ದಿನಾಂಕ: 04-04-2013 ರಂದು ಒಟ್ಟು 42 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಮನುಷ್ಯ ಕಾಣೆಯಾದ ಪ್ರಕರಣಗಳು, 3 ಕಳ್ಳತನ ಪ್ರಕರಣಗಳು, 1 ರಾಬರಿ ಪ್ರಕರಣ ಹಾಗು 36 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.
ಮನುಷ್ಯ ಕಾಣೆಯಾದ ಪ್ರಕರಣಗಳು :
1. ನಾಗಮಂಗಲ ಪಟ್ಟಣ ಪೊಲೀಸ್ ಠಾಣೆ ಮೊ.ನಂ. 65/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.
ದಿನಾಂಕ: 04-04-2013 ರಂದು ಪಿರ್ಯಾದಿ ನವಾಜ್ ಖಾನ್ ಬಿನ್. ಹೈದರಾಲಿಖಾನ್, 24 ವರ್ಷ, ರಹಮತ್ ನಗರ, ನಾಗಮಂಗಲ ರವರು ನೀಡಿದ ದೂರು ಏನೆಂದರೆ ಫಿರ್ಯಾದಿಯವರ 2 ನೇ ಅಣ್ಣ ಶಾಭಾಸ್ ಖಾನ್ 26 ವರ್ಷ, ಬುದ್ದಿಮಾಂದ್ಯನಾಗಿದ್ದು ದಿನಾಂಕ: 01-04-2013 ರಂದು ಫಿರ್ಯಾದಿಯವರ ಮನೆಯಲ್ಲಿದ್ದಾಗ ಹೇಳದೇ ಕೇಳದೆ ಮನೆಯಿಂದ ಹೊರಟು ಹೋಗಿರುತ್ತಾನೆ, ವಾಪಾಸ್ ಮನೆಗೆ ಬಂದಿರುವುದಿಲ್ಲ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 208/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.
ದಿನಾಂಕ: 04-04-2013 ರಂದು ಪಿರ್ಯಾದಿ ನಿಂಗಮ್ಮ ಕೋಂ. ತಿಮ್ಮಪ್ಪ, ರಂಗನಾಥ ನಗರ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 28-02-13 ರಂದು ಮದ್ಯಾಹ್ನ 12-00 ಗಂಟೆಯಲ್ಲಿ ರಂಗನಾಥ ನಗರದಿಂದ ತಿಮ್ಮಪ್ಪ ಬಿನ್. ಸಣ್ಣಯ್ಯ ರವರು ಮನೆಯಿಂದ 6000/- ರೂ. ಹಣ ಮತ್ತು ಡಿ.ಎಲ್. ತೆಗೆದುಕೊಂಡು ಹೋದವರು ವಾಪಸ್ ಮನೆಗೆ ಬಂದಿರುವುದಿಲ್ಲಾ ಅವರನ್ನು ಪತ್ತೆಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಕಳ್ಳತನ ಪ್ರಕರಣಗಳು :
1. ಕೆರೆಗೋಡು ಪೊಲೀಸ್ ಠಾಣೆ ಮೊ.ನಂ. 48/13 ಕಲಂ. 457-380 ಐ.ಪಿ.ಸಿ.
ದಿನಾಂಕ: 04-04-2013 ರಂದು ಪಿರ್ಯಾದಿ ಕೃಷ್ಣಮೂರ್ತಿ, ಮುಖ್ಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಗುಡಿಗೇನಹಳ್ಳಿ ರವರು ನೀಡಿದ ದೂರು ಏನೆಂದರೆ ದಿನಾಂಕ: 03-04-2013 ರ ರಾತ್ರಿ ಯಾರೋ ಕಳ್ಳರು ಪಾಠಶಾಲೆಯ ಮುಖ್ಯ ಕಛೇರಿಯ ಬಾಗಿಲ ಬೀಗ ಹೊಡೆದು ಒಳಗೆ ಹೋಗಿ ಕೊಠಡಿಯಲ್ಲಿದ್ದ ಶಾಲೆಯ ಬಿಸಿಯೂಟದ 02 ಭಾರತ್ ಗ್ಯಾಸ್ ಸಿಲಿಂಡರ್ ಗಳನ್ನು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅವುಗಳನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಬಸರಾಳು ಪೊಲೀಸ್ ಠಾಣೆ ಮೊ.ನಂ. 50/13 ಕಲಂ. 457, 380 ಐ.ಪಿ.ಸಿ.
ದಿನಾಂಕ: 04-04-2013 ರಂದು ಪಿರ್ಯಾದಿ ಎಂ.ಜಿ.ಮಂಜುಳ, ಮುಖ್ಯಶಿಕ್ಷಕರು, ಸರ್ಕಾರಿ ಹಿರಿಯ ಪಾಠಶಾಲೆ, ಉತ್ತರವಲಯ, ದೊಡ್ಡಗರುಡನಹಳ್ಳಿ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 03-04-2013 ರಂದು ರಾತ್ರಿ ವೇಳೆಯಲ್ಲಿ ಶಾಲೆಯ ಅಡಿಗೆ ಮನೆಯಲ್ಲಿ ಇಟ್ಟಿದ್ದ ಒಂದು ಭಾರತ್ ಗ್ಯಾಸ್ ಸಿಲೆಂಡರ್ಅನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
3. ಕೆ.ಎಂ.ದೊಡ್ಡಿ ಪೊಲೀಸ್ ಠಾಣೆ ಮೊ.ನಂ. 97/13 ಕಲಂ. 457-380 ಐ.ಪಿ.ಸಿ.
ದಿನಾಂಕ: 04-04-2013 ರಂದು ಪಿರ್ಯಾದಿ ಟಿ. ವೆಂಕಟ ರಾಮು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಎಸ್.ಐ. ಹೊನ್ನಲಗೆರೆ ಗ್ರಾಮ ರವರು ನೀಡಿದ ದೂರು ಏನೆಂದರೆ ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಶಾಲೆಯ ಬೀಗ ಹೊಡೆದು ಎರಡು ಸಿಲಿಂಡರ್ ಮತ್ತು ಒಂದು ಮಿಕ್ಸಿ ಕಳ್ಳತನ ಮಾಡಿರುತ್ತಾರೆ ಅವುಗಳನ್ನು ಪತ್ತೆಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ರಾಬರಿ ಪ್ರಕರಣಗಳು :
ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 67/13 ಕಲಂ. 392 ಐ.ಪಿ.ಸಿ.
ದಿನಾಂಕ: 04-04-2013 ರಂದು ಪಿರ್ಯಾದಿ ರೇಖಾ ಕೋಂ ಪುಟ್ಟಬುದ್ದಿ, 28ವರ್ಷ, ಲಿಂಗಾಯ್ತರು, ಮನೆಕೆಲಸ, ರಾಗಿಬೊಮ್ಮನಹಳ್ಳಿ, ಕಸಬಾ ಹೋಬಳಿ, ಮಳವಳ್ಳಿ ತಾ|| ರವರು ನೀಡಿದ ದೂರು ಏನೆಂದರೆ ದಿನಾಂಕ: 04-04-2013 ರಂದು ಪಿರ್ಯಾದಿಯವರು ತನ್ನ ಗಂಡನಿಗೆ ಪ್ಲಾಸ್ಕ್ನಲ್ಲಿ ಟೀ ತೆಗೆದುಕೊಂಡು ಜಮೀನಿಗೆ ಹೋಗುತ್ತಿದ್ದಾಗ ಯಾರೋ ಇಬ್ಬರು ಅಪರಿಚಿತ ಆಸಾಮಿಗಳು ಪಿರ್ಯಾದಿಯವರ ಕತ್ತಿನಲ್ಲಿದ್ದ ಮಾಂಗಲ್ಯದ ಸಮೇತ ಇದ್ದ 50 ಗ್ರಾಂ ತೂಕದ ಚಿನ್ನದ ಎರಡು ಎಳೆ ಚೈನು, ಎರಡು ಲಕ್ಮಿಕಾಸು, ಎರಡು ಗುಂಡು ಒಟ್ಟು 60 ಗ್ರಾಂ ತೂಕದ ಚೈನನ್ನು ಕಿತ್ತುಕೊಂಡು ಹೊರಟು ಹೋಗಿರುವುದಾಗಿ ಪಿರ್ಯಾದು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment