ಫೈನ್ ವಿಸ್ಕಿ 180 ಎಂ.ಎಲ್. ಮದ್ಯ ತುಂಬಿದ 30 ಟೆಟ್ರಾ ಪಾಕೇಟ್ಗಳು ,8ಪಿಮ್ 180 ಎಂ.ಎಲ್ 3 ಟೆಟ್ರಾ ಪಾಕೇಟ್ಗಳು, ಓಲ್ಡ್ ಅಡ್ಮರಲ್ 180 ಎಂ.ಎಲ್ 4 ಟೆಟ್ರಾ ಪಾಕೇಟ್ಗಳು, ನಂ 1 ಹೈವೆ ಫೈನ್ ವಿಸ್ಕಿ 180 ಎಂ.ಎಲ್ 19 ಬಾಟಲ್ಗಳು, ಓಲ್ಡ್ ಟವರನ್ ವಿಸ್ಕಿ  90 ಎಂ.ಎಲ್. ಮದ್ಯ ತುಂಬಿದ 4  ಪ್ಲಾಸ್ಟಿಕ್ ಬಾಟಲ್ಗಳು,  ಎಂ.ಸಿ ಡವಲ್ಸ್ 180 ಎಂ.ಎಲ್ 15 ಟೆಟ್ರಾ ಪಾಕೇಟ್ಗಳು, ಸಿಲ್ವರ್ ಕಪ್ 90 ಎಂ.ಎಲ್ 105 ಪ್ಲಾಸ್ಟಿಕ್ ಪ್ಯಾಕೇಟ್ಗಳು, ಓಲ್ಡ್ ಟವರನ್ ವಿಸ್ಕಿ  180 ಎಂ.ಎಲ್. ಮದ್ಯ ತುಂಬಿದ 30  ಟೆಟ್ರಾ ಪಾಕೇಟ್ಗಳು   ಇವುಗಳ ಅಂದಾಜು ಬೆಲೆ ಸುಮಾರು 7111/- ರೂಪಾಯಿಗಳಾಗಿರುತ್ತೆ.

ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ ಸಂ 13/2013 ಕಲಂ 32-34 ಕೆ ಇ ಆಕ್ಟ್ 

ಮಾರಸಿಂಗನಹಳ್ಳಿ ಗ್ರಾಮದಲ್ಲಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮ ಮದ್ಯ ಮರಾಟ ಮಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಲಾಗಿ ಆರೋಪಿ ನಾಗರಾಜು ಬಿನ್ ರಾಮಯ್ಯ,  ಅಂಗಡಿಯಲ್ಲಿ 90 ಎಂಎಲ್ ನ 24 ಟೆಟ್ರಾ ಪ್ಯಾಕ್ ನ್ನು ವಶಕ್ಕೆ ಪಡೆದು ಕೊಂಡಿರುತ್ತೆ ಅದರ ಒಟ್ಟು ಮೌಲ್ಯ 520-80 ಆಗಿರುತ್ತೆ ನಂತರ ಪ್ರಕರಣ ದಾಖಲು ಮಾಡಿರುತ್ತೆ. 

ಅರಕೆರೆ ಪೊಲೀಸ್ ಠಾಣೆ ಮೊ ಸಂ 44/2013 ಕಲಂ 32-34 ಕೆ ಇ ಆಕ್ಟ್ 

ಆರೋಪಿಯ ಕರೀಗೌಡ32ವರ್ಷ, ಒಕ್ಕಲಿಗರು, ಅಂಗಡಿ ವ್ಯಾಪಾರ, ಹುರುಳಿಕ್ಯಾತನಹಳ್ಳಿ ಗ್ರಾಮ,  ಚಿಲ್ಲರೆ ಅಂಗಡಿಯಲ್ಲಿ    1] 180 ಎಂ.ಎಲ್. ನ ವಿಂಡಸರ್ ಡಿಲಾಕ್ಸ್ ವಿಸ್ಕಿಯ 20 ಮದ್ಯದ ಬಾಟಲುಗಳು ,2) 180 ಎಂ.ಎಲ್.ನ 5 ಪೌಚ್ಗಳು ಓಲ್ಡ್ ತವರಿನ್ ವಿಸ್ಕಿ 3] 90 ಎಂ.ಎಲ್.ನ 6 ಪೌಚ್ಗಳು ಮ್ಯಾಗ್ಡೋಲ್ ಬ್ರಾಂದಿ ಇವುಗಳನ್ನು ಮಾರಾಟ ಮಾಡುವ ಬಗ್ಗೆ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮಾರಾಟ ಮಾಡುತ್ತಿದ್ದರಿಂದ ಬೆಲೆ 1372=82/- ರೂ. ಬೆಲೆಯ ಮದ್ಯದ ಬಾಟಲುಗಳನ್ನು ಅಮಾನತ್ತು ಪಡಿಸಿ . ಸ್ವಕೇಸು ದಾಖಲಿಸಿರುತ್ತದೆ

ಪೂರ್ವ ಪೊಲೀಸ್ ಠಾಣೆ, ಮಂಡ್ಯ. ಮೊ ಸಂ 44/2013 ಕಲಂ ಕಲಂ;15(ಎ) 32 ಕ್ಲಾಸ್ (3)  ಕೆ.ಇ. ಆಕ್ಟ್.

ಆರೋಪಿ ಸಂದೀಪ್ ಕುಮಾರ್.ಕೆ.ಎಸ್, , 21 ವರ್ಷ ಈಡಿಗ ಜನಾಂಗ ಬಾರ್ನಲ್ಲಿ ಸಪ್ಲೇಯರ್ ಕೆಲಸ,  ಗೌತಮ್ ಬಡಾವಣೆ ಗುತ್ತಲು ಮಂಡ್ಯ  ರವರು ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅನುವು ಮಾಡಿಕೊಡುತ್ತಿದ್ದಾನೆ ಅಂತ ಬಂದ ಮಾಹಿತಿ ಮೇರೆಗ್ಲೆ ಒಬ್ಬ ಅಸಾಮಿಯು ನಿಂತು ಸಾರ್ವಜನಿಕರು ಮದ್ಯಪಾನ ಮಾಡಲು ಅನುವು ಮಾಡಿಕೊಡುತ್ತಿದ್ದು ಈ ಸಂಭಂದ ಸದರಿ ಆರೋಪಿಯನ್ನು ಮತ್ತು ಮಾಲುಗಳನ್ನು ವಶಕ್ಕೆ ತೆಗೆದುಕೊಂಡುನಂತರ ೆ ಸ್ವ-ವರದಿ ತಯಾರಿಸಿ ಠಾಣಾ ಮೊ,ಸಂ:65/2013 ಕಲಂ: 15(ಎ) 32 ಕ್ಲಾಸ್ (3)  ಕೆ.ಇ. ಆಕ್ಟ್ ರೀತ್ಯ ಕೇಸು ನೊಂದಾಯಿಸಿರುತ್ತೆ,


ಮದ್ದೂರು ಪೊಲೀಸ್ ಠಾಣೆ ಮೊ ಸಂ 89/2013 ಕಲಂ 32-34 ಕೆ ಇ ಆಕ್ಟ್ 

ಪಿರ್ಯಾದಿಯವರಿಗೆ ದೊರೆತ ಖಚಿತ ವರ್ತಮಾನದ ಮೇರೆಗೆ ಅಂಗಡಿಯ ಮೇಲೆ ದಾಳಿ ಮಾಡಲಾಗಿ ಸದರಿ ಆರೋಪಿಯ ಯು.ಬಿ.ಸತೀಶ್ 35ವರ್ಷ ವಕ್ಕಲಿಗರು ಅಂಗಡಿ ವ್ಯಾಪಾರ ಉಪ್ಪಿನಕೆರೆ ಗೇಟ್, ಮದ್ದೂರು  ಯಾವುದೇ ಪರವಾನಿಗೆ ಇಲ್ಲದೇ ಮದ್ಯದ ಬಾಟಲ್ ಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುತ್ತಿರುವುದು ಕಾನೂನು ಬಾಹಿರವಾದ್ದರಿಂದ ಸದರಿ ಆರೋಪಿಯ ಮೇಲೆ ಸ್ವಯಂ ಪ್ರಕರಣ ದಾಖಲು ಮಾಡಿರುತ್ತೆ.  

ಕೆ ಆರ್ ಪೇಟೆ ಟೌನ್ ಪೊಲೀಸ್  ಠಾಣೆ ಮೊ ಸಂ 63/2013 ಕಲಂ 32-34 ಕೆ ಇ ಆಕ್ಟ್ 

ವೆಂಕಟೇಶ ನಾಯಕ ಬಿನ್ ವೆಂಕಟಯ್ಯ, ಮೈಸೂರು ಎಂಬುವವರು ಅಕ್ರಮವಾಗಿ ಒಂದು ರಟ್ಟಿನ ಬಾಕ್ಸ್ನಲ್ಲಿ ಮದ್ಯ ಸಾಗಣೆ ಮಾಡುತ್ತಿದ್ದಾನೆಂದು ಬಾತ್ಮೀದಾರರಿಂದ ಬಂದ ಖಚಿತ ವರ್ತಮಾನದ ಮೇರೆಗೆರಟ್ಟಿನ ಬಾಕ್ಸ್ನಲ್ಲಿ ಒಟ್ಟು 28 ಬಾಟಲುಗಳಿದ್ದು, ಸದರಿ ಬಾಟಲ್ಗಳೆಲ್ಲವೂ ತಲಾ 180 ಎಮ್.ಎಲ್.ನ ರಾಜಾ ವಿಸ್ಕಿ ಬಾಟಲ್ಗಳಾಗಿರುತ್ತೆ. ಇವುಗಳ ಒಟ್ಟು ಮೌಲ್ಯ 1200.00 ರೂಗಳಾಗಿರುತ್ತೆ. ಸದರಿ 28 ಬಾಟಲ್ಗಳ ಪೈಕಿ ಒಂದು ಬಾಟಲ್ ಬಿಳಿ ಬಟ್ಟೆಯಲ್ಲಿ ಹೊಲೆದು ಮೇಲ್ಭಾಗ ಹೆಚ್ಪಿಹೆಚ್ ಎಂಬ ಅಕ್ಷರದಿಂದ ಮೊಹರು ಮಾಡಿ ಪಂಚಾಯಿತಿದಾರರ ಸಮಕ್ಷಮ ಮಹಜರ್ ಬರೆದು ನಂತರ ಮಾಲುಗಳ ಸಮೇತ ವಾಪಸ್ ಠಾಣೆಗೆ ಬಂದು ಪ್ರಕರಣ ದಾಖಲು ಮಾಡಿರುತ್ತೆ

ಮಂಡ್ಯ ಪಶ್ಚಿಮ ಠಾಣೆ ಮೊ ಸಂ 49/2013 ಕಲಂ 15[ಎ], 32[3] ಕೆಇ ಆಕ್ಟ್ 

ಆರೋಪಿ ಎಸ್.ಎಸ್.ಭಾಸ್ಕರ ಎಂಬುವನು ಯಾವುದೇ ಪರವಾನಿಗೆ ಇಲ್ಲದೆ ಸಾರ್ವಜನಿಕರಿಗೆ ಮದ್ಯಪಾನ ಮಾಡಲು ಅವಕಾಶ ಮಾಡಿದ್ದನ್ನು ಪರಿಶೀಲಿಸಿ ಪಂಚರ ಸಮಕ್ಷಮ ಮಹಜರ್ ಕ್ರಮ ಜರುಗಿಸಿ ಸ್ಥಳದಲ್ಲಿ ದೊರೆತ 5 ವಿವಿಧ ಮಾದರಿಯ 180 ಎಂಎಲ್ನ ಮದ್ಯ ತುಂಬಿದ ಬಾಟಲ್ ಘಲೂ, 5 ವಿವಿಧ ಮಾದರಿಯ 180 ಎಂಎಲ್ನ ಮದ್ಯ ತುಂಬಿದ ಪೌಚ್ಗಳು, 6 ವಿವಿಧ ಮಾದರಿಯ 180 ಎಂಎಲ್ನ ಅರ್ಧಂಬರ್ಧ ಮದ್ಯ ಇರುವಬಾಟಲ್ ಗಳನ್ನು , 12 ವಿವಿಧ ಮಾದರಿಯ 180 ಎಂಎಲ್ನ ಮದ್ಯದ ಖಾಲಿ ಪೌಚ್ಗಳು, 5 ಗಾಜಿನ ಲೋಟಗಳು ಮತ್ತು ಯುಬಿ ಎಕ್ಸ್  ಪೊರ್ಟರ್  ಹೆಸರಿನ ಖಾಕಿ ರಟ್ಟಿನ ಬಾಕ್ಸ್ ಮತ್ತು ಆರೋಪಿತನು ಮದ್ಯ ಮಾರಾಟ ಮಾಡಿ ಸಂಪಾದನೆ ಮಾಡಿದ್ದ 1450-00 ರೂ.ಗಳನ್ನು ಅಮಾನತ್ತುಪಡಿಸಿಕೊಂಡು ಸದರಿ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ಮಹಜರ್ ಸಮೇತ ಠಾಣೆಗೆ ಬಂದು ಸ್ವಯಂ ವರದಿ ಮೇರೆಗೆ ಕೇಸು ದಾಖಲಿಸಿರುವುದಾಗಿ ಇತ್ಯಾದಿ.

ಶಿವಳ್ಳಿ ಠಾಣೆ ಮೊ ಸಂ 44/2013 ಕಲಂ 15[ಎ], 32[3] ಕೆಇ ಆಕ್ಟ್ 

ಪಿ.ಎಸ್.ಯ ರವರಿಗೆ ಬಂದ ಮಾಹಿತಿ ಮೇರೆಗೆ ಸಿಬ್ಬಂದಿ ಸಮೇತ ಚಂದಗಾಲು ಗ್ರಾಮದ ಆರೋಪಿ ಮಲ್ಲೇಶ ಬಿನ್ ಅಕ್ಕಿಬೋರೇಗೌಡರ ಅಂಗಡಿ ಮೇಲೆ ದಾಳಿ ಮಾಡಲಾಗಿ ಅಂದಾಜು ಬೆಲೆ 780 ರೂ.ನ 330 ಎಂ.ಎಲ್.ನ 15 ಯು.ಬಿ.ಎಕ್ಸ್  ಪೊರ್ಟರ್  ಬಿಯರ್ ಬಾಟಲ್ ಗಳನ್ನು  ತ್ತು 4 ಖಾಲಿ ಬಾಟೆಲ್ಗಳನ್ನು ಹಾಗೂ ಒಂದು ಓಪನರ್ನ್ನು ವಶಕ್ಕೆ ತೆಗೆದುಕೊಂಡು  ಕ್ರಮ ಜರುಗಿಸಬೇಕೆಂದು ನೀಡಿದ ವರದಿ ನೀಡಿದ ಮೇರೆಗೆ 




No comments:

Post a Comment