ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 03-04-2013 ರಂದು ಒಟ್ಟು 57 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 1 ಅಪಹರಣ ಪ್ರಕರಣ, 1 ಮನುಷ್ಯ ಕಾಣೆಯಾದ ಪ್ರಕರಣ, 1 ವಾಹನ ಕಳವು ಪ್ರಕರಣ, 3 ಯು.ಡಿ.ಆರ್. ಪ್ರಕರಣಗಳು, 1 ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ, 2 ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣಗಳು, 1 ಅಬಕಾರಿ ನಿಷೇಧ ಕಾಯಿದೆ ಪ್ರಕರಣ ಹಾಗು 47 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.
ಅಪಹರಣ ಪ್ರಕರಣ :
ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 56/13 ಕಲಂ. 366 (ಎ)-506 ರೆ/ವಿ 149 ಐ.ಪಿ.ಸಿ.
ದಿನಾಂಕ: 03-04-2013 ರಂದು ಪಿರ್ಯಾದಿ ಲಕ್ಷ್ಮಮ್ಮ, ದಡಮುಡಿಕೆ ಗ್ರಾಮ, ದೇವಲಾಪುರ ಹೋಬಳಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ ದೇವರಾಜ್ ಇತರೆ 7 ಜನರು, ತೊಳಸಿಕೊಂಬರಿ ಕಾಲೋನಿ, ಬಡಬಾರೆ ಗ್ರಾಮ ರವರುಗಳು ದಿನಾಂಕ: 31/03/2013ರ ಸಂಜೆ 05-30 ಗಂಟೆಯಲ್ಲಿ ಪಿರ್ಯಾದಿಯವರ ಮಗಳನ್ನು ಆರೋಪಿತರುಗಳು ಅಪಹರಣ ಮಾಡಿ, ಕೊಲೆ ಬೆದರಿಕೆ ಹಾಕಿರುತ್ತಾರೆಂದು ಇವರುಗಳ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ :
ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 117/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.
ದಿನಾಂಕ: 03-04-2013 ರಂದು ಪಿರ್ಯಾದಿ ಕುಮಾರ್, ಡೋರ್ ನಂ, 1498, ವಿವೇಕಾನಂದ ರಸ್ತೆ, ಅಶೋಕನಗರ, ಮಂಡ್ಯ ಸಿಟಿ ರವರು ನೀಡಿದ ದೂರು ಏನೆಂದರೆ 17 ವರ್ಷದ, 2 ನೇ ಪಿ.ಯು.ಸಿ. ವಿದ್ಯಾರ್ಥಿನಿಯು ದಿನಾಂಕ: 02-04-13 ರಂದು 06-30ಗಂಟೆಯಲ್ಲಿ ಮಂಡ್ಯ ಸಿಟಿ. ಅಶೋಕನಗರ, 7 ನೇ ಕ್ರಾಸ್, ನಂ.-1498 ಪಿರ್ಯಾದಿರವರ ಮನೆಯಿಂದ ಯಾರಿಗೂ ಹೇಳದೆ ಕೇಳದೆ ಹೋಗಿರುತ್ತಾಳೆ ಅವಳನ್ನು ಹುಡುಕಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ವಾಹನ ಕಳವು ಪ್ರಕರಣ :
ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 57/13 ಕಲಂ. 379 ಐ.ಪಿ.ಸಿ.
ದಿನಾಂಕ: 03-04-2013 ರಂದು ಪಿರ್ಯಾದಿ ಜಯರಾಮೇಗೌಡ, 55ವರ್ಷ, ವಕ್ಕಲಿಗರು, ಮಲ್ಲೇಗೌಡನಹಳ್ಳಿ ಗ್ರಾಮ ರವರುಗಳು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 25-03-2013 ರಂದು ಯಾರೋ ಕಳ್ಳರು ಪಿರ್ಯಾದಿಯವರ ಬಾಬ್ತು ಕೆ.ಎ.-54/1153ರ ಗೂಡ್ಸ್ ಆಪೇ ಆಟೋವನ್ನು ಕಳವು ಮಾಡಿರುತ್ತಾರೆ ಪತ್ತೆಮಾಡಿಕೊಡಿ ಎಂದು ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಯು.ಡಿ.ಆರ್. ಪ್ರಕರಣಗಳು :
1. ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 03/13 ಕಲಂ. 174 ಸಿ.ಅರ್.ಪಿ.ಸಿ.
ದಿನಾಂಕ: 03-04-2013 ರಂದು ಪಿರ್ಯಾದಿ ಶಿವಣ್ಣ, ಬೇವುಕಲ್ಲು ಗ್ರಾಮ ರವರು ನೀಡಿದ ದೂರು ಏನೆಂದರೆ ಅವರ ಹೆಂಡತಿ ಕನ್ಯಾಕುಮಾರಿ ಕೋಂ ಶಿವಣ್ಣ, 45 ವರ್ಷ, ಬೇವುಕಲ್ಲು ಗ್ರಾಮ ರವರು ಪಟಾಕಿಯ ಶಬ್ದಕ್ಕೆ ಆಕಸ್ಮಿಕವಾಗಿ ಕುಸಿದುಬಿದ್ದು ಹೆಬ್ಬಾಗಿಲ ಚಪ್ಪಡಿ ಕಲ್ಲು ತಲೆಗೆ ಬಡಿದು ರಕ್ತಸ್ರಾವವಾಗಿ ಸತ್ತು ಹೋಗಿರುತ್ತಾಳೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಬಸರಾಳು ಪೊಲೀಸ್ ಠಾಣೆ ಯು.ಡಿ.ಆರ್. ನಂ. 01/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 03-04-2013 ರಂದು ಪಿರ್ಯಾದಿ ರಾಜು, 35ವರ್ಷ, ವ್ಯವಸಾಯ, ಚಾಕನಹಳ್ಳಿ ಗ್ರಾಮರವರು ನೀಡಿದ ದೂರು ಅವರ ತಾಯಿ ಹಾಗು ತಂಗಿ ಭಾಗ್ಯಮ್ಮ ರವರುಗಳು ಮೃತ ಪಟ್ಟಿರುವುದರಿಂದ ಮನನೊಂದು ಹಾಗೂ ಕೆಲವು ಕೈ ಸಾಲಗಳನ್ನು ಮಾಡಿದ್ದು ಅದನ್ನು ತೀರಿಸಲಾಗದೇ ಜಯಮ್ಮ65ವರ್ಷ, ಗೊಲ್ಲ ಜನಾಂಗ, ಚಾಕನಹಳ್ಳಿ ಗ್ರಾಮರವರು ದಿನಾಂಕ: 02-04-2013 ರಂದು ನೇಣು ಹಾಕಿಕೊಂಡು ಮೃತ ಪಟ್ಟಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
3. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಯು.ಡಿ.ಆರ್. ನಂ. 07/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ:03-04-2013 ರಂದು ಪಿರ್ಯಾದಿ ಕೆ.ಎನ್.ಬಾಲು, 31 ವರ್ಷ, ಒಕ್ಕಲಿಗರು, ಆಟೋಚಾಲಕ, ಕೊಡಗಹಳ್ಳಿ ಗ್ರಾಮ, ಬನ್ನೂರು ತಾ. ರವರು ನೀಡಿದ ದೂರು ಏನೆಂದರೆ ಶಿವಣ್ಣ ಬಿನ್ ನಾಗಣ್ಣ, 34 ವರ್ಷ, ಒಕ್ಕಲಿಗರು, ಹುಲ್ಲು ವ್ಯಾಪಾರ, ವಾಸ ಕೊಡಗಹಳ್ಳಿಗ್ರಾಮ ರವರಿಗೆ ಬಹುಶಃ ಎದೆ ನೋವು ಕಾಣಿಸಿಕೊಂಡು ಅಥವಾ ಬೇರೆನೊ ತೊಂದರೆಯಿಂದಾಗಿ ವಾಹನವನ್ನು ರಸ್ತೆಯ ಬಲಭಾಗದ ಕಡೆಗೆ ಓಡಿಸಿಕೊಂಡು ಬಂದು ನಿಲ್ಲಿಸಿದ ಬಳಿಕ ಸತ್ತಿರುವಂತೆ ಕಂಡುಬರುತ್ತದೆ. ಈ ಬಗ್ಗೆ ತಾವು ಸ್ಥಳಕ್ಕೆ ಬಂದು ಕಾನೂನು ರೀತ್ಯ ಕ್ರಮ ಜರುಗಿಸಿ ಎಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ ಪ್ರಕರಣ :
ಹಲಗೂರು ಪೊಲೀಸ್ ಠಾಣೆ ಮೊ.ನಂ. 58/13 ಕಲಂ. 143, 341, 354, 323, 149 ಐಪಿಸಿ ಕೂಡ 3 ಕ್ಲಾಸ್. (1) (10) (11) ಎಸ್.ಸಿ./ಎಸ್.ಟಿ. ದೌರ್ಜನ್ಯ ತಡೆ ಕಾಯಿದೆ 1989.
ದಿನಾಂಕ: 03-04-2013 ರಂದು ಪಿರ್ಯಾದಿ ಕೆಂಪರಾಜು, ಹುಸ್ಕೂರು ಗ್ರಾಮ, ಮಳವಳ್ಳಿ ತಾ. ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ ನಿಂಗರಾಜು ಇತರೆ 6 ಜನ, ಎಲ್ಲರೂ ಹುಸ್ಕೂರು ಗ್ರಾಮ ರವರುಗಳು ಅಕ್ರಮವಾಗಿ ಗುಂಪುಕಟ್ಟಿಕೊಂಡು ಪಿರ್ಯಾದಿರವರನ್ನು ಅಡ್ಡಗಟ್ಟಿ ನೀನು ಜಾತ್ರೆಗೆ ಹೋಗಲು ವಕ್ಕಲಿಗ ಜನಾಂಗದವರ ಜೊತೆ ಹೋಗಬೇಕ ಎಂದು ಜಗಳ ತೆಗೆದು ಅವಾಚ್ಯವಾಗಿ ಬೈದು ಪಿರ್ಯಾದಿಗೆ ಹಲ್ಲೆ ಮಾಡುತ್ತಿದ್ದಾಗ ಅವರ ತಾಯಿ ಕೇಳಲು ಬಂದರೆ ಅವರನ್ನು ಬೈದು ರವಿಕೆ ಹರಿದು ಅವಮಾನಗೊಳಿಸಿ ಜಾತಿ ನಿಂದನೆ ಮಾಡಿರುತ್ತಾರೆ ಆರೋಪಿಗಳ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಮಹಿಳಾ ದೌರ್ಜನ್ಯ/ವರದಕ್ಷಿಣೆ ಕಿರುಕುಳ ಪ್ರಕರಣಗಳು :
1. ಬೆಸಗರಹಳ್ಳಿ ಪೊಲೀಸ್ ಠಾಣೆ ಮೊ.ನಂ. 35/13 ಕಲಂ. 498(ಎ)-506 ಐ.ಪಿ.ಸಿ.
ದಿನಾಂಕ: 03-04-2013 ರಂದು ಪಿರ್ಯಾದಿ ಭಾಗ್ಯಮ್ಮ 41 ವರ್ಷ, ಆದಿ ಕರ್ನಾಟಕ, ಗೃಹಿಣಿ, ಕೋಣಸಾಲೆ ಗ್ರಾಮ, ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿ ಅವರ ಗಂಡ ಉಮೇಶ, ಶಿವಪುರ ಕಾಲೋನಿ, ಬಸರಾಳು ಗ್ರಾಮ ರವರು ಪಿರ್ಯಾದಿಗೆ ಮಾನಸಿಕವಾಗಿ ದೈಹಿಕವಾಗಿ ಹಿಂಸೆ ನೀಡಿ ಪ್ರಾಣ ಬೆದರಿಕೆ ಹಾಕಿರುತ್ತಾನೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಬಸರಾಳು ಪೊಲೀಸ್ ಠಾಣೆ ಮೊ.ನಂ. 48/13 ಕಲಂ. 498(ಎ), 324 ಐಪಿಸಿ ಮತ್ತು 3 & 4 ಡಿ.ಪಿ. ಆಕ್ಟ್.
ದಿನಾಂಕ: 03-04-2013 ರಂದು ಪಿರ್ಯಾದಿ ಗೀತಾ 21 ವರ್ಷ, ಪರಿಶಿಷ್ಟ ಜನಾಂಗ, ಮನೆಕೆಲಸ, ದೊಡ್ಡಗರುಡನಹಳ್ಳಿ ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಅವರ ಗಂಡ ವಿಶ್ವ ಹಾಗು 2]ಜೋಗಯ್ಯ, 3] ಸಿದ್ದಮ್ಮ, 3] ಮೋಹನ, 4] ರೇಣುಕಾ, 4]ಶಿವಣ್ಣ ಹಾಗು 5] ಶಿಲ್ಪಾ ಪರಿಶಿಷ್ಟ ಜನಾಂಗ, ದೊಡ್ಡಗರುಡನಹಳ್ಳಿ ಗ್ರಾಮ ರವರುಗಳು ಪಿರ್ಯಾದಿಯವರಿಗೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಊಟ, ಬಟ್ಟೆ ನೀಡದೆ ಬೈಯ್ಯುವುದು ಮಾಡುತ್ತಿದ್ದ. ಕೈಯಿಂದ ಮೈಮೇಲೆ ಹೊಡೆದು ನೋವುಂಟು ಮಾಡಿ ನಿನ್ನ ತಂದೆಯ ಮನೆಯಿಂದ ನೀನು 50,000/- ರೂ ವರದಕ್ಷಿಣೆ ತರುವವರೆಗೂ ಮನೆಗೆ ಬರಬೇಡ ಎಂದು ಹೊರಗೆ ನೂಕಿದ ಈತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಅಬಕಾರಿ ನಿಷೇಧ ಕಾಯಿದೆ ಪ್ರಕರಣ :
ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 103/13 ಕಲಂ. 32, 34 ಕೆ.ಇ. ಆಕ್ಟ್, 29[1], 29[2], 31, 35 ಕೆ.ಎಂ. ಆಕ್ಟ್-1964, 168, 171[ಸಿ], 511 ಐ.ಪಿ.ಸಿ.
ದಿನಾಂಕ: 03-04-2013 ರಂದು ಪಿರ್ಯಾದಿ ವಿಶ್ವರೂಪ, ಅಬಕಾರಿ ಜಂಟಿ ಆಯುಕ್ತರು, [ಜಾರಿ ಮತ್ತು ತನಿಖೆ] ಮೈಸೂರು ವಿಭಾಗ, ಮೈಸೂರು ರವರು ನೀಡಿದ ಪಿರ್ಯಾದಿನ ಸಾರಾಂಶವೇನೆಂದರೆ ಆರೋಪಿ ಜೆ.ಎನ್.ಸೋಮೇಶ್ವರ್ ಹಿಂದಿನ ಅಬಕಾರಿ ಉಪ ಆಯುಕ್ತರು, ಜಿಲ್ಲಾ ಅಬಕಾರಿ ಉಪ ಆಯುಕ್ತರ ಕಛೇರಿ, ಮಂಡ್ಯ ರವರು ಮಂಡ್ಯ ಜಿಲ್ಲೆಯಲ್ಲಿ ಅಬಕಾರಿ ಉಪ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಇತ್ತೀಚೆಗೆ ನಡೆದ ನಗರಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದ ದಿನಗಳಲ್ಲಿ ವಿವಿಧ ರಾಜಕೀಯ ಪಕ್ಷಗಳಿಗೆ ಮದ್ಯವನ್ನು ವಿತರಿಸುವ ದುರುದ್ದೇಶದಿಂದ ಪ್ರತಿ ಮದ್ಯ ಮಾರಾಟಗಾರರಿಂದ 2-3 ಪೆಟ್ಟಿಗೆಗಳಷ್ಟು ಮದ್ಯವನ್ನು ಸಂಗ್ರಹಿಸಿರುತ್ತಾರೆಂದು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿರುವುದರಿಂದ ಆರೋಪಿಯ ವಿರುದ್ಧ ದೂರು ನೀಡಿದು ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment