ಮಂಡ್ಯ ಜಿಲ್ಲೆಯಲ್ಲಿ ದಿನಾಂಕ: 07-04-2013 ರಂದು ಒಟ್ಟು 41 ಪ್ರಕರಣಗಳು ದಾಖಲಾಗಿದ್ದು ಅವುಗಳಲ್ಲಿ 3 ರಾಬರಿ ಪ್ರಕರಣಗಳು, 1 ರಾತ್ರಿ ಕಳ್ಳತನ ಪ್ರಕರಣ, 2 ಮನುಷ್ಯ ಕಾಣೆಯಾದ ಪ್ರಕರಣಗಳು, 4 ಯು.ಡಿ.ಆರ್. ಪ್ರಕರಣಗಳು, 1 ವರದಕ್ಷಿಣೆ ಸಾವಿನ ಪ್ರಕರಣ, 1 ಚುನಾವಣಾ ಅಕ್ರಮ ಪ್ರಕರಣ, 2 ವಂಚನೆ ಪ್ರಕರಣಗಳು ಹಾಗು 27 ಇತರೆ ಪ್ರಕರಣಗಳು ವರದಿಯಾಗಿರುತ್ತವೆ.
ರಾಬರಿ ಪ್ರಕರಣಗಳು :
1. ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 126/13 ಕಲಂ. 392 ಐ.ಪಿ.ಸಿ.
ದಿನಾಂಕ: 07-04-20213 ರಂದು ಪಿರ್ಯಾದಿ ಮಹದೇವಮ್ಮ ಕೋಂ ಲಿಂಗಯ್ಯ, 60 ವರ್ಷ, ವಕ್ಕಲಿಗರು ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 07-04-2013 ರಂದು ಎಸ್ಬಿಎಂ ಬ್ಯಾಂಕ್ ರಸ್ತೆ ಪಕ್ಕದಲ್ಲಿ, ಬಂದೀಗೌಡ ಬಡಾವಣೆ ಬಳಿ ಪಿರ್ಯಾದಿಯವರು ನಿಂತಿದ್ದು, ಇದಕ್ಕಿದಂತೆ ಒಬ್ಬ 20-22 ರ ವಯಸ್ಸಿನ ಒಬ್ಬ ಅಪರಿಚಿತ ವ್ಯಕ್ತಿ ಏಕಾಏಕಿ ತನ್ನ ಬಳಿಗೆ ಬಂದು ಕಣ್ಣಿಗೆ ಮತ್ತು ಮುಖಕ್ಕೆ ಕಾರದಪುಡಿ ಎರಚಿ ತನ್ನ ಕುತ್ತಿಗೆಯಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಳ್ಳುವ ಉದ್ದೇಶದಿಂದ ಕೈ ಹಾಕಿದಾಗ ತಾನು ತನ್ನ ಎರಡು ಕೈಗಳಿಂದ ಬಲವಾಗಿ ಮಾಂಗಲ್ಯ ಸರವನ್ನು ಹಿಡಿದುಕೊಂಡಾಗ ಆತ ನನ್ನನ್ನು ರಸ್ತೆಯಲ್ಲಿ ಕೆಳಕ್ಕೆ ಕೆಡವಿ ಬಿಟ್ಟವನೆ ಮುಂದೆ ಎರಡು ಮೂರು ಹೆಜ್ಜೆ ಮುಂದೆ ಹೋಗಿ ವಾಪಸ್ ಬಂದವನೆ ಮತ್ತೆ ಕುತ್ತಿಗೆಗೆ ಕೈ ಹಾಕಿ ಬಲವಂತವಾಗಿ ಮಾಂಗಲ್ಯ ಸರವನ್ನು ಕಿತ್ತುಕೊಂಡು ರೈಲ್ವೆ ಹಳಿ ಕಡೆಗಾದಂತೆ ಹೊರಟು ಹೋಗಿದ್ದು ಸದರಿ ಮಾಂಗಲ್ಯ ಸರವು 50 ಗ್ರಾಂ ತೂಕವಿದ್ದು ಸುಮಾರು 1,50,000/-ರೂಪಾಯಿ ಬೆಲೆ ಬಾಳುತ್ತದೆ. ಈ ಬಗ್ಗೆ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 103/13 ಕಲಂ. 143-147-504-323-324-354-307-392 ಕೂಡ 149 ಐ.ಪಿ.ಸಿ.
ದಿನಾಂಕ: 07-04-2013 ರಂದು ಪಿರ್ಯಾದಿ ಇಂದ್ರಮ್ಮ ಕೋಂ. ರಾಜೇಗೌಡ, 3ನೇ ಕ್ರಾಸ್, ಹಲಸೂರು, ಬೆಂಗಳೂರು ರವರು ನೀಡಿದ ದೂರು ಏನೆಂದರೆ ಆರೋಪಿ ದೇವರಾಜು ಬಿನ್. ಶಿವೇಗೌಡ ಮತ್ತು ಇತರೆ 10 ಜನ ಎಲ್ಲರೂ ಚಿಕ್ಕಹೊಸಹಳ್ಳಿ ಗ್ರಾಮ, ಕೆ.ಆರ್.ಪೇಟೆ ತಾ|| ರವರುಗಳು ಈ ಜಮೀನು ನಮ್ಮದು ಎಂದು ಗಲಾಟೆ ತಗೆದು ಏಕೆ ಉಳುಮೆ ಮಾಡಲು ಬಂದಿದ್ದೀರಿ ಎಂದು ಕೈಯಲ್ಲಿ ದೊಣ್ಣೆಗಳನ್ನು ಹಿಡಿದುಕೊಂಡು ಬಂದು ಪಿರ್ಯಾದಿ ಮತ್ತು ಪಿರ್ಯಾದಿ ಮಗಳು ಮಂಜುಳ ಪಿರ್ಯಾದಿ ಗಂಡ ರಾಜೇಗೌಡ ರವರುಗಳಿಗೆ ಕೈಯಿಂದ ಮತ್ತು ದೊಣ್ಣೆಯಿಂದ ಮಾರಾಣಾಂತಿಕ ಹೆಲ್ಲೆ ಮಾಡಿ ಪಿಯರ್ಾದಿಯನ್ನು ಎಳೆದಾಡಿ ಪಿರ್ಯಾದಿ ಕತ್ತಿನಲ್ಲಿದ್ದ 50 ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡಿರುತ್ತಾರೆ ನಮಗೆ ಮಾರಣಾಂತಿಕ ಹಲ್ಲೆ ಮಾಡಿರುವವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಿ ಎಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
3. ಕೆ.ಆರ್. ಪೇಟೆ ಟೌನ್ ಪೊಲೀಸ್ ಠಾಣೆ ಮೊ.ನಂ. 104/13 ಕಲಂ. 143-147-504-323-324-354-307-392 ಕೂಡ 149 ಐ.ಪಿ.ಸಿ.
ದಿನಾಂಕ: 07-04-2013 ರಂದು ಪಿರ್ಯಾದಿ ದೇವೇಗೌಡ ಬಿನ್. ಕೆಂಪೇಗೌಡ, ಚಿಕ್ಕಹೊಸಹಳ್ಳಿ ಗ್ರಾಮ, ಕೆ.ಆರ್.ಪೇಟೆ ತಾ|| ರವರು ನೀಡಿದ ದೂರು ಏನೆಂದರೆ ಆರೋಪಿಗಳಾದ ರಾಜೇಗೌಡ ಬಿನ್. ದಾಸೇಗೌಡ, ಚಂದ್ರೇಗೌಡ ಮತ್ತು ಇತರೆ 10 ಜನ, ಚಿಕ್ಕಹೊಸಹಳ್ಳಿ ಗ್ರಾಮ, ಕೆ.ಆರ್.ಪೇಟೆ ತಾ|| ರವರುಗಳು ಪಿರ್ಯಾದಿಯವರ ಅಕ್ಕ ಅಕ್ಕ ಶಾಂತಮ್ಮಳ ಸೀರೆಯನ್ನು ಹಿಡಿದುಕೊಂಡು ಎಳೆದಾಡಿ ಕತ್ತಿನಲ್ಲಿದ್ದ 30 ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡು ಕಾಲಿನಿಂದ, ಕೈಯಿಂದ ಶಾಂತಮ್ಮಳಿಗೆ ಒದ್ದು ಮರಾಣಾಂತಿಕ ನೋವುಂಟು ಮಾಡಿದ್ದಾರೆ. ನಾಗೇಗೌಡ, ಶಶಿಕುಮಾರ್ ರತ್ನಮ್ಮನನ್ನು ಕೆಳಗೆ ಕೆಡವಿಕೊಂಡು ಕಾಲಿನಿಂದ ನಾಗೇಗೌಡ ಮರ್ಮಾಂಗಕ್ಕೆ ಒದ್ದು ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕಿತ್ತುಕೊಂಡಿರುತ್ತಾರೆ. ದೇವರಾಜು, ಪುನೀತ ಕೈಯಲ್ಲಿ ತಂದಿದ್ದ ಕಬ್ಬಿಣದ ರಾಡಿನಿಂದ ಯೋಗೇಶ, ದೇವರಾಜು, ಪ್ರಸನ್ನ ಹಾಗೂ ಸತೀಶನಿಗೆ ಓಡಾಡಿಸಿಕೊಂಡು ಕಬ್ಬಿಣದ ರಾಡಿನಿಂದ ಸಾಯಿಸಲು ಪ್ರಯತ್ನಿಸಿದರು ಗಲಾಟೆ ಬಿಡಿಸಲು ಹೋದ ನನಗೂ ಹಲ್ಲೆ ಮಾಡಿರುತ್ತಾರೆ ನಂತರ ಇವತ್ತಲ್ಲ ನಾಳೆ ಕೊಲೆ ಮಾಡದೆ ಬಿಡುವುದಿಲ್ಲ ಎಂದು ಹೆದರಿಸಿರುತ್ತಾರೆ ಸದರಿ ಆರೋಪಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ರಾತ್ರಿ ಕಳ್ಳತನ ಪ್ರಕರಣ :
ಮಂಡ್ಯ ಪಶ್ಚಿಮ ಪೊಲೀಸ್ ಠಾಣೆ ಮೊ.ನಂ. 127/13 ಕಲಂ. 457, 380 ಐ.ಪಿ.ಸಿ.
ದಿನಾಂಕ: 07-04-20213 ರಂದು ಪಿರ್ಯಾದಿ ಬಿ.ಟಿ.ಪ್ರಸನ್ನ ಬಿನ್. ಬಿ.ಎನ್.ತಿಮ್ಮೇಗೌಡ, 41 ವರ್ಷ, ವಕ್ಕಲಿಗರು, ಕಂಟ್ರಾಕ್ಟರ್ ಕೆಲಸ, ವಾಸ ಮನೆ ನಂ. ಕೆಟಿ 212, 1ನೇ ಕ್ರಾಸ್, ಮರೀಗೌಡ ಬಡಾವಣೆ, ಮಂಡ್ಯ ಸಿಟಿ ರವರು ನೀಡಿದ ದೂರು ಏನೆಂದರೆ ದಿನಾಂಕ: 06-04-2013 ರ ರಾತ್ರಿವೇಳೆಯಲ್ಲಿ ಅವರ ಮನೆ ನಂ. ಕೆಟಿ 212, 1ನೇ ಕ್ರಾಸ್, ಮರೀಗೌಡ ಬಡಾವಣೆ, ಮಂಡ್ಯದಲ್ಲಿ ಅವರ ಮನೆಯ ಬೀರುವಿನ ಬಾಗಿಲನ್ನು ಜಖಂಗೊಳಿಸಿ ತೆಗೆದು ಅದರಲ್ಲಿ ತನ್ನ ಪತ್ನಿ ಇಟ್ಟಿದ್ದ ಸುಮಾರು 60 ಗ್ರಾಂ ಚಿನ್ನದ ಆಭರಣಗಳನ್ನು ಮತ್ತು ನಗದು ಹಣ 4,000-00 ರೂ.ಗಳನ್ನು ಕಳವು ಮಾಡಿಕೊಂಡು ಷೋಕೇಸ್ ನಲ್ಲಿಟ್ಟಿದ್ದ ಮೇಲ್ಕಂಡ ತಮ್ಮ ಷಡಕನ ಕಾರಿನ ಕೀಯನ್ನು ತೆಗೆದುಕೊಂಡು ಸದರಿ ಕಾರನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಇವುಗಳ ಒಟ್ಟು ಬೆಲೆ ಸುಮಾರು 4,71,000-00 ರೂ.ಗಳಾಗಿರುತ್ತದೆ. ಪತ್ತೆ ಮಾಡಿ ಕಾನೂನು ರೀತ್ಯ ಕ್ರಮ ಜರುಗಿಸಬೇಕೆಂದು ಇತ್ಯಾದಿಯಾಗಿ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಮನುಷ್ಯ ಕಾಣೆಯಾದ ಪ್ರಕರಣಗಳು :
1. ಕೆರೆಗೋಡು ಪೊಲೀಸ್ ಠಾಣೆ ಮೊ.ನಂ. 50/13 ಕಲಂ. ಕಲಂ. ಹುಡುಗಿ ಕಾಣೆಯಾಗಿದ್ದಾಳೆ.
ದಿನಾಂಕ: 07-04-2013 ರಂದು ಪಿರ್ಯಾದಿ ಪುಟ್ಟಸ್ವಾಮಿ ಬಿನ್. ಮಜ್ಜಯ್ಯ, ಉಪ್ಪರಕನಹಳ್ಳಿ ಗ್ರಾಮ ರವರು ನೀಡಿದ ದೂರು ಏನೆಂದರೆ ದಿನಾಂಕಃ 06-04-2013 ರಂದು ಮಧ್ಯಾಹ್ನ 02-00 ಗಂಟೆ ವೇಳೆಯಲ್ಲಿ ಪಿರ್ಯಾದಿಯವ ಮಗಳು ಯು.ಪಿ. ಸುನಿತಾರವರ ಮನೆಯಿಂದ ಮೊಬೈಲ್ ಪೋನ್ನಲ್ಲಿ ಮಾತನಾಡಿಕೊಂಡು ಹೊರಕ್ಕೆ ಹೋದವರು ವಾಪಸ್ಸು ಮನೆಗೆ ಬಾರದೆ ಎಲ್ಲಿಯೋ ಕಾಣೆಯಾಗಿರುತ್ತಾಳೆಂದು ಇತ್ಯಾದಿಯಾಗಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ಮೊ.ನಂ. 147/13 ಕಲಂ. ಹೆಂಗಸು ಕಾಣೆಯಾಗಿದ್ದಾಳೆ.
ದಿನಾಂಕ: 07-04-2013 ರಂದು ಪಿರ್ಯಾದಿ ಕುಮಾರ್ ದಾಸ ಬಿನ್. ಲೇಟ್. ತಾತಾಚಾರ್, ಇಂಡುವಾಳು ಗ್ರಾಮ, ಮಂಡ್ಯ ತಾ. ರವರು ನೀಡಿದ ದೂರಿನ ವಿವರವೇನೆಂದರೆ ಪಿರ್ಯಾದಿಯವರ ಮಗಳು ಕೆ. ಶಾರದ ಕೋಂ. ಲಕ್ಷ್ಮಣಚಾರ್, 23 ವರ್ಷ ರವರು ದಿಃ-07-04-2013 ರಂದು ಬೆಳಿಗ್ಗೆ 05-30 ಗಂಟೆ ಸಮಯದಲ್ಲಿ ಮನೆಯಿಂದ ಎದ್ದು ಹೂರಟು ಹೋಗಿದ್ದು ನಾವು ನಮ್ಮ ಮಗಳನ್ನು ಅಕ್ಕಪಕ್ಕದ ಗ್ರಾಮಗಳಲ್ಲಿ ಆಕೆಯ ಗಂಡನ ಮನೆಯ ಕಡೆ ಹುಡುಕಿ ಪತ್ತೆಯಾಗದ ಕಾರಣ ನಮ್ಮ ಮಗಳನ್ನು ಪತ್ತೆ ಮಾಡಿಕೊಡುವಂತೆ ಕೊಟ್ಟ ದೂರಿನ ಮೇರೆಗೆ ಕೇಸು ದಾಖಲಿಸಲಾಗಿದೆ.
ಯು.ಡಿ.ಆರ್. ಪ್ರಕರಣಗಳು :
1. ಬಸರಾಳು ಪೊಲೀಸ್ ಠಾಣೆ ಯು.ಡಿ.ಆರ್. ನಂ. 02/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 07-04-2013 ರಂದು ಪಿರ್ಯಾದಿ ಶಂಕರೇಗೌಡ ಬಿನ್. ಸೂಗೇಗೌಡ, 51ವರ್ಷ, ಒಕ್ಕಲಿಗರು, ವ್ಯವಸಾಯ, ಮುತ್ತೇಗೆರೆ ಗ್ರಾಮ, ಬಸರಾಳು ಹೋಬಳಿ, ಮಂಡ್ಯ ತಾಲ್ಲೂಕು ರವರು ನೀಡಿದ ದೂರು ಏನೆಂದರೆ ಮಾಲಿಂಗೇಗೌಡ ಬಿನ್. ರಾಮೇಗೌಡ, 42 ವರ್ಷ ರವರಿಗೆ ಹೊಟ್ಟೆ ನೋವು ತಾಳಲಾರದೇ ವಿಷ ಸೇವನೆ ಮಾಡಿ ಚಿಕಿತ್ಸೆ ಫಲಕಾರಿಯಾಗದೆ ಮಂಡ್ಯ ಜಿಲ್ಲಾ ಆಸ್ವತ್ರೆಯಲ್ಲಿ ದಿನಾಂಕಃ- 07-04-2013 ರಂದು ಬೆಳಿಗ್ಗೆ 04:00 ಗಂಟೆಯಲ್ಲಿ ಮೃತಪಟ್ಟಿರುತ್ತಾರೆ. ಶವವು ಮಂಡ್ಯ ಜಿಲ್ಲಾ ಆಸ್ವತ್ರೆಯ ಶವಗಾರದಲ್ಲಿ ಇರುತ್ತೆ. ಸಾವಿನ ಬಗ್ಗೆ ಬೇರೆ ಯಾವುದೇ ಅನುಮಾನ ಇರುವುದಿಲ್ಲ. ಆದರು ಸಾವಿನ ನಿಜವಾದ ಕಾರಣ ತಿಳಿಯಲು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಮುಂದಿನ ಕ್ರಮ ಕೈಗೊಳ್ಳಬೇಕೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
2. ಬಸರಾಳು ಪೊಲೀಸ್ ಠಾಣೆ ಯು.ಡಿ.ಆರ್. ನಂ. 03/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 07-04-2013 ರಂದು ಪಿರ್ಯಾದಿ ಕೆ.ಎಂ.ರಾಜಣ್ಣ ಬಿನ್. ಮರಿಯಪ್ಪ, 45ವರ್ಷ, ಕುರುಬ ಜನಾಂಗ, ವ್ಯವಸಾಯ, ಕೊಡಗಹಳ್ಳಿ ಗ್ರಾಮ ರವರು ನೀಡಿದ ದೂರು ಏನೆಂದರೆ ಚಿಕ್ಕತಾಯಮ್ಮ ಕೋಂ ಲೇಟ್ ಮರಿಯಪ್ಪ, 58ವರ್ಷ ಎಂಬುವವರಿಗೆ ಯಾವುದೋ ವಿಷಕಾರಿ ಹಾವುಕಚ್ಚಿ ಮೃತಪಟ್ಟಿರುತ್ತಾರೆ. ಆವರ ಸಾವಿನ ನಿಜವಾದ ಕಾರಣ ತಿಳಿಯಲು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಕಾನೂನು ರೀತ್ಯಾ ಕ್ರಮ ಕೈಕೊಳ್ಳಬೇಕೆಂದು ಕೊಟ್ಟ ಲಿಖಿತ ದೂರಾಗಿರುತ್ತೆ ಇವರುಗಳ ಮೇಲೆ ಸೂಕ್ತ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಕೇಸು ದಾಖಲಿಸಲಾಗಿದೆ.
3. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 9/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 07-04-2013 ರಂದು ಪಿರ್ಯಾದಿ ಅತೀಕ್ ಬಿನ್. ಅಲೀಂ ಪಿರಾನ್ , 25 ವರ್ಷ, ಮುಸ್ಲಿಂ ಜನಾಂಗ, ಟಿ,ವಿ. ಮೆಕಾನಿಕ್ ವಾಸ: ನಂ, 476, 11 ನೇ ಕ್ರಾಸ್ ಸ್ವರ್ಣ ಸಂದ್ರ, ಮಂಡ್ಯ ಸಿಟಿ ರವರು ನೀಡಿದ ದೂರಿನ ವಿವರವೇನೆಂದರೆ ದಿನಾಂಕ: 07-04-2013 ರಂದು ಬೆಳಿಗ್ಗೆ ಸುಮಾರು 11 ಗಂಟೆಯ ಹಿಂದಿನ ಸಮಯದಲ್ಲಿ ನಂ. 31 ನಗರಸಭೆ ಮಳಿಗೆಯ ಬಳಿ ಒಬ್ಬ ಅಪರಿಚಿತ ಗಂಡು ಶವ ಸುಮಾರು 50 ವರ್ಷ, ಹೆಸರು ವಿಳಾಸ ತಿಳಿಯಬೇಕಾಗಿದೆ ಬಿದಿದ್ದು ಈತನು ಯಾವುದೋ ಸ್ವಾಭಾವಿಕ ಖಾಯಿಲೆಯಿಂದಲೋ ಅಥವಾ ಇನ್ನಾವುದೋ ಕಾರಣದಿಂದಲೋ ಮೃತ ಪಟ್ಟಂತೆ ಕಂಡು ಬಂದಿದ್ದು ಮುಂದಿನ ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
4. ಬೆಳ್ಳೂರು ಪೊಲೀಸ್ ಠಾಣೆ ಮೊ.ನಂ. 06/13 ಕಲಂ. 174 ಸಿ.ಆರ್.ಪಿ.ಸಿ.
ದಿನಾಂಕ: 07-04-20213 ರಂದು ಪಿರ್ಯಾದಿ ಬಸವರಾಜ್ ಎಂ. ಬಿನ್. ಲೇಟ್. ಹುಚ್ಚಪ್ಪ, 40ವರ್ಷ, ಬಸವನಕುಂಟೆ ವಠಾರ, ಸಿರುಗುಪ್ಪೆ ರಸ್ತೆ, ಬಳ್ಳಾರಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ: 06-04-2013 ರಾತ್ರಿ 10-20ಗಂಟೆಯಲ್ಲಿ ಆದಿಚುಂಚನಗಿರಿ ವಿದ್ಯಾರ್ಥಿ ನಿಲಯದ ಎ.ಸಿ. ಗಿರಿ ಬೆಳ್ಳೂರುನಲ್ಲಿ ಗಿರಿಧರ್, ಆದಿಚುಂಚನಗಿರಿಯ 10ನೇ ತರಗತಿ ವಿದ್ಯಾರ್ಥಿಗೆ ಎದೆನೋವು ಕಾಣಿಸಿಕೊಂಡಿದ್ದು ಚಿಕಿತ್ಸೆ ಕೊಡಿಸಲೆಂದು ಶಾಲೆಯ ವಾರ್ಡನ್ ರವಿ ರವರು ತುರ್ತು ವಾಹನದಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ತರುವಾಗ ಮಾರ್ಗಮದ್ಯೆ ಹೃದಯಾಘಾತದಿಂದ ಮೃತಪಟ್ಟಿರುತ್ತಾನೆ. ಸದರಿ ವಿದ್ಯಾರ್ಥಿಯ ಸಾವಿನ ಬಗ್ಗೆ ಯಾವುದೇ ಸಂಶಯವಿರುವುದಿಲ್ಲ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಇತ್ಯಾದಿ ದೂರು ನೀಡಿದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ವರದಕ್ಷಿಣೆ ಸಾವಿನ ಪ್ರಕರಣ :
ಶ್ರೀರಂಗಪಟ್ಟಣ ಪೊಲೀಸ್ ಠಾಣೆ ಮೊ.ನಂ. 215/13 ಕಲಂ. 498(ಎ)-306 ಐ.ಪಿ.ಸಿ.
ದಿನಾಂಕ: 07-04-2013 ರಂದು ಪಿರ್ಯಾದಿ ಗೌರಮ್ಮ ಕೋಂ. ಲೇಟ್. ನಿಂಗೇಗೌಡ, ವಡ್ಡರಹಳ್ಳಿ ಗ್ರಾಮ, ಪಾಂಡವಪುರ ತಾಲ್ಲೂಕು ರವರು ನೀಡಿದ ದೂರು ಏನೆಂದರೆ ಅವರ ಅಳಿಯ ಮಧು ಬಿನ್ ವೆಂಕಟೇಶ, ವಡ್ಡರಹಳ್ಳಿ ಗ್ರಾಮ, ಶ್ರೀರಂಗಪಟ್ಟಣ ತಾಲ್ಲೂಕು ರವರು ಪಿರ್ಯಾದಿಯವರ ಮಗಳು ಭಾಗ್ಯಳಿಗೆ ಸಾಲ ತೀರಿಸಲು ಹಣವನ್ನು ಕೊಡು ಎಂದು ಹಿಂಸೆ ಕೊಡುತ್ತಿದ್ದು, ಹಿಂಸೆಯನ್ನು ತಾಳಲಾರದೆ ಪಿರ್ಯಾದಿ, ಪಿರ್ಯಾದಿಯವರ ಮಗಳು ಭಾಗ್ಯ ಮತ್ತು ಮಗ ಸುರೇಶ್ ಈ ಮೂರು ಜನರು ಬೆಂಗಳೂರಿನಿಂದ ಶ್ರೀರಂಗಪಟ್ಟಣಕ್ಕೆ ಬಂದು ಕಾವೇರಿ ಹೊಳಗೆ ಬಿದ್ದಿದ್ದು ಪಿರ್ಯಾದಿಯವರನ್ನು ಯಾರೋ ನೀರಿನಿಂದ ಕಾಪಾಡಿದ್ದು ಮಗಳು ಮತ್ತು ಮಗನ ಶವವು ಕಾವೇರಿ ನೀರಿನಲ್ಲಿ ಇರುತ್ತದೆ ಪತ್ತೆ ಮಾಡಿಕೊಡಿ ಇವರ ಸಾವಿಗೆ ನನ್ನ ಅಳಿಯನೆ ಕಾರಣ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಎಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಚುನಾವಣಾ ಅಕ್ರಮ ಪ್ರಕರಣ :
ಕೊಪ್ಪ ಪೊಲೀಸ್ ಠಾಣೆ ಮೊ.ನಂ. 71/13 ಕಲಂ. 171(ಬಿ) ಐ.ಪಿ.ಸಿ. ಕೂಡ 123 ಆರ್.ಪಿ. ಕಾಯ್ದೆ 1951.
ದಿನಾಂಕ: 07-04-2013 ರಂದು ಪಿರ್ಯಾದಿ ಬಿ.ಎಸ್.ಶಶಿಧರ್, ಡಿ.ಟಿ.ವೆಂಕಟಶೆಟ್ಟಿ. ಸಂಚಾರಿ ತನಿಖಾದಳ, ನಾಗಮಂಗಲ ವಿಧಾನಸಭಾ ಕ್ಷೇತ್ರ-191, ಮಂಡ್ಯ ಜಿಲ್ಲೆ ರವರು ನೀಡಿದ ದೂರು ಏನೆಂದರೆ ಆರೋಪಿ ಕಾಂತರಾಜು, ಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯರು, ಕೊಪ್ಪ ಗ್ರಾಮ, ಮದ್ದೂರು ತಾ. ರವರು ವಿದಾನಸಭಾ ಸಾರ್ವತ್ರಿಕ ಚುನಾವಣೆ ಪ್ರಕ್ರಿಯೆ ಜಾರಿಯಲ್ಲಿರುವ ಸಮಯದಲ್ಲಿ ನಮ್ಮ ಪಕ್ಷದ ಪರವಾಗಿ ಮತ ಚಲಾಯಿಸುವಂತೆ ಮತದಾರರಿಗೆ ಆಮಿಷ ಒಡ್ಡುವ ರೀತಿಯಲ್ಲಿ ನಡೆದುಕೊಂಡಿದ್ದು ಗೋಡೆ ಗಡಿಯಾರಗಳನ್ನು ಹಂಚಿರುವ ಶ್ರೀ ಕಾಂತರಾಜು ಗ್ರಾಮಪಂಚಾಯ್ತಿ ಸದಸ್ಯ ಕೊಪ್ಪ ಇವರ ಮೇಲೆ ಸೆಕ್ಷನ್ 171 ಬಿ, ಅಡಿಯಲ್ಲಿ ಹಾಗೂ ಜನತಾ ಪ್ರಾತಿನಿದ್ಯಾ ಕಾಯ್ದೆ ಸೆಕ್ಷನ್ 123 ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲು ಕೋರಿ ಪಿರ್ಯಾದಿಯವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ವಂಚನೆ ಪ್ರಕರಣಗಳು :
1. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 139/13 ಕಲಂ. 420 ಐ.ಪಿ.ಸಿ.
ದಿನಾಂಕ: 07-04-2013 ರಂದು ಪಿರ್ಯಾದಿ ತಾಯಮ್ಮ ಕೊಂ ರಾಮಣ್ಣ , ಅಶೋಕನಗರ, ಮಂಡ್ಯ ರವರು ನೀಡಿದ ದೂರಿನ ವಿವರವೇನೆಂದರೆ ಯಾರೋ ಮೂರು ಜನ ಅಪರಿಚಿತ ವ್ಯಕ್ತಿಗಳು ಬಂದು ಪಿರ್ಯಾದಿಯವರು ವಿಧ್ಯಾನಗರದಲ್ಲಿರುವ ಗಣೇಶನ ದೇವಸ್ಥಾನಕ್ಕೆ ಪೂಜೆಗೆಂದು ಹೊಗುತ್ತಿದ್ದಾಗ ಯಾರೊ ಅಪರಿಚಿತ ವ್ಯಕ್ತಿಗಳು ಬಂದು ನಾವು ಪೊಲೀಸಿನವರು ವಡವೆಗಳನ್ನು ಹಾಕಿಕೊಂಡು ಹೋಗಬೇಡಿ ಕಳ್ಳರಿದ್ದಾರೆಂದು ಹೇಳಿ ಅವುಗಳನ್ನು ಪೇಪರ್ ನಲ್ಲಿ ಹಾಕಿ ಕೊಡುತ್ತೇವೆಂದು ಹೇಳಿದ್ದನ್ನು ನಂಬಿ ನನ್ನ ಕತ್ತಿನಲ್ಲಿದ್ದ 25 ಗ್ರಾಂ ಸರವನ್ನು ಬಿಚ್ಚಿಕೊಟ್ಟೆ ಅವುಗಳನ್ನು ಪೇಪರ್ ನಲ್ಲಿ ಸುತ್ತಿ ಸೀರೆಯ ಸೆರಗಿಗೆ ಗಂಟುಕಟ್ಟಿ ಕೊಟ್ಟರು ನಂತರ ಮುಂದೆ ನಾನು ಹೋಗುತ್ತಿರುವಾಗ ಅನುಮಾನಬಂದು ಗಂಟನ್ನು ಬಿಚ್ಚಿ ನೋಡಿದೆ ಅದರಲ್ಲಿ ಸಣ್ಣ ಸಣ್ಣ ಕಲ್ಲುಗಳಿದ್ದವು ನನ್ನ ನಂಬಿಸಿ ಮೋಸ ಮಾಡಿರುವ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಕೈಗೋಳ್ಳಿ ಎಂದು ಇತ್ಯಾದಿಯಾಗಿ ನೀಡಿದ ಪಿರ್ಯಾದಿನ ಮೇರೆಗೆ ಕೇಸು ದಾಖಲಿಸಲಾಗಿದೆ.
2. ಮಂಡ್ಯ ಪೂರ್ವ ಪೊಲೀಸ್ ಠಾಣೆ ಮೊ.ನಂ. 140/13 ಕಲಂ. 420 ಐ.ಪಿ.ಸಿ.
ದಿನಾಂಕ: 07-04-2013 ರಂದು ಪಿರ್ಯಾದಿ ರಜನಿ ಕೋಂ. ಹರ್ಷ, ಇಕ್ಕಲಕ್ಕಿ ರಾಮಲಿಂಗಯ್ಯರವರ ಮನೆ, 3 ನೇ ಕ್ರಾಸ್, ಹೊಸಹಳ್ಳಿ ಮಂಡ್ಯ ರವರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯವರು ಮನೆಯಲ್ಲಿದ್ದಾಗ ಮೊಬೈಲ್ ಗೆ ಪೋನ್ ಮಾಡಿ ನನ್ನ ಪೋನ್ ನಂ 9591574080 ಕ್ಕೆ ಮೋಬೈಲ್ ನಂ 95911416962 ರಿಂದ ಕಾಲ್ ಮಾಡಿ ನೀನು ನಮ್ಮ ಜೊತೆ ಬರುತ್ತಿಯಾ ಅಂತ ಕೇಳಿದ್ದು ಮೊಬೈಲ್ ಪೋನ್ನಲ್ಲಿ ಅಶ್ಲೀಲವಾಗಿ ಮಾತನಾಡಿ ನನ್ನನ್ನು ನಿಂದಿಸಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಅಂತ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿರುತ್ತೆ.
No comments:
Post a Comment