Moving text

Mandya District Police

DAILY CRIME REPORT DATED : 05-04-2013



ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 05-04-2013 ರಂದು ಒಟ್ಟು 38 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ವಾಹನ ಕಳವು ಪ್ರಕರಣಗಳು,  2 ಮನುಷ್ಯ ಕಾಣೆಯಾದ ಪ್ರಕರಣಗಳು,  1 ಯು.ಡಿ.ಆರ್. ಪ್ರಕರಣ ಹಾಗು 33 ಇತರೆ ಪ್ರಕರಣಗಳು ವರದಿಯಾಗಿರುತ್ತವೆ. 

ವಾಹನ ಕಳವು ಪ್ರಕರಣಗಳು :

1. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 131/13 ಕಲಂ. 379 ಐ.ಪಿ.ಸಿ.

ದಿನಾಂಕ: 05-04-2013 ರಂದು ಪಿರ್ಯಾದಿ ಪ್ರಸನ್ನ ಕೆ.ಬಿನ್. ತಾವರೆಗೆರೆ. ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರು ದಿನಾಂಕ: 04-04-2013 ರಂದು ಬೆಳಿಗ್ಗೆ 11-30 12-00 ಕಾಳಿಕಾಂಭ ದೇವಸ್ಥಾನದ ಆವರಣದಲ್ಲಿ ಅವರ ಬಾಬ್ತು ಮೋಟಾರ್ ಸೈಕಲ್ ನ್ನು ನಿಲ್ಲಿಸಿದ್ದು ಪೂಜೆ ಮುಗಿಸಿ ವಾಪಸ್ ಬಂದು ನೊಡಲಾಗಿ ತಮ್ಮ ಬೈಕ್ ಇರಲಿಲ್ಲ ಎಲ್ಲಾ ಕಡೆ ಹುಡುಕಾಡಲಾಗಿ ಪತ್ತೆಯಾಘಿರುವುದಿಲ್ಲ ಕಳವಾಗಿರುವ ಬೈಕನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಕೇಸು ದಾಖಲಿಸಿರುತ್ತೆ.


2. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 139/13 ಕಲಂ. 379 ಐ.ಪಿ.ಸಿ.

ದಿನಾಂಕ: 05-04-2013 ರಂದು ಪಿರ್ಯಾದಿ ಸಿ.ಎನ್. ಉಮೇಶ ಬಿನ್. ಎನ್. ನಾಗರಾಜಪ್ಪ, ಚಿಕ್ಕಮಲಗೂಡು ಗ್ರಾಮ ರವರು ದಿನಾಂಕ: 01-04-2013 ರಂದು ಅವರ ಬಾಬ್ತು ಮೊಟಾರ್ ಸೈಕಲ್ ನ್ನು ದೇವಸ್ಥಾನದ ಬಳಿ ನಿಲ್ಲಿಸಿ ಊಟ ಮಾಡಿಕೊಂಡು ಬಂದು ನೋಡಿದಾಗ ಮೋಟಾರ್ ಸೈಕಲ್ ನಿಲ್ಲಿಸಿದ್ದ ಸ್ಥಳದಲ್ಲಿ ಇರಲಿಲ್ಲ ಅಕ್ಕಪಕ್ಕ ನೋಡಲಾಗಿ ಪತ್ತೆಯಾಗಿರುವುದಿಲ್ಲ, ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು  ಹೋಗಿದ್ದು ಪತ್ತೆ ಮಾಡಿಕೊಡುವಂತೆ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


ಮನುಷ್ಯ ಕಾಣೆಯಾದ ಪ್ರಕರಣಗಳು :

1. ಅರಕೆರೆ ಪೊಲೀಸ್ ಠಾಣೆ ಮೊ.ನಂ. 105/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.

ದಿನಾಂಕ: 05-04-2013 ರಂದು ಪಿರ್ಯಾದಿ ಬಿ.ಜೆ ಜವರಯ್ಯ ಬಿನ್. ಲೇಟ್. ಜವನದಾಸಯ್ಯ, 47 ವರ್ಷ, ಬೊಂತಗಹಳ್ಳಿ ಗ್ರಾಮ ರವರು ನೀಡಿದ ದೂರು ಏನೆಂದರೆ ದಿನಾಂಕ: 04-04-2013  ರಂದು ಫಿರ್ಯಾದಿಯವರ ಗಾಮ ಬೊಂತಗಹಳ್ಳಿಯಿಂದ ಫಿರ್ಯಾದಿಯವರ 1ನೇ ಮಗಳಾದ ಜೆ. ಅನುಷಾ, 2ನೇ ಮಗಳಾದ ಜೆ. ನಮಿತಾ, ಮಗ ಪ್ರಸಾದ್ ಇದ್ದು, ಮಧ್ಯಾಹ್ನ 12-30 ಗಂಟೆಗೆ ಮಿಲ್ನಿಂದ ವಾಪಸ್ಸು ಬಂದು ನೋಡಿದಾಗ 1ನೇ ಮಗಳಾದ ಜೆ. ಅನುಷಾ ಇರಲಿಲ್ಲ. ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ. 


2. ಪಾಂಡವಪುರ ಪೊಲೀಸ್ ಠಾಣೆ ಮೊ.ನಂ. 143/13 ಕಲಂ. ಮನುಷ್ಯ ಕಾಣೆಯಾಗಿದ್ದಾನೆ.

ದಿನಾಂಕ: 05-04-2013 ರಂದು ಪಿರ್ಯಾದಿ ಗೀತಾ ಕೊಂ. ರಾಯ್ಡು.ಬಿ.ಎಸ್. ಬನಘಟ್ಟ ಗ್ರಾಮ ರವರು ನೀಡಿದ ದೂರು ಏನೆಂದರೆ ದಿನಾಂಕ: 01-04-2013 ರಂದು ಅವರ ಗಂಡ ರಾಯ್ಡು.ಬಿ.ಎಸ್. ಬನಘಟ್ಟ ಗ್ರಾಮರವರು ಕಾಣೆಯಾಗಿರುತ್ತಾರೆ ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.  



ಯು.ಡಿ.ಆರ್. ಪ್ರಕರಣ :

ಪಾಂಡವಪುರ ಪೊಲೀಸ್ ಠಾಣೆ ಯು.ಡಿ.ಆರ್. ನಂ. 12/13 ಕಲಂ. 174 ಸಿ.ಆರ್.ಪಿ.ಸಿ.

ದಿನಾಂಕ: 05-04-2013 ರಂದು ಪಿರ್ಯಾದಿ ಶಿವಕುಮಾರ, ಹೀರೇಮರಳ್ಳಿ ಗ್ರಾಮ, ಪಾಂಡವಪುರ ತಾ. ರವರು ನೀಡಿದ ದೂರಿನ ವಿವರವೇನೆಂದರೆ ಶ್ವೇತಾ ರಾಣಿ, ಪಾಂಡವಪುರ ಟೌನ್ ರವರಿಗೆ ದಿನಾಂಕ: 05-04-2013 ರಂದು ಮನೆಯಲ್ಲಿ ಆಕಸ್ಮಿಕವಾಗಿ ಸೀಮೆಎಣ್ಣೆ ಸುರಿದು ಬೆಂಕಿಹೊತ್ತಿಕೊಂಡು ಮೃತಪಟ್ಟಿರುತ್ತಾಳೆ ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

No comments:

Post a Comment