ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 06-04-2013 ರಂದು ಒಟ್ಟು 58 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 2 ಕಳ್ಳತನ ಪ್ರಕರಣಗಳು, 2 ರಸ್ತೆ ಅಪಘಾತ ಪ್ರಕರಣಗಳು, 3 ಕಳವು ಪ್ರಕರಣಗಳು, 1 ಮನುಷ್ಯ ಕಾಣೆಯಾದ ಪ್ರಕರಣ, 1 ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ಪ್ರಕರಣ, 1 ಯು.ಡಿ.ಆರ್. ಪ್ರಕರಣ ಹಾಗು 48 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.
ಕಳ್ಳತನ ಪ್ರಕರಣಗಳು :
1. ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 83/13 ಕಲಂ. 457-380 ಐ.ಪಿ.ಸಿ.
ದಿನಾಂಕ: 06-04-2013 ರಂದು ಪಿರ್ಯಾದಿ ಬಿ.ಶ್ರೀಕಂಠಮೂರ್ತಿ, ಮುಖ್ಯ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಮಾದೇಗೌಡನಕೊಪ್ಪಲು ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಕಳ್ಳರು ಗೊತ್ತಿಲ್ಲಾ ಅಕ್ಷರ ದಾಸೋಹಕ್ಕೆ ಇಟ್ಟಿದ್ದ 03 ಭಾರತ್ ಗ್ಯಾಸ್ ಸಿಲಿಂಡರ್ ಗಳು ಹಾಗೂ ಒಂದು ದೊಡ್ಡ ಸ್ಟೌವ್ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಇವುಗಳನ್ನು ಪತ್ತೆಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಶಿವಳ್ಳಿ ಪೊಲೀಸ್ ಠಾಣೆ ಮೊ.ನಂ. 84/13 ಕಲಂ. 457-380 ಐ.ಪಿ.ಸಿ.
ದಿನಾಂಕ: 06-04-2013 ರಂದು ಪಿರ್ಯಾದಿ ವೈ.ಎನ್ ಕಮಲಮ್ಮ, ಅಂಗನವಾಡಿ ಕಾರ್ಯಕರ್ತೆ, ಮಾದೇಗೌಡನಕೊಪ್ಪಲು ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಯಾರೋ ಕಳ್ಳರು ಎರಡು ಬಾರತ್ಗ್ಯಾಸ್ ಸಿಲಿಂಡರ್ ಮತ್ತು ಒಂದು ಸ್ಟೌವ್, ಒಂದು ಅಲ್ಯೋಮಿನಿಯಂನ ದೊಡ್ಡ ದಬರಿ, ಮತ್ತು ಮುಚ್ಚಳ, ಒಂದು ಮೂಟೆ 50 ಕೆ.ಜಿ ಅಕ್ಕಿ, 25 ಕೆ.ಜಿ ಗೋದಿ, ಮತ್ತು 05 ಲೀಟರ್ ಎಣ್ಣೆ, 2 ಕೆಜಿ ಬೇಳೆ, ಸಾಂಬಾರ್ ಪೌಡರ್ 02 ಕೆ.ಜಿ, 22 ಕೆ.ಜಿ. ತೂಕದ ಬೆಲ್ಲದ ಬಾಕ್ಸ್ ಕಳುವು ಮಾಡಿಕೊಂಡು ಹೋಗಿರುತ್ತಾರೆ ಇವುಗಳನ್ನು ಪತ್ತೆಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ರಸ್ತೆ ಅಪಘಾತ ಪ್ರಕರಣಗಳು :
1. ಕಿರುಗಾವಲು ಪೊಲೀಸ್ ಠಾಣೆ ಮೊ.ನಂ. 42/13 ಕಲಂ. 279, 304(ಎ) ಐ.ಪಿ.ಸಿ.
ದಿನಾಂಕ: 06-04-2013 ರಂದು ಪಿರ್ಯಾದಿ ನಂಜಯ್ಯ, ಚನ್ನಪಿಳ್ಳೆಕೊಪ್ಪಲು ಗ್ರಾಮ ರವರು ನೀಡಿದ ದೂರಿನ ವಿವರವೇನೆಂದರೆ ಆರೋಪಿ ಟ್ರಾಕ್ಟರ್ ನಂ ಕೆ.ಎ.11-ಟಿ-3219, ಟ್ರೇಲರ್ ಕೆ.ಎ.11-ಟಿ-3220ರ ಚಾಲಕ, ಹೆಸರು ಮತ್ತು ವಿಳಾಸ ತಿಳಿಯಬೇಕಾಗಿರುತ್ತದೆ ಟ್ರಾಕ್ಟರ್ ಚಾಲಕನ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಂಡು ಮೃತನ ಕುಟುಂಬಕ್ಕೆ ನ್ಯಾಯಕೊಡಿಸಿಕೊಡಬೇಕೆಂದು ಕೋರಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 65/13 ಕಲಂ. 279-337-304(ಎ) ಐ.ಪಿ.ಸಿ.
ದಿನಾಂಕ: 06-04-2013 ರಂದು ಪಿರ್ಯಾದಿ ರಮೇಶ್ ಗೌಡ ರವರು ನೀಡಿದ ಪಿರ್ಯಾದು ಏನೆಂದರೆ ದಿನಾಂಕ: 6-4-2013 ರಂದು ಕೋಟೆಬೆಟ್ಟ ಗ್ರಾಮದ ಕಂಬದ ನರಸಿಂಹಸ್ವಾಮಿ ದೇವಸ್ಥಾನ ರಸ್ತೆಯಲ್ಲಿ ಆರೋಪಿ ಶಿವಣ್ಣ, ಕಎ.-54 -2747 ಆಟೋಚಾಲಕ ರವರು ತನ್ನ ಆಟೋವನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ್ದರ ಪರಿಣಾಮ ಆಟೋ ಉರುಳಿಬಿದ್ದು ಪ್ರಯಾಣಿಸುತ್ತಿದ್ದ ಪಾಪಣ್ಣ ಎಂಬುವರು ಮೃತಪಟ್ಟಿರುವುದಾಗಿ ದೂರು ನೀಡಿದ್ದು ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.
ಕಳವು ಪ್ರಕರಣಗಳು :
1. ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 214/13 ಕಲಂ. 379 ಐ.ಪಿ.ಸಿ.
ದಿನಾಂಕ: 06-04-2013 ರಂದು ಪಿರ್ಯಾದಿ ಎಚ್.ಶಶಿಕಲಾ, 30 ವರ್ಷ, ಎಂ.ಶೆಟ್ಟಹಳ್ಳಿ ಗ್ರಾಮ, ಶ್ರೀರಂಗಪಟ್ಟಣ ತಾಲ್ಲೋಕು ರವರು ನೀಡಿದ ದೂರು ಏನೆಂದರೆ ಪಿರ್ಯಾದಿಯವರು ಬಸ್ಸಿಗೆ ಹತ್ತುವಾಗ ಯಾರೋ ಕಳ್ಳರು ನನ್ನ ಬ್ಯಾಗ್ನ ಜಿಪ್ ತೆರೆದು 71 ಸಾವಿರ ರೂಗಳನ್ನು ಕಳ್ಳತನ ಮಾಡಿರುತ್ತಾರೆ ಅವರನ್ನು ಪತ್ತೆಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಮಳವಳ್ಳಿ ಪುರ ಪೊಲೀಸ್ ಠಾಣೆ ಮೊ.ನಂ. 93/13 ಕಲಂ. 379 ಐ.ಪಿ.ಸಿ.
ದಿನಾಂಕ: 06-04-2013ರಂದು ಪಿರ್ಯಾದಿ ಎಂ ಮಹದೇವಯ್ಯ, ಎ.ಎಸ್.ಐ. ಪುರ ಠಾಣೆರವರು ನೀಡಿದ ದೂರು ಏನೆಂದರೆ ಯಾರೋ ಕಳ್ಳರು ಹಿರೋಹೊಂಡ ಮೋಟಾರ್ ಸೈಕಲ್ ನ್ನು ಕಳ್ಳತನ ಮಾಡಿರುತ್ತಾರೆ ಅದನ್ನು ಪತ್ತೆಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
3. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 101/13 ಕಲಂ. 379-323-341-324-506 ಕೂಡ 34 ಐ.ಪಿ.ಸಿ.
ದಿನಾಂಕ: 06-04-2013ರಂದು ಪಿರ್ಯಾದಿ ರಾಮಕೃಷ್ಣ, ಚಟ್ಟಂಗೆರೆ ಗ್ರಾಮ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಆರೋಪಿಗಳಾದ 1] ಲೋಕೇಶ, 2] ನಾರಾಯಣ 3]ಮಂಜುಳಮ್ಮ ಮತ್ತು 4] ಆಶಾ ಎಲ್ಲರು ಚಟ್ಟಂಗೆರೆ ಗ್ರಾಮ ರವರುಗಳು ಸೇರಿಕೊಂಡು ಕೆಳಕ್ಕೆ ಕೆಡವಿ ಕಾಲಿನಿಂದ ಒದ್ದು, ಈ ಬೋಳಿಮಗನನ್ನು ಇಲ್ಲೆ ಸಾಯಿಸಿ ಬಿಡಿ ಎಂದು ಹೊಡೆದರು. ನೀನು ಮನೆ ಹತ್ತಿರ ಬಾ ನಿನ್ನನ್ನು ಕೊಲೆ ಮಾಡುತ್ತೇನೆಂದು ಪ್ರಾಣ ಬೆದರಿಕೆ ಹಾಕಿರುತ್ತಾರೆ ಆರೋಪಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣ :
ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 115/13 ಕಲಂ. ಹುಡುಗಿ ಕಾಣೆಯಾಗಿದ್ದಾಳೆ.
ದಿನಾಂಕ: 06-04-2013ರಂದು ಪಿರ್ಯಾದಿ ಮಹದೇವು, 40 ವರ್ಷ, ಮಂಡ್ಯ ಸಿಟಿ ರವರು ನೀಡಿದ ದೂರು ಏನೆಂದರೆ ಅವರ 16 ವರ್ಷದ ಮಗಳು, ಎಸ್ಎಸ್ಎಲ್ಸಿ ವಿದ್ಯಾರ್ಥಿನಿ, ದಿನಾಂಕ: 03-04-2013 ರಿಂದ ಕಾಣೆಯಾಗಿರುತ್ತಾಳೆ ಅವಳನ್ನು ಪತ್ತೆ ಮಾಡಿಕೊಡಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆ ಪ್ರಕರಣ :
ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 87/13 ಕಲಂ.ಕೆ.ಎಂ.ಎಂ.ಸಿ.ಆರ್. 1994, ನಿಯಮ 3, 42 ಮತ್ತು 44 ಹಾಗು ಎಂ.ಎಂ.ಆರ್.ಡಿ4.(1ಎ) ಮತ್ತು 21(1-5) ಕಾಯ್ದೆ 1957ಕೂಡ 379 ಐ.ಪಿ.ಸಿ.
ದಿನಾಂಕ: 06-04-2013ರಂದು ಪಿರ್ಯಾದಿ ಪಿ.ಎಸ್. ನವೀನ್, ಭೂ ವಿಜ್ಞಾನಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಮಂಡ್ಯ ರವರು ನೀಡಿದ ದೂರು ಏನೆಂದರೆ ಆರೋಪಿ ಟ್ರಾಕ್ಟರ್ ಚಾಲಕ (ಮಾಲಿಕರು ಹೆಸರು, ಟ್ರಾಕ್ಟರ್ ನಂಬರ್ ತಿಳಿಯ ಬೇಕು. ಇಂಜೆನ್ ನಂಬರ್ ಟಿ-77010020) ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮ ಮರಳು ಗಣಿಗಾರಿಕೆ ಮತ್ತು ಸಾಗಾಣಿಕೆಯಲ್ಲಿ ತೊಡಗಿದ್ದ ಟ್ರಾಕ್ಟರನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ತಂದು ಹಾಜರ್ಪಡಿಸಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಯು.ಡಿ.ಆರ್. ಪ್ರಕರಣ :
ಮಳವಳ್ಳಿ ಗ್ರಾಮಾಂತರ ಠಾಣೆ ಮೊ.ನಂ. 09/13 ಕಲಂ. 174(ಸಿ) ಸಿ.ಆರ್.ಪಿ.ಸಿ.
ದಿನಾಂಕ: 06-04-2013ರಂದು ಪಿರ್ಯಾದಿ ವಿನೋದ್ 23 ವರ್ಷ, ವಿದ್ಯಾರ್ಥಿನಿ , ಕೀರ್ತಿ ನಗರ ಬಡಾವಣೆ, ಮಳವಳ್ಳಿ ಟೌನ್ ರವರು ನೀಡಿದ ದೂರು ಏನೆಂದರೆ ದಿನಾಂಕ:02-04-2013 ರಂದು ಬೆಳಿಗ್ಗೆ 06-30 ಗಂಟೆ ಸಮಯದಲ್ಲಿ, ಕೀತರ್ಿನಗರ ಬಡಾವಣೆ, ಮಳವಳ್ಳಿ ಟೌನ್ ನಲ್ಲಿ ಪಿರ್ಯಾದಿಯವರ ತಂದೆ ಮೃತರಾಗಿದ್ದು ಅವರ ಸಾವಿನ ಬಗ್ಗೆ ಸಂಶಯವಿರುತ್ತದೆ ಮುಂದಿನ ಕ್ರಮ ಜರುಗಿಸಿ ಎಂದು ಇತ್ಯಾದಿಯಾಗಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
No comments:
Post a Comment