Moving text

Mandya District Police

DAILY CRIME REPORT DATED : 09-03-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 09-03-2013 ರಂದು ಒಟ್ಟು 24 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಮಹಿಳಾ ದೌರ್ಜನ್ಯ / ವರದಕ್ಷಿಣೆ ಕಿರುಕುಳ ಪ್ರಕರಣಗಳು,  1 ಯು.ಡಿ.ಆರ್. ಪ್ರಕರಣ,  2 ಮನುಷ್ಯ ಕಾಣೆಯಾದ ಪ್ರಕರಣಗಳು,  6 ಅಕ್ರಮ ಮದ್ಯ ಮಾರಾಟ ಪ್ರಕರಣಗಳು,  1 ಕಳ್ಳತನ ಪ್ರಕರಣ ಹಾಗು 12 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.   


ಮಹಿಳಾ ದೌರ್ಜನ್ಯ / ವರದಕ್ಷಿಣೆ ಕಿರುಕುಳ ಪ್ರಕರಣಗಳು :

1. ಅರಕೆರೆ ಪೊಲೀಸ್ ಠಾಣೆ ಮೊ.ನಂ. 52/13 ಕಲಂ. 323-324-504-506-342-327-498(ಎ) ಕೂಡ 34 ಐ.ಪಿ.ಸಿ.    3 ಮತ್ತು 4 ಡಿ.ಪಿ.ಕಾಯಿದೆ.

ದಿನಾಂಕ: 09-03-2013 ರಂದು ಪಿರ್ಯಾದಿ ಅಮೃತವಾಣಿ ಬಿನ್. ನಿಂಗೇಗೌಡ, ಮಹದೇವಪುರ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1] ಎನ್,ಹೇಮಂತ್ 2) ಸಾವಿತ್ರಮ್ಮ ಮತ್ತು 3) ಬೋರಮ್ಮ, ಯರಗನಹಳ್ಳಿ, ಮೈಸೂರು ರವರುಗಳು ಪಿರ್ಯಾದಿಯವರಿಗೆ ಮೊಬೈಲ್ ನಿಂದ ಹೊಡೆದು, ಅವಾಚ್ಯವಾಗಿ ಬೈದು ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ಕಿರುಕುಳ ನೀಡಿ ಬಲವಂತವಾಗಿ ಹಣ ಮತ್ತು ಒಡವೆಯನ್ನು ಕಿತ್ತುಕೊಂಡು ಕೊಲೆ ಬೆದರಿಕೆ ಹಾಕಿ, ವರದಕ್ಷಿಣೆ ತರುವಂತೆ ಕಿರುಕುಳ ನೀಡಿದ್ದು, ಇಲ್ಲಿಯವರೆಗೆ ನ್ಯಾಯಪಂಚಾಯಿತಿ ಮಾಡಿಸಲು ಇದ್ದು, ಈ ದಿನ ತಡವಾಗಿ ದೂರು ನೀಡಿದ ಮೇರೆಗೆ ತುತರ್ು ಅಪರಾಧ ವರದಿ ದಾಖಲಿಸಲಾಗಿದೆ. 


2. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 95/13 ಕಲಂ. 498[ಎ]. 323 ಕೂಡ 34 ಐ.ಪಿ.ಸಿ.

ದಿನಾಂಕ: 09-03-2013 ರಂದು ಪಿರ್ಯಾದುದಾರ ಶ್ರೀ ವೆಂಕಟೇಶ್. ಪಿ.ಎಸ್..ಐ. ಪಾಂಡವಪುರ ಠಾಣೆ ರವರು ನೀಡಿದ ದೂರು ಏನೆಂದರೆ ಆರೋಪಿ ನಂಜಾಮಣಿ ಕೋಂ. ಶಿವಮೂತರ್ಿ, ಹೊನ್ನೇನಹಳ್ಳಿ ಗ್ರಾಮ ರವರು ನೀಡಿದ ಪಿರ್ಯಾದ ಏನೆಂದರೆ ಅವರ ಗಂಡ ಶಿವಮೂರ್ತಿ, ಅತ್ತೆ ಮಹದೇವಮ್ಮ, ಮಾವ ನಿಂಗಪ್ಪ ಹೊನ್ನೇನಹಳ್ಳಿ ಗ್ರಾಮ ರವರುಗಳು ಎಲ್ಲರೂ ಸೇರಿ ನನ್ನ ತಾಯಿಯನ್ನು ನಮ್ಮ ಮನೆಗೆ ಏಕೆ ಬಂದಿದ್ದೀಯಾ ಎಂದು ಜಗಳ ತೆಗೆದು ಕೈಯಿಂದ ಹೊಡೆಯುತ್ತಿದ್ದಾಗ ನಾನು ಬಿಡಿಸಲು ಹೋದಾಗ ನನ್ನ ಎಡಕಿವಿಗೆ ರಕ್ತಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುತ್ತೇನೆ. ಮೇಲ್ಕಂಡ ಆರೋಪಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರು.


ಯು.ಡಿ.ಆರ್. ಪ್ರಕರಣ :

ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 06/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 09-03-2013 ರಂದು ಪಿರ್ಯಾದಿ ಸವಿತಾ ಕೋಂ ಸಿದ್ದಪ್ಪಾಜಿ, 35ವರ್ಷ. ಒಕ್ಕಲಿಗರು, ಮನೆಕೆಲಸ, ತಮ್ಮಡಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 03-03-2013 ರಂದು ರಾತ್ರಿ 11.30. ಗಂಟೆಯ ಸಮಯದಲ್ಲಿ ತಮ್ಮಢಹಳ್ಳಿ ಗ್ರಾಮದ ಪಿರ್ಯಾದಿಯವರ ಮನೆಯ ಬಳಿ ಬೊಮ್ಮೇಗೌಡ @ ಬೊಮ್ಮಯ್ಯ ಬಿನ್. ಲೇಟ್. ತಮ್ಮೇಗೌಡ, 60 ವರ್ಷ, ಒಕ್ಕಲಿಗರು ತಮ್ಮಡಹಳ್ಳಿ ಗ್ರಾಮ ರವರು ಯಾವುದೋ ವಿಷಸೇವನೆ ಮಾಡಿ ಚಿಕಿತ್ಸೆ ಗಾಗಿ ಮಳವಳ್ಳಿ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಲ್ಲಾ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ: 09-03-2013 ರಂದು ಬೆಳಿಗ್ಗೆ 09.15 ಗಂಟೆಯ ಸಮಯದಲ್ಲಿ ಮೃತ ಪಟ್ಟಿರುವುದಾಗಿ ಪಿರ್ಯಾದು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಮನುಷ್ಯ ಕಾಣೆಯಾದ ಪ್ರಕರಣಗಳು :

1.ಮಂಡ್ಯ ಪಶ್ಚಿಮ ಠಾಣೆ ಪೊಲೀಸ್ ಠಾಣೆ ಮೊ.ನಂ. 60/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

       ದಿನಾಂಕ: 09-03-2013 ರಂದು ಪಿರ್ಯಾದುದಾರ ಕೆ.ಸಿ.ರಾಮು, ಕಾಳೇನಹಳ್ಳಿ ಗ್ರಾಮ, ಮಂಡ್ಯ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ತಮ್ಮ ಮಗ ಕೆ.ಆರ್.ಮಂಜುನಾಥ ಬಿನ್. ಸಿಟಿ, ಸ್ವಂತಸ್ಥಳ ಕಾಳೇನಹಳ್ಳಿ ರವರು ವಾಪಸ್ ಮೈಸೂರಿನ ತಮ್ಮ ಮನೆಗೆ ಹೋಗದೆ ಕಾಣೆಯಾಗಿರುತ್ತಾನೆ. ಇದುವರೆಗೂ ಎಲ್ಲಾ ಕಡೆ ತಮ್ಮ ಸಂಬಂಧಿಕರ ಮತ್ತು ಸ್ನೇಹಿತರುಗಳ ಮನೆಗಳಲ್ಲಿ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಆದ್ದರಿಂದ ಕಾಣೆಯಾಗಿರುವ ತಮ್ಮ ಮಗ ಕೆ.ಆರ್.ಮಂಜುನಾಥನನ್ನು ಪತ್ತೆ ಮಾಡಿಕೊಡಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  


2. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 96/13 ಕಲಂ. ಹುಡುಗಿ ಕಾಣೆಯಾಗಿರುತ್ತಾಳೆ.  

       ದಿನಾಂಕ: 09-03-2013 ರಂದು ಪಿರ್ಯಾದುದಾರ ಪ್ರಸನ್ನ ಬಿನ್ ಮೊಗಣ್ಣಾಚಾರಿ, ಕಪರನಕೊಪ್ಪಲು ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಅವರ ಮಗಳು ಹೇಮಾವತಿ.ಎಂ ಬಿನ್ ಮೊಗಣ್ಣಾಚಾರಿ, 18 ವರ್ಷ, ಕಪರನಕೊಪ್ಪಲು ಗ್ರಾಮ ರವರು ಪಾಂಡವಪುರ ವಿಜಯಾ ಕಾಲೇಜಿಗೆ ಹೋಗಿದ್ದು, ಸಾಯಂಕಾಲವಾದರೂ ಸಹ ಮನೆಗೆ ವಾಪಾಸ್ ಬಾರದೇ  ಕಾಣೆಯಾಗಿರುತ್ತಾಳೆ. ಈ ಬಗ್ಗೆ ಸಂಜಯ್ ಎಂಬುವವನ ಮೇಲೆ   ಅನುಮಾನ ಇರುತ್ತೆ. ಕಾಣೆಯಾಗಿರುವ ನನ್ನ ಅಕ್ಕನನ್ನು  ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಠಾಣಾ ಮೊ.ನಂ: 96/2013 ಕಲಂ: ಹುಡುಗಿ ಕಾಣೆಯಾಗಿದ್ದಾಳೆ ರೀತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ. 


ಅಕ್ರಮ ಮದ್ಯ ಮಾರಾಟ ಪ್ರಕರಣಗಳು :


1. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 93/13 ಕಲಂ. 32-34 ಕೆ.ಇ.ಆಕ್ಟ್.

       ದಿನಾಂಕ: 09-03-2013 ರಂದು ಪಿರ್ಯಾದುದಾರ ಶ್ರೀ ವೆಂಕಟೇಶ್. ಪಿ.ಎಸ್..ಐ. ಪಾಂಡವಪುರ ಠಾಣೆ ರವರು ನೀಡಿದ ದೂರು ಏನೆಂದರೆ ಆರೋಪಿ ರಾಮೇಗೌಡ ಬಿನ್. ದೇವೇಗೌಡ, ಕೆರೆತಣ್ಣೂರು ಗ್ರಾಮ ರವರು ನಡೆಸುತ್ತಿದ್ದ ಅಂಗಡಿಯ ಮೇಲೆ ದಾಳಿ ಮಾಡಿ ಅಕ್ರಮವಾಗಿ ಮಾರುತ್ತಿದ್ದ ಸುಮಾರು 850 ರೂ. ಮೌಲ್ಯದ ವಿವಿಧ ಮಾದರಿಯ ಮಧ್ಯದ ಬಾಟಲ್ ಗಳನ್ನು ವಶಪಡಿಸಿಕೊಂಡು ಅವರ ಮೇಲೆ ಪ್ರಕರಣ ದಾಖಲಿಸಿರುತ್ತೆ.


2. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 89/13 ಕಲಂ. 15ಎ 32(3) ಕೆ.ಇ.ಆಕ್ಟ್.

ದಿನಾಂಕ: 09-03-2013 ರಂದು ಪಿರ್ಯಾದಿ ಎನ್.ಸಿ. ನಾಗೇಗೌಡ, ಸಿ.ಪಿ.ಐ ಮಂಡ್ಯ ಗ್ರಾಮಾಂತರ ವೃತ್ತ ರವರು ನೀಡಿದ ದೂರು ಏನೆಂದರೆ ಆರೋಪಿ ಸಿದ್ದರಾಜು ಬಿನ್. ಕೆ.ಕರೀಗೌಡ, 38 ವರ್ಷ, ಒಕ್ಕಲಿಗರು, ಪೆಟ್ಟಿಗೆ ಅಂಗಡಿ ವ್ಯಾಪಾರಿ, ಗೋಪಾಲಕಪುರ ಗ್ರಾಮ, ಕಸಬಾ ಹೊ.: ಮಂಡ್ಯ ತಾ. ರವರು ನೀಡಿದ ದೂರಿನ ವಿವರವೇನೆಂದರೆ ಗೋಪಾಲಪುರ ಗ್ರಾಮದ ಕೆ.ಕರೀಗೌಡ ರವರ ಮಗ ಸಿದ್ದರಾಜು ತಮ್ಮ ಪೆಟ್ಟಿಗೆ ಅಂಗಡಿಯಲ್ಲಿ ಬಜ್ಜಿ ಬೋಂಡಾ, ಹಾಮ್ಲೆಟ್ ಗಳನ್ನು ತಯಾರಿಸಿ ಸಾರ್ವಜನಿಕ ಸ್ಥಳದಲ್ಲಿ ಗಿರಾಕಿಗಳಿಗೆ ನೀಡಿ ಗಿರಾಕಿಗಳು ತಮ್ಮ ಜೊತೆ ತಂದಿರುವ ಮದ್ಯವನ್ನು ಸೇವನೆ ಮಾಡಲು ಸ್ಥಳವಕಾಶ ಮಾಡಿಕೊಟ್ಟಿರುತ್ತಾನೆಂದು ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ , 1] 180 ಎಂ.ಎಲ್.ನ. ಓಲ್ಡ್ ತವರನ್ ವಿಸ್ಕಿಯ 4 ಟೆಟ್ರಾ ಪ್ಯಾಕೇಟ್ ಗಳನ್ನು ಮತ್ತು  8 ಖಾಲಿ ಪ್ಯಾಕೇಟ್ ಗಳು, 4 ಪ್ಲಾಸ್ಟಿಕ್ ಲೋಟಗಳನ್ನು ಸ್ಥಳದಲ್ಲಿ ಪಂಚರ ಸಮಕ್ಷಮ ಅಮಾನತ್ತುಪಡಿಸಿಕೊಂಡಿರುತ್ತೆ.


3. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 94/13 ಕಲಂ. 32-34 ಕೆ.ಇ.ಆಕ್ಟ್.

ದಿನಾಂಕ: 09-03-2013 ರಂದು ಪಿರ್ಯಾದುದಾರ ಶ್ರೀ ವೆಂಕಟೇಶ್. ಪಿ.ಎಸ್..ಐ. ಪಾಂಡವಪುರ ಠಾಣೆ ರವರು ನೀಡಿದ ದೂರು ಏನೆಂದರೆ ಆರೋಪಿ ರವಿ ಬಿನ್ ದೊಡ್ಡಚನ್ನೇಗೌಡ, ಕೆರೆತಣ್ಣೂರು ಗ್ರಾಮ ರವರು ನಡೆಸುತ್ತಿದ್ದ ಅಂಗಡಿಯ ಮೇಲೆ ದಾಳಿ ಮಾಡಿ ಅಕ್ರಮವಾಗಿ ಮಾರುತ್ತಿದ್ದ ಸುಮಾರು 750 ರೂ. ಮೌಲ್ಯದ ವಿವಿಧ ಮಾದರಿಯ ಮಧ್ಯದ ಬಾಟಲ್ ಗಳನ್ನು ವಶಪಡಿಸಿಕೊಂಡು ವರ ಮೇಲೆ ಪ್ರಕರಣ ದಾಖಲಿಸಿರುತ್ತೆ.


4. ಕಿಕ್ಕೇರಿ ಪೊಲೀಸ್ ಠಾಣೆ ಮೊ.ನಂ. 47/13 ಕಲಂ. 34 ಕೆ.ಇ ಕಾಯ್ದೆ.

ದಿನಾಂಕ: 09-03-2013 ರಂದು ಪಿರ್ಯಾದುದಾರ ಬಿ.ಎಸ್. ಶಿವರುದ್ರ. ಪಿ.ಎಸ್.ಐ. ಕಿಕ್ಕೇರಿ ಪೊಲೀಸ್ ಠಾಣೆ ರವರು ನೀಡಿದ ದೂರು ಏನೆಂದರೆ ಆರೋಪಿ ಜಗದೀಶ ಬಿನ್. ಯಲ್ಲಯ್ಯ, 34 ವರ್ಷ, ಪರಿಶಿಷ್ಟ ಜನಾಂಗ, ತೇಗನಹಳ್ಳಿ ಗ್ರಾಮ ರವರು ಅವರ ತೋಟದಲ್ಲಿರುವ ಪಂಪ್ ಸೆಟ್ ಮನೆಯಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮಧ್ಯದ ಬಾಟಲ್ ಗಳನ್ನು  ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾನೆಂದು ಬಂದ ಮಾಹಿತಿ ಮೇರೆಗೆ ದಾಳಿ ನಡೆಸಿ ಪ್ರಕರಣ ದಾಖಲಿಸಲಾಗಿದೆ. 


5. ಬಸರಾಳು ಪೊಲೀಸ್ ಠಾಣೆ ಮೊ.ನಂ. 20/13 ಕಲಂ. 15ಎ 32(3) ಕೆ.ಇ.ಆಕ್ಟ್.

ದಿನಾಂಕ: 09-03-2013 ರಂದು ಪಿರ್ಯಾದುದಾರ ಕೆ.ಎನ್. ಹರೀಶ್. ಪಿ.ಎಸ್.ಐ. ಬಸರಾಳು  ಪೋಲೀಸ್ ಠಾಣೆ ರವರು ನೀಡಿದ ದೂರು ಏನೆಂದರೆ ಆರೋಪಿ ಲಿಂಗೇಗೌಡ ಬಿನ್. ಲೇಟ್. ಕೆಂಚೇಗೌಡ, ದೊಡ್ಡಗರುಡನಹಳ್ಳ ಗ್ರಾಮ, ಮಂಡ್ಯ ತಾಲ್ಲೂಕು ರವರು ನೀಡಿದ ದೂರಿನ ಸಾರಾಂಶವೇನೆಂದರೆ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಸ್ಥಳಾವಕಾಶ ಮಾಡಿಕೊಟ್ಟ ಬಗ್ಗೆ ಪ್ರಶ್ನಿಸಲಾಗಿ ಈ ಸಂಬಂದ ಯಾವುದೇ ಅಧಿಕೃತ ಪರವಾನಗಿ ಪಡೆದಿರುವುದಿಲ್ಲ ಎಂದು ತಿಳಿಸಿರುತ್ತಾನೆ. ಆದ್ದರಿಂದ ಆರೋಪಿಯ ಮೇಲೆ ಸ್ವಯಂ ವರದಿ ತಯಾರಿಸಿ ಪ್ರಕರಣ ದಾಖಲಿಸಿರುತ್ತೆ,


6. ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 51/13 ಕಲಂ. 32-34 ಕೆ.ಇ.ಆಕ್ಟ್.

ದಿನಾಂಕ: 09-03-2013 ರಂದು ಪಿರ್ಯಾದಿ ಆರ್.ಸಿದ್ದರಾಜು, ಪಿ.ಎಸ್.ಐ. ಶಿವಳ್ಳಿ ಪೊಲೀಸ್ ಠಾಣೆ ರವರು ನೀಡಿದ ದೂರು ಏನೆಂದರೆ ಆರೋಪಿ ಚಿಕ್ಕತಮ್ಮೇಗೌಡ ಚಿಕ್ಕಗಂಗವಾಡಿ ಗ್ರಾಮ ದುದ್ದ ಹೋಬಳಿ ಮಂಡ್ಯ; ತಾಃ ರವರ ಮನೆಯ ಮೇಲೆ ದಾಳಿ ಮಾಡಲಾಗಿ ಅಂದಾಜು ಬೆಲೆ 1650 ರೂ.ನ 180 ಎಂ.ಎಲ್.ನ 32,  8 ಪಿ.ಎಂ. ಮದ್ಯದ ಪ್ಯಾಕೇಟ್ ಗಳನ್ನು ವಶಕ್ಕೆ ತೆಗೆದುಕೊಂಡಿದ್ದು, ಆರೋಪಿ ಸ್ಥಳದಿಂದ ಕಣ್ಮರೆಯಾಗಿದ್ದು, ಹುಡುಕಲಾಗಿ ಪತ್ತೆಯಾಗಿರುವುದಿಲ್ಲವೆಂದು ಠಾಣೆಗೆ ಬಂದು ಕ್ರಮ ಜರುಗಿಸಬೇಕೆಂದು ನೀಡಿದ ವರದಿ ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.


ಕಳ್ಳತನ ಪ್ರಕರಣ :

ಕೆ.ಆರ್. ಸಾಗರ ಪೊಲೀಸ್ ಠಾಣೆ ಮೊ.ನಂ. 39/13 ಕಲಂ. 354-357-380 ಐ.ಪಿ.ಸಿ.

     ದಿನಾಂಕ: 09-03-2013 ರಂದು ಪಿರ್ಯಾದಿ ಎಂ ಕೃಷ್ಣಮೂತರ್ಿ, ಬೆಳಗೊಳ ಗ್ರಾಮ ರವರು ನೀಡಿದ ದೂರು ಏನೆಂದರೆ ಯಾರೋ ಕಳ್ಳರು, ಹೆಸರು ವಿಳಾಸ ಗೊತ್ತಿಲ್ಲ. ಮನೆಯ ಮುಂಬಾಗದ ಚಿಲಕವನ್ನು ಮುರಿದು ಕಳ್ಳತನ ಮಾಡಿರುತ್ತಾರೆಂದು ತಿಳಿಸಿದ ಮೇರೆಗೆ ಬಂದು ನೋಡಲಾಗಿ ಮನೆಯ ಒಳಗೆ ಇದ್ದ ಅಲಮೇರ ಒಡೆದು ಅದರಲ್ಲಿ ಇದ್ದ ಚಿನ್ನದ ಒಡವೆಗಳು, ವಾಚ್, ಬೆಳ್ಳಿ ಒಡವೆಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಇವುಗಳ ಒಟ್ಟು ಬೆಲೆ ಸುಮಾರು 40 ರಿಂದ 45 ಸಾವಿರ ರೂಗಳಾಗಿರುತ್ತವೆಂದು ಪತ್ತೆ ಮಾಡಿಕೊಡಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

No comments:

Post a Comment